ಆಣ್ವಿಕ ಜೀವಶಾಸ್ತ್ರವು (Molecular Biology) ಸಸ್ಯಗಳು, ಪ್ರಾಣಿಗಳು ಮತ್ತು ಮಾನವ ತಳಿಶಾಸ್ತ್ರ, ಅವುಗಳ ವ್ಯತ್ಯಾಸಗಳು ಮತ್ತು ಸಂಬಂಧಗಳ ಕುರಿತು ಅಧ್ಯಯನ ನಡೆಸುತ್ತದೆ. ವೃತ್ತಿನಿಪುಣರು (Professionals) ಜೀವಶಾಸ್ತ್ರ, ರಸಾಯನಶಾಸ್ತ್ರ, ಭೌತಶಾಸ್ತ್ರ, ಶರೀರಶಾಸ್ತ್ರ ಮತ್ತು ತಳಿಶಾಸ್ತ್ರದ ತಮ್ಮ ಜ್ಞಾನ ಮತ್ತು ತಿಳುವಳಿಕೆಯನ್ನು, ವಿವಿಧ ರೀತಿಯ ಜೀವಕೋಶಗಳನ್ನು ತಿಳಿದುಕೊಳ್ಳಲು ಜ್ಞಾನವನ್ನು ಸ್ಪಷ್ಟಪಡಿಸಲು ಬಳಸುತ್ತಾರೆ.
ಇದೊಂದು ಉದಯೋನ್ಮುಖ ಅಧ್ಯಯನ ಕ್ಷೇತ್ರವಾಗಿದ್ದು ವೈದ್ಯಕೀಯ, ಕೃಷಿ, ಪಶುಸಂಗೋಪನೆ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಸಂಶೋಧನೆಗೆ ಸಾಕಷ್ಟು ಅವಕಾಶಗಳನ್ನು ಒದಗಿಸುತ್ತದೆ.
ಆಣ್ವಿಕ ಜೀವಶಾಸ್ತ್ರದಲ್ಲಿ ಪದವಿಯನ್ನು ಹೊಂದಿರುವರು ಕೈಗಾರಿಕೆ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಪ್ರಯೋಗ ನಡೆಸುವ ಸಂಶೋಧನಾ ತಜ್ಞರಾಗಿ, ಜೀವಶಾಸ್ತ್ರಜ್ಞರು, ಸೆಲ್ಯುಲಾರ್ ಜೀವಶಾಸ್ತ್ರಜ್ಞರು ಹಾಗೂ ಬೋಧನಾ ವಲಯದಲ್ಲಿ ಉದ್ಯೋಗಗಳನ್ನು ಗಿಟ್ಟಿಸಿಕೊಳ್ಳಬಹುದಾಗಿದೆ. ಆಣ್ವಿಕ ಜೀವಶಾಸ್ತ್ರವನ್ನು ಅಧ್ಯಯನ ನಡೆಸುವ ವಿದ್ಯಾರ್ಥಿಗಳು ತಮ್ಮ ವೃತ್ತಿರಂಗವನ್ನು ಈ ಕೆಳಗಿನ ವಿವಿಧ ಹುದ್ದೆಗಳನ್ನು ಆಯ್ಕೆಮಾಡಿಕೊಳ್ಳುವ ಮೂಲಕ ಆರಂಭಿಸಬಹುದಾಗಿದೆ.
1) ಪರಿಸರ ಜೀವಶಾಸ್ತ್ರಜ್ಞ: ಪರಿಸರ ವ್ಯವಸ್ಥೆಯನ್ನು ರಕ್ಷಿಸುವ ಇರಾದೆ ಹೊಂದಿರುವ ಪರಿಸರ ಜೀವಶಾಸ್ತ್ರಜ್ಞರು ಸಂಪೂರ್ಣ ಪರಿಸರ ವ್ಯವಸ್ಥೆಯ ಜೈವಿಕ ಅಂಶಗಳನ್ನು ಅಧ್ಯಯನ ಮಾಡುತ್ತಾರೆ. ಪರಿಸರ ವ್ಯವಸ್ಥೆ ಹಾಗೂ ನಿರ್ದಿಷ್ಟ ಜಾತಿ ತಳಿಗಳ ಮೇಲೆ ಮಾನವ ಚಟುವಟಿಕೆಗಳ ಪ್ರಭಾವದ ಮೇಲೆ ಮಹತ್ವ ನೀಡುತ್ತಾರೆ.
ಶಾಸ್ತ್ರಜ್ಞರು ಸಾಮಾನ್ಯವಾಗಿ ಸರ್ಕಾರಿ ಏಜೆನ್ಸಿಗಳು, ವಿಶ್ವವಿದ್ಯಾನಿಲಯಗಳು ಮತ್ತು ಪ್ರಯೋಗಾಲಯಗಳು ವಿವಿಧ ವಿಷಯಗಳ ಬಗ್ಗೆ ತನಿಖೆ ಮತ್ತು ಸಂಶೋಧನೆಗೆಳನ್ನು ನಡೆಸಬಹುದಾಗಿದೆ.
2) ಬಯೋಟೆಕ್ನಾಲಜಿ ಸಂಶೋಧಕ: ಜೈವಿಕ ತಂತ್ರಜ್ಞಾನದ ಸಂಶೋಧಕರು ಸಾಮಾನ್ಯವಾಗಿ ವಿಶ್ವವಿದ್ಯಾನಿಲಯಗಳು, ಸಂಶೋಧನಾ ಸಂಸ್ಥೆಗಳು ಅಥವಾ ಉತ್ಪಾದನಾ ಘಟಕಗಳಲ್ಲಿ ಅಥವಾ ಅತ್ಯಾಧುನಿಕ ಪ್ರಯೋಗಾಲಯಗಳಲ್ಲಿ ಉದ್ಯೋಗ ಕಂಡುಕೊಳ್ಳಬಹುದು.
ಜಗತ್ತು ಎದುರಿಸುವ ಅನೇಕ ಸಮಸ್ಯೆಗಳ ಕುರಿತಂತೆ ಆಣ್ವಿಕ ಶಾಸ್ತ್ರಜ್ಞರು ವೃತ್ತಿಯನ್ನು ಆಯ್ದುಕೊಳ್ಳಬಹುದಾಗಿದೆ. ರೋಗ ನಿಯಂತ್ರಣ, ಉತ್ಪಾದನೆಯ ಮೂಲಕ ಆಹಾರ ಭದ್ರತೆ ಮತ್ತು ಕೃಷಿಯಲ್ಲಿ ಉತ್ಪನ್ನಗಳು ಮತ್ತು ಪ್ರಕ್ರಿಯೆಗಳ ಸುಧಾರಣೆ ಮತ್ತು ಹವಾಮಾನ ಬದಲಾವಣೆ ಮತ್ತು ಇಂಧನ ಪರ್ಯಾಯಗಳಲ್ಲಿ ವಿವಿಧ ಸಂರಕ್ಷಣಾ ಪ್ರಯತ್ನಗಳು ಹೀಗೆ ಆಕಾಂಕ್ಷಿಗಳು ಉದ್ಯೋಗಗಳನ್ನು ಪಡೆದುಕೊಳ್ಳಬಹುದು.
ಶಾಸ್ತ್ರಜ್ಞರು ಹೊಸ ಲಸಿಕೆಗಳನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಅಡ್ಡ-ತಳಿ ಸಸ್ಯಗಳು ಮತ್ತು ಪ್ರಾಣಿಗಳು, ಸಮರ್ಥನೀಯ ಆರೋಗ್ಯಕರ ಆಹಾರ ಪರ್ಯಾಯಗಳನ್ನು ಅಭಿವೃದ್ಧಿಪಡಿಸುವ ಕೌಶಲ್ಯವನ್ನು ಹೊಂದಿರುತ್ತಾರೆ.
3) ಮೈಕ್ರೋಬಯಾಲಜಿಸ್ಟ್: ಆಣ್ವಿಕ ಶಾಸ್ತ್ರಜ್ಞರು ವೈರಸ್‌ಗಳು, ಪಾಚಿಗಳು, ಬ್ಯಾಕ್ಟೀರಿಯಾಗಳು ಮತ್ತು ಇತರ ಪರಾವಲಂಬಿಗಳಂತಹ ವಿವಿಧ ಸೂಕ್ಷ್ಮ ಜೀವ ರೂಪಗಳನ್ನು ಅಧ್ಯಯನ ಮಾಡುತ್ತಾರೆ.
ಈ ಜೀವಂತ ಜೀವಕೋಶಗಳು ಮತ್ತು ಅಂಗಾಂಶಗಳ ರಾಸಾಯನಿಕ ರಚನೆಯನ್ನು ಅಧ್ಯಯನ ಮಾಡುವಾಗ ಹೊಸ ಉತ್ಪನ್ನಗಳು ಮತ್ತು ಪ್ರಕ್ರಿಯೆಗಳನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸುತ್ತಾರೆ.
ಹುದ್ದೆಯು ಕ್ರಿಮಿನಾಶಕ ಪ್ರಕ್ರಿಯೆಗಳನ್ನು ಸುಧಾರಿಸುವುದು ಮತ್ತು ಸಂಕೀರ್ಣ ಸಂಶೋಧನೆಯ ಮೂಲಕ ಹೊಸ ಔಷಧಿಗಳನ್ನು ಅಭಿವೃದ್ಧಿಪಡಿಸುವುದು, ಅನಾರೋಗ್ಯದ ಚಿಕಿತ್ಸೆಗಾಗಿ ಹೊಸ ಪ್ರಕ್ರಿಯೆಗಳನ್ನು ಅನ್ವೇಷಿಸುವುದು, ಸಸ್ಯಗಳು ಮತ್ತು ಪ್ರಾಣಿಗಳ ಮೇಲೆ ಸೂಕ್ಷ್ಮ ಜೀವಿಗಳ ಪರಿಣಾಮವನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಅಧ್ಯಯನ ಮಾಡುವುದು ಮೊದಲಾದ ಅಂಶಗಳನ್ನು ಒಳಗೊಂಡಿದೆ.
ಇದನ್ನೂ ಓದಿ: Marine Engineering: ನಿಮಗೆ ಸಮುದ್ರ-ಹಡಗುಗಳ ಬಗ್ಗೆ ಆಸಕ್ತಿ ಇದ್ದರೆ, ಮೆರೈನ್ ಎಂಜಿನಿಯರ್ ಆಗುವುದು ಸೂಕ್ತ
4) ವೈರಾಲಜಿಸ್ಟ್: ಈ ಕ್ಷೇತ್ರದಲ್ಲಿ ಪರಿಣಿತಿ ಹೊಂದಿರುವವರು ವೈರಸ್‌ಗಳ ಬೆಳವಣಿಗೆ, ರಚನೆ, ಗುಣಲಕ್ಷಣಗಳು ಮತ್ತು ಅಭಿವೃದ್ಧಿ ಮತ್ತು ಸಸ್ಯಗಳು, ಪ್ರಾಣಿಗಳು, ಬ್ಯಾಕ್ಟೀರಿಯಾಗಳು, ಶಿಲೀಂಧ್ರಗಳ ಬಗ್ಗೆ ಅಧ್ಯಯನ ನಡೆಸುತ್ತಾರೆ ಅವುಗಳ ಕ್ರಿಯೆಗಳ ಬಗ್ಗೆ ಅರಿತುಕೊಳ್ಳುತ್ತಾರೆ.
ಈ ವೃತ್ತಿಪರರು ತಮ್ಮ ಅಧ್ಯಯನವನ್ನು ಪ್ರಯೋಗಾಲಯದಲ್ಲಿ ಮತ್ತು ನೈಸರ್ಗಿಕ ಪರಿಸರದಲ್ಲಿ ನಡೆಸುತ್ತಾರೆ. ಉದ್ಯೋಗದ ಹುದ್ದೆಯು ವಿವಿಧ ಔಷಧಿಗಳಿಗೆ ವೈರಸ್‌ಗಳ ಔಷಧೀಯ ಪ್ರತಿಕ್ರಿಯೆಯ ರೋಗನಿರ್ಣಯ ಮತ್ತು ತನಿಖೆಯನ್ನು ಒಳಗೊಂಡಿರುತ್ತದೆ.
ಆಣ್ವಿಕ ಜೀವಶಾಸ್ತ್ರದಲ್ಲಿ ಕೌಶಲ್ಯಗಳು ಮತ್ತು ಪದವಿಗಳು
ಆಸಕ್ತಿ, ಅರ್ಹತೆಗಳು ಮತ್ತು ಕೌಶಲ್ಯಗಳನ್ನು ಹೊಂದಿರುವ ವಿದ್ಯಾರ್ಥಿಗಳು ಆಣ್ವಿಕ ಜೀವಶಾಸ್ತ್ರಜ್ಞರ ವೃತ್ತಿಜೀವನವನ್ನು ಸವಾಲಿನ ಆದರೆ ಲಾಭದಾಯಕವೆಂದು ಕಂಡುಕೊಳ್ಳುತ್ತಾರೆ. ಕೋರ್ಸ್ ವಿದ್ಯಾರ್ಥಿಗಳಿಗೆ ಸಮಸ್ಯೆ-ಪರಿಹರಿಸುವ ಕೌಶಲ್ಯ, ಟೀಮ್‌ವರ್ಕ್, ಸಂವಹನ, ಸಮಯ ನಿರ್ವಹಣೆ ಮತ್ತು ಸಾಂಸ್ಥಿಕ ಕೌಶಲ್ಯಗಳಂತಹ ವಿವಿಧ ಕೌಶಲ್ಯಗಳನ್ನು ಕಲಿಸುತ್ತದೆ.
ಆಣ್ವಿಕ ಜೀವಶಾಸ್ತ್ರದಲ್ಲಿ ಉದ್ಯೋಗ ನಿರೀಕ್ಷೆಗಳು
ಜೈವಿಕ ತಂತ್ರಜ್ಞಾನದಲ್ಲಿನ ಬೆಳವಣಿಗೆಗಳು ಈ ಹೊಸ ವಿಜ್ಞಾನ ಕ್ಷೇತ್ರಕ್ಕೆ ಸಾಕಷ್ಟು ಸಾಮರ್ಥ್ಯ ಮತ್ತು ಭರವಸೆಯನ್ನು ತರುತ್ತವೆ. ಫ್ರೆಶರ್ಸ್‌ಗೆ ರೂ 6 ಲಕ್ಷದಿಂದ ರೂ 8 ಲಕ್ಷದ ಆರಂಭಿಕ ವೇತನವಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ