ತಾಯ್ತನ ಬದುಕಿನ ಒಂದು ಸಹಜ ಹಂತ. ಅದು ಬದುಕಿನ ಆರಂಭವಷ್ಟೇ! ಮುಕ್ತಾಯವಲ್ಲ. ಇದನ್ನು ಅರ್ಥ ಮಾಡಿಕೊಂಡು ವೃತ್ತಿಬದುಕಿನಲ್ಲಿ ಎತ್ತರಕ್ಕೆ ಏರಿರುವ ಹರ್ಮೆಸಾ, ಏಂಜಲ್ ಇನ್ವೆಸ್ಟ್ಮೆಂಟ್ನ ಸಂಸ್ಥಾಪಕಿ ಮಾರ್ಲಾ ಶಪಿರೊ ಅವರ ಜೀವನ ಎಂಥವರಿಗೂ ಸ್ಪೂರ್ತಿ ತುಂಬುತ್ತದೆ. ಸಾಂಪ್ರದಾಯಿಕ ಉದ್ಯೋಗಗಳಿಗೆ ಮಹಿಳೆಯರು ಮೀಸಲು ಎನ್ನುವ ವಾತಾವರಣದ ನಡುವೆ ಹೂಡಿಕೆ ಕ್ಷೇತ್ರದಲ್ಲಿ ಹೊಸ ಮಾದರಿಯನ್ನೇ ಸೃಷ್ಠಿಸಿದ್ದಾರೆ ಈ ಮಹಿಳೆ. ಮಾರ್ಲಾ ಅವರ ಬದುಕಿನ ಪಯಣ ನಿಮ್ಮ ಮುಂದೆ! ಅಮೆರಿಕಾದ ಮಹಿಳೆಯರು ಶೇಕಡಾ 40 ರಷ್ಟು ಕಾರ್ಪೋರೇಟ್ ಮ್ಯಾನೇಜ್ಮೆಂಟ್ ಉದ್ಯೋಗಗಳಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ಆಡಳಿತ ಮಂಡಳಿಗಳ ಪ್ರಾತಿನಿಧಿತ್ವ ಮತ್ತು ಸಿಇಒ ಹುದ್ದೆಯ ಅವಕಾಶಗಳಿಗೆ ಇನ್ನೂ ಹೋರಾಡುತ್ತಲೇ ಇದ್ದಾರೆ.
ಇದರೊಟ್ಟಿಗೆ ದ್ವೇಷ, ಕಿರುಕುಳ, ಲಿಂಗ ತಾರತಮ್ಯದಂತಹ ಅನೇಕ ಸಮಸ್ಯೆಗಳು ಅವರಿಗೆ ಸವಾಲಾಗಿ ಪರಿಣಮಿಸಿವೆ ಎಂದು 2022 ರಲ್ಲಿ ಲೀನಿನ್ ಡಾಟ್ ಆರ್ಗ್ ಮತ್ತು ಮೆಕ್ ಕಿನ್ಸಿ ಅಂಡ್ ಕೋ ನಡೆಸಿದ ಅಧ್ಯಯನದಲ್ಲಿ ತಿಳಿದು ಬಂದಿದೆ. ಆದರೆ ಎಮ್ಐಟಿಯ 97 ನೇ ಇಸವಿಯ ಹಳೆಯ ವಿದ್ಯಾರ್ಥಿನಿಯೊಬ್ಬರು ಇದಕ್ಕೆ ತದ್ವಿರುದ್ಧವಾಗಿ ಯಶಸ್ಸು ಸಾಧಿಸಿದ್ದಾರೆ. ಅವರ ಹೆಜ್ಜೆ ಗುರುತುಗಳು ಇಲ್ಲಿವೆ.
ಕರಿಯರ್ ಗ್ರಾಫ್
ಮಾರ್ಲಾ ಶಾಪಿರೊ, ಮಹಿಳಾ ನವೋದ್ಯಮಗಳಿಗೆ ಹೂಡಿಕೆಯ ಬೆಂಬಲ ನೀಡುವ ಹರ್ಮೆಸಾ ಏಂಜಲ್ ಇನ್ವೆಸ್ಟ್ಮೆಂಟ್ನ ಸಂಸ್ಥಾಪಕರು. ವಾಣಿಜ್ಯೋದ್ಯಮಿ, ಮೆಂಟರ್, ಹೂಡಿಕೆದಾರರು, ಮಹಿಳಾ ಉದ್ಯಮಿಗಳ ಬೆಂಬಲಿಗರಾಗಿ ಗುರುತಿಸಿಕೊಂಡಿರುವ ಮಾರ್ಲಾ ಅವರ ವೃತ್ತಿ ಬದುಕಿನ ಜರ್ನಿ ನಿಜಕ್ಕೂ ಸ್ಫೂರ್ತಿ ತುಂಬುತ್ತದೆ.
ಹೂಡಿಕೆ ಕ್ಷೇತ್ರಕ್ಕೂ ಮುನ್ನ ಶಪಿರೊ 20 ವರ್ಷಗಳ ಕಾಲ ಮಾಧ್ಯಮ, ಬ್ಯುಸಿನೆಸ್ ಸ್ಟ್ರಾಟರ್ಜಿಸ್ಟ್, ಸೇಲ್ಸ್ ಮುಖ್ಯಸ್ಥೆ, ಜೊತೆಗೆ ಮಾಧ್ಯಮ ಮತ್ತು ತಂತ್ರಜ್ಞಾನ ಸಂಸ್ಥೆಯಲ್ಲಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಗುರುತಿಸಿಕೊಂಡವರು. ತಮ್ಮ ಆರಂಭಿಕ ದಿನಗಳಲ್ಲಿ ವಾಲ್ ಸ್ಟ್ರೀಟ್ ನಲ್ಲಿ ಹಣಕಾಸು ನಿರ್ವಹಣೆಯಲ್ಲೂ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: ಕಾರ್ಪೋರೇಟ್ ಟೆಕ್ಕಿ To ಕೃಷಿಕ! 15 ಲಕ್ಷ ಲಾಭ ಗಳಿಸಿದ ಮಂಗಳೂರಿನ ಚೇತನ್ ಶೆಟ್ಟಿ
ಮಾರ್ಲಾ ಶಪಿರೊ ಅವರು ಚಿಕ್ಕ ವಯಸ್ಸಿನಲ್ಲೇ ವೃತ್ತಿ ಬದುಕನ್ನು ಆರಂಭಿಸಿದರು. ಆದರೆ ತಮ್ಮನ್ನು ಎಂದಿಗೂ ಚಿಕ್ಕವರು ಎಂದುಕೊಳ್ಳಲಿಲ್ಲ. ಆತ್ಮವಿಶ್ವಾಸ, ಕುತೂಹಲದಿಂದ ಕೆಲಸ ಕಲಿತರು. ‘ಒಮ್ಮೆ ಸೋತರು ಹಲವಾರು ಅವಕಾಶಗಳಿವೆ. ನಿಮ್ಮ ಮಾತಿನ ಅಗತ್ಯವಿದ್ದಾಗ ಖಂಡಿತಾ ಮುಂದೆ ಬನ್ನಿ ಅದಕ್ಕೆ ವಯಸ್ಸಿನ ಮಿತಿಯಿಲ್ಲ’ ಎನ್ನುತ್ತಾರೆ.
ಲಿಂಗ ತಾರತಮ್ಯದಿಂದ ಕಲಿತ ಪಾಠ
ಮಾರ್ಲಾ ಅವರು ಪುರುಷರೊಟ್ಟಿಗೆ ಕೆಲಸ ಮಾಡುವಾಗ ಲಿಂಗ ತಾರತಮ್ಯಕ್ಕೆ ಒಳಗಾದ ಬಗ್ಗೆ ಮಾತನಾಡುತ್ತಾರೆ. ಶಪಿರೋ ಮೊದಲ ಬಾರಿಗೆ ಯುಕೆಗೆ ಹೋಗಿದ್ದಾಗ ಜರ್ಮನಿಯ ಒಂದು ಸಭೆಯಲ್ಲಿ ತಮ್ಮ ತಂಡದ ಮುಂದಾಳತ್ವ ವಹಿಸಿಕೊಂಡಿದ್ದರು.
ಆದರೆ ಜರ್ಮನ್ ನ ವ್ಯಕ್ತಿ ಮಾರ್ಲಾ ಅವರೊಟ್ಟಿಗೆ ಮುಖಾ-ಮುಖಿ ಮಾತನಾಡಲಿಲ್ಲ. ಬದಲಿಗೆ ಅವರ ಪಕ್ಕದಲ್ಲಿದ್ದ ಪುರುಷ ಸಹೋದ್ಯೋಗಿಗೆ ಪ್ರತಿಕ್ರಿಯೆ ನೀಡುತ್ತಿದ್ದರು.
ಇದನ್ನೇ ವೃತ್ತಿಯ ಕಲಿಕೆ ಎಂದು ಕೊಂಡರು ಮಾರ್ಲಾ. ಅಮೇರಿಕಾದವರಂತೆ ಆಟಿಟ್ಯೂಡ್ ಇರಬೇಕು ಅಥವಾ ನೇರ ನಡೆ ನುಡಿ ಇರಬೇಕೆಂದು ಅರ್ಥ ಮಾಡಿಕೊಂಡರು. ಇದು ಅವರನ್ನು ಮುಂದೆ ವಿಭಿನ್ನವಾಗಿ ನಿಲ್ಲಿಸಿತು.
ತಾಯ್ತನದ ಪ್ರೇರಣೆ ಏಂಜಲ್ ಇನ್ವೆಸ್ಟ್ಮೆಂಟ್ !
ಬಹುತೇಕ ಮಹಿಳೆಯರ ವೃತ್ತಿ ಬದುಕು ತಾಯ್ತನದ ಹಂತದಲ್ಲಿ ಗೊಂದಲಕ್ಕೆ ಸಿಲುಕಿಕೊಳ್ಳುತ್ತದೆ. ಇದೇ ಪರಿಸ್ಥಿತಿಯನ್ನು ಮಾರ್ಲಾ ಕೂಡ ಎದುರಿಸಿದರು. ‘ತಾಯ್ತನ ದಂಡ ಕಟ್ಟಿಸಿಕೊಳ್ಳುತ್ತದೆ. ಆದರೆ ಎಲ್ಲಾ ಹೊರೆಯನ್ನು ತಾಯಿಯೇ ನೋಡಿಕೊಳ್ಳಬೇಕೆಂಬ ವ್ಯವಸ್ಥೆ ಕೆಲವು ಮಹಾತ್ವಾಕಾಂಕ್ಷೆಯ ಮಹಿಳೆಯರಿಗೆ ಕ್ರೂರ ಎನಿಸುತ್ತದೆ.
ನಾನು ಕೂಡ ಈ ಹಂತದಲ್ಲಿ ಮಾನಸಿಕವಾಗಿ ತೊಳಲಾಟಕ್ಕೆ ಸಿಲುಕಿದ್ದೆ. ಆದರೆ ಅದನ್ನೇ ನನ್ನ ಗೆಲುವಿನ ಮೆಟ್ಟಿಲುಗಳನ್ನಾಗಿ ಮಾಡಿಕೊಂಡೆ. ಹೂಡಿಕೆದಾರಳು ಮತ್ತು ಉದ್ಯಮಿಯಾಗಿ ನನ್ನ ವೃತ್ತಿಕ್ಷೇತ್ರವನ್ನು ವಿಸ್ತರಿಸಿದೆ.
ಇದನ್ನೂ ಓದಿ: ಗುಲಾಬಿ ಬೆಳೆದು ಸಕ್ಸಸ್ ಕಂಡ ಕಲಬುರಗಿ ಕೃಷಿಕ!
ಮಗುವಿನ ಲಾಲನೆ -ಪಾಲನೆಯೊಟ್ಟಿಗೆ ವೃತ್ತಿಯ ಗ್ರಾಫ್ ಏರಿಕೆಯಾಗಿರುವುದು ಸಂತಸವಿದೆ. ಇದೇ ರೀತಿ ಮರಳಿ ಉದ್ಯೋಗಕ್ಕೆ ಬಂದ ಸ್ನೇಹಿತರ ಬಗ್ಗೆ ಹೆಮ್ಮೆಯೂ ಇದೆ. ನಾವು ಮಕ್ಕಳನ್ನು ಪಡೆಯುವ ಮುನ್ನ ಇದ್ದಷ್ಟೇ ಎನರ್ಜಿ ಈಗಲೂ ಇದೆ’ ಎನ್ನುತ್ತಾರೆ. ಆ ಮೂಲಕ ತಾಯ್ತನ ಶಾಪವಲ್ಲ ವರ ಎಂದು ಸಾಧಿಸಿ ತೋರಿಸಿದ್ದಾರೆ.
ಪರಿಪೂರ್ಣತೆಯ ನಿರೀಕ್ಷೆ ಬೇಡ
ಹೂಡಿಕೆಯಷ್ಟೇ ಅಲ್ಲ, ಸಕಾಲದಲ್ಲಿ ಮಹಿಳೆಯರಿಗೆ ಮಾರ್ಗದರ್ಶನ ನೀಡುವುದು ಮುಖ್ಯ. ಸಿಇಒಗಳನ್ನು ಪ್ರೋತ್ರಾಹಿಸುವುದು. ಅವರು ಶಕ್ತಿ ಮತ್ತು ದೌರ್ಬಲ್ಯಗಳನ್ನು ಕಂಡುಕೊಳ್ಳುವ ಹೆಜ್ಜೆಗಳನ್ನು ನೋಡುವುದೇ ಖುಷಿ ಎನ್ನುತ್ತಾರೆ.
ಇನ್ನೂ ಮಾರ್ಲಾ ಅವರು ತಮ್ಮ ಮೆಂಟರ್ ಹೇಳಿಕೊಟ್ಟ ಟಿಪ್ ಅನ್ನು ತಪ್ಪದೇ ಫಾಲೋ ಮಾಡ್ತಾರೆ. ಟಿಫಾನಿ ಡುಫು ಅವರ ಪುಸ್ತಕ ‘ಡ್ರಾಪ್ ದಿ ಬಾಲ್: ಅಚೀವಿಂಗ್ ಮೋರ್ ಬೈ ಡೂಯಿಂಗ್ ಲೆಸ್’ ಪುಸ್ತಕವನ್ನು ಉಲ್ಲೇಖಿಸುತ್ತಾರೆ.
ಪರಿಪೂರ್ಣತೆಯ ನಿರೀಕ್ಷೆ ಬೇಡ ಎನ್ನುತ್ತಾರೆ. ಉದಾ: ಪರಿಪೂರ್ಣ ದೇಹ, ಪರಿಪೂರ್ಣ ತಾಯಿ , ಪರಿಪೂರ್ಣ ವೃತ್ತಿ. ನಿಮಗೆ ಅಗತ್ಯವಿದ್ದಾಗ ಇನ್ನೊಬ್ಬರ ನೆರವು ಕೇಳಿ ಎನ್ನುತ್ತಾರೆ. ಮಾರ್ಲಾ ಶಾಪಿರೊ ಅವರು ಸಮಾಜದಲ್ಲಿ ಒಂದು ಬದಲಾವಣೆ ಬಯಸುತ್ತಾರೆ. ‘ಸ್ವೀಡನ್ನಂತೆ ಎಲ್ಲಾ ಕಡೆಯೂ ನೂತನ ಪೋಷಕರಿಗೆ 480 ದಿನಗಳ ರಜೆ ನೀಡಬೇಕು.
ಮಗುವಿನ ಲಾಲನೆ -ಪಾಲನೆ ಇಬ್ಬರ ಕೆಲಸ. ಸ್ಟಾಕ್ ಹೋಂನಲ್ಲಿ ಕೆಲಸ ಮಾಡುವಾಗ ಪೋಷಕರು ಮಕ್ಕಳನ್ನು ಬೆಳೆಸುವುದು ಸಮಾನವಾದ ಕೆಲಸ ಎಂದು ನಂಬುತ್ತಾರೆ ಈ ಬದಲಾವಣೆ ಎಲ್ಲೆಡೆ ಬರಲಿ’ ಎಂದು ಆಶಿಸುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ