Top 5 Courses: ಈ 5ರಲ್ಲಿ ಒಂದು ಕೋರ್ಸ್ ಮಾಡಿದ್ರೂ ಕೆಲಸ ಸಿಗೋ ಚಾನ್ಸ್ ದುಪ್ಪಟ್ಟಾಗುತ್ತೆ!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಬೇಡಿಕೆಯ ಕೌಶಲ್ಯಗಳನ್ನು ಹೊಂದಿರುವಂಥ ಜನಪ್ರಿಯ ಕೋರ್ಸ್‌ಗಳನ್ನು ಮಾಡಿದರೆ , ಅಭ್ಯರ್ಥಿಗೆ ಉದ್ಯೋಗ ಸಿಗುವುದು ಸುಲಭ ಎಂಬುದಾಗಿ ವರದಿ ಹೇಳುತ್ತದೆ. ಹಾಗಿದ್ರೆ ಅಂಥ ಕೋರ್ಸ್‌ಗಳು ಯಾವವು ಅನ್ನೋದನ್ನು ನೋಡೋಣ.

  • Trending Desk
  • 3-MIN READ
  • Last Updated :
  • Share this:

    ಇದು ಸ್ಪರ್ಧಾತ್ಮಕ (Competitive) ಜಗತ್ತು. ಸರಿಯಾದ ಕ್ಷೇತ್ರದಲ್ಲಿ ಶಿಕ್ಷಣ ಪಡೆಯುವುದು ವೃತ್ತಿ ಅವಕಾಶದ ದೃಷ್ಟಿಯಿಂದ ಬಹಳ ಮುಖ್ಯ. ಬೇಡಿಕೆಯಲ್ಲಿರುವಂಥ ಕೋರ್ಸ್‌ಗಳನ್ನು ಮಾಡಿದರೆ ಒಳ್ಳೆಯ ಉದ್ಯೋಗ, ಒಳ್ಳೆಯ ಸಂಬಳದ ಜೊತೆಗೆ ಒಳ್ಳೆಯ ಜೀವನ ನಡೆಸಬಹುದು. ಟೀಂಲೀಸ್‌ ಎಡ್ಟೆಕ್ (Teamlease Edtech) ಇತ್ತೀಚೆಗೆ ಬಿಡುಗಡೆ ಮಾಡಿರುವ ಕರಿಯರ್ ಔಟ್‌ಲುಕ್ ವರದಿಯ ಪ್ರಕಾರ, ಇತ್ತೀಚೆಗೆ ಉದ್ಯೋಗ ನೀಡುವಂಥವರು ಅಭ್ಯರ್ಥಿಗಳಲ್ಲಿ ಕೆಲವು ಪ್ರಮುಖವಾದ ಕೌಶಲ್ಯಗಳಿರಬೇಕು ಎಂದು ನಿರೀಕ್ಷಿಸುತ್ತಾರೆ.


    ಅಂಥ ಬೇಡಿಕೆಯ ಕೌಶಲ್ಯಗಳನ್ನು ಹೊಂದಿರುವಂಥ ಜನಪ್ರಿಯ ಕೋರ್ಸ್‌ಗಳನ್ನು ಮಾಡಿದರೆ , ಅಭ್ಯರ್ಥಿಗೆ ಉದ್ಯೋಗ ಸಿಗುವುದು ಸುಲಭ ಎಂಬುದಾಗಿ ವರದಿ ಹೇಳುತ್ತದೆ. ಹಾಗಿದ್ರೆ ಅಂಥ ಕೋರ್ಸ್‌ಗಳು ಯಾವವು ಅನ್ನೋದನ್ನು ನೋಡೋಣ.


    ಭಾರತದಲ್ಲಿ ಫ್ರೆಶರ್‌ಗಳಿಗೆ ಹೆಚ್ಚಿನ ಉದ್ಯೋಗಾವಕಾಶವನ್ನು ನೀಡುವಂಥ ಐದು ಕೋರ್ಸ್‌ಗಳು


    1.ಪ್ರಾಡಕ್ಟ್‌ ಮ್ಯಾನೇಜ್‌ಮೆಂಟ್‌ನಲ್ಲಿ PG ಪ್ರೋಗ್ರಾಂ: ಪ್ರಪಂಚದಾದ್ಯಂತದ ವ್ಯಾಪಾರ ಜಗತ್ತಿನಲ್ಲಿ ಇವರನ್ನು ಉತ್ಪನ್ನ ನಿರ್ವಾಹಕರು ಎಂದು ಕರೆಯುತ್ತಾರೆ. ಇಂದು ಈ ವೃತ್ತಿಪರರಿಗೆ ಹೆಚ್ಚಿನ ಬೇಡಿಕೆಯಿದೆ. ಲಿಂಕ್ಡ್‌ಇನ್‌ನಲ್ಲಿಯೇ 20,000ಕ್ಕೂ ಹೆಚ್ಚು ಉದ್ಯೋಗಗಳು ಲಭ್ಯವಿರುವುದನ್ನು ನಾವು ನೋಡಬಹುದು.


    how to Improve Digital Skills for career growth


    ಉತ್ಪನ್ನ ನಿರ್ವಹಣೆಯಲ್ಲಿನ ವೃತ್ತಿಪರರಿಗೆ ಭಾರತ ಮತ್ತು ವಿದೇಶಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ವಿದೇಶಗಳಲ್ಲಿ ಉತ್ಪನ್ನ ನಿರ್ವಾಹಕರ ಸರಾಸರಿ ವೇತನವು ಭಾರತದಲ್ಲಿನ ರಾಷ್ಟ್ರೀಯ ಸರಾಸರಿ ವೇತನಕ್ಕಿಂತ ಸುಮಾರು 246% ಹೆಚ್ಚಾಗಿದೆ.


    2.ಸೈಬರ್ ಸೆಕ್ಯುರಿಟಿ ಸರ್ಟಿಫಿಕೇಶನ್ ಕೋರ್ಸ್: ಪ್ರಸ್ತುತ ಸೈಬರ್‌ ಸೆಕ್ಯುರಿಟಿ ಕೋರ್ಸ್‌ಗೆ ಬಹಳಷ್ಟು ಡಿಮ್ಯಾಂಡ್‌ ಇದೆ. ಸಂಶೋಧನೆಗಳ ಪ್ರಕಾರ, ಜಾಗತಿಕವಾಗಿ ಮೂರು ಮಿಲಿಯನ್‌ನಷ್ಟು ಸೈಬರ್ ಸೆಕ್ಯುರಿಟಿ ವೃತ್ತಿಪರರ ಕೊರತೆ ಇದೆ ಎನ್ನಲಾಗಿದೆ.


    ಸೈಬರ್ ಭದ್ರತೆ ಮತ್ತು ಡೇಟಾ ಗೌಪ್ಯತೆಗೆ ಸಂಬಂಧಿಸಿದ ವೃತ್ತಿಪರರ ಬೇಡಿಕೆ ಹೆಚ್ಚಿದೆ. ಅಂದಹಾಗೆ ಸೈಬರ್‌ ಸೆಕ್ಯುರಿಟಿ ಮುಖ್ಯಸ್ಥರ ವಾರ್ಷಿಕ ವೇತನವು ಸುಮಾರು 2 ಕೋಟಿಯಿಂದ 4 ಕೋಟಿವರೆಗೆ ಇರುತ್ತದೆ. ಈ ಕ್ಷೇತ್ರವು ಶೇ. 68ರಷ್ಟು ತೃಪ್ತಿ ಮಟ್ಟವನ್ನು ಹೊಂದಿದೆ ಎನ್ನಲಾಗಿದ್ದು ಇದು ಹೆಚ್ಚಿನವರಿಗೆ ಮಾನಸಿಕವಾಗಿ ಮತ್ತು ಆರ್ಥಿಕವಾಗಿ ತೃಪ್ತಿಕರವಾದ ವೃತ್ತಿಯಾಗಿದೆ.


    why to choose cyber security as a career
    ಪ್ರಾತಿನಿಧಿಕ ಚಿತ್ರ


    3.ಬ್ಲಾಕ್‌ಚೈನ್‌(Blockchain)ನಲ್ಲಿ ಸರ್ಟಿಫಿಕೇಷನ್‌ : ಡಿಜಿಟಲ್ ಉದ್ಯೋಗವು ಐಟಿ ಉದ್ಯಮದಲ್ಲಿ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ.


    ಹಾಗಾಗಿ ಇಂದು ಬ್ಲಾಕ್‌ಚೈನ್ ವೇಗವಾಗಿ ಬೆಳೆಯುತ್ತಿರುವ ಕೌಶಲ್ಯ ಸೆಟ್‌ಗಳಲ್ಲಿ ಒಂದಾಗಿದೆ. ಈ ಕ್ಷೇತ್ರದಲ್ಲಿ ಉದ್ಯೋಗಗಳು 2,000-6,000% ರಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿವೆ.ಅಂದಹಾಗೆ ಬ್ಲಾಕ್‌ಚೈನ್ ಡೆವಲಪರ್‌ಗಳ ಸಂಬಳವು ಸಾಂಪ್ರದಾಯಿಕ ಡೆವಲಪರ್‌ಗಳಿಗಿಂತ 50-100% ಹೆಚ್ಚಾಗಿದೆ.


    ಇದನ್ನೂ ಓದಿ: Career in Perfume Industry: ಪರ್ಫ್ಯೂಮ್ ಇಂಡಸ್ಟ್ರಿಯಲ್ಲಿ ಇವೆ ಅದ್ಭುತ ವೃತ್ತಿ ಅವಕಾಶಗಳು


    4.ಬಯೋಟೆಕ್ನಾಲಜಿಯಲ್ಲಿ ವೃತ್ತಿಪರ ಪದವಿ: ವಿಜ್ಞಾನದ ಆಧುನಿಕ ಅಂಶಗಳನ್ನು ಅನ್ವೇಷಿಸಲು ಬಯಸುವ ಯುವಜನರಲ್ಲಿ ಜೈವಿಕ ತಂತ್ರಜ್ಞಾನವು ಅತ್ಯಂತ ಜನಪ್ರಿಯ ವೃತ್ತಿ ಆಯ್ಕೆಗಳಲ್ಲಿ ಒಂದಾಗಿದೆ. ಇಂದು ಆಹಾರ, ಜವಳಿ, ಔಷಧ, ಕೃಷಿ, ಪಶುಸಂಗೋಪನೆ ಮುಂತಾದ ಕೈಗಾರಿಕಾ ವಲಯಗಳಲ್ಲಿ ನುರಿತ ಜೈವಿಕ ತಂತ್ರಜ್ಞಾನಿಗಳ ಬೇಡಿಕೆ ಹೆಚ್ಚಿದೆ. ಭಾರತದಲ್ಲಿ ಜೈವಿಕ ತಂತ್ರಜ್ಞಾನಶಾಸ್ತ್ರಜ್ಞರ ಸರಾಸರಿ ವೇತನವು INR 5,75,329 PA ಆಗಿದೆ.




    ಆದ್ದರಿಂದ ನೀವು ಜೈವಿಕ ತಂತ್ರಜ್ಞಾನ ಸಂಶೋಧನಾ ವಿಜ್ಞಾನಿಯಾಗಿ ಚೆನ್ನಾಗಿ ಗಳಿಸಬಹುದು. ಅಲ್ಲದೇ ಸರ್ಕಾರಿ ನೌಕರಿಯ ಸಂದರ್ಭದಲ್ಲಿ ಸಂಬಳ ಬದಲಾಗುತ್ತದೆ. 4 ವರ್ಷಗಳ ಅನುಭವದೊಂದಿಗೆ, ವಿದ್ಯಾರ್ಥಿಯು INR 6,11,000 PA ವರೆಗೆ ಗಳಿಸಬಹುದು.


    5.ಬ್ಯುಸಿನೆಸ್ ಅನಾಲಿಟಿಕ್ಸ್ ಮತ್ತು ಬಿಗ್ ಡೇಟಾದಲ್ಲಿ ಪಿಜಿಪಿ: ಬಿಗ್‌ ಡೇಟಾ ಇಂಜಿನಿಯರ್‌ನ ಉದ್ಯೋಗ ಪ್ರೊಫೈಲ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಬೇಡಿಕೆಯಿರುವ ಉದ್ಯೋಗದಲ್ಲಿ ಒಂದಾಗಿದೆ.


    2019 ರಿಂದ, ಬಿಗ್‌ ಡೇಟಾ ಉದ್ಯಮದಲ್ಲಿ ಉದ್ಯೋಗಗಳು 46% ರಷ್ಟು ಹೆಚ್ಚಾಗುತ್ತವೆ. ಆದರೂ, ಭಾರತದಲ್ಲಿ ಆಗಸ್ಟ್ 2020 ರ ಅಂತ್ಯದ ವೇಳೆಗೆ ಬಿಗ್‌ ಡೇಟಾದಲ್ಲಿ ಸುಮಾರು 93,000 ಉದ್ಯೋಗಗಳು ಖಾಲಿಯಾಗಿವೆ. ಇನ್ನು, ಭಾರತದಲ್ಲಿ ಬಿಗ್‌ ಡೇಟಾ ಡೆವಲಪರ್‌ನ ಸರಾಸರಿ ಆದಾಯವು ಫ್ರೆಶರ್‌ಗಳಿಗೆ ವರ್ಷಕ್ಕೆ ಸುಮಾರು 7.4 ಲಕ್ಷದಷ್ಟಿರುತ್ತವೆ.

    Published by:Kavya V
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು