ವೃತ್ತಿಜೀವನ (Career Life) ಎಂಬುದು ನಿರಂತರವಾದ ಸಾಧನೆಯ ಹಾದಿಯಾಗಿದೆ. ದುಡ್ಡು ಸಂಪಾದನೆ ಮಾತ್ರವಲ್ಲದೆ ಕೌಶಲ್ಯ, ಜ್ಞಾನದ ಸಂಪಾದನೆಗೂ ಇದು ಬೆಂಬಲವನ್ನೊದಗಿಸುತ್ತದೆ. ಉತ್ತಮ ವೇತನ ಹಾಗೂ ಮಾನ್ಯವಾದ ಹುದ್ದೆ ಉದ್ಯೋಗಿಯ (Employee) ಗುರಿಯಾಗಿದ್ದರೆ ವೃತ್ತಿ ಬದಲಾವಣೆ ಹಾಗೂ ಮಾರ್ಪಾಡುಗಳನ್ನು ನಿರ್ದಿಷ್ಟ ಸಮಯದಲ್ಲಿ ಮಾಡಬೇಕಾಗುತ್ತದೆ. ಉದ್ಯೋಗದಲ್ಲಿ ಉನ್ನತಿ ಸಾಧಿಸಲು ಕೆಲವೊಂದು ತರಬೇತಿ ಹಾಗೂ ಕೋರ್ಸ್‌ಗಳನ್ನು (Course) ಮಾಡುವುದು ಅಗತ್ಯವಾಗಿರುತ್ತದೆ. ಏಕೆಂದರೆ ಕೆಲವೊಂದು ಹುದ್ದೆಗಳಿಗೆ ಆ ಹುದ್ದೆಯಲ್ಲಿ ಪರಿಣಿತಿ ಹಾಗೂ ಕೌಶಲ್ಯ ಸಾಧಿಸಿದವರು ಮುಖ್ಯವಾಗಿರುತ್ತಾರೆ. ಆದರೆ ಒಂದೇ ಬಗೆಯ ಕೌಶಲ್ಯಗಳನ್ನು ಕಲಿಯುವುದು ಕೂಡ ವೃತ್ತಿಜೀವನಕ್ಕೆ ಮಾರಕ ಎನ್ನುವುದು ಪರಿಣಿತರ ವಾದವಾಗಿದೆ. ಇದನ್ನೇ ತರಬೇತಿ ಪಡೆದ ಅಸಾಮರ್ಥ್ಯ ಎಂಬುದಾಗಿ ಅವರು ಹೆಸರಿಸುತ್ತಾರೆ.
ಉದ್ಯೋಗಿ ತನಗೆ ಗೊತ್ತಿರುವ ವಿಷಯಕ್ಕೆ ಮಾತ್ರ ಆದ್ಯತೆ ನೀಡುತ್ತಾನೆ ಹಾಗೂ ಇನ್ನಿತರ ವಿಷಯಗಳನ್ನು ಕಲಿಯುವುದಿಲ್ಲ ಈ ಸಮಯದಲ್ಲಿ ಒಂದು ರೀತಿಯ ಅಸಾಮರ್ಥ್ಯ ಆತನಲ್ಲಿ ಉತ್ಪತ್ತಿಯಾಗುತ್ತದೆ.
ಟ್ರೇನ್ಡ್ ಇನ್‌ಕ್ಯಪಾಸಿಟಿ ಎಂದರೇನು? ವೃತ್ತಿಗೆ ಇದು ಹೇಗೆ ತೊಡಕಾಗಿದೆ?
1914 ರಲ್ಲಿ ಅಸ್ತಿತ್ವಕ್ಕೆ ಬಂದ ತರಬೇತಿ ಪಡೆದ ಅಸಾಮರ್ಥ್ಯ ಅಥವಾ ಟ್ರೇನ್ಡ್ ಇನ್‌ಕ್ಯಪಾಸಿಟಿ ಎಂಬುದು ಸೀಮಿತವಾದ ಪರಿಣಿತಿಯನ್ನು ಮಾತ್ರವೇ ಉದ್ಯೋಗಿಗೆ ಒದಗಿಸುತ್ತದೆ.
ಉದ್ಯೋಗಿ ತನಗೆ ತಿಳಿದಿರುವುದನ್ನು ಮಾತ್ರವೇ ಚೆನ್ನಾಗಿ ಅಭಿವೃದ್ಧಿಪಡಿಸುತ್ತಾನೆ ಅದರಾಚೆಗೆ ಬೇರೆ ಯಾವುದೇ ಕೌಶಲ್ಯವನ್ನು ಕಲಿಯುವುದಿಲ್ಲ. ಈ ಸಂದರ್ಭದಲ್ಲಿ ಉದ್ಯೋಗಿಗೆ ಒಂದೇ ವಿಷಯವನ್ನು ಕಲಿಯಲು ಮಾತ್ರ ಸಾಧ್ಯವಾಗುತ್ತದೆ. ಇದುವೇ ವೃತ್ತಿಜೀವನಕ್ಕೆ ತೊಂದರೆಯನ್ನುಂಟು ಮಾಡುತ್ತದೆ.
ವೃತ್ತಿಬೆಳವಣಿಗೆಗೆ ಒಂದಾ ಪರಿಣಿತರಾಗುವುದು ಇಲ್ಲವೇ ಎಲ್ಲಾ ಬಗೆಯ ಜ್ಞಾನವನ್ನು ಅರಿತಿರುವ ಸಮರ್ಥ ವ್ಯಕ್ತಿಯಾಗಿರುವುದು ಹೀಗೆ ಎರಡು ಬಗೆಯ ಆಯ್ಕೆಗಳಿರುತ್ತವೆ.
ಸಮರ್ಥ ವ್ಯಕ್ತಿ ಎಂದೆನಿಸುವುದು ಅನೇಕ ಕೆಲಸ ಕಾರ್ಯಗಳಿಗೆ ಉಪಯುಕ್ತವಾಗಿದ್ದರೆ ಪರಿಣಿತರಾಗುವುದು ಎಂಬುದು ಒಂದೇ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಆ ಕ್ಷೇತ್ರದಲ್ಲಿ ಮಾತ್ರವೇ ಆ ವ್ಯಕ್ತಿ ಸಿದ್ಧಹಸ್ತ ಎಂದೆನಿಸುತ್ತಾನೆ.
ಉಳಿದೆಲ್ಲ ಕೌಶಲ್ಯಗಳ ಬಗ್ಗೆ ಆ ಪರಿಣಿತರು ತಿಳಿದುಕೊಳ್ಳಲು ಬಯಸುವುದಿಲ್ಲ. ಹೀಗಾದಾಗ ಹೆಚ್ಚಾಗಿ ಅವರು ಚುರುಕುತನವನ್ನು ಬೆಳೆಸಿಕೊಳ್ಳುವುದಿಲ್ಲ ಮತ್ತು ಒಂದೇ ಡೊಮೇನ್‌ನಲ್ಲಿಯೇ ಸಿಲುಕಿಕೊಳ್ಳುತ್ತಾರೆ ಹಾಗೂ ಅಲ್ಲಿಯೇ ನಿಶ್ಚಲರಾಗುತ್ತಾರೆ ಹಾಗೂ ವೃತ್ತಿ ಬೆಳವಣಿಗೆ ಕೂಡ ನಿಲ್ಲುತ್ತದೆ.
ಉತ್ಪಾದಕತೆಯೊಂದಿಗೆ ಕಂಪನಿಗಳು ಹೇಗೆ ಸಮಸ್ಯೆಗಳನ್ನು ಸೃಷ್ಟಿಸುತ್ತವೆ
ದೀರ್ಘ ಸಮಯದಿಂದ ಒಂದೇ ರೀತಿಯ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಇದೇ ರೀತಿಯ ತರಬೇತಿ ಪಡೆದ ಅಸಾಮರ್ಥ್ಯಕ್ಕೆ ಉದಾಹರಣೆಯಾಗಿದೆ.
ಒಂದೇ ತೆರನಾದ ಉದ್ಯೋಗದಲ್ಲಿ ಪ್ರಭುತ್ವವನ್ನು ಸಾಧಿಸುತ್ತೇವೆ. ನಮಗೆ ದೊರೆಯುವ ಪರಿಹಾರಗಳು ಈ ಸಮಯದಲ್ಲಿ ಸೀಮಿತವಾಗಿರುತ್ತವೆ. ನಾವು ಸೃಜನಾತ್ಮಕವಾಗಿ ಯೋಚಿಸುವುದಿಲ್ಲ ಚುರುಕುತನ ನಷ್ಟವಾಗುತ್ತದೆ ಹಾಗೂ ಒಂದೇ ಕ್ಷೇತ್ರಕ್ಕೆ ಸೀಮಿತವಾಗಿರುತ್ತೇವೆ.
ಇದನ್ನೂ ಓದಿ: ಕಾಲು ಮುರಿದು ಹೋದ್ರೂ ಕೈ ಬಿಡದ ಲವರ್, ಆಸ್ಪತ್ರೆಯಲ್ಲೇ ತಾಳಿ ಕಟ್ಟಿದ ಹುಡುಗ!
ಇಂತಹುದೇ ಉದ್ಯಮ ಪ್ರವೃತ್ತಿ ಇದೀಗ ಎಲ್ಲಾ ಸಂಸ್ಥೆಗಳಲ್ಲಿ ಸಾಮಾನ್ಯವಾಗಿದೆ. ಉದ್ಯೋಗಿಗೆ ಒಂದೇ ಕ್ಷೇತ್ರದ ಜ್ಞಾನ ತಿಳುವಳಿಕೆ ಮಾತ್ರ ಇರುತ್ತದೆ ಹಾಗಾಗಿ ಇನ್ನಿತರ ಉದ್ಯೋಗ ವರ್ಗಗಳಲ್ಲಿ ಏನಾಗುತ್ತಿದೆ ಎಂಬುದರ ಅರಿವಿರುವುದಿಲ್ಲ.
ಬೇರೆ ಬೇರೆ ಉದ್ಯೋಗ ಸಾಮರ್ಥ್ಯಗಳನ್ನು ಅರಿಯಲು ಪ್ರಯತ್ನಿಸುವುದಿಲ್ಲ. ಉದ್ಯೋಗದಲ್ಲಿ ನವೀನತೆಯನ್ನುಂಟು ಮಾಡುವುದಿಲ್ಲ. ಕಂಪನಿಗಳು ಬಯಸುವ ಉತ್ಪಾದಕತೆಯನ್ನು ಒದಗಿಸಲು ನಿಮಗೆ ಸಾಧ್ಯವಾಗುವುದಿಲ್ಲ. ಹೊಸತನ್ನು ಕಲಿಯಲು ಆಸಕ್ತಿ ಕೂಡ ನಿಮ್ಮಲ್ಲಿ ಇರುವುದಿಲ್ಲ.
ನಿಮ್ಮೊಳಗಿನ ಪ್ರತಿಭೆಯನ್ನು ಹೇಗೆ ಅಭಿವೃದ್ಧಿಪಡಿಸಬಹುದು
ನಿಮಗೆ ಗೊತ್ತಿಲ್ಲದೇ ಇರುವ ಪರಿಣಿತಿಗಳ ಬಗ್ಗೆ ಅರಿಯಲು ಪ್ರಾರಂಭಿಸಿ. ಒಂದೇ ವಿಷಯದ ಬಗ್ಗೆ ಕಲಿಯುವುದಕ್ಕಿಂತ ಇನ್ನಿತರ ವಿಷಯಗಳತ್ತ ಕೂಡ ಗಮನಹರಿಸಿ.
ಇತರ ಸಹೋದ್ಯೋಗಿಗಳ ನೆರವು ಪಡೆದುಕೊಳ್ಳಿ. ಮೆದುಳನ್ನು ಚುರುಕಾಗಿಸಲು ಪ್ರಯತ್ನಿಸಿ. ಗೊತ್ತಿಲ್ಲದೇ ಇರುವ ವಿಷಯಗಳ ಬಗ್ಗೆ ಮಾಹಿತಿ ಕಲೆಹಾಕಿ ಇತರರು ಚೆನ್ನಾಗಿ ತಿಳಿದಿರುವುದನ್ನು ಕಲಿಯಲು ಬಯಸುವ ಮಾನಸಿಕ ಬದಲಾವಣೆಯನ್ನು ನಾವು ರಚಿಸಿದಾಗ, ನಾವು ಕುತೂಹಲದ ಕೌಶಲ್ಯವನ್ನು ಪ್ರದರ್ಶಿಸುತ್ತೇವೆ.
ಯಾವುದೇ ಒಂದು ವಿಷಯದ ಬಗ್ಗೆ ಕುತೂಹಲ ತೋರ್ಪಡಿಸಿ ಅದರ ಬಗ್ಗೆ ಕಲಿಯುವುದರಿಂದ ಮೆದುಳಿನ ಅಂಶಗಳಾದ ಪ್ರತಿಫಲ, ಕಲಿಕೆ ಹಾಗೂ ಗುರಿ ಸಾಧನೆಗೆ ನೆರವಾಗುತ್ತದೆ.
ಉದ್ಯೋಗದ ಅನಿಶ್ಚತತೆ, ಅಭದ್ರತೆ ಕಾಡುವುದಿಲ್ಲ. ಕಲಿಕೆಯ ಅವಕಾಶಗಳನ್ನು ಇನ್ನಷ್ಟು ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ, ಪರಿಣಿತಿ ನಮ್ಮದಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ