ಮಾಹಿತಿ ತಂತ್ರಜ್ಞಾನ, ಟೆಲಿಕಾಂ, ಮ್ಯಾನುಫ್ಯಾಕ್ಚರಿಂಗ್, ಫೈನಾನ್ಸ್ ಮತ್ತು ಇನ್ಸುರೆನ್ಸ್, ರೀಟೇಲ್ ಹೀಗೆ ಎಲ್ಲೆಡೆ ತನ್ನ ಚಾಪು ಮೂಡಿಸುತ್ತಿರುವ ಡೇಟಾ ಸೈನ್ಸ್ ( Data Science), ಕಂಪನಿಗಳ ಅವಿಭಾಜ್ಯ ಅಂಗವಾಗಿದೆ. ಡೇಟಾ ಅನಾಲೈಸ್‌ಗಾಗಿ ಡೇಟಾ ಸೈನ್ಸ್ ಟೆಕ್ನಾಲಜಿಯನ್ನು ಪ್ರತಿ ವಲಯವೂ ಅಳವಡಿಸಿಕೊಳ್ಳುತ್ತಿದೆ. ಹೀಗಾಗಿ ಸಹಜವಾಗಿಯೇ ಈ ಕ್ಷೇತ್ರ ಜಾಗತಿಕವಾಗಿ ಲಾಭದಾಯಕ ಉದ್ಯಮವಾಗಿ (Profitable Business) ಬೆಳೆಯುತ್ತಿದೆ. ಭಾರತದಲ್ಲೂ ಕೂಡ ಡೇಟಾ ಸೈಂಟಿಸ್ಟ್‌ಗಳಿಗೆ (Data Scientist) ಬೇಡಿಕೆ ಹೆಚ್ಚಾಗಿದ್ದು, ಈ ಕ್ಷೇತ್ರ ಕೂಡ ತೆರೆದುಕೊಂಡು ಕ್ಷಿಪ್ರಗತಿಯಲ್ಲಿ ಬೆಳೆವಣಿಗೆ ಹೊಂದುತ್ತಿದೆ.
ಲಾಭದಾಯಕ ವೃತ್ತಿ
ಜಾಗತಿಕವಾಗಿ ಲಭ್ಯವಿರುವ ಲಾಭದಾಯಕ ವೃತ್ತಿ ಆಯ್ಕೆಗಳಲ್ಲಿ ಒಂದು ಡೇಟಾ ಸೈನ್ಸ್ ಆಗಿದೆ. ಅಂತರ್ಜಾಲದ ಮೂಲದಿಂದ ಪಡೆದ ಮಾಹಿತಿಯ ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡಲು ಪ್ರತಿ ಸಂಸ್ಥೆಗೆ ಈ ತಾಂತ್ರಿಕವಾಗಿ ಮುಂದುವರಿದ ಯುಗದಲ್ಲಿ ಡೇಟಾ ಸೈನ್ಸ್ ಕೋರ್ಸ್ ಕಲಿತಿರುವವರ ಅಗತ್ಯವಿದೆ.
ಕಂಪನಿಗಳ ಅವಿಭಾಜ್ಯ ಅಂಗ ಈ ಡೇಟಾ ಸೈನ್ಸ್
ಮೇಲೆ ಹೇಳಿದಂತೆ ಡೇಟಾ ಸೈನ್ಸ್ ಕಂಪನಿಗಳ ಅವಿಭಾಜ್ಯ ಅಂಗವಾಗಿದೆ. ಗಣಿತ, ಅಂಕಿಅಂಶ, ಕೃತಕ ಬುದ್ಧಿಮತ್ತೆ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್‌ನ ಡೊಮೇನ್‌ಗಳಿಂದ ಕಲ್ಪನೆಗಳು ಮತ್ತು ತಂತ್ರಗಳನ್ನು ಸಂಯೋಜಿಸುವ ಬೃಹತ್ ಪ್ರಮಾಣದ ದತ್ತಾಂಶವನ್ನು ವಿಶ್ಲೇಷಿಸಲು ಇದು ಬಹುಶಿಸ್ತೀಯ ವಿಧಾನವಾಗಿದೆ.
ದತ್ತಾಂಶ ವಿಜ್ಞಾನಿಗಳು ಹೆಚ್ಚಿನ ಪ್ರಮಾಣದ ಸಂಕೀರ್ಣ ಡೇಟಾವನ್ನು ಮೌಲ್ಯಮಾಪನ ಮಾಡಲು ಮತ್ತು ಅರ್ಥೈಸಲು ಸಾಧ್ಯವಾಗುವ ಮೂಲಕ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಬೆಳವಣಿಗೆಯನ್ನು ಉತ್ತೇಜಿಸಲು ವ್ಯವಹಾರಗಳಿಗೆ ಸಹಾಯ ಮಾಡುತ್ತಾರೆ.
ಡೇಟಾ ಸೈನ್ಸ್‌ನಲ್ಲಿನ ವೃತ್ತಿಜೀವನವು ಅಗತ್ಯ ಸಾಮರ್ಥ್ಯಗಳು ಮತ್ತು ಪರಿಣತಿಯನ್ನು ಹೊಂದಿರುವವರ ಜೀವನವನ್ನು ಭದ್ರ ಮಾಡುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ.
ಇದನ್ನೂ ಓದಿ: Career After 2nd PUC: ಆರಂಭದಲ್ಲೇ ಜಾಸ್ತಿ ಸಂಬಳ ಬೇಕೆಂದರೆ ಸೆಕೆಂಡ್ PU ಬಳಿಕ ಈ ಡಿಗ್ರಿಗಳನ್ನು ಮಾಡಿ
ಡೇಟಾ ಸೈನ್ಸ್ ಏಕೆ ಜನಪ್ರಿಯ ವೃತ್ತಿ ಆಯ್ಕೆಯಾಗಿದೆ?
ಡೇಟಾ ಸೈನ್ಸ್ ಏಕೆ ಇಷ್ಟು ಬೇಡಿಕೆ ಪಡೆದುಕೊಳ್ಳುತ್ತಿದೆ ಎನ್ನುವುದಕ್ಕೆ ಈಗಾಗ್ಲೇ ಒಂದು ಹಂತದ ಉತ್ತರ ಸಿಕ್ಕಾಗಿದೆ. ಹೆಚ್ಚುವರಿಯಾಗಿ ಈ ಕ್ಷೇತ್ರ ಏಕೆ ಇಷ್ಟು ಬೇಡಿಕೆ ಪಡೆದುಕೊಳ್ಳುತ್ತಿದೆ ಎಂಬುದಕ್ಕೆ ಮುಖ್ಯವಾಗಿ ಕೆಲವು ಕಾರಣಗಳಿವೆ. ಮೊದಲನೆಯದಾಗಿ ಉದ್ಯೋಗ ಭದ್ರತೆ ಮತ್ತು ಅವಕಾಶ.
* ಹೇರಳವಾದ ಉದ್ಯೋಗವಕಾಶ
ವಿವಿಧ ಕ್ಷೇತ್ರಗಳ ಕಂಪನಿಗಳು ತಮ್ಮ ಅಭಿವೃದ್ಧಿಗಾಗಿ ಡೇಟಾ ಇನ್‌ಸೈಟ್‌ಗಳ ನಿರ್ವಹಣೆಗಾಗಿ ಡೇಟಾ ಅನಾಲೈಸಿಂಗ್ ಟೂಲ್‌ಗಳನ್ನು ಬಳಸುತ್ತಿವೆ. ಆದ್ದರಿಂದ ಉದ್ಯೋಗಾವಕಾಶಗಳಿಗೆ ಬರವೇ ಇಲ್ಲ.
ಹಾಗೆಯೇ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿರುವ ಈ ಉದ್ಯಮ ಡೇಟಾ ಸೈನ್ಸ್ ವೃತ್ತಿಪರರಿಗೆ ಅಥವಾ ಹೊಸಬರಿಗೆ ಹೆಚ್ಚು ಅವಕಾಶ ನೀಡುತ್ತಿದೆ. ಹೇರಳವಾದ ಉದ್ಯೋಗವಕಾಶ ಮತ್ತು ವೃತ್ತಿ ಭದ್ರತೆಯಿಂದ ಜನಪ್ರಿಯ ವೃತ್ತಿ ಆಯ್ಕೆಯಾಗುತ್ತಿದೆ.
* ಉದ್ಯೋಗ ತೃಪ್ತಿ
ಎರಡನೆಯದಾಗಿ, ವೃತ್ತಿಜೀವನವಾಗಿ ಡೇಟಾ ವಿಜ್ಞಾನವು ಉನ್ನತ ಮಟ್ಟದ ಉದ್ಯೋಗ ತೃಪ್ತಿಯನ್ನು ನೀಡುತ್ತದೆ, ಏಕೆಂದರೆ ನೀವು ಸವಾಲಿನ ಸಮಸ್ಯೆಗಳನ್ನು ನಿಭಾಯಿಸುತ್ತೀರಿ ಮತ್ತು ವ್ಯವಹಾರಗಳು ಮತ್ತು ಸಮಾಜದ ಮೇಲೆ ಮಹತ್ವದ ಪ್ರಭಾವವನ್ನು ಬೀರಲು ಸಾಧ್ಯವಾಗುತ್ತದೆ.
ಹಾಗೂ ಡೇಟಾ ವಿಜ್ಞಾನದ ವಿಷಯವು ಯಾವಾಗಲೂ ಅಭಿವೃದ್ಧಿ ಹೊಂದುವ ಕ್ರೇತ್ರವಾಗಿದ್ದು, ಹೊಸ ತಂತ್ರಜ್ಞಾನಗಳು ಮತ್ತು ವಿಧಾನಗಳು ಸಾರ್ವಕಾಲಿಕವಾಗಿ ಅಪ್ಡೇಟ್ ಆಗುತ್ತಿರುತ್ತವೆ.
* ಉತ್ತಮ ವೇತನ
ಅಂತಿಮವಾಗಿ ಡೇಟಾ ವಿಜ್ಞಾನಿಗಳು ಕ್ಷೇತ್ರದಲ್ಲಿ ಪಡೆಯುವ ಸಂಬಳದಿಂದಾಗಿಯೂ ಈ ಕ್ಷೇತ್ರ ಬೇಡಿಕೆಯ ಉದ್ಯಮವಾಗಿದೆ. ಅತಿ ಹೆಚ್ಚು ಸಂಭಾವನೆ ಪಡೆಯುವ ವೃತ್ತಿಪರರಲ್ಲಿ ಡೇಟಾ ವಿಜ್ಞಾನಿಗಳು ಸೇರಿದ್ದಾರೆ.
ಡೇಟಾ ವಿಜ್ಞಾನಿಗಳು ಸಾಮಾನ್ಯವಾಗಿ ಇತರ IT ಕೆಲಸಗಾರರಿಗಿಂತ ಉತ್ತಮ ಸಂಬಳವನ್ನು ಗಳಿಸುತ್ತಾರೆ. ಹೆಚ್ಚಿನ ಅನುಭವ ಮತ್ತು ಸಾಮರ್ಥ್ಯ ಹೊಂದಿರುವವರು ಹೆಚ್ಚಿನ ಸಂಬಳಕ್ಕೆ ಅರ್ಹರಾಗಿರುತ್ತಾರೆ.
ವೃತ್ತಿಯಲ್ಲಿ ಸ್ಪರ್ಧಾತ್ಮಕವಾಗಿ ಉಳಿಯಲು ಹೊಸ ಕೌಶಲ್ಯ
ಡೇಟಾ ಸೈನ್ಸ್ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನಗಳು ಮತ್ತು ವಿಧಾನಗಳು ನಿರಂತರವಾಗಿ ಅಭಿವೃದ್ಧಿಯಾಗುತ್ತಿರುತ್ತದೆ. ಹೀಗಾಗಿ ಡೇಟಾ ವಿಜ್ಞಾನಿಯಾಗಿ ವೃತ್ತಿಯಲ್ಲಿ ಸ್ಪರ್ಧಾತ್ಮಕವಾಗಿ ಉಳಿಯಲು, ನೀವು ಇತ್ತೀಚಿನ ಪರಿಕರಗಳು, ತಂತ್ರಗಳು ಮತ್ತು ಪ್ರಕ್ರಿಯೆಗಳನ್ನು ಅರಿತುಕೊಳ್ಳಬೇಕು.
ಅಂಕಿಅಂಶಗಳು, ಕಂಪ್ಯೂಟರ್ ವಿಜ್ಞಾನ ಮತ್ತು ವ್ಯವಹಾರದಂತಹ ವಿವಿಧ ಕ್ಷೇತ್ರಗಳಲ್ಲಿ ನವೀಕೃತ ಜ್ಞಾನ ಮತ್ತು ಕೌಶಲ್ಯಗಳನ್ನು ಪಡೆದುಕೊಳ್ಳುತ್ತಲೇ ಇರಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ