Career: 9 ರಿಂದ 5 ರವರೆಗಿನ ಕೆಲಸ ಬೋರ್ ಆಯ್ತಾ? ನೀವು ಇಷ್ಟ ಪಡೋ ಉದ್ಯೋಗ ಪಡೆಯುವುದಕ್ಕೆ ಈ ಮಾರ್ಗಗಳನ್ನು ಅನುಸರಿಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಿಮ್ಮಲ್ಲಿರುವ ಸಾಮರ್ಥ್ಯಗಳನ್ನು ಬಳಸಿಕೊಳ್ಳಲು, ನಿಮಗೆ ಸಂತೋಷ ನೀಡುವ ಕೆಲಸವನ್ನು ಹುಡುಕಲು ಈ ಕೆಳಗಿನ ಸಲಹೆಗಳನ್ನು ಪಾಲಿಸಿರಿ.

  • Share this:

ನಮ್ಮಲ್ಲಿ ಅನೇಕರು ತುಂಬಾ ವರ್ಷಗಳಿಂದ ಬೆಳಗ್ಗೆ 9 ಗಂಟೆಗೆ ಬೈಕ್ ಹತ್ತಿಕೊಂಡು ಆಫೀಸಿಗೆ (Office) ಹೋಗಿ ಅಲ್ಲಿ ಸಂಜೆ 5 ಗಂಟೆಯವರೆಗೆ ಕೆಲಸ ಮಾಡಿ, ಮತ್ತೆ ಬೈಕ್ ಹತ್ತಿಕೊಂಡು ಮನೆಗೆ ಬರುವ ಮೂಲಕ ಒಂದೇ ರೀತಿಯ ಕೆಲಸವನ್ನು(Job) ಮಾಡುತ್ತಿರುತ್ತಾರೆ.  ಆದರೆ ಈ ರೀತಿಯಾದ ಕೆಲಸದ ದಿನಚರಿ ಎಷ್ಟೋ ಜನರಿಗೆ ಬೋರ್ ಆಗಿರುತ್ತದೆ. ಹಾಗೆ ನಿಮಗೆ ಬೋರ್ ಆದಾಗ, ಬೇರೆ ಮನಸ್ಸಿಗೆ ಹಿಡಿಸುವ ಕೆಲಸವನ್ನು ಮಾಡಬೇಕು ಅಂತ ಅನ್ನಿಸುವುದು ಸಹಜ. ಆದರೆ ಎಷ್ಟು ಜನರಿಗೆ ತಮಗೆ ಇಷ್ಟವಿರುವ ಕೆಲಸ ಸಿಗುತ್ತದೆ ನೀವೇ ಹೇಳಿ? ಬ್ಯಾಂಕ್ ಖಾತೆಯಲ್ಲಿ (Bank Account) ಹಣವಿದ್ದರೆ, ಈ ಹಣವನ್ನು (Money) ಹೂಡಿಕೆ (Invest) ಮಾಡಿ ಯಾವುದಾದರೊಂದು ಸ್ವಂತ  ವ್ಯಾಪಾರ ( Business) ಶುರು   ಮಾಡಬೇಕು ಎಂದರೆ ಅನೇಕ ರೀತಿಯ ತೊಡಕುಗಳು ಎದುರಾಗುತ್ತವೆ.


ಮನಸ್ಸಿಗೆ ಸಂತೋಷ ಉಂಟು ಮಾಡುವ ಕೆಲಸ ಮಾಡಿ


ಹಾಗಾದರೆ ಈ ಬೇಸರ ತರಿಸಿರುವ 9 ರಿಂದ 5 ಗಂಟೆಯವರೆಗಿನ ಕೆಲಸ ಬಿಟ್ಟು, ಬೇರೆ ಏನು ಮಾಡುವುದು ಅಂತ ಯೋಚನೆ ಮಾಡಿದರೆ ಮೊದಲಿಗೆ ನೀವು ನಿಮ್ಮಲ್ಲಿರುವ ಅನನ್ಯ ಕೌಶಲ್ಯಗಳು, ಆಸಕ್ತಿಗಳು, ಮೌಲ್ಯಗಳು ಮತ್ತು ಆಕಾಂಕ್ಷೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಆನಂತರ ಯಾವ ಕೆಲಸ ನಿಮ್ಮನ್ನು ನಿಜವಾಗಿಯೂ ರೋಮಾಂಚನಗೊಳಿಸುತ್ತದೆ? ಯಾವ ಚಟುವಟಿಕೆಗಳು ನಿಮಗೆ ಮನಸ್ಸಿಗೆ ಸಂತೋಷ ಮತ್ತು ಸಂತೃಪ್ತಿಯನ್ನು ತರುತ್ತವೆ? ನಿಮ್ಮ ಭಾವೋದ್ರೇಕಗಳು ಮತ್ತು ಸಾಮರ್ಥ್ಯಗಳನ್ನು ಗುರುತಿಸುವುದು ನೀವು ಸಂತೃಪ್ತ ವೃತ್ತಿಜೀವನವನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಅನ್ನುವುದನ್ನು ಅರಿಯಬೇಕು.


ನಿಮ್ಮ ಇಷ್ಟದ ಕೆಲಸದ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಲು ಸಮಗ್ರವಾದ ಸಂಶೋಧನೆ ನಡೆಸಿ ಮತ್ತು ಅಸ್ತಿತ್ವದಲ್ಲಿರುವ ಸಾಧ್ಯತೆಗಳ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಿರಿ. ಪ್ರತಿಯೊಂದು ವೃತ್ತಿಯ ಜಟಿಲತೆಯನ್ನು ಚೆನ್ನಾಗಿ ತಿಳಿದುಕೊಳ್ಳಿ. ಕೆಲಸಗಳ ಬಗ್ಗೆ ಹೆಚ್ಚೆಚ್ಚು ಮಾಹಿತಿಯನ್ನು ಪಡೆಯಲು ಮತ್ತು ನಿಮ್ಮ ಜ್ಞಾನವನ್ನು ವಿಸ್ತರಿಸಲು ಮಾರ್ಗದರ್ಶಕರು, ಉದ್ಯಮ ವೃತ್ತಿಪರರು ಮತ್ತು ನೆಟ್ವರ್ಕಿಂಗ್ ಅವಕಾಶಗಳನ್ನು ಹುಡುಕಿ.


ಇದನ್ನೂ ಓದಿ: Career Tips: ವೃತ್ತಿ ಜೀವನದಲ್ಲಿ ಎತ್ತರದ ಸ್ಥಾನಕ್ಕೇರಲು ಈ 6 ಟಿಪ್ಸ್‌ಗಳನ್ನು ಫಾಲೋ ಮಾಡಿ


ನೀವು ಇಷ್ಟಪಡುವ ಕೆಲಸವನ್ನು ಹೇಗೆ ಕಂಡು ಹಿಡಿಯುವುದು ನೋಡಿ..


ಬನ್ನಿ ಹಾಗಾದರೆ ನೀವು ಇಷ್ಟಪಡುವ ಕೆಲಸವನ್ನು ಹೇಗೆ ಕಂಡು ಹಿಡಿಯುವುದು ಎಂಬುದರ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ. ನಿಮ್ಮಲ್ಲಿರುವ ಸಾಮರ್ಥ್ಯಗಳನ್ನು ಬಳಸಿಕೊಳ್ಳಲು, ನಿಮಗೆ ಸಂತೋಷ ನೀಡುವ ಕೆಲಸವನ್ನು ಹುಡುಕಲು ಈ ಕೆಳಗಿನ ಸಲಹೆಗಳನ್ನು ಪಾಲಿಸಿರಿ.


1. ನಿಮ್ಮ ಆಸಕ್ತಿಗಳನ್ನು ಮೊದಲಿಗೆ ಗುರುತಿಸಿಕೊಳ್ಳಿ: ನೀವು ಯಾವುದರಲ್ಲಿ ಉತ್ತಮರಾಗಿದ್ದೀರಿ ಅನ್ನೋದನ್ನು ಮೊದಲು ಅರಿತುಕೊಳ್ಳಿರಿ. ನೀವು ಏನು ಮಾಡುವುದನ್ನು ಆನಂದಿಸುತ್ತೀರಿ? ನೀವು ಯಾವುದರ ಬಗ್ಗೆ ತುಂಬಾನೇ ಭಾವೋದ್ರಿಕ್ತರಾಗಿದ್ದೀರಿ? ನಿಮ್ಮ ಆಸಕ್ತಿಗಳು ಮತ್ತು ಭಾವೋದ್ರೇಕಗಳ ಬಗ್ಗೆ ನೀವು ಉತ್ತಮ ತಿಳುವಳಿಕೆಯನ್ನು ಹೊಂದಿದ್ದರೆ, ನಿಮ್ಮ ಆಯ್ಕೆಯ ಹಾದಿ ತುಂಬಾನೇ ಸುಲಭವಾಗಬಹುದು.


2. ವಿಭಿನ್ನ ವೃತ್ತಿಜೀವನದ ಆಯ್ಕೆಗಳನ್ನು ಸಂಶೋಧಿಸಿ: ಇಲ್ಲಿ ಅನೇಕ ವಿಭಿನ್ನ ವೃತ್ತಿಜೀವನಗಳಿವೆ, ಆದ್ದರಿಂದ ನಿಮಗೆ ಇಷ್ಟವಿರುವ ವೃತ್ತಿಜೀವನದ ಬಗ್ಗೆ ಸಮಗ್ರವಾಗಿ ಸಂಶೋಧನೆ ಮಾಡುವುದು ಮತ್ತು ವಿಭಿನ್ನ ಆಯ್ಕೆಗಳ ಬಗ್ಗೆ ಸಾಧ್ಯವಾದಷ್ಟು ಕಲಿಯುವುದು ತುಂಬಾನೇ ಮುಖ್ಯವಾಗಿರುತ್ತದೆ.


ಉದ್ಯೋಗ ವಿವರಣೆಗಳನ್ನು ಓದಿ, ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರೊಂದಿಗೆ ಮಾತನಾಡಿ ಮತ್ತು ನೀವು ಆಸಕ್ತಿ ಹೊಂದಿರುವ ವೃತ್ತಿಜೀವನದಲ್ಲಿರುವ ಜನರನ್ನು ಭೇಟಿ ಮಾಡಿ ಮಾತನಾಡಿ.




3. ನಿಮ್ಮ ಮೌಲ್ಯಗಳನ್ನು ಪರಿಗಣಿಸಿ: ವೃತ್ತಿಜೀವನದಲ್ಲಿ ನಿಮಗೆ ಯಾವುದು ಮುಖ್ಯ? ಜಗತ್ತಿನಲ್ಲಿ ವ್ಯತ್ಯಾಸವನ್ನುಂಟು ಮಾಡುವ ಕ್ಷೇತ್ರದಲ್ಲಿ ಕೆಲಸ ಮಾಡಲು ನೀವು ಬಯಸುವಿರಾ? ನಿಮ್ಮ ಮೌಲ್ಯಗಳನ್ನು ಹಂಚಿಕೊಳ್ಳುವ ಕಂಪನಿಗಾಗಿ ನೀವು ಕೆಲಸ ಮಾಡಲು ಬಯಸುವಿರಾ? ನಿಮಗೆ ಯಾವುದು ಮುಖ್ಯ ಎಂಬುದರ ಬಗ್ಗೆ ಯೋಚಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಿ ಮತ್ತು ನಿಮ್ಮ ವೃತ್ತಿಜೀವನವು ನಿಮ್ಮ ಮೌಲ್ಯಗಳೊಂದಿಗೆ ಹೊಂದಿಕೆಯಾಗುತ್ತದೆಯೇ ಎಂಬುದನ್ನು ಸಹ ಖಚಿತಪಡಿಸಿಕೊಳ್ಳಿ.


4. ವಾಸ್ತವಿಕ ಗುರಿಗಳನ್ನು ನಿಗದಿಪಡಿಸಿಕೊಳ್ಳಿ: ನೀವು ಜೀವನದಲ್ಲಿ ವಾಸ್ತವಿಕ ಗುರಿಗಳನ್ನು ಹೊಂದಿರುವುದು ಮುಖ್ಯ. ರಾತ್ರೋರಾತ್ರಿ ನಿಮ್ಮ ಕನಸಿನ ಕೆಲಸವನ್ನು ಹುಡುಕುವ ನಿರೀಕ್ಷೆ ಮಾಡಬೇಡಿ.


ನೀವು ಪ್ರೀತಿಸುವ ಕೆಲಸವನ್ನು ಹುಡುಕಲು ಸಮಯ ಮತ್ತು ಶ್ರಮ ಬೇಕಾಗುತ್ತದೆ.  ಅದಕ್ಕಾಗಿ ಆಸಕ್ತಿ ತೆಗೆದುಕೊಳ್ಳುವುದು ಅಥವಾ ನೀವು ಆಸಕ್ತಿ ಹೊಂದಿರುವ ಕ್ಷೇತ್ರದಲ್ಲಿ ಸ್ವಯಂ ಸೇವಕರಾಗುವಂತಹ ಸಣ್ಣ ಗುರಿಗಳೊಂದಿಗೆ ಪ್ರಾರಂಭಿಸಿ.


ಇದನ್ನೂ ಓದಿ: EPFO: ಉದ್ಯೋಗಿಗಳಿಗೆ EPF ಯಾಕಷ್ಟು ಮುಖ್ಯ? ಈ 5 ವಿಷಯಗಳು ಪ್ರತಿಯೊಬ್ಬ ನೌಕರನಿಗೂ ಗೊತ್ತಿರಬೇಕು


5. ನೆಟ್ವರ್ಕ್ ಬೆಳೆಸಿಕೊಳ್ಳಿರಿ: ವಿವಿಧ ವೃತ್ತಿ ಅವಕಾಶಗಳ ಬಗ್ಗೆ ಕಲಿಯಲು ಮತ್ತು ನಿಮ್ಮ ಉದ್ಯೋಗ ಹುಡುಕಾಟದಲ್ಲಿ ನಿಮಗೆ ಸಹಾಯ ಮಾಡುವ ಜನರನ್ನು ಭೇಟಿ ಮಾಡಲು ನೆಟ್ವರ್ಕಿಂಗ್ ಉತ್ತಮ ಮಾರ್ಗವಾಗಿದೆ.


ಉದ್ಯಮ ಕಾರ್ಯಕ್ರಮಗಳಿಗೆ ಹಾಜರಾಗಿ, ಲಿಂಕ್ಡ್ಇನ್ ನಲ್ಲಿರುವ ಅನೇಕ ಜನರೊಂದಿಗೆ ಸಂಪರ್ಕ ಸಾಧಿಸಿ ಮತ್ತು ಮುಕ್ತ ಸ್ಥಾನಗಳ ಬಗ್ಗೆ ತಿಳಿದಿರುವ ಸ್ನೇಹಿತರು ಮತ್ತು ಕುಟುಂಬವನ್ನು ಸಹ ಸಂಪರ್ಕಿಸಿ.


6. ರಿಸ್ಕ್ ತೆಗೆದುಕೊಳ್ಳಲು ಹಿಂಜರಿಯಬೇಡಿ: ನಿಮ್ಮ ಪ್ರಸ್ತುತ ಉದ್ಯೋಗದಲ್ಲಿ ನೀವು ಸಂತೋಷವಾಗಿಲ್ಲದಿದ್ದರೆ, ಅಪಾಯವನ್ನು ತೆಗೆದುಕೊಳ್ಳಲು ಮತ್ತು ಬದಲಾವಣೆ ಮಾಡಲು ಹಿಂಜರಿಯಬೇಡಿ. ಇದು ಸ್ವಲ್ಪ ಭಯ ತರಿಸಬಹುದು, ಆದರೆ ಮುಂದಿನ ದಿನಗಳಲ್ಲಿ ನಿಮಗೆ ಇದು ನೀವು ತೆಗೆದುಕೊಂಡ ಅತ್ಯುತ್ತಮ ನಿರ್ಧಾರ ಅಂತ ಅನ್ನಿಸಬಹುದು.


7. ನಿಮ್ಮ ಪ್ರಯತ್ನ ಬಿಡಬೇಡಿ: ನೀವು ಪ್ರೀತಿಸುವ ಕೆಲಸವನ್ನು ಹುಡುಕಲು ಸಮಯ ಮತ್ತು ಶ್ರಮ ಬೇಕಾಗುತ್ತದೆ. ನೀವು ತಕ್ಷಣವೇ ಪರಿಪೂರ್ಣ ಕೆಲಸವನ್ನು ಕಂಡುಕೊಳ್ಳಲು ಆಗದಿದ್ದರೆ, ಆ ಪ್ರಯತ್ನವನ್ನು ಅಲ್ಲಿಗೆ ಬಿಟ್ಟು ಕೊಡಬೇಡಿ.


ಹಾಗೆಯೇ ಹೊಸ ಹೊಸ ಕೆಲಸಗಳನ್ನು ಹುಡುಕುತ್ತಲೇ ಇರಿ ಮತ್ತು ಅಂತಿಮವಾಗಿ ನೀವು ಪ್ರೀತಿಸುವ ಕೆಲಸವನ್ನು ನೀವು ಗ್ಯಾರೆಂಟಿ ಪಡೆಯುತ್ತೀರಿ.

top videos


    ನೀವು ಇಷ್ಟಪಡುವ ಕೆಲಸವನ್ನು ಹುಡುಕಲು ಇಲ್ಲಿವೆ ನೋಡಿ ಹೆಚ್ಚುವರಿ ಸಲಹೆಗಳು:


    • ಹೊಸ ಅವಕಾಶಗಳಿಗೆ ಮುಕ್ತವಾಗಿರಿ: ನೀವು ಯಾವಾಗಲೂ ಯೋಚಿಸುವ ಉದ್ಯೋಗಗಳಿಗೆ ಮಾತ್ರ ನಿಮ್ಮನ್ನು ಸೀಮಿತಗೊಳಿಸಬೇಡಿ. ಹೊಸ ಅವಕಾಶಗಳಿಗೆ ಮುಕ್ತರಾಗಿರಿ ಮತ್ತು ಹೊಸದರ ಕಡೆ ಗಮನಹರಿಸಿ.


    • ಸಹಾಯ ಕೇಳಲು ಹಿಂಜರಿಯಬೇಡಿ: ನಿಮ್ಮ ಉದ್ಯೋಗ ಹುಡುಕಾಟದಲ್ಲಿ ನಿಮಗೆ ಸಹಾಯ ಮಾಡುವ ಅನೇಕ ಜನರಿದ್ದಾರೆ. ನಿಮ್ಮ ಸ್ನೇಹಿತರು, ಕುಟುಂಬ, ಮಾರ್ಗದರ್ಶಕರು ಮತ್ತು ವೃತ್ತಿ ಸಲಹೆಗಾರರೊಂದಿಗೆ ಚರ್ಚಿಸಿ.


    • ನಿಮ್ಮ ಮೇಲೆ ನಿಮಗೆ ವಿಶ್ವಾಸವಿರಲಿ: ನೀವು ಇಷ್ಟಪಡುವ ಕೆಲಸವನ್ನು ನೀವು ಕಂಡು ಕೊಳ್ಳಬಹುದು. ನಿಮ್ಮ ಕನಸುಗಳನ್ನು ಮಾತ್ರ ಅರ್ಧಕ್ಕೆ ಬಿಡಬೇಡಿ.

    First published: