ಒಮ್ಮೊಮ್ಮೆ ಈ ವಿವಾಹಿತರು ವಿಚ್ಛೇದನ ( Divorce) ಪಡೆಯಲು ಆರ್ಥಿಕ ಸಮಸ್ಯೆಗಳನ್ನು ಪ್ರಮುಖ ಕಾರಣಗಳಲ್ಲಿ ಒಂದೆಂದು ಹೇಳುತ್ತಾರೆ. ಆದರೆ ವಾಸ್ತವವಾಗಿ ನೋಡುವುದಾದರೆ ತುಂಬಾ ದುಡ್ಡು ಇರುವವರು ಮತ್ತು ಯಶಸ್ವಿಯಾದ ಜನರು ಸಹ ತಮ್ಮ ವೈವಾಹಿಕ (Marriage) ಸಂಬಂಧಗಳನ್ನು ಚೆನ್ನಾಗಿ ಇರಿಸಿಕೊಳ್ಳಲು ಕೆಲವೊಮ್ಮೆ ಹೆಣಗಾಡುವುದನ್ನು ನಾವೆಲ್ಲಾ ನೋಡಿರುತ್ತೇವೆ.
ಎಂದರೆ ವೈವಾಹಿಕ ಜೀವನದಲ್ಲಿ ಹಣ ಮಹತ್ವದ ಅಂಶವಾಗಿರಬಹುದು, ಆದರೆ ಅದೇ ಪ್ರಧಾನವಲ್ಲ. ಹಣವನ್ನು ಹೊರತುಪಡಿಸಿ ಇನ್ನೂ ಅನೇಕ ಅಂಶಗಳಿವೆ ಅಂತ ಹೇಳಬಹುದು. ಯಾವೆಲ್ಲಾ ಅಂಶಗಳು ದಾಂಪತ್ಯಕ್ಕೆ ಮುಳುವಾಗುತ್ತವೆ. ಅವುಗಳನ್ನು ಹೇಗೆ ನಿಭಾಯಿಸಬೇಕು ಅಂತ ಇಲ್ಲಿ ತಜ್ಞರು ಹೇಳಿದ್ದಾರೆ ನೋಡಿ.
ಇಲ್ಲಿ ‘ದಿ ಮ್ಯಾರೇಜ್ ರಿಕವರಿ ಸೆಂಟರ್’ ನ ನಿರ್ದೇಶಕರಾದ ಡೇವಿಡ್ ಹಾಕಿನ್ಸ್ ಅವರು ಈ ವಿಚಾರಗಳ ಬಗ್ಗೆ ಹೇಳಿದ್ದಾರೆ. ರಿಲೇಶನ್ಶಿಪ್ ಕೌನ್ಸೆಲರ್ ಆಗಿ 40 ವರ್ಷಗಳಿಗಿಂತ ಹೆಚ್ಚಿನ ಅನುಭವವನ್ನು ಹೊಂದಿರುವ ಹಾಕಿನ್ಸ್ ವೃತ್ತಿ-ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿರುವ ದಂಪತಿಗಳೊಂದಿಗೆ ನಿರಂತರವಾಗಿ ಸಲಹೆಗಳನ್ನು ನೀಡುತ್ತಾರೆ.
ಕೆಲಸ ಮಾಡುವ ಸಂಗಾತಿ ಸಂಬಂಧಗಳ ಮೇಲೆ ಒತ್ತಡವನ್ನುಂಟು ಮಾಡುವ ಈ ಮೂರು ಸಾಮಾನ್ಯ ಸಂದರ್ಭಗಳನ್ನು ನಿಭಾಯಿಸುವ ಅತ್ಯುತ್ತಮ ಮಾರ್ಗಗಳನ್ನು ಇವರು ಹಂಚಿಕೊಂಡಿದ್ದಾರೆ ನೋಡಿ.
1) ನಿಮ್ಮ ಸಂಗಾತಿಯು ನಿಮಗಿಂತ ಅವರ ಕೆಲಸಕ್ಕೆ ಪ್ರಾಮುಖ್ಯತೆ ನೀಡುತ್ತಿರುತ್ತಾರೆ.
ನಿಮ್ಮ ಸಂಗಾತಿಗೆ ಅವರ ಉದ್ಯೋಗಕ್ಕಿಂತ ನಿಮ್ಮ ಸಂಬಂಧಕ್ಕೆ ಆದ್ಯತೆ ನೀಡುವ ಬಗ್ಗೆ ಸಂವಹನ ನಡೆಸುವಾಗ, ಅವರ ಕ್ರಿಯೆಗಳು ನಿಮಗೆ ಹೇಗೆ ಅನಿಸುತ್ತವೆ ಎಂಬುದರ ಮೇಲೆ ಕೇಂದ್ರೀಕರಿಸಲು ಹಾಕಿನ್ಸ್ ಹೇಳುತ್ತಾರೆ. "ನನ್ನ ಕಕ್ಷಿದಾರರೊಬ್ಬರು ತಮ್ಮ ಪತಿ ತಮ್ಮ ವೈವಾಹಿಕ ಜೀವನಕ್ಕಿಂತಲೂ ಹೆಚ್ಚಾಗಿ ತಮ್ಮ ಕೆಲಸವನ್ನು ಗೌರವಿಸುತ್ತಾರೆ ಎಂದು ದೂರಿದರು. ಏಕೆಂದರೆ ಅವರು ತಮ್ಮ ಕೆಲಸದ ಮೇಲೆ ತೀವ್ರವಾಗಿ ಕೇಂದ್ರೀಕರಿಸಿದ್ದಾರೆ" ಎಂದು ಹಾಕಿನ್ಸ್ ಹೇಳಿದರು.
"ಅಂತಹ ಪರಿಸ್ಥಿತಿಯಲ್ಲಿ, ಭಾವನೆಗಳನ್ನು ತುಂಬಾನೇ ಶಾಂತ ರೀತಿಯಿಂದ ಹಂಚಿಕೊಳ್ಳಲು ನಾನು ಹೇಳುತ್ತೇನೆ ಮತ್ತು ಅವರ ಸಂಗಾತಿಯೊಂದಿಗೆ ನಿಕಟ, ಆಳವಾದ ಸಂಪರ್ಕವನ್ನು ಹೊಂದಲು ಅವರು ಯಾವ ಬದಲಾವಣೆಗಳನ್ನು ನೋಡಲು ಬಯಸುತ್ತಾರೆ ಎಂಬುದನ್ನು ಸ್ಪಷ್ಟಪಡಿಸುತ್ತೇನೆ" ಎಂದು ಹೇಳಿದರು.
ಈ ಸಂಭಾಷಣೆಯನ್ನು ಪ್ರಾರಂಭಿಸಲು ಒಂದು ಸರಳ ಮಾರ್ಗ ಎಂದರೆ "ನೀವು ಕಚೇರಿಯಲ್ಲಿ ಸಾಕಷ್ಟು ಸಮಯವನ್ನು ಕಳೆಯುತ್ತಿದ್ದೀರಿ ಎಂದು ನಾನು ಗಮನಿಸಿದ್ದೇನೆ, ಕಳೆದ ಕೆಲವು ಬಾರಿ ನಾನು ಒಟ್ಟಿಗೆ ವಿಶೇಷ ಸಮಯವನ್ನು ಕಳೆಯಲು ಕೇಳಿದ್ದೇನೆ, ನೀವು ತುಂಬಾ ಬ್ಯುಸಿಯಾಗಿದ್ದೀರಿ ಎಂದು ನೀವು ಹೇಳಿದ್ದೀರಿ. ನಾನೂ ನಿಮಗೆ ಮುಖ್ಯವೆಂದು ಭಾವಿಸಲು ಬಯಸುತ್ತೇನೆ” ಅಂತ ಹೇಳುವ ಮೂಲಕ ಮಾತು ಶುರು ಮಾಡಿ.
ನಾವು ಒಟ್ಟಿಗೆ ಸಮಯವನ್ನು ಕಳೆಯಲು ನೀವು ಸಿದ್ಧರಿದ್ದೀರಾ? ನೀವು ನನಗಾಗಿ ಡೇಟ್ ಗೆ ಕರೆದುಕೊಂಡು ಹೋಗುವುದು ಆಗಿರಬಹುದು.ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಅಂತ ನಿಮ್ಮ ಸಂಗಾತಿಗೆ ನಯವಾಗಿ ಕೇಳಿ ನೋಡಿ.
2. ನೀವು ನಿಮ್ಮ ಸಂಗಾತಿಗಿಂತಲೂ ನಿಮ್ಮ ಕೆಲಸಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿರುವಿರಾ? ಹೀಗೆ ಮಾಡಿ..
ನಿಮ್ಮ ಸಂಗಾತಿಯು ನೀವು ಅವರಿಗಿಂತಲೂ ಹೆಚ್ಚಾಗಿ ನಿಮ್ಮ ಕೆಲಸಕ್ಕೆ ಪ್ರಾಮುಖ್ಯತೆ ನೀಡುತ್ತಿದ್ದೀರಾ ಅಂತ ಆರೋಪಿಸಿದರೆ, ಹಾಕಿನ್ಸ್ ಅವರು ನಿಮ್ಮ ದಿನದಲ್ಲಿ ಚಿಕ್ಕ-ಪುಟ್ಟ ಚೆಕ್-ಇನ್ ಗಳನ್ನು ಯೋಜಿಸಲು ಸಲಹೆ ನೀಡುತ್ತಾರೆ. ಎಂದರೆ ಆಫೀಸಿನಲ್ಲಿ ಇದ್ದಾಗ ನಿಮ್ಮ ಸಂಗಾತಿಗೆ ಒಂದು ಫೋನ್ ಕಾಲ್ ಮಾಡುವುದು ಅಥವಾ ಪಠ್ಯ ಸಂದೇಶವನ್ನು ಕಳುಹಿಸುವುದು. ಇದು ನಿಮ್ಮಿಬ್ಬರ ನಡುವೆ ಇರುವ ಬಂಧವನ್ನು ಗಟ್ಟಿಗೊಳಿಸುವಲ್ಲಿ ಸಹಾಯ ಮಾಡುತ್ತದೆ ಅಂತ ಹೇಳಬಹುದು" ಎಂದು ಹಾಕಿನ್ಸ್ ಹೇಳುತ್ತಾರೆ.
ಇದನ್ನೂ ಓದಿ: Hug day 2023: ನಿಮ್ಮ ಪ್ರೀತಿಪಾತ್ರರಿಗೆ ಬೆಚ್ಚಗಿನ ಅಪ್ಪುಗೆ ನೀಡುವ ದಿನ; ‘ಹಗ್ ಡೇ’ ಹೀಗೆ ಆಚರಿಸಿ
"ನಾನು ನಿಮ್ಮ ಬಗ್ಗೆ ಯೋಚಿಸುತ್ತಿದ್ದೇನೆ' ಎಂಬ ಸರಳ ಪಠ್ಯ ಸಂದೇಶವು ನಿಮ್ಮ ಸಂಬಂಧದಲ್ಲಿ ತುಂಬಾನೇ ಅದ್ಭುತಗಳನ್ನು ಮಾಡಬಹುದು" ಎಂದು ಹಾಕಿನ್ಸ್ ಅವರ ಮಾತಾಗಿದೆ.
3. ನಿಮ್ಮ ಸಂಗಾತಿ ತಮ್ಮ ಕೆಲಸದ ಒತ್ತಡವನ್ನು ಮನೆಗೆ ತರುತ್ತಿದ್ದಾರೆಯೇ? ಇದಕ್ಕೆ ಇಲ್ಲಿದೆ ಪರಿಹಾರ
ನಿಮ್ಮ ಸಂಗಾತಿಯು ಅವರ ಕೆಲಸದೊಂದಿಗೆ ತುಂಬಾನೇ ಹೆಣಗಾಡುತ್ತಿದ್ದು, ಅದನ್ನು ನೋಡುವುದು ನಿಮಗೆ ಕಷ್ಟ ಎನಿಸಬಹುದು. ಅವರ ಜೊತೆಯಲ್ಲಿ ಮಾತಾಡಿದರೆ, ಅವರನ್ನು ಇನ್ನಷ್ಟು ಅಸಮಾಧಾನಗೊಳಿಸುತ್ತೇವೆ ಎಂಬ ಭಯದಿಂದ ದೂರವೇ ಉಳಿಯಬಹುದು. ಕೆಲವು ಪ್ರತಿಕ್ರಿಯೆಗಳನ್ನು ಕೇಳಲು ಅವರು ಮುಕ್ತರಾಗಿದ್ದಾರೆಯೇ ಎಂದು ಮೊದಲು ಕೇಳುವುದು ಉತ್ತಮ ವಿಧಾನವಾಗಿದೆ ಎಂದು ಹಾಕಿನ್ಸ್ ಹೇಳಿದರು.
ನಂತರ ಅವರು ಅದನ್ನು ಒಪ್ಪಿಕೊಂಡರೆ, ಸಲಹೆ ನೀಡುವ ಮೊದಲು ಅವರು ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಿದ್ದಾರೆ ಎಂಬುದರ ಬಗ್ಗೆ ಕೆಲವು ಸಕಾರಾತ್ಮಕ ಪ್ರತಿಕ್ರಿಯೆಯೊಂದಿಗೆ ಪ್ರಾರಂಭಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ