Language Careers: ಭಾಷೆಯೇ ನಿಮ್ಮ ಬಲವಾದರೆ, ಈ 8 ಉದ್ಯೋಗಗಳು ನಿಮಗಾಗಿಯೇ ಇವೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಭಾಷಾ ಅನುವಾದ ಉದ್ಯಮದಲ್ಲಿ ನೀವು ಆಯ್ಕೆ ಮಾಡಿಕೊಳ್ಳಬಹುದಾದ ಟಾಪ್ ವೃತ್ತಿಗಳ ಮಾಹಿತಿ ಇಲ್ಲಿದೆ. 

  • Trending Desk
  • 4-MIN READ
  • Last Updated :
  • Share this:

    ಭಾರತದಲ್ಲಿ ಭಾಷಾಂತರ (Translate) ಮತ್ತು ಸ್ಥಳೀಯ ಉದ್ಯಮವು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಈ ಜಾಗತಿಕ ಉದ್ಯಮವು ಶೇ. 18.2 ರ ಸಂಯುಕ್ತ ವಾರ್ಷಿಕ ಬೆಳವಣಿಗೆ ದರದಲ್ಲಿ ಬೆಳೆಯುತ್ತಿದೆ ಎಂದು ನಿರೀಕ್ಷಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಸ್ಥಳೀಯ ಸೇವೆಗಳಿಗೆ ಬೇಡಿಕೆ ಹೆಚ್ಚುತ್ತಿದ್ದು ಇದರೊಂದಿಗೆ ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳೂ (Job Opportunities) ಸೃಷ್ಟಿಯಾಗುತ್ತಿವೆ. ಅನುವಾದ ಉದ್ಯಮದಲ್ಲಿ ನೀವು ಆಯ್ಕೆ ಮಾಡಿಕೊಳ್ಳಬಹುದಾದ ಟಾಪ್ ವೃತ್ತಿಗಳ (Career Options) ಮಾಹಿತಿ ಇಲ್ಲಿದೆ. 


    1. ವಿಷಯ ರಚನೆಕಾರ: ಕಂಟೆಂಟ್‌ ಕ್ರಿಯೇಟರ್‌ ಅಥವಾ ವಿಷಯ ರಚನೆಕಾರರು ಪ್ರಾಥಮಿಕವಾಗಿ ಪ್ರಾದೇಶಿಕ ಭಾಷೆಗಳಲ್ಲಿ ಹೊಸ ವಿಷಯವನ್ನು ರಚಿಸುತ್ತಾರೆ. ಕೆಲವೊಮ್ಮೆ ಇಂಗ್ಲಿಷ್‌ನಿಂದ ಸ್ಥಳೀಯ ಭಾಷೆಗಳಿಗೆ ಬ್ಲಾಗ್‌ಗಳು ಮತ್ತು ಲೇಖನಗಳನ್ನು ಅನುವಾದಿಸುತ್ತಾರೆ. ಇಲ್ಲಿ ಅನುವಾದಕ್ಕಿಂತ ಹೆಚ್ಚಾಗಿ ಬೇರೊಂದು ಭಾಷೆಯಲ್ಲಿ ಅದಕ್ಕೆ ಸಮಾನವಾದ ಅಥವಾ ಸ್ವತಂತ್ರ ವಿಷಯ ರಚಿಸುವುದು ಹೆಚ್ಚು ಮುಖ್ಯವಾಗಿದೆ.


    2. ಭಾಷಾಂತರಕಾರ: ಟ್ರಾನ್ಸ್‌ಲೇಟರ್ಸ್‌ ಅಥವಾ ಭಾಷಾಂತರಕಾರರಿಗೆ ಇಂದಿನ ದಿನಗಳಲ್ಲಿ ಹೆಚ್ಚು ಬೇಡಿಕೆಯಿದೆ. ಕಾನೂನು, ಔಷಧ, ಮಾರ್ಕೆಟಿಂಗ್, ವೆಬ್‌ಸೈಟ್‌ಗಳು, ಅಪ್ಲಿಕೇಶನ್‌ಗಳು, ಪುಸ್ತಕಗಳು, ಉಪಶೀರ್ಷಿಕೆ ಮತ್ತು ವೀಡಿಯೊ ರಚನೆ ಸೇರಿದಂತೆ ಹಲವು ಉದ್ಯಮಗಳಲ್ಲಿ ಅನುವಾದಕರರಿಗೆ ಹೆಚ್ಚಿನ ಉದ್ಯೋಗಾವಕಾಶಗಳಿವೆ. ನೀವು ಅನುವಾದಕರಾಗಿ ಪೂರ್ಣ ಪ್ರಮಾಣದ ಅಥವಾ ಫ್ರೀಲಾನ್ಸರ್‌ ಆಗಿ ಕೆಲಸ ಮಾಡಬಹುದು.


    benefits of learning many languages
    ಪ್ರಾತಿನಿಧಿಕ ಚಿತ್ರ


    3. ಪ್ರೂಫ್ ರೀಡರ್ : ಇನ್ನೊಬ್ಬರು ಬರೆದಿರುವ ಕಂಟೆಂಟ್‌ಅನ್ನು ಅಂತಿಮವಾಗಿ ವಿಶ್ಲೇಷಿಸುವುದು ಪ್ರೂಫ್‌ ರೀಡರ್‌ ಕೆಲಸವಾಗಿವೆ. ವಿಷಯವನ್ನು ಅಥವಾ ಲೇಖನವನ್ನು ಪ್ರಕಟಿಸುವ ಮೊದಲು, ಪ್ರೂಫ್ ರೀಡರ್‌ಗಳು ಅಂತಿಮವಾಗಿ ವ್ಯಾಕರಣ ಪರಿಶೀಲನೆ ನಡೆಸುತ್ತಾರೆ.


    4. ವ್ಯಾಖ್ಯಾನಕಾರ: ಇಂಟೆರ್‌ಪ್ರಿಟರ್ಸ್‌ ಅಥವಾ ವ್ಯಾಖ್ಯಾನಕಾರರು ತತ್‌ಕ್ಷಣದಲ್ಲಿ ಅನುವಾದಗಳನ್ನು ಮಾಡುವಂಥ ಕೆಲಸ ಮಾಡುತ್ತಾರೆ. ವಿಶ್ವಸಂಸ್ಥೆ, ವಿಶ್ವ ಬ್ಯಾಂಕ್, MNC ಗಳು ಮತ್ತು ಇತರ ಪ್ರಮುಖ ಸಂಸ್ಥೆಗಳಿಂದ ಆಯೋಜಿಸಲಾದ ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಬೇರೆ ಭಾಷೆಗಳಿಂದ ನೇರ ಅನುವಾದ ಮಾಡುವುದನ್ನು ಒಳಗೊಂಡಿರುತ್ತದೆ.


    ಇದನ್ನೂ ಓದಿ: UPSC Success Story: 4 ಸಲ ವಿಫಲವಾದರೂ ಛಲ ಬಿಡದೆ IAS ಅಧಿಕಾರಿಯಾದ ವಿನಾಯಕ ಮಹಾಮುನಿ


    5. ಡೇಟಾ ತರಬೇತಿ ಇಂಜಿನಿಯರ್‌‌ : ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (AI), ನ್ಯಾಚುರಲ್‌ ಲ್ಯಾಂಗ್ವೇಜ್‌ ಪ್ರೊಸೆಸಿಂಗ್‌ (NLP) ಪ್ರಸ್ತುತ ಇಂಗ್ಲಿಷ್ ಮತ್ತು ಇತರ ಭಾಷೆಗಳೆರಡರಲ್ಲೂ ಲೇಖನಗಳನ್ನು ಬರೆಯುವುದನ್ನು ಉತ್ತೇಜಿಸುತ್ತದೆ.


    ಈ ತಂತ್ರಜ್ಞಾನಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸರಿಯಾಗಿ, ನಿಖರವಾಗಿ ಹಾಗೂ ಉತ್ತಮವಾಗಿ ಟಿಪ್ಪಣಿ ಮಾಡಲಾದ ಡೇಟಾದ ಅಗತ್ಯವಿದೆ. ಡೇಟಾ ತರಬೇತಿಯಲ್ಲಿ ಕೆಲಸ ಮಾಡುವ ಭಾಷಾಶಾಸ್ತ್ರಜ್ಞರು ಮತ್ತು ಇಂಜಿನಿಯರ್‌ಗಳು ಇದಕ್ಕೆ ಸೂಕ್ತವಾಗಿದ್ದಾರೆ. ಇದಕ್ಕಾಗಿ ವಿಶೇಷ ಕೋರ್ಸ್‌ಗಳೂ ಸಹ ಲಭ್ಯವಿದೆ.


    language importance in sslc exam
    ಸಾಂಕೇತಿಕ ಚಿತ್ರ


    6. ಡೆಸ್ಕ್‌ಟಾಪ್ ಪಬ್ಲಿಷಿಂಗ್: ಭಾರತೀಯ ಭಾಷಾ ಕಂಪ್ಯೂಟಿಂಗ್‌ನಲ್ಲಿ ಸಾಕಷ್ಟು ತಂತ್ರಜ್ಞಾನ ಮುಂದುವರಿದಿದ್ದರೂ ಭಾರತೀಯ ಭಾಷೆಗಳಲ್ಲಿ ವಿಶುವಲ್‌ ಕಂಟೆಂಟ್‌ ರಚಿಸುವುದು ಅಷ್ಟು ಸುಲಭವಲ್ಲ.


    ಭಾರತೀಯ ಭಾಷೆಗಳಲ್ಲಿ DTP ನಿರ್ವಹಿಸಲು, ನಿಮಗೆ ವಿಶೇಷ ತರಬೇತಿಯ ಅಗತ್ಯವಿರುತ್ತದೆ. ಏಕೆಂದರೆ ಅನೇಕ ಸಾಫ್ಟ್‌ವೇರ್ ಪ್ರೋಗ್ರಾಂಗಳು ಇನ್ನೂ ಎಲ್ಲಾ ಭಾಷೆಗಳನ್ನು ಸಂಪೂರ್ಣವಾಗಿ ಬೆಂಬಲಿಸುವುದಿಲ್ಲ. ನೀವು ಅಂಥ ಮಾದರಿಗಳನ್ನು ಗುರುತಿಸುವಲ್ಲಿ ಉತ್ತಮವಾಗಿದ್ದರೆ ಮತ್ತು ವಿವಿಧ ಭಾಷೆಗಳಲ್ಲಿ ಟೈಪ್ ಮಾಡಲು ಕಲಿತಿದ್ದರೆ ನುರಿತ DTP ಆಪರೇಟರ್ ಆಗಬಹುದು.


    7. ಡೆವಲಪರ್‌/ಎಂಜಿನಿಯರ್‌: ಭಾರತೀಯ ಭಾಷೆಗಳಿಗೆ ಅನೇಕ ಹೊಸ ಹೊಸ ತಂತ್ರಜ್ಞಾನಗಳನ್ನು ರಚಿಸಲಾಗುತ್ತಿದೆ. ನೀವು ನಿಮ್ಮ ಮಾತೃಭಾಷೆಯನ್ನು ಪ್ರೀತಿಸುವ ಮತ್ತು ಅರ್ಥಪೂರ್ಣವಾದದ್ದನ್ನು ಮಾಡಲು ಬಯಸುವ ಡೆವಲಪರ್ ಆಗಿದ್ದರೆ ಭಾಷಾ ಕಂಪ್ಯೂಟಿಂಗ್ ಕ್ಷೇತ್ರವನ್ನು ಪ್ರವೇಶಿಸಬಹುದು.


    ವೆಬ್‌ಸೈಟ್, ಮಶಿನ್‌ ಟ್ರಾನ್ಸ್‌ಲೇಶನ್‌ ಎಂಜಿನ್, ತೆಲುಗಿಗೆ ಜಿಪಿಟಿ ಮಾದರಿ, ಒರಿಯಾಕ್ಕೆ ವ್ಯಾಕರಣ ಮಾದರಿ ಮುಂತಾದವುಗಳನ್ನು ರಚಿಸಬಹುದಾಗಿದೆ.




    8. ಪ್ರಾಡಕ್ಟ್‌ ಮ್ಯಾನೇಜರ್: ಅನೇಕ ಕಂಪನಿಗಳು ವಿಶೇಷವಾಗಿ ಸ್ಥಳೀಯ ಮಾರುಕಟ್ಟೆಗಾಗಿ ಅತ್ಯಾಧುನಿಕ ತಂತ್ರಜ್ಞಾನ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುತ್ತಿವೆ. ಅಂಥ ಕಂಪನಿಗಳಿಗೆ ಎರಡೂ ಭಾಷೆಗಳಲ್ಲಿ ಚೆನ್ನಾಗಿ ಪರಿಣಿತಿ ಹೊಂದಿರುವ ಹಾಗೂ ತಮ್ಮ ಅಂತಿಮ ಗ್ರಾಹಕರ ಬಗ್ಗೆ ಸರಿಯಾಗಿ ಗೊತ್ತಿರುವ ಪ್ರಾಡಕ್ಟ್‌ ಮ್ಯಾನೇಜರ್ಸ್‌ ಬೇಕಾಗುತ್ತಾರೆ.


    ಒಟ್ಟಾರೆ ಈ ವಲಯದಲ್ಲಿನ ವೈವಿಧ್ಯಮಯ ಅವಕಾಶಗಳಿವೆ. ಉದ್ಯಮ ಬೆಳವಣಿಗೆಯಾಗುತ್ತಿದ್ದಂತೆ ಬಹಳಷ್ಟು ಅವಕಾಶಗಳಿರುವುದರಿಂದ ಇದಕ್ಕಾಗಿ ಸೂಕ್ತ ತರಬೇತಿ ಪಡೆದು ಉತ್ತಮ ವೃತ್ತಿ ಜೀವನವನ್ನು ರೂಪಿಸಿಕೊಳ್ಳಬಹುದು.

    Published by:Kavya V
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು