ಇದು ತಂತ್ರಜ್ಞಾನ (Technology) ಯುಗ. ಹೊಸ ಹೊಸ ತಂತ್ರಜ್ಞಾನದಿಂದ ಜಗತ್ತು ಇನ್ನಷ್ಟು ಕಿರಿದಾಗುತ್ತಿದೆ. ಅದರಲ್ಲೂ ಜಾಗತಿಕವಾಗಿ "ಇಂಡಸ್ಟ್ರಿ 4.0" ಅಥವಾ ನಾಲ್ಕನೇ ಕೈಗಾರಿಕಾ (Industry 4.0) ಕ್ರಾಂತಿಯಾಗುತ್ತಿದೆ. ಇದು ವ್ಯಾಪಕವಾದ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ. ಇದಕ್ಕಾಗಿ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಭಾರತದ ಯುವಕರು ಸಿದ್ಧರಾಗಬೇಕಿದೆ.
ಈ ಕೈಗಾರಿಕಾ ಕ್ರಾಂತಿಯಿಂದ ಜಾಗತಿಕವಾಗಿ ಉದ್ಯೋಗಗಳು ಸೃಷ್ಟಿಯಾಗುತ್ತಿವೆ. ಅದಕ್ಕೆ ತಕ್ಕಂತೆ ಇಲ್ಲಿನ ಜನರನ್ನು ತಯಾರು ಮಾಡುವುದು ಕೂಡ ಅಷ್ಟೇ ಮುಖ್ಯ. ಹಾಗಿದ್ದರೆ ಅಂತರರಾಷ್ಟ್ರೀಯ ಸ್ಪರ್ಧೆಗೆ ಭಾರತದ ಯುವಕರನ್ನು ತಯಾರು ಮಾಡುವುದ ಹೇಗೆ ? ಇದಕ್ಕಾಗಿ ಟೆಕ್ ಉದ್ಯಮವು ತೆಗೆದುಕೊಳ್ಳಬೇಕಾದ ಕ್ರಮಗಳು ಯಾವವು ಅನ್ನೋದನ್ನು ನೋಡೋಣ.
ಸುಧಾರಿತ ತಾಂತ್ರಿಕ ಉಪಕರಣಗಳು
ಸುಧಾರಿತ ತಂತ್ರಜ್ಞಾನಗಳಾದ ಇಂಟರ್ನೆಟ್ ಆಫ್ ಥಿಂಗ್ಸ್ (IoT), ಕೃತಕ ಬುದ್ಧಿಮತ್ತೆ (AI) ಮತ್ತು ಮೆಷಿನ್ ಲರ್ನಿಂಗ್ (ML), ಬಿಗ್ ಡೇಟಾ ಅನಾಲಿಟಿಕ್ಸ್, ಸೈಬರ್-ಫಿಸಿಕಲ್ ಸಿಸ್ಟಮ್ಸ್ (CPS), ಕ್ಲೌಡ್ ಕಂಪ್ಯೂಟಿಂಗ್, ವರ್ಧಿತ ರಿಯಾಲಿಟಿ (AR) ಮತ್ತು ವರ್ಚುವಲ್ ರಿಯಾಲಿಟಿ (VR), ಮತ್ತು ರೊಬೊಟಿಕ್ಸ್ ಮತ್ತು ಆಟೊಮೇಷನ್ ಮುಂತಾದ ತಂತ್ರಜ್ಞಾನಗಳು ಕೈಗಾರಿಕೆಗಳಿಗೆ ಸಹಾಯ ಮಾಡುತ್ತವೆ. ಕೈಗಾರಿಕೆಗಳು ಹೆಚ್ಚು ಪರಿಣಾಮಕಾರಿಯಾಗಲು, ಡೇಟಾ-ಚಾಲಿತ ಮತ್ತು ಸ್ವಾಯತ್ತವಾಗಲು ಈ ತಂತ್ರಜ್ಞಾನ ಅನುವು ಮಾಡಿಕೊಡುತ್ತದೆ.
ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದು ಹೇಗೆ ?
ಹಲವಾರು ತರಬೇತಿ ಕಾರ್ಯಕ್ರಮಗಳು ಮತ್ತು ಇಂಟರ್ನ್‌ಶಿಪ್‌ಗಳ ಮೂಲಕ ಕೈಗಾರಿಕಾ ಅಪ್ಲಿಕೇಶನ್‌ಗಳಲ್ಲಿ ಈ ತಂತ್ರಜ್ಞಾನಗಳನ್ನು ಹೇಗೆ ಬಳಸಲಾಗುತ್ತದೆ ಎಂಬುದನ್ನು ವಿದ್ಯಾರ್ಥಿಗಳು ಕಲಿತುಕೊಳ್ಳಬಹುದು.
ಶಿಕ್ಷಣ ವ್ಯವಸ್ಥೆಯಲ್ಲಿ ಕೈಗಾರಿಕೆಗಳು ಹೊಂದಿರುವ ತಂತ್ರಜ್ಞಾನಗಳ ಬಗ್ಗೆ ಕಲಿಯುವುದು ವಿದ್ಯಾರ್ಥಿಗಳಿಗೆ ಒಳ್ಳೆಯದು. ಇದರಿಂದ ಅವರು ಹೆಚ್ಚು ತಿಳಿದುಕೊಳ್ಳುತ್ತಾರೆ. ಇಂಡಸ್ಟ್ರಿ 4.0 ತಂತ್ರಜ್ಞಾನಗಳಿಗೆ ಅಗತ್ಯವಿರುವ ಡೇಟಾ ಎನಾಲಿಸೀಸ್ ಮತ್ತು ಮಶಿನ್ ಲರ್ನಿಂಗ್‌ನಂತಹ ಕೌಶಲ್ಯಗಳನ್ನು ತಮ್ಮ ಶಿಕ್ಷಣದಲ್ಲಿ ಅಳವಡಿಸಿಕೊಳ್ಳುವ ಮುಖ್ಯವಾಗಿದೆ. ಇದರಿಂದ ವಿದ್ಯಾರ್ಥಿಗಳು ಉದ್ಯೋಗ ಮಾರುಕಟ್ಟೆಯಲ್ಲಿ ಪ್ರಬಲ ಸ್ಪರ್ಧೆ ನೀಡಬಹುದು.
ಸುಧಾರಿತ ತಂತ್ರಜ್ಞಾನಗಳಿಗೆ ಹೆಚ್ಚುತ್ತಿರುವ ಬೇಡಿಕೆಯು ಆಟೊಮೇಷನ್, ರೊಬೊಟಿಕ್ಸ್, ಡೇಟಾ ವಿಶ್ಲೇಷಣೆ ಮತ್ತು AI ನಂತಹ ಕ್ಷೇತ್ರಗಳಲ್ಲಿ ಹೊಸ ವೃತ್ತಿ ಆಯ್ಕೆಗಳನ್ನು ಸೃಷ್ಟಿಸುತ್ತಿದೆ. ಇಂಡಸ್ಟ್ರಿ 4.0 ಉದ್ಯಮ ಮತ್ತು ಅಕಾಡೆಮಿಯ ನಡುವಿನ ಸಹಯೋಗವನ್ನು ಸಹ ಸುಗಮಗೊಳಿಸುತ್ತದೆ. ವಿದ್ಯಾರ್ಥಿಗಳು ಇದರ ಪ್ರಾಯೋಗಿಕ ಅನುಭವವನ್ನು ಪಡೆಯಲು ಅನುವು ಮಾಡಿಕೊಡುತ್ತದೆ.
ಟೆಕ್ ಇಂಡಸ್ಟ್ರಿ ತೆಗೆದುಕೊಳ್ಳಬಹುದಾದ ಕ್ರಮಗಳು
ಭಾರತದ ಯುವಜನತೆಯನ್ನು ಅಂತಾರಾಷ್ಟ್ರೀಯ ಸ್ಪರ್ಧೆಗೆ ಸಿದ್ಧಪಡಿಸುವಲ್ಲಿ ಟೆಕ್ ಉದ್ಯಮವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಹಾಗಿದ್ರೆ ಅದು ಯಾವೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬಹುದು ಅನ್ನೋದನ್ನು ಇಲ್ಲಿ ತಿಳಿಯೋಣ.
*ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಒದಗಿಸಲು ಕಂಪನಿಗಳು ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳೊಂದಿಗೆ ಪಾಲುದಾರರಾಗಬಹುದು.
*ವಿದ್ಯಾರ್ಥಿಗಳು ಮತ್ತು ಯುವ ವೃತ್ತಿಪರರಿಗೆ ನೈಜ ಪ್ರಪಂಚದ ಕೈಗಾರಿಕಾ ಅನುಭವಕ್ಕಾಗಿ ಇಂಟರ್ನ್‌ಶಿಪ್ ಮತ್ತು ಅಪ್ರೆಂಟಿಸ್‌ಶಿಪ್ ಅವಕಾಶಗಳನ್ನು ನೀಡಬಹುದು.
*ಉದ್ಯಮ-ಅಕಾಡೆಮಿಯ ಸಹಯೋಗದಿಂದಾಗಿ ವಿದ್ಯಾರ್ಥಿಗಳು ಹೆಚ್ಚು ಅಪ್‌ಡೇಟ್ ಆಗಲು ಸಾಧ್ಯವಾಗುತ್ತದೆ.
*ಕಂಪನಿಗಳು ತಮ್ಮ ಕಾರ್ಯಚಟುವಟಿಕೆಗಳಲ್ಲಿ ಇತ್ತೀಚಿನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬಹುದು. ಉದ್ಯೋಗಿಗಳಿಗೆ ಅಗತ್ಯ ಕೌಶಲ್ಯಗಳನ್ನು ಹೊಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ತರಬೇತಿಯನ್ನು ನೀಡಬಹುದು.
*ಟೆಕ್ ಉದ್ಯಮವು ಯುವ ಉದ್ಯಮಿಗಳಿಗೆ ತಮ್ಮ ಸ್ಟಾರ್ಟ್‌ಅಪ್‌ಗಳನ್ನು ಅಭಿವೃದ್ಧಿಪಡಿಸಲು ಬೆಂಬಲ ನೀಡಬಹುದು. ಅಲ್ಲದೇ ಸಂಪನ್ಮೂಲಗಳನ್ನು ಒದಗಿಸಬಹುದು.
ಇದನ್ನೂ ಓದಿ:Career Options: ಗೇಮಿಂಗ್ ಫೀಲ್ಡ್ನಲ್ಲಿ ಆಸಕ್ತಿ ಇದ್ದರೆ, ನಿಮಗಾಗಿ ಟಾಪ್ 5 ಉದ್ಯೋಗಗಳು ಇಲ್ಲಿವೆ
ವೃತ್ತಿ ಅವಕಾಶಗಳು
ಇಂಡಸ್ಟ್ರಿ 4.0 ವ್ಯಾಪಕ ವೃತ್ತಿ ಅವಕಾಶಗಳನ್ನು ಸೃಷ್ಟಿಸಿದೆ. ಉದಾಹರಣೆಗೆ ಡೇಟಾ ವಿಜ್ಞಾನಿ, ಕೃತಕ ಬುದ್ಧಿಮತ್ತೆ ಇಂಜಿನಿಯರ್, ರೊಬೊಟಿಕ್ ಪ್ರಕ್ರಿಯೆ ಆಟೊಮೇಷನ್ (RPA) ಡೆವಲಪರ್, ಇಂಟರ್ನೆಟ್ ಆಫ್ ಥಿಂಗ್ಸ್ (IoT) ಸ್ಪೆಷಲಿಸ್ಟ್, ಕ್ಲೌಡ್ ಕಂಪ್ಯೂಟಿಂಗ್ ಇಂಜಿನಿಯರ್, ಸೈಬರ್ ಸೆಕ್ಯುರಿಟಿ ಸ್ಪೆಷಲಿಸ್ಟ್, ವರ್ಚುವಲ್ ಮತ್ತು ಆಗ್ಮೆಂಟೆಡ್ ರಿಯಾಲಿಟಿ ಡೆವಲಪರ್ ಮತ್ತು ಬಿಗ್ ಡೇಟಾ ಇಂಜಿನಿಯರ್ ಮುಂತಾದ ವೃತ್ತಿಗಳನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು.
ಒಟ್ಟಾರೆ, ಈ ವೃತ್ತಿಗಳಿಗೆ ತಂತ್ರಜ್ಞಾನದ ಬಗ್ಗೆ ಉತ್ಸಾಹ ಇರುವಂಥವರು ಮುಖ್ಯ. ಇಂಡಸ್ಟ್ರಿ 4.0 ಕೆಲಸದ ಭವಿಷ್ಯವನ್ನು ರೂಪಿಸುತ್ತದೆ. ಹಾಗೆಯೇ ಹೊಸ ಹೊಸ ವೃತ್ತಿ ಅವಕಾಶಗಳನ್ನು ಸೃಷ್ಟಿಸುತ್ತದೆ. ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು, ಇಂಟರ್ನ್‌ಶಿಪ್ ಮತ್ತು ಅಪ್ರೆಂಟಿಸ್‌ಶಿಪ್ ಅವಕಾಶಗಳು, ಉದ್ಯಮ-ಅಕಾಡೆಮಿಯಾ ಸಹಯೋಗ, ತಂತ್ರಜ್ಞಾನ ಅಳವಡಿಕೆ ಮತ್ತು ಉದ್ಯಮಶೀಲತೆಯ ಬೆಂಬಲ ನೀಡುವ ಮೂಲಕ ಯುವಜನತೆಯನ್ನು ಜಾಗತಿಕವಾಗಿ ಸ್ಪರ್ಧೆಗೆ ಸಿದ್ಧಪಡಿಸಬಹುದು. ಈ ನಿಟ್ಟಿನಲ್ಲಿ ಟೆಕ್ ಉದ್ಯಮ ನಿರ್ಣಾಯಕ ಪಾತ್ರ ವಹಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್‌ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ