ಸ್ಪರ್ಧಾತ್ಮಕ ಜಗತ್ತಿನ ವೃತ್ತಿ ಕ್ಷೇತ್ರದಲ್ಲಿ ಪ್ರಗತಿ ಕಾಣಲು ವೈಯಕ್ತಿಕ ಬ್ರ್ಯಾಂಡಿಂಗ್ (Personal Branding) ಒಂದು ಶಕ್ತಿಯುತ ಸಾಧನವಾಗಿದ್ದು, ನಿಮ್ಮ ವೃತ್ತಿಜೀವನವನ್ನು ಮುನ್ನಡೆಸಲು ಅನುವು ಮಾಡಿಕೊಡುತ್ತದೆ. ಕೆಲವು ವರ್ಷಗಳಿಂದ, ವೈಯಕ್ತಿಕ ಬ್ರ್ಯಾಂಡಿಂಗ್ ಹೆಚ್ಚು ಹೆಚ್ಚು ಕೇಳಿ ಬರುತ್ತಿರುವ ಕಲ್ಪನೆಯಾಗಿದ್ದು ವ್ಯಾಪಾರವನ್ನು ಹೆಚ್ಚಿಸಲು ಮತ್ತು ಒಬ್ಬರನ್ನು ಸ್ವತಂತ್ರೋದ್ಯೋಗಿಗಳನ್ನಾಗಿ ಮಾಡಲು ಪರ್ಸನಲ್ ಬ್ರ್ಯಾಂಡ್ ಮುಖ್ಯವಾಗಿದೆ. ಒಂದು ಬಲಿಷ್ಠವಾದ ವೈಯಕ್ತಿಕ ಬ್ರಾಂಡ್ ಅನ್ನು ನಿರ್ಮಿಸುವುದು ಯಾವುದೇ ವೃತ್ತಿಪರ ಕ್ಷೇತ್ರದಲ್ಲಿ (Proffessional Field) ಧನಾತ್ಮಕ ಗುರಿಯಾಗಿದೆ. ಏಕೆಂದರೆ ಇದು ನಿಮ್ಮ ವೃತ್ತಿ ಚಟುವಟಿಕೆಗಳು ಮತ್ತು ಆಕಾಂಕ್ಷೆಗಳೊಂದಿಗೆ ನಿಮ್ಮ ಅಧಿಕೃತ ಬ್ರ್ಯಾಂಡ್ ಅನ್ನು ಒಟ್ಟುಗೂಡಿಸುತ್ತದೆ.
ಏನಿದು ಪರ್ಸನಲ್ ಬ್ರ್ಯಾಂಡಿಂಗ್?
ವೈಯಕ್ತಿಕ ಬ್ರ್ಯಾಂಡಿಂಗ್ ಎನ್ನುವುದು ವ್ಯಕ್ತಿ ಅಥವಾ ಕಂಪೆನಿಗೆ ಬ್ರಾಂಡ್ ಗುರುತನ್ನು ರಚಿಸುವ ಪ್ರಕ್ರಿಯೆಯಾಗಿದೆ. ಹೆಸರೇ ಸೂಚಿಸುವಂತೆ, ಇದು ನಿಮಗಾಗಿ ಅಥವಾ ನಿಮ್ಮ ವ್ಯಾಪಾರಕ್ಕಾಗಿ ಮಾಡಿಕೊಳ್ಳುವ ಬ್ರ್ಯಾಂಡ್ ಆಗಿದೆ.
ವೈಯಕ್ತಿಕ ಬ್ರ್ಯಾಂಡಿಂಗ್ ಎನ್ನುವುದು ವ್ಯಕ್ತಿಯನ್ನು ತಮ್ಮ ಉದ್ಯಮದಲ್ಲಿ ಅಧಿಕಾರವಾಗಿ ಇರಿಸುವ ಮೂಲಕ ಅವರ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಮೂಲಕ ಮತ್ತು ಸ್ಪರ್ಧೆಯಿಂದ ತಮ್ಮನ್ನು ಪ್ರತ್ಯೇಕಿಸುವ ಮೂಲಕ, ಅಂತಿಮವಾಗಿ ಅವರ ವೃತ್ತಿಜೀವನವನ್ನು ಮುನ್ನಡೆಸಲು, ಅವರ ಪ್ರಭಾವದ ವಲಯವನ್ನು ವಿಸ್ತರಿಸುವ ಮೂಲಕ ಸಾರ್ವಜನಿಕ ಗ್ರಹಿಕೆಯನ್ನು ಸೃಷ್ಟಿಸಲು ಮತ್ತು ಪ್ರಭಾವಿಸಲು ಪ್ರಜ್ಞಾಪೂರ್ವಕ ಮತ್ತು ಉದ್ದೇಶಪೂರ್ವಕ ಪ್ರಯತ್ನವಾಗಿದೆ.
ಇದನ್ನೂ ಓದಿ: ಭಾರತೀಯ ಮಹಿಳಾ ಉದ್ಯೋಗಿಗಳು ಹೆಚ್ಚಾಗಿ ಎಲ್ಲಿ ಹೂಡಿಕೆ ಮಾಡ್ತಾರೆ ಗೊತ್ತಾ? ಇಲ್ಲಿದೆ ಉತ್ತರ
ವ್ಯಾಪಾರದ ಜಗತ್ತಿನಲ್ಲಿ ಪ್ರಸ್ತುತ ಪರ್ಸನಲ್ ಬ್ರ್ಯಾಂಡ್ ಏಕೆ ಮುಖ್ಯ?
ಕ್ಷಣಾರ್ಧದಲ್ಲಿ ಜನರ ಗಮನ ಬೇರೆ ಕಡೆ ಹೋಗುವ ಈ ಸಂದರ್ಭದಲ್ಲಿ ಒಂದು ಕಂಪನಿ ಅಥವಾ ಒಬ್ಬ ಉದ್ಯಮಿ ಗಟ್ಟಿಯಾಗಿ ನೆಲೆಗೊಳ್ಳಲು ಅವನದ್ದೇ ಆದ ಒಂದು ಹೆಜ್ಜೆಗುರುತು ಬೇಕು. ಇದನ್ನು ಸಾಧಿಸಲು ಇರುವ ಏಕೈಕ ಮಾರ್ಗವೆಂದರೆ ಅದು ಬ್ರ್ಯಾಂಡ್. ಆದರೆ ದುರದೃಷ್ಟವಶಾತ್, ಹೆಚ್ಚಿನ ವ್ಯಾಪಾರ ಮಾಲೀಕರು ವೈಯಕ್ತಿಕ ಬ್ರ್ಯಾಂಡಿಂಗ್‌ಗೆ ಹೆಚ್ಚು ವೆಚ್ಚವಾಗುತ್ತದೆ ಎಂದು ಇದರ ಸಹವಾಸಕ್ಕೆ ಹೋಗುವುದೇ ಇಲ್ಲ. ಆದರೆ ವಾಸ್ತವ ಏನೆಂದರೆ ಒಬ್ಬರು ಯಶಸ್ವಿ ವ್ಯಾಪಾರವನ್ನು ಕಾಣಲು ಬಯಸಿದರೆ, ನೀವು ಯಶಸ್ವಿ ಬ್ರ್ಯಾಂಡ್ ಅನ್ನು ರಚಿಸಬೇಕು.
ವೈಯಕ್ತಿಕ ಬ್ರ್ಯಾಂಡಿಂಗ್ ಪರಿಸರದಲ್ಲಿ ಯಶಸ್ವಿಯಾಗುವುದು ಹೇಗೆ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ