Resume Tips-16: ವಿಡಿಯೋ ರೆಸ್ಯೂಮ್ ಮಾಡುವುದು ಹೇಗೆ, ಇಲ್ಲಿದೆ ಸಂಪೂರ್ಣ ಮಾಹಿತಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಹೆಸರೇ ಹೇಳುವಂತೆ ವಿಡಿಯೋ ರೆಸ್ಯೂಮ್ ಎಂಬುದು ರೆಸ್ಯೂಮ್‌ನ ವಿಡಿಯೋ ಆವೃತ್ತಿಯಾಗಿದೆ. ಉದ್ಯೋಗಿಯ ವೃತ್ತಿ ಅನುಭವ ಹಾಗೂ ಅರ್ಹತೆಗಳನ್ನು ವಿವರಿಸುವ ವಿಡಿಯೋ ರೆಕಾರ್ಡಿಂಗ್ ಅನ್ನು ವಿಡಿಯೋ ರೆಸ್ಯೂಮ್  ಎನ್ನಲಾಗುತ್ತದೆ. 

  • Trending Desk
  • 3-MIN READ
  • Last Updated :
  • Share this:

    ಇತ್ತೀಚಿನ ದಿನಗಳಲ್ಲಿ ಉತ್ತಮ ಸಂಬಳದ ಉದ್ಯೋಗ (Highest Paying Jobs) ದೊರೆಯುವುದೇ ಕಷ್ಟ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅದೆಷ್ಟೋ ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುತ್ತಿದೆ (Layoffs). ಇನ್ನು ಹೊಸದಾಗಿ ಉದ್ಯೋಗಕ್ಕೆ ಸೇರುವವರಿಗೆ ಕಡಿಮೆ ಸಂಬಳವನ್ನು ನೀಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಮಗೆ ಉದ್ಯೋಗ ದೊರೆಯಲು ಸಹಕಾರಿಯಾಗಿರುವುದು ರೆಸ್ಯೂಮ್ (Resume) ಆಗಿದೆ.


    ವಿಡಿಯೋ ರೆಸ್ಯೂಮ್‌ಗಳು ಎಂದರೇನು?


    ಇದೀಗ ಪ್ರಚಲಿತದಲ್ಲಿ ವಿಡಿಯೋ ರೆಸ್ಯೂಮ್‌ಗಳು ಹೆಚ್ಚಿನ ನೇಮಕಾತಿದಾರರ ಗಮನವನ್ನು ಸೆಳೆಯುತ್ತಿವೆ. ಈ ರೆಸ್ಯೂಮ್‌ಗಳು ಇತರ ರೆಸ್ಯೂಮ್‌ಗಳಿಗಿಂತ ಭಿನ್ನವಾಗಿದ್ದು ನಿಮ್ಮ ಉದ್ಯೋಗಾರ್ಹತೆ ಹಾಗೂ ನಿಮ್ಮ ಬಗೆಗಿನ ಸಂಕ್ಷಿಪ್ತ ವಿವರನ್ನು ಉದ್ಯೋಗದಾತರ ಮುಂದಿಡುತ್ತದೆ. ಬುಲೆಟ್ ಪಾಯಿಂಟ್‌ಗಳಿಲ್ಲದೆಯೇ ಕವರ್ ಲೆಟರ್‌ನಂತೆ ನಿಮ್ಮ ಕುರಿತಾದ ಮಾಹಿತಿಯನ್ನು ಒದಗಿಸುತ್ತವೆ.


    ಹೆಸರೇ ಹೇಳುವಂತೆ ವಿಡಿಯೋ ರೆಸ್ಯೂಮ್ ಎಂಬುದು ರೆಸ್ಯೂಮ್‌ನ ವಿಡಿಯೋ ಆವೃತ್ತಿಯಾಗಿದೆ. ಉದ್ಯೋಗಿಯ ವೃತ್ತಿ ಅನುಭವ ಹಾಗೂ ಅರ್ಹತೆಗಳನ್ನು ವಿವರಿಸುವ ವಿಡಿಯೋ ರೆಕಾರ್ಡಿಂಗ್ ಅನ್ನು ವಿಡಿಯೋ ರೆಸ್ಯೂಮ್  ಎನ್ನಲಾಗುತ್ತದೆ.


    avoid these common mistakes in your resume
    ಪ್ರಾತಿನಿಧಿಕ ಚಿತ್ರ


    ಕಾಗದದಲ್ಲಿ ತಿಳಿಸುವ ಅದೇ ವಿಷಯಗಳನ್ನು ವಿಡಿಯೋದಲ್ಲಿ ಹೇಳಬಹುದಾಗಿದ್ದು ನಿಮ್ಮ ವ್ಯಕ್ತಿತ್ವ ಪ್ರದರ್ಶನಕ್ಕೆ, ನೇಮಕಾತಿದಾರರ ಮೆಚ್ಚುಗೆಯನ್ನು ಪಡೆದುಕೊಳ್ಳಲು ಜೊತೆಗೆ ನಿಮ್ಮಲ್ಲಿರುವ ಪ್ರತಿಭೆ ಹಾಗೂ ಕೌಶಲ್ಯಗಳನ್ನು ಪ್ರದರ್ಶಿಸಲು ವಿಡಿಯೋ ರೆಸ್ಯೂಮ್ ಸೂಕ್ತ ವೇದಿಕೆಯಾಗಿದೆ. ವಿಡಿಯೋ ರೆಸ್ಯೂಮ್‌ನಲ್ಲಿ ಶಿಕ್ಷಣ, ಆಸಕ್ತಿ, ನಿಮ್ಮ ಅನುಭವಗಳು ಈ ಎಲ್ಲಾ ಮಾಹಿತಿಗಳು ಇರುತ್ತವೆ. ನಿಮ್ಮನ್ನು ಉದ್ಯೋಗದತರು ಏಕೆ ನೇಮಿಸಿಕೊಳ್ಳಬೇಕು ಎಂಬ ಪ್ರಶ್ನೆಗೂ ನೇರವಾದ ಉತ್ತರವನ್ನು ನಿಮ್ಮ ರೆಸ್ಯೂಮ್ ಮೂಲಕ ನೀವು ನೀಡಬಹುದಾಗಿದೆ.


    ವಿಡಿಯೋ ರೆಸ್ಯೂಮ್ ಏಕೆ ಅವಶ್ಯಕ


    ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಯಲ್ಲಿ ಎದ್ದು ಕಾಣಲು ವೀಡಿಯೊ ರೆಸ್ಯೂಮ್ ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಸಂದೇಶವನ್ನು ಸಂಕ್ಷಿಪ್ತವಾಗಿ ಮತ್ತು ಪರಿಣಾಮಕಾರಿಯಾಗಿ ತಲುಪಿಸಲು ವೀಡಿಯೊ ಪರಿಪೂರ್ಣ ವಿಧಾನವಾಗಿದೆ. ವೀಡಿಯೊ ರೆಸ್ಯೂಮ್ ನಿಮ್ಮ ಸಂದೇಶವನ್ನು ನೇರವಾಗಿ ತಲುಪಿಸುತ್ತದೆ ಹಾಗೂ ನೇಮಕಾತಿದಾರರ ಮೆಚ್ಚುಗೆ ಗಳಿಸಲು ಇದು ಅನುಕೂಲಕಾರಿಯಾಗಿದೆ.


    ವಿಡಿಯೋ ರೆಸ್ಯೂಮೆಯ ಮೂಲಕ ನಿಮ್ಮ ನೇಮಕಾತಿದಾರರೊಂದಿಗೆ ಮನಬಿಚ್ಚಿ ಮಾತನಾಡಬಹುದಾಗಿದೆ. ನೀವು ಅಪ್ಲೈ ಮಾಡುತ್ತಿರುವ ಹುದ್ದೆ ನಿಮಗೆ ಎಷ್ಟು ಮುಖ್ಯವಾದುದು ಎಂಬುದನ್ನು ವಿಡಿಯೋ ರೆಸ್ಯೂಮ್‌ಗಳಲ್ಲಿ ವಿವರಿಸಬಹುದಾಗಿದೆ. ಹುದ್ದೆಗೆ ನೀವು ಸಮಪರ್ಕ ವ್ಯಕ್ತಿ ಹೌದೇ ಅಲ್ಲವೇ ಎಂಬುದನ್ನು ನಿರ್ಧರಿಸಲು ವಿಡಿಯೋ ರೆಸ್ಯೂಮೆ ಅನುಕೂಲಕಾರಿಯಾಗಿದೆ. ವಿಡಿಯೋ ರೆಸ್ಯೂಮ್‌ಗಳನ್ನು ಸಿದ್ಧಪಡಿಸುವ ಸಮಯದಲ್ಲಿ ಕೆಲವೊಂದು ಅಂಶಗಳತ್ತ ಗಮನಹರಿಸುವುದು ಮುಖ್ಯವಾಗಿದೆ. ಆ ಅಂಶಗಳಾವುವು ಎಂಬುದನ್ನು ನೋಡೋಣ


    ಅಪ್ಲೈ ಮಾಡುತ್ತಿರುವ ಹುದ್ದೆಗೆ ವಿಡಿಯೋ ರೆಸ್ಯೂಮ್ ಸೂಕ್ತವೇ ಎಂಬುದನ್ನು ನಿರ್ಧರಿಸಿ


    ನಿಮ್ಮ ಕೌಶಲ್ಯ, ಬುದ್ಧಿವಂತಿಕೆ ಹಾಗೂ ವೃತ್ತಿಪರತೆಯನ್ನು ಪ್ರದರ್ಶಿಸಲು ವಿಡಿಯೋ ರೆಸ್ಯೂಮ್ ಸಹಕಾರಿಯಾಗಿದೆ. ವೀಡಿಯೊಗ್ರಫಿ, ಎಡಿಟಿಂಗ್, ಸಾರ್ವಜನಿಕ ಭಾಷಣ, ವಿಶ್ವಾಸ ಅಥವಾ ಪರಸ್ಪರ ಸಂವಹನಕ್ಕೆ ಸಂಬಂಧಿಸಿದ ಕೌಶಲ್ಯಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ನೇಮಕಾತಿದಾರರು ಆಯ್ಕಮಾಡುತ್ತಾರೆ.


    how to create resume with help of chatgpt
    ಪ್ರಾತಿನಿಧಿಕ ಚಿತ್ರ


    ಈ ಸಮಯದಲ್ಲಿ ನಿಮ್ಮ ವಿಡಿಯೋ ರೆಸ್ಯೂಮ್ ನೇಮಕಾತಿದಾರರ ಗಮನ ಸೆಳೆಯುವಂತಿರಬೇಕು ಹಾಗೂ ನೀವು ಅಪ್ಲೈ ಮಾಡುತ್ತಿರುವ ಹುದ್ದೆಗೆ ನಿಮ್ಮ ನೇಮಕಾತಿ ಏಕೆ ಅವಶ್ಯಕ ಎಂಬುದನ್ನು ಮನದಟ್ಟು ಮಾಡುವಂತಿರಬೇಕು. ಹುದ್ದೆಗೆ ಸಂಬಂಧಿತ ಅಂಶಗಳು ನಿಮ್ಮ ರೆಸ್ಯೂಮ್‌ನಲ್ಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.


    ರೆಸ್ಯೂಮ್ ಸ್ಕ್ರಿಪ್ಟ್ ರಚಿಸಿಕೊಳ್ಳಿ


    ನಿಮ್ಮ ವಿಡಿಯೋ ರೆಸ್ಯೂಮ್ ಯಾವೆಲ್ಲಾ ಮಾಹಿತಿಗಳನ್ನು ಒಳಗೊಂಡಿರಬೇಕು ಎಂಬುದನ್ನು ಮೊದಲಿಗೆ ಸಿದ್ಧಪಡಿಸಿ. ಇದಕ್ಕಾಗಿ ಮೊದಲು ಸ್ಕ್ರಿಪ್ಟ್ ರಚಿಸಿ. ಇದರಿಂದ ನಿಮಗೆ ವಿಡಿಯೋದ ಮೂಲಕ ನೇರವಾಗಿ ಮಾತನಾಡಲು ಸಾಧ್ಯವಾಗುತ್ತದೆ. ಯಾವುದಾದರೂ ಅಂಶ ಮಿಸ್ ಆಗಿದೆ ಎಂಬುದು ನಿಮಗೆ ತೋರುವುದಿಲ್ಲ. ನಿರರ್ಗಳವಾಗಿ ಹೇಳಬೇಕಾದ ಅಂಶಗಳನ್ನು ನೀವು ವಿಡಿಯೋದ ಮೂಲಕ ತಿಳಿಸಬಹುದಾಗಿದೆ. ಉತ್ತಮ ರೀತಿಯಲ್ಲಿ ನುಡಿಗಟ್ಟು ಮಾಡಲು ಇದು ನಿಮಗೆ ಸಮಯವನ್ನು ನೀಡುತ್ತದೆ.


    ಕ್ಯಾಮೆರಾದಲ್ಲಿ ನೇರವಾಗಿ ಮಾತನಾಡುವ ಸಮಯದಲ್ಲಿ ಸ್ಕ್ರಿಪ್ಟ್ ಅನ್ನು ನೆನಪಿಸಿಕೊಳ್ಳುವುದು ಸಹಕಾರಿಯಾಗಿದೆ. ಆದಷ್ಟು ಸ್ಕ್ರಿಪ್ಟ್ ಅನ್ನು ವಿಡಿಯೋದ ಮುಂದೆಯೇ ಓದಲು ಹೋಗದಿರಿ. ಮುಖ್ಯ ಪಾಯಿಂಟ್‌ಗಳನ್ನು ನೆನಪಿನಲ್ಲಿರಿಸಿಕೊಂಡು ಕ್ಯಾಮೆರಾ ಎದುರಿಸಿ. ನೀವು ಒಬ್ಬ ವೃತ್ತಿಪರರಂತೆ ಕ್ಯಾಮೆರಾದ ಮುಂದೆ ಕಾಣಿಸಿಕೊಳ್ಳಿ.


    ಪ್ರಸ್ತುತಪಡಿಸುವ ಶೈಲಿ ಮುಖ್ಯವಾದುದು


    ಕಾಗದದ ರೆಸ್ಯೂಮ್‌ನಂತೆ ವಿಡಿಯೋ ರೆಸ್ಯೂಮ್ ಕೂಡ ನೀವು ಅಪ್ಲೈ ಮಾಡುವ ಹುದ್ದೆಗೆ ಸಂಬಂಧಿತವಾಗಿರಲಿ. ಆದಷ್ಟು ಸರಳವಾಗಿ ನಿಮ್ಮ ವೃತ್ತಿ ನೈಪುಣ್ಯತೆಯನ್ನು ವಿಡಿಯೋದಲ್ಲಿ ಪ್ರಸ್ತುತಪಡಿಸಿ.


    ಇದನ್ನೂ ಓದಿ: Resume Tips-15: ಈ 4 ವೆಬ್​ಸೈಟ್​ಗಳಲ್ಲಿ ಫ್ರೀ ಆಗಿ ರೆಸ್ಯೂಮ್ ಟೆಂಪ್ಲೇಟ್​​ಗಳನ್ನು ಬಳಸಬಹುದು; ಇವು ಸೇಫ್ ಕೂಡ


    ಚಿಕ್ಕದಾಗಿ ಚೊಕ್ಕವಾಗಿರಿಸಿಕೊಳ್ಳಿ


    ನೇಮಕಾತಿಮಾಡುವವರು ತುಂಬಾ ಬ್ಯುಸಿ ಇರುತ್ತಾರೆ ಎಂಬುದನ್ನು ಮರೆಯದಿರಿ. ಹಾಗಾಗಿ ನಿಮ್ಮ ವಿಡಿಯೋ ರೆಸ್ಯೂಮ್‌ಗಳಲ್ಲಿ ತುಂಬುವ ಮಾಹಿತಿಗಳು ಚಿಕ್ಕದಾಗಿರಲಿ ಹಾಗೂ ಚೊಕ್ಕದಾಗಿರಲಿ. ಹೆಚ್ಚು ಉದ್ದುದ್ದ ಮಾಹಿತಿಗಳು ನೇಮಕಾತಿದಾರರಿಗೆ ಕಿರಿಕಿರಿಯನ್ನುಂಟು ಮಾಡಬಹುದು. ಆದಷ್ಟು ನಿಮ್ಮ ವಿಡಿಯೋ ರೆಸ್ಯೂಮ್‌ಗಳನ್ನು ಸ್ಪಷ್ಟವಾಗಿರಿಸಿಕೊಳ್ಳಿ.


    ಕ್ರಿಯಾತ್ಮಕತೆ ಇರಲಿ


    ಹೆಚ್ಚಿನವರು ವಿಡಿಯೋ ರೆಸ್ಯೂಮ್‌ಗಳ ಮೂಲಕವೇ ಉದ್ಯೋಗಕ್ಕೆ ಅರ್ಜಿ ಸಲ್ಲಿಸುತ್ತಿರುವುದರಿಂದ ನಿಮ್ಮ ರೆಸ್ಯೂಮ್ ಉಳಿದೆಲ್ಲವರಿಗಿಂತ ಭಿನ್ನವಾಗಿರಲಿ. ನಿಮ್ಮ ರೆಸ್ಯೂಮ್ ಅನ್ನು ಉಳಿದವರ ರೆಸ್ಯೂಮ್‌ಗಿಂತ ಭಿನ್ನವಾಗಿಸುವುದು ಹೇಗೆ ಎಂಬ ಅಂಶವನ್ನು ತಿಳಿದುಕೊಳ್ಳಲು ಆನ್‌ಲೈನ್ ಸಹಾಯವನ್ನು ಪಡೆದುಕೊಳ್ಳಬಹುದು.


    ಪ್ರಾತಿನಿಧಿಕ ಚಿತ್ರ


    ಬೇರೆ ಏನಾದರೂ ಹೊಸದಾಗಿ ಯೋಚಿಸಿ, ಆನ್‌ಲೈನ್‌ನಲ್ಲಿ ವಿವಿಧ ಬಗೆಯ ರೆಸ್ಯೂಮ್ ಮಾದರಿಗಳು ದೊರೆಯುತ್ತವೆ ಅಂತೆಯೇ ವಿಡಿಯೋ ರೆಸ್ಯೂಮ್‌ಗಳನ್ನು ಹೇಗೆ ಕ್ರಿಯಾತ್ಮಕವಾಗಿ ರಚಿಸುವುದು ಎಂಬ ಸಲಹೆಗಳು ದೊರೆಯುತ್ತವೆ ಆ ಸಲಹೆಗಳನ್ನು ಬಳಸಿಕೊಳ್ಳಿ.


    ವಿಡಿಯೋ ರೆಸ್ಯೂಮ್ ಅನ್ನು ವೃತ್ತಿಪರವಾಗಿಸಿಕೊಳ್ಳಿ


    ನಿಮ್ಮ ವಿಡಿಯೋ ರೆಸ್ಯೂಮ್ ವೃತ್ತಿಪರ ಗುಣಮಟ್ಟದ್ದಾಗಿರಬೇಕು. ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಎಚ್‌ಡಿಯಲ್ಲಿ ಚಿತ್ರೀಕರಿಸುವ ಸಾಮರ್ಥ್ಯವನ್ನು ಹೊಂದಿವೆ ಹಾಗಾಗಿ ಅವುಗಳ ಸದುಪಯೋಗವನ್ನು ಪಡೆದುಕೊಳ್ಳಿ.


    ನೀವೇ ಅದನ್ನು ಶೂಟ್ ಮಾಡಿ ಎಡಿಟಿಂಗ್ ಟೂಲ್‌ಗಳ ಸಹಾಯದಿಂದ ರೆಸ್ಯೂಮ್ ಅನ್ನು ಎಡಿಟ್ ಮಾಡಬಹುದಾಗಿದೆ. ಬಳಸಿರುವ ಬೆಳಕು, ಚೌಕಟ್ಟು ಹಾಗೂ ಎಡಿಟ್ ಮಾಡಿರುವ ರೀತಿ ವೃತ್ತಿಪರರ ಮಾಡಿರುವಂತೆಯೇ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.


    ನಿಮ್ಮ ಧ್ವನಿ ಸ್ಪಷ್ಟವಾಗಿದೆ ಹಾಗೂ ಯಾವುದೇ ಅಡೆತಡೆಗಳನ್ನು ಹೊಂದಿಲ್ಲ ಎಂಬುದನ್ನು ದೃಢೀಕರಿಸಿ. ನೇರವಾಗಿ ಕ್ಯಾಮೆರಾದ ಮುಂದೆ ಮಾತನಾಡಬಹುದು ಇಲ್ಲವೇ ವಾಯ್ಸ್‌ಓವರ್ ಅನ್ನು ರೆಕಾರ್ಡ್ ಮಾಡಬಹುದು.


    ಪ್ರತಿಕ್ರಿಯೆ ಪಡೆದುಕೊಳ್ಳಿ


    ನಿಮ್ಮ ಉದ್ಯೋಗದಾತರಿಗೆ ರೆಸ್ಯೂಮ್ ಅನ್ನು ಕಳುಹಿಸುವ ಮುನ್ನ ನಿಮ್ಮ ಸ್ನೇಹಿತರಿಗೆ ಅಥವಾ ಕುಟುಂಬದವರಿಗೆ ರೆಸ್ಯೂಮ್ ತೋರಿಸಿ ಅಭಿಪ್ರಾಯ ತಿಳಿಸಲು ಹೇಳಿ. ಇತರರಿಂದ ಅಭಿಪ್ರಾಯ ಪಡೆದುಕೊಳ್ಳುವುದು ರೆಸ್ಯೂಮ್‌ನಲ್ಲಿರುವ ಸಣ್ಣ ಪುಟ್ಟ ದೋಷಗಳನ್ನು ಸರಿಪಡಿಸಲು ಸಹಕಾರಿಯಾಗಿದೆ.


    ಎಚ್ಚರದಿಂದ ಸಂವಹನ ನಡೆಸಿ


    ಎರಡು ನಿಮಿಷಗಳ ಅಂತರವನ್ನು ವಿಡಿಯೋ ರೆಸ್ಯೂಮ್‌ನಲ್ಲಿರಿಸಿ. ಇದರಿಂದ ಬೇಡದೇ ಇರುವ ಪಿಸುಮಾತು, ಹೊರಗಿನ ಶಬ್ಧಗಳು, ಉಸಿರಾಟದ ಶಬ್ಧಗಳನ್ನು ನಿರ್ಲಕ್ಷಿಸಬಹುದು. ವಿಡಿಯೋದ ಮುಂದೆ ಬರೆದಿಟ್ಟಿರುವ ಸ್ಕ್ರಿಪ್ಟ್ ಅನ್ನು ಓದಬೇಡಿ. ರೆಕಾರ್ಡಿಂಗ್‌ಗಿಂತಲೂ ಮೊದಲು ಯಾವ ಪಾಯಿಂಟ್ ಮೊದಲು ಬರಬೇಕು ಎಂಬ ಕಲ್ಪನೆಯನ್ನು ಮಾಡಿ.


    Resume
    ಪ್ರಾತಿನಿಧಿಕ ಚಿತ್ರ


    ಸ್ಕ್ರಿಪ್ಟ್ ರಚಿಸುವಾಗ ಕೂಡ ಪಾಯಿಂಟ್‌ಗಳತ್ತ ಗಮನ ಹರಿಸಿ ಇದರಿಂದ ವಿಡಿಯೋದ ಮುಂದೆ ನಿಮಗೆ ಹೆಚ್ಚು ಆತ್ಮವಿಶ್ವಾಸದಿಂದ ಮಾತನಾಡಬಹುದಾಗಿದೆ. ನೇಮಕಾತಿದಾರರನ್ನು ಸೆಳೆಯುವಂತೆ ನಿಮ್ಮ ರೆಸ್ಯೂಮ್ ಸಿದ್ಧಪಡಿಸಿ. ಹೆಚ್ಚು ಉದ್ದವಾದ ವಿವರಣೆಗಳಿಗಿಂತ ಚಿಕ್ಕ ಚೊಕ್ಕ ಮಾಹಿತಿ ವಿಡಿಯೋ ರೆಸ್ಯೂಮ್‌ಗಳಲ್ಲಿರಲಿ


    ರೆಸ್ಯೂಮ್ ಹಾಗೂ ಕವರ್ ಲೆಟರ್‌ಗಳಲ್ಲಿ ಇಲ್ಲದೇ ಇರುವ ಅಂಶವನ್ನು ವಿವರಿಸಿ


    ನಿಮ್ಮ ಬಾಡಿ ಲಾಂಗ್ವೇಜ್ ಹಾಗೂ ನಡವಳಿಕೆಯ ಮೂಲಕ ನೇಮಕಾತಿದಾರರ ಆಕರ್ಷಣೆಯನ್ನು ಗಿಟ್ಟಿಸಿಕೊಳ್ಳಿ. ಹುದ್ದೆಯಲ್ಲಿರುವ ನಿಮ್ಮ ಆಸಕ್ತಿ ಹಾಗೂ ವೃತ್ತಿಯಲ್ಲಿರುವ ಅಂತರವನ್ನು ವಿವರಿಸಲು ವಿಡಿಯೋ ರೆಸ್ಯೂಮ್ ಅನುಕೂಲಕಾರಿಯಾಗಿದೆ. ವೃತ್ತಿಯಲ್ಲಿ ಹೆಚ್ಚಿನ ವರ್ಷಗಳ ಅಂತರವನ್ನು ಹೊಂದಿದ್ದರೆ ಅದನ್ನು ಮನಮುಟ್ಟುವ ರೀತಿಯಲ್ಲಿ ನೇಮಕಾತಿದಾರರಿಗೆ ವಿವರಿಸಿ.




    ಗುರಿ ಇರಿಸಿಕೊಂಡು ಮುನ್ನುಗ್ಗಿ ಹಾಗೂ ಆತ್ಮವಿಶ್ವಾಸದಿಂದ ನಿಮ್ಮ ಬಗ್ಗೆ ಹೇಳಿ. ಅನಗತ್ಯ ಮಾಹಿತಿಗಳಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.


    ಉಡುಗೆ ತೊಡುಗೆಯತ್ತ ಗಮನಹರಿಸಿ


    ನೀವು ಇನ್ನೊಬ್ಬ ಉದ್ಯೋಗಿಗೆ ಪೈಪೋಟಿ ನೀಡಿ ಈ ಹುದ್ದೆಗೆ ನೇಮಕಾತಿಗೊಳ್ಳುತ್ತಿದ್ದೀರಿ ಹಾಗಾಗಿ ನಿಮ್ಮ ಉಡುಗೆ ತೊಡುಗೆ ಉತ್ತಮವಾಗಿರಲಿ. ನೇರವಾಗಿ ಸಂದರ್ಶಕರ ಮುಂದೆ ನೀವು ಸಂದರ್ಶನ ನಡೆಸುತ್ತಿದ್ದೀರಿ ಎಂಬ ಭಾವನೆಯಿಂದ ಚೆನ್ನಾಗಿ ದಿರಿಸು ಧರಿಸಿಕೊಂಡು ನಿಮ್ಮ ಬಗ್ಗೆ ಮಾಹಿತಿ ನೀಡಿ.


    ಉತ್ತಮ ಲೈಟಿಂಗ್ ವ್ಯವಸ್ಥೆಯನ್ನು ಹೊಂದಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ನೈಸರ್ಗಿಕ ಬೆಳಕು ಲಭ್ಯವಿಲ್ಲ ಎಂದಾದರೆ ರಿಂಗ್ ಲೈಟ್‌ಗಳನ್ನು ಖರೀದಿಸಿ ರೆಸ್ಯೂಮ್ ತಯಾರಿಸಿ.


    ಹೆಚ್ಚು ಉತ್ಸಾಹದಿಂದ ನಿಮ್ಮನ್ನು ಪ್ರಸ್ತುತಪಡಿಸಿ


    ನಿಮ್ಮಲ್ಲಿರುವ ಉತ್ಸಾಹ ಹಾಗೂ ಮಾತಿನಲ್ಲಿರುವ ಆತ್ಮವಿಶ್ವಾಸವೇ ನೇಮಕಾತಿದಾರರನ್ನು ನಿಮ್ಮನ್ನು ಆಯ್ಕೆಮಾಡಲು ಸಹಕಾರಿಯಾಗಿರುತ್ತದೆ. ಉತ್ತಮ ನಡವಳಿಕೆ ಹಾಗೂ ಚುರುಕಾಗಿರುವ ಅಭ್ಯರ್ಥಿಗೆ ನೇಮಕಾತಿದಾರರು ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. ಉತ್ಸಾಹದಿಂದ ನಿಮ್ಮನ್ನು ನೀವು ಪ್ರಸ್ತುತಪಡಿಸಿ.




    ಉತ್ಸಾಹ ಹಾಗೂ ಎನರ್ಜಿ ಕೊರತೆ ನಿಮ್ಮಲ್ಲಿದ್ದರೆ ನಿಮ್ಮ ರೆಸ್ಯೂಮ್ ಕೂಡ ಮಂಕಾಗಿಬಿಡುತ್ತದೆ. ವಿಡಿಯೋ ರೆಕಾರ್ಡಿಂಗ್‌ಗಿಂತ ಮೊದಲು ನಿಮ್ಮಷ್ಟಕ್ಕೆ ಮಾತನಾಡಿ ಅದನ್ನು ಪರಿಶೀಲಿಸಿ. ಮಾತಿನಲ್ಲಿ ಉತ್ಸಾಹದ ಕೊರತೆ ಇದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ.

    Published by:Kavya V
    First published: