ಇಸ್ರೋ ರಿಮೋಟ್ ಸೆನ್ಸಿಂಗ್: ಆನ್ ಓವರ್‌ವ್ಯೂ ಫಾರ್ ಡಿಸಿಷನ್ ಮೇಕರ್ಸ್ ( Remote Sensing: An Overview for Decision Makers) ಎಂಬ ಕೋರ್ಸ್ ಅನ್ನು ಆಯೋಜಿಸಿದ್ದು, ವೃತ್ತಿಪರರಿಗಾಗಿ ರಿಮೋಟ್ ಸೆನ್ಸಿಂಗ್ ಕೋರ್ಸ್‌ಗೆ ಅರ್ಜಿಗಳನ್ನು ಆಹ್ವಾನಿಸಿದೆ. ಇಸ್ರೋ ರಿಮೋಟ್ ಸೆನ್ಸಿಂಗ್ ಕೋರ್ಸ್ ಅನ್ನು ಆಯೋಜಿಸಿದರೆ ಇದನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ರಿಮೋಟ್ ಸೆನ್ಸಿಂಗ್ (IIRS) ಆಫ್‌ಲೈನ್‌ನಲ್ಲಿ ನಡೆಸುತ್ತಿದೆ.
ಇಸ್ರೋ ಪ್ರಸ್ತುತ ಪಡಿಸುತ್ತಿರುವ ರಿಮೋಟ್ ಸೆನ್ಸಿಂಗ್ ಕೋರ್ಸ್ ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ಮತ್ತು ಪರಿಣಾಮಕಾರಿ ಯೋಜನೆ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ಆಡಳಿತದಲ್ಲಿನ ಸಂಬಂಧಿತ ತಂತ್ರಜ್ಞಾನಗಳ ಕುರಿತು ಯೋಜಕರು ಮತ್ತು ನಿರ್ಧಾರ ತೆಗೆದುಕೊಳ್ಳುವವರ ಜ್ಞಾನವನ್ನು ಹೆಚ್ಚಿಸುವ ಉದ್ದೇಶವನ್ನು ಇಟ್ಟುಕೊಂಡು ಇದನ್ನು ಹಮ್ಮಿಕೊಳ್ಳಲಾಗಿದೆ.
ಕೋರ್ಸ್ ಶುಲ್ಕ ಮತ್ತು ಪಾವತಿ ವಿಧಾನ
ಈ ಕೋರ್ಸ್ ಶುಲ್ಕ 16,000 ರೂ. ಆಗಿದ್ದು, ಆಸಕ್ತ ವೃತ್ತಿಪರರು ಇದಕ್ಕೆ ಅರ್ಜಿ ಹಾಕಬಹುದು. ಈ ಶುಲ್ಕವು ಬೋಧನಾ ಶುಲ್ಕ, ಸಿಂಗಲ್ ಬೋರ್ಡಿಂಗ್, ವಸತಿ, ಸ್ಥಳೀಯ ಸಾರಿಗೆ, ತರಬೇತಿ ಸಾಮಗ್ರಿಗಳು ಮತ್ತು ನೋಂದಣಿಯನ್ನು ಒಳಗೊಂಡಿರುತ್ತದೆ. ಪಾವತಿಯನ್ನು ಆನ್‌ಲೈನ್ ವರ್ಗಾವಣೆ ಅಥವಾ ಯಾವುದೇ ರಾಷ್ಟ್ರೀಕೃತ ಬ್ಯಾಂಕ್‌ನ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಮಾಡಬಹುದು.
ಅನುಭವಿ ವಿಜ್ಞಾನಿಗಳಿಂದ ತರಗತಿ
ಕೋರ್ಸ್‌ಗೆ ಸಂಬಂಧಿಸಿದ ತರಗತಿಗಳನ್ನು ಮತ್ತು ಪ್ರಾತ್ಯಕ್ಷಿಕೆಗಳನ್ನು IIRS ಕ್ಯಾಂಪಸ್‌ನಲ್ಲಿ IIRS, ISRO ಮತ್ತು ಇತರ ಜ್ಞಾನ ಸಂಸ್ಥೆಗಳ ಹಿರಿಯ ಮತ್ತು ಅನುಭವಿ ವಿಜ್ಞಾನಿಗಳು ನಡೆಸಿ ಕೊಡುತ್ತಾರೆ.
ಇಸ್ರೋ ಕೋರ್ಸ್ ಒಳಗೊಂಡಿರುವ ವಿಷಯಗಳ ಪಟ್ಟಿ
ಕೋರ್ಸ್‌ನ ವಿಷಯಗಳು ವಿವಿಧ ವಿಷಯಾಧಾರಿತ ಡೊಮೇನ್‌ಗಳಲ್ಲಿ ಸುಧಾರಿತ ಜಿಯೋಸ್ಪೇಷಿಯಲ್ ತಂತ್ರಜ್ಞಾನಗಳನ್ನು ಬಳಸಿಕೊಂಡು ಕೇಸ್ ಸ್ಟಡೀಸ್ ಮತ್ತು ಸ್ಪೂರ್ತಿದಾಯಕ ಕಥೆಗಳ ಮೇಲೆ ಕೇಂದ್ರೀಕೃತವಾಗಿರುತ್ತವೆ ಎಂದು IIRS ವೆಬ್‌ಸೈಟ್ ಮಾಹಿತಿ ನೀಡಿದೆ. ಕೋರ್ಸ್‌ನ ಭಾಗವಾಗಿ ಒಳಗೊಂಡಿರುವ ಕೆಲವು ವಿಷಯಗಳು ಈ ಕೆಳಗಿನಂತಿವೆ:
ರಿಮೋಟ್ ಸೆನ್ಸಿಂಗ್ ಮತ್ತು ಜಿಯೋಸ್ಪೇಷಿಯಲ್ ತಂತ್ರಜ್ಞಾನದಲ್ಲಿನ ಪ್ರಸ್ತುತ ಪ್ರವೃತ್ತಿಗಳು.
- ರಿಮೋಟ್ ಸೆನ್ಸಿಂಗ್ ಡೇಟಾ, ಸಂಸ್ಥೆಗಳು ಮತ್ತು ನೀತಿಗಳು
- ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಯಲ್ಲಿ ಆಪರೇಷನಲ್ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್‌ಗಳು
- ಕ್ಲೋಸ್ ರೇಂಜ್ ಫೋಟೋಗಾಮೆಟ್ರಿ, ಭುವನ್ ಮತ್ತು ಓಪನ್ ಸೋರ್ಸ್ ಸಾಫ್ಟ್‌ವೇರ್ ಕುರಿತು ಪ್ರಾತ್ಯಕ್ಷಿಕೆ.
- ವಿಪತ್ತು ಮೇಲ್ವಿಚಾರಣೆ ಮತ್ತು ನಿರ್ವಹಣೆ
- ಬಹು-ಶಿಸ್ತಿನ ಅನ್ವಯಗಳು ಜಿಯೋಸ್ಪೇಷಿಯಲ್ ತಂತ್ರಜ್ಞಾನ.
- ಕೇಸ್ ಸ್ಟಡೀಸ್ ಮತ್ತು ಪ್ರಾತ್ಯಕ್ಷಿಕೆಗಳು ಸೇರಿದಂತೆ ಜಿಯೋಸ್ಪೇಷಿಯಲ್ ಅಪ್ಲಿಕೇಶನ್‌ಗಳಲ್ಲಿನ ಇತ್ತೀಚಿನ ಪ್ರವೃತ್ತಿಗಳು
- ಆಡಳಿತದಲ್ಲಿ ಜಿಯೋಸ್ಪೇಷಿಯಲ್ ತಂತ್ರಜ್ಞಾನಗಳು
- ಓಪನ್ ಸೋರ್ಸ್ ಡೇಟಾ ಮತ್ತು ಸಾಫ್ಟ್‌ವೇರ್.
ಇಸ್ರೋ ಕೋರ್ಸ್‌ಗೆ ಯಾರು ಅರ್ಜಿ ಸಲ್ಲಿಸಬಹುದು?
ಕೃಷಿ, ಅರಣ್ಯ, ಜಲಸಂಪನ್ಮೂಲ, ಪರಿಸರ ಮತ್ತು ಪರಿಸರ ವಿಜ್ಞಾನ, ವಿಪತ್ತು ನಿರ್ವಹಣೆ, ಹವಾಮಾನ, ಭೌಗೋಳಿಕ, ಅರ್ಥಶಾಸ್ತ್ರ, ನಗರ, ಸಮುದ್ರಶಾಸ್ತ್ರದಂತಹ ವಿವಿಧ ಕ್ಷೇತ್ರಗಳ ಹಿರಿಯ ವೃತ್ತಿಪರರು, ವ್ಯವಸ್ಥಾಪಕರು, ಯೋಜನಾ ನಾಯಕರು, ಯೋಜಕರು ಅಥವಾ ನೀತಿ ನಿರೂಪಕರಿಗೆ ಕೋರ್ಸ್ ಮುಕ್ತವಾಗಿದ್ದು, ಇವರು ಅರ್ಜಿ ಸಲ್ಲಿಸಬಹುದು.
ಅರ್ಹತಾ ಮಾನದಂಡಗಳು
ಅರ್ಜಿ ಸಲ್ಲಿಸುವ ವೃತ್ತಿಪರರಿಗೆ ಕೆಲವು ಮಾನದಂಡಗಳನ್ನೂ ಸಹ ನೀಡಲಾಗಿದೆ ಅವು,
- ಮೂರು ವರ್ಷಗಳ ಅನುಭವ ಹೊಂದಿರುವ ಅಖಿಲ ಭಾರತ ಸೇವೆಗಳ ಅಧಿಕಾರಿಗಳು ಆಗಿರಬೇಕು
- ಹಿರಿಯ ಅಧಿಕಾರಿಗಳು
- ಸರ್ಕಾರಿ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು, ಜಿಯೋಸ್ಪೇಷಿಯಲ್ ಉದ್ಯಮ ಅಥವಾ ಎನ್‌ಜಿಒಗಳಲ್ಲಿ ಕೆಲಸ ಮಾಡುವ ಕಾರ್ಯಕಾರಿಗಳು ಅರ್ಜಿ ಸಲ್ಲಿಸಬಹುದು
- ಸೇವೆಯಲ್ಲಿ 10 ವರ್ಷಗಳ ಅನುಭವ ಹೊಂದಿರುವ ಉದ್ಯಮಿಗಳು ಸಹ ಅರ್ಜಿ ಸಲ್ಲಿಸಬಹುದು.
ಇಸ್ರೋ ಕೋರ್ಸ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹತೆ ಹೊಂದಿರುವ ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಯ ಸ್ಕ್ಯಾನ್ ಮಾಡಿದ ಪ್ರತಿಯನ್ನು ಕಳುಹಿಸಬೇಕು. ನಿಯಂತ್ರಣ ಪ್ರಾಧಿಕಾರ ಅಥವಾ ಸಂಸ್ಥೆಯು ಕೋರ್ಸ್ ಶುಲ್ಕದೊಂದಿಗೆ ಇ-ಮೇಲ್ ಮೂಲಕ gitdloffice@iirs.gov.in ಗೆ ಕಳುಹಿಸಬೇಕು. ಅರ್ಜಿ ಸಲ್ಲಿಸಲು ಬಯಸುವವರು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ