ಸೋಶಿಯಲ್ ಮೀಡಿಯಾ ಇಂದು ಹತ್ತು ಹಲವು ರೂಪಗಳಲ್ಲಿ ಬಳಕೆದಾರರಿಗೆ ಪ್ರಯೋಜನಕಾರಿ ಎಂದೆನಿಸಿದೆ. ಅದೇ ರೀತಿ ಪ್ರಸ್ತುತ ವ್ಯಾಪಾರ ಪ್ರಪಂಚದ (World) ಅವಿಭಾಜ್ಯ ಅಂಗವಾಗಿದೆ. ಗ್ರಾಹಕರೊಂದಿಗೆ ಸಂಪರ್ಕ (Connection) ಸಾಧಿಸಲು ಉತ್ಪನ್ನಗಳನ್ನು ಪ್ರಚಾರಪಡಿಸಲು ಪ್ರಬಲ ಸಾಧನವಾಗಿ ಮಾರ್ಪಟ್ಟಿದೆ. ಸೋಶಿಯಲ್ ಮೀಡಿಯಾ ಹೆಚ್ಚಿನ ಬಳಕೆಯು ಮಾರ್ಕೆಟಿಂಗ್ (Marketing) ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು (Job) ಸೃಷ್ಟಿಸಿದೆ ಮತ್ತು ಇದು ಭಾರತದಲ್ಲಿ ಅನೇಕರಿಗೆ ಜನಪ್ರಿಯ ವೃತ್ತಿ ಆಯ್ಕೆಯಾಗಿದೆ. ಸಾಮಾಜಿಕ ಮಾಧ್ಯಮ ಮಾರ್ಕೆಟಿಂಗ್‌ನಲ್ಲಿ ವೃತ್ತಿ ಆಯ್ಕೆಗಳು ಯಾವುವು ಎಂಬುದನ್ನು ಅರಿತುಕೊಳ್ಳೋಣ.
ಅತ್ಯುತ್ತಮ ಉದ್ಯೋಗವಕಾಶಗಳು
ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರವಾಗಿದ್ದು ಅದು ಅನೇಕ ವೃತ್ತಿ ಆಯ್ಕೆಗಳನ್ನು ನೀಡುತ್ತದೆ. ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ವಹಿಸುವುದರಿಂದ ಹಿಡಿದು ಡೇಟಾ ವಿಶ್ಲೇಷಣೆ ಹೀಗೆ ಬೇರೆ ಬೇರೆ ಉದ್ಯೋಗವಕಾಶಗಳು ದೊರೆಯಲಿದೆ.
ಸೋಶಿಯಲ್ ಮೀಡಿಯಾ ಮ್ಯಾನೇಜರ್
ಕಂಪನಿಯ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ವಹಿಸಲು ಸೋಶಿಯಲ್ ಮೀಡಿಯಾ ವ್ಯವಸ್ಥಾಪಕರು ಜವಾಬ್ದಾರರಾಗಿರುತ್ತಾರೆ. ಕಂಟೆಂಟ್ ರಚಿಸುವುದು ಅದನ್ನು ಪ್ರಕಟಿಸುವುದು ಹಾಗೂ ಡೇಟಾ ವಿಶ್ಲೇಷಣೆ ಮೊದಲಾದ ಚಟುವಟಿಕೆಗಳನ್ನು ಸೋಶಿಯಲ್ ಮೀಡಿಯಾ ಮ್ಯಾನೇಜರ್ ನಿರ್ವಹಿಸುತ್ತಾರೆ.
ಸೋಶಿಯಲ್ ಮೀಡಿಯಾ ನಿರ್ವಾಹಕರು ಅತ್ಯುತ್ತಮ ಸಂವಹನ ಮತ್ತು ಬರವಣಿಗೆ ಕೌಶಲ್ಯಗಳನ್ನು ಹೊಂದಿರಬೇಕು ಮತ್ತು ವಿಭಿನ್ನ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳ ಉತ್ತಮ ತಿಳುವಳಿಕೆಯನ್ನು ಹೊಂದಿರಬೇಕು. ಭಾರತದಲ್ಲಿ ಸಾಮಾಜಿಕ ಮಾಧ್ಯಮ ನಿರ್ವಾಹಕರಿಗೆ ಸರಾಸರಿ ವೇತನವು ಸುಮಾರು ವರ್ಷಕ್ಕೆ 5-8 ಲಕ್ಷವಾಗಿದೆ.
ಇದನ್ನೂ ಓದಿ: BTech Students: ಬಿಟೆಕ್ ಮುಗೀತಾ? ಹಾಗಾದ್ರೆ ನೀವಿನ್ನು ನೇರವಾಗಿ PHD ಮಾಡ್ಬಹುದು
ಸೋಶಿಯಲ್ ಮೀಡಿಯಾ ತಂತ್ರಜ್ಞ:
ಕಂಪನಿಯೊಂದಕ್ಕೆ ಸಾಮಾಜಿಕ ಮಾಧ್ಯಮ ತಂತ್ರವನ್ನು ರಚಿಸಲು ಮತ್ತು ಕಾರ್ಯಗತಗೊಳಿಸಲು ಸಾಮಾಜಿಕ ಮಾಧ್ಯಮ ತಂತ್ರಜ್ಞನು ಜವಾಬ್ದಾರನಾಗಿರುತ್ತಾರೆ. ಕಂಪನಿಯು ತನ್ನ ಗುರಿಗಳನ್ನು ತಲುಪಲು ಸಹಾಯ ಮಾಡುವ ಯೋಜನೆಯನ್ನು ಅಭಿವೃದ್ಧಿಪಡಿಸಲು ಅವರು ಮಾರ್ಕೆಟಿಂಗ್ ತಂಡದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾರೆ. ಸೋಶಿಯಲ್ ಮೀಡಿಯಾ ತಂತ್ರಜ್ಞರು ಅತ್ಯುತ್ತಮ ವಿಶ್ಲೇಷಣಾತ್ಮಕ ಕೌಶಲ್ಯಗಳನ್ನು ಹೊಂದಿರಬೇಕು ಮತ್ತು ಸೃಜನಾತ್ಮಕವಾಗಿ ಯೋಚಿಸಲು ಸಾಮರ್ಥ್ಯವಿರಬೇಕು. ಇವರ ವೇತನ ವರ್ಷಕ್ಕೆ 3-5 ಲಕ್ಷವಾಗಿದೆ.
ಸಾಮಾಜಿಕ ಮಾಧ್ಯಮ ಸಂಯೋಜಕರು:
ಕಂಪನಿಯಸೋಶಿಯಲ್ ಮೀಡಿಯಾ ಖಾತೆಗಳ ಚಟುವಟಿಕೆಗಳನ್ನು ಸಂಘಟಿಸಲು ಸಾಮಾಜಿಕ ಮಾಧ್ಯಮ ಸಂಯೋಜಕರು ಜವಾಬ್ದಾರರಾಗಿರುತ್ತಾರೆ. ಅವರು ವಿಷಯವನ್ನು ರಚಿಸಲು ಮತ್ತು ಪ್ರಕಟಿಸಲು ಮತ್ತು ಗ್ರಾಹಕರೊಂದಿಗೆ ಸಂವಹನ ನಡೆಸಲು ಸಾಮಾಜಿಕ ಮಾಧ್ಯಮ ನಿರ್ವಾಹಕರೊಂದಿಗೆ ಕೆಲಸ ಮಾಡುತ್ತಾರೆ. ಸೋಶಿಯಲ್ ಮೀಡಿಯಾ ಸಂಯೋಜಕರು ಅತ್ಯುತ್ತಮ ಸಂವಹನ ಕೌಶಲ್ಯಗಳನ್ನು ಹೊಂದಿರಬೇಕು ಮತ್ತು ಒತ್ತಡದಲ್ಲಿಯೂ ಉತ್ತಮವಾಗಿ ಕಾರ್ಯನಿರ್ವಹಿಸುವ ಕುಶಲತೆ ಅವರಲ್ಲಿರಬೇಕು. ಇವರ ವೇತನ ವರ್ಷಕ್ಕೆ 4-6 ಲಕ್ಷವಾಗಿದೆ.
ಸೋಶಿಯಲ್ ಮೀಡಿಯಾ ವಿಶ್ಲೇಷಕ:
ಕಂಪನಿಯ ಸಾಮಾಜಿಕ ಮಾಧ್ಯಮ ಪ್ರಚಾರಗಳ ಯಶಸ್ಸನ್ನು ಅರಿತುಕೊಳ್ಳಲು ಡೇಟಾವನ್ನು ವಿಶ್ಲೇಷಿಸಲು ಸೋಶಿಯಲ್ ಮೀಡಿಯಾ ವಿಶ್ಲೇಷಕ ಜವಾಬ್ದಾರರಾಗಿರುತ್ತಾರೆ. ತೊಡಗಿಸಿಕೊಳ್ಳುವಿಕೆ ಮತ್ತು ಪರಿವರ್ತನೆ ದರಗಳಂತಹ ಮೆಟ್ರಿಕ್‌ಗಳನ್ನು ಟ್ರ್ಯಾಕ್ ಮಾಡಲು ಅವರು ಗೂಗಲ್ ಅನಾಲಿಟಿಕ್ಸ್ ನಂತಹ ಸಾಧನಗಳನ್ನು ಬಳಸುತ್ತಾರೆ. ಸೋಶಿಯಲ್ ಮೀಡಿಯಾ ವಿಶ್ಲೇಷಕರು ಅತ್ಯುತ್ತಮ ವಿಶ್ಲೇಷಣಾತ್ಮಕ ಕೌಶಲ್ಯಗಳನ್ನು ಹೊಂದಿರಬೇಕು ಮತ್ತು ಹೆಚ್ಚಿನ ಪ್ರಮಾಣದ ಡೇಟಾದೊಂದಿಗೆ ಕೆಲಸ ಮಾಡುವ ಅನುಭವ ಹೊಂದಿರಬೇಕು. ಇವರ ವೇತನ ವರ್ಷಕ್ಕೆ 4-10 ಲಕ್ಷವಾಗಿದೆ.
ಉದ್ಯೋಗಾಂಕ್ಷಿಗಳಿಗೆ ದೊರೆಯಲಿದೆ ಅತ್ಯುತ್ತಮ ಅವಕಾಶ
ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರವಾಗಿದ್ದು ಅದು ಅನೇಕ ವೃತ್ತಿ ಆಯ್ಕೆಗಳನ್ನು ನೀಡುತ್ತದೆ. ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ವಹಿಸುವುದರಿಂದ ಹಿಡಿದು ಡೇಟಾವನ್ನು ವಿಶ್ಲೇಷಿಸುವವರೆಗೆ ಯಾವುದಾದರೊಂದು ಉದ್ಯೋಗ ಅವಕಾಶವನ್ನು ಈ ಕ್ಷೇತ್ರ ಒದಗಿಸುತ್ತದೆ. ಈ ಕ್ಷೇತ್ರದಲ್ಲಿ ಫ್ರೆಶರ್ ಆಗಿರಿ ಅಥವಾ ಅನುಭವಸ್ಥರೇ ಆಗಿರಿ ನಿಮ್ಮ ವೃತ್ತಿಜೀವನವನ್ನು ಹಸನಾಗಿಸುವ ಆಯ್ಕೆಗಳನ್ನು ತೆಗೆದುಕೊಳ್ಳಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ