Job Alert: ನೀವು ಗ್ರಾಫಿಕ್ ಡಿಸೈನರ್ ಆಗಲು ಇಷ್ಟ ಪಡ್ತೀರಾ? ಇಲ್ಲಿದೆ ನೋಡಿ ಇದರ ಬಗ್ಗೆ ಕಂಪ್ಲೀಟ್ ಡಿಟೈಲ್ಸ್

ಗ್ರಾಫಿಕ್ ಡಿಸೈನರ್

ಗ್ರಾಫಿಕ್ ಡಿಸೈನರ್

ಚಿಕ್ಕ-ಪುಟ್ಟ ಬ್ಯಾನರ್ ಗಳಿಂದ ಹಿಡಿದು ದೊಡ್ಡ ದೊಡ್ಡ ಫ್ಲೆಕ್ಸ್ ಗಳ ವರೆಗೆ ಇತ್ಯಾದಿಗಳನ್ನು ತಯಾರಿಸಲು ಈ ಗ್ರಾಫಿಕ್ ಡಿಸೈನರ್ ಗಳು ತುಂಬಾನೇ ಅವಶ್ಯಕವಾಗಿರುತ್ತಾರೆ.

  • Share this:
  • published by :

ಕಳೆದ ಕೆಲವು ವರ್ಷಗಳಲ್ಲಿ ಈ ಗ್ರಾಫಿಕ್ ಡಿಸೈನಿಂಗ್ (Graphic Design) ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಏಕೆಂದರೆ ಈಗ ಚಿಕ್ಕ ಪುಟ್ಟ ವ್ಯವಹಾರಗಳಿಂದ ಹಿಡಿದು ದೊಡ್ಡ ದೊಡ್ಡ ಕಂಪನಿಗಳು ತುಂಬಾನೇ ಕ್ರಿಯೇಟಿವ್ ಆಗಿರುವ ಗ್ರಾಫಿಕ್ ಡಿಸೈನರ್ ಗಳನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಿದ್ದಾರೆ ಅಂತ ಹೇಳಬಹುದು. ಇದಕ್ಕೆ ಕಾರಣವೆಂದರೆ ತಮ್ಮ ಬಿಸಿನೆಸ್ ಗಳಿಗೆ (Business) ಮತ್ತು ಕಂಪನಿಗಳಿಗೆ ಈ ಜಾಹೀರಾತುಗಳನ್ನು(Advertisement)  ಮಾಡಿ ಕೊಡಲು, ಚಿಕ್ಕ-ಪುಟ್ಟ ಬ್ಯಾನರ್ ಗಳಿಂದ ಹಿಡಿದು ದೊಡ್ಡ ದೊಡ್ಡ ಫ್ಲೆಕ್ಸ್ ಗಳ ವರೆಗೆ ಇತ್ಯಾದಿಗಳನ್ನು ತಯಾರಿಸಲು ಈ ಗ್ರಾಫಿಕ್ ಡಿಸೈನರ್ ಗಳು ತುಂಬಾನೇ ಅವಶ್ಯಕವಾಗಿರುತ್ತಾರೆ.


ಗ್ರಾಫಿಕ್ ಡಿಸೈನರ್ ಗಳ ಕ್ರಿಯೇಟಿವಿಟಿ ಕಂಪನಿಗಳಿಗೆ ತುಂಬಾ ಅವಶ್ಯಕ


ಈ ಗ್ರಾಫಿಕ್ ಡಿಸೈನರ್ ಗಳ ಸೃಜನಶೀಲ ಕೌಶಲ್ಯಗಳು ಕಂಪನಿಗಳಿಗೆ ತಮ್ಮ ಉತ್ಪನ್ನಗಳ ಬಗ್ಗೆ ಗ್ರಾಹಕರಿಗೆ ಸರಿಯಾಗಿ ಅರ್ಥ ಮಾಡಿಸುವಲ್ಲಿ ತುಂಬಾನೇ ಮಹತ್ವದ ಪಾತ್ರ ವಹಿಸುತ್ತವೆ ಅಂತ ಹೇಳಬಹುದು.


ಇವರು ಈ ಕಂಪನಿಗಳ ವೆಬ್‌ಸೈಟ್ ಗಳಿಗೆ ಮತ್ತು ಮಾಧ್ಯಮಗಳಿಗೆ ಜಾಹೀರಾತುಗಳನ್ನು ಮಾಡಿಕೊಡಲು ಮತ್ತು ತಮ್ಮ ಕಂಪನಿಯ ಕಿರು ಪುಸ್ತಕಗಳಿಗೆ ಪೋಸ್ಟರ್ ಗಳನ್ನು ಮತ್ತು ಕಂಪನಿಗಳಿಗೆ ಲೋಗೋಗಳನ್ನು ಮಾಡಿಕೊಡಲು ವಿವಿಧ ರೀತಿಯ ಸಾಫ್ಟ್‌ವೇರ್ ಗಳನ್ನು ಬಳಸುತ್ತಾರೆ. ಹಾಗಾಗಿ ಈ ಉದ್ಯೋಗದ ಡಿಮ್ಯಾಂಡ್ ಈಗ ತುಂಬಾನೇ ಹೆಚ್ಚಾಗಿದೆ ಅಂತ ಹೇಳಬಹುದು.


ನೀವು ಸಹ ಈ ಗ್ರಾಫಿಕ್ ಡಿಸೈನ್ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಶುರು ಮಾಡಬೇಕು ಅಂತ ಅಂದುಕೊಂಡರೆ ಮೊದಲಿಗೆ ನೀವು ಗ್ರಾಫಿಕ್ ಡಿಸೈನ್ ವಿಷಯದಲ್ಲಿ ಪದವಿ ಅಥವಾ ಡಿಪ್ಲೊಮಾ ಕೋರ್ಸ್ ಗಳನ್ನು ಮಾಡಬಹುದು.


ಇದನ್ನೂ ಓದಿ: ಕ್ವಾಲಿಟಿ ಕೌನ್ಸಿಲ್ ಆಫ್​ ಇಂಡಿಯಾದಲ್ಲಿ ಕೆಲಸಕ್ಕೆ ಅರ್ಜಿ ಹಾಕಿ


ವಿವಿಧ ಹಂತಗಳಲ್ಲಿ ಈ ಗ್ರಾಫಿಕ್ ಡಿಸೈನ್​ ಉದ್ಯೋಗದ ಬಗ್ಗೆ ಇನ್ನಷ್ಟು ಮಾಹಿತಿ ಎಂದರೆ ಕೆಲಸದ ವಿವರಣೆ ಮತ್ತು ಅದರ ಸಂಬಳದ ನಿರೀಕ್ಷೆಗಳನ್ನು ಇಲ್ಲಿ ವಿವರವಾಗಿ ತಿಳಿಸಲಾಗಿದೆ ನೋಡಿ.


ಗ್ರಾಫಿಕ್ ಡಿಸೈನಿಂಗ್ ಕ್ಷೇತ್ರದಲ್ಲಿ ಏನೆಲ್ಲಾ ಆಯ್ಕೆಗಳಿವೆ ನೋಡಿ..


ಕ್ರಿಯೇಟಿವ್ ಡೈರೆಕ್ಟರ್- ಡಿಸೈನಿಂಗ್ ತಂಡದ ಮುಖ್ಯಸ್ಥರಾಗಿ, ಕ್ರಿಯೇಟಿವ್ ಡೈರೆಕ್ಟರ್ ಆಗಿ ಸೃಜನಶೀಲ ಕೆಲಸಗಳನ್ನು ನಿರ್ವಹಿಸಲು ಮತ್ತು ನಿರ್ದೇಶಿಸಲು ಜವಾಬ್ದಾರರಾಗಿರುತ್ತಾರೆ. ಭಾರತದಲ್ಲಿ ಕ್ರಿಯೇಟಿವ್ ಡೈರೆಕ್ಟರ್ ಅವರ ಸಂಬಳ ವರ್ಷಕ್ಕೆ ಸುಮಾರು 25 ಲಕ್ಷ ರೂಪಾಯಿ ಆಗಿರುತ್ತದೆ.


ಆರ್ಟ್ ಡೈರೆಕ್ಟರ್- ಈ ಹುದ್ದೆಯಲ್ಲಿರುವವರು ಗ್ರಾಫಿಕ್ ಡಿಸೈನಿಂಗ್ ಯೋಜನೆಯ ಒಟ್ಟಾರೆ ಕೆಲಸಕ್ಕೆ ಜವಾಬ್ದಾರರಾಗಿರುತ್ತಾರೆ. ಸಾಮಾನ್ಯವಾಗಿ, ಅವರು ಕ್ರಿಯೇಟಿವ್ ಡೈರೆಕ್ಟರ್ ಅವರೊಡನೆ ಸೇರಿಕೊಂಡು ನಿಕಟವಾಗಿ ಕೆಲಸ ಮಾಡುತ್ತಾರೆ. ಭಾರತದಲ್ಲಿ ಆರ್ಟ್ ಡೈರೆಕ್ಟರ್ ಅವರ ಸರಾಸರಿ ಸಂಬಳ ವರ್ಷಕ್ಕೆ 12 ಲಕ್ಷ ರೂಪಾಯಿ ಆಗಿರುತ್ತದೆ.


ಸೀನಿಯರ್ ಗ್ರಾಫಿಕ್ ಡಿಸೈನರ್- ಇವರು ಅನುಭವಿ ಗ್ರಾಫಿಕ್ ಡಿಸೈನರ್ ಗಳು ಆಗಿರುತ್ತಾರೆ ಮತ್ತು ಅವರು ಕ್ಲೈಂಟ್ ಗೆ ಬೇಕಾದ ಕೆಲಸವನ್ನು ಅರ್ಥ ಮಾಡಿಕೊಂಡು ಆ ಕೆಲಸದ ಒಟ್ಟಾರೆ ಯೋಜನೆಯನ್ನು ರೂಪಿಸುವ ಜವಾಬ್ದಾರಿ ಇವರ ಮೇಲೆ ಇರುತ್ತದೆ ಅಂತ ಹೇಳಬಹುದು.


ಅವರು ಜೂನಿಯರ್ ಡಿಸೈನರ್ ಗಳ ತಂಡವನ್ನು ನೋಡಿಕೊಳ್ಳುತ್ತಾರೆ. ಭಾರತದಲ್ಲಿ ಸೀನಿಯರ್ ಗ್ರಾಫಿಕ್ ಡಿಸೈನರ್ ಅವರ ಸರಾಸರಿ ಸಂಬಳವು ವರ್ಷಕ್ಕೆ 5.5 ಲಕ್ಷ ರೂಪಾಯಿಗಳಿಂದ ಹಿಡಿದು 10 ಲಕ್ಷ ರೂಪಾಯಿಗಳವರೆಗೆ ಇರುತ್ತದೆ.


ಯುಐ ಮತ್ತು ಯುಎಕ್ಸ್ ಡಿಸೈನರ್- ವೆಬ್‌ಸೈಟ್ ಗಳು, ಮೊಬೈಲ್ ಅಪ್ಲಿಕೇಶನ್ ಗಳು ಮತ್ತು ಇತರ ಡಿಜಿಟಲ್ ಪ್ಲಾಟ್‌ಫಾರ್ಮ್ ಗಳಿಗಾಗಿ ಬಳಕೆದಾರ ಇಂಟರ್‌ಫೇಸ್ ಗಳನ್ನು ರಚಿಸಲು ಯುಐ ಮತ್ತು ಯುಎಕ್ಸ್ ಡಿಸೈನರ್ ಗಳು ಕೆಲಸ ಮಾಡುತ್ತಾರೆ.


ಇದಕ್ಕಾಗಿ, ಅವರು ವಿವಿಧ ರೀತಿಯ ಡಿಸೈನಿಂಗ್ ಉಪಕರಣಗಳು ಮತ್ತು ತಂತ್ರಜ್ಞಾನವನ್ನು ಬಳಸುತ್ತಾರೆ. ಭಾರತದಲ್ಲಿ ಅವರ ಸರಾಸರಿ ಸಂಬಳ ವರ್ಷಕ್ಕೆ 9.5 ಲಕ್ಷ ರೂಪಾಯಿ ಇದೆ.


ಮೋಷನ್ ಗ್ರಾಫಿಕ್ ಡಿಸೈನರ್- ಮೋಷನ್ ಗ್ರಾಫಿಕ್ ಡಿಸೈನರ್ ವೀಡಿಯೋ ಮತ್ತು ಚಲನಚಿತ್ರ ಯೋಜನೆಗಳಿಗೆ ಅನಿಮೇಟೆಡ್ ಗ್ರಾಫಿಕ್ಸ್ ಮತ್ತು ಮೋಷನ್ ಗ್ರಾಫಿಕ್ ಗಳನ್ನು ರಚಿಸುತ್ತಾರೆ. ಇದಕ್ಕಾಗಿ ಅವರು ವಿವಿಧ ರೀತಿಯ ಸಾಫ್ಟ್‌ವೇರ್ ಗಳ ಸಹಾಯವನ್ನು ತೆಗೆದುಕೊಳ್ಳುತ್ತಾರೆ. ಭಾರತದಲ್ಲಿ ಇವರ ಸರಾಸರಿ ಸಂಬಳ ವರ್ಷಕ್ಕೆ 4.5 ಲಕ್ಷ ರೂಪಾಯಿ ಇದೆ.


ಇದನ್ನೂ ಓದಿ: ಬೆಂಗಳೂರು ಮೆಟ್ರೋದಲ್ಲಿ 68 ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ


ಪ್ಯಾಕೇಜಿಂಗ್ ಡಿಸೈನರ್- ಪ್ಯಾಕೇಜಿಂಗ್ ಡಿಸೈನರ್ ಗಳು ತಮ್ಮ ಕಂಪನಿಯ ಉತ್ಪನ್ನಕ್ಕಾಗಿ ಮೋಷನ್ ಗ್ರಾಫಿಕ್ ಮತ್ತು ಪ್ಯಾಕೇಜಿಂಗ್ ಡಿಸೈನ್ ಗಳನ್ನು ಮಾಡಿ ಕೊಡುತ್ತಾರೆ. ಇದಕ್ಕಾಗಿ ಡಿಸೈನಿಂಗ್ ಸಾಫ್ಟ್‌ವೇರ್ ಗಳನ್ನು ಬಳಸಲಾಗುತ್ತದೆ. ಭಾರತದಲ್ಲಿ ಅವರ ಸರಾಸರಿ ಸಂಬಳ ವರ್ಷಕ್ಕೆ 4.5 ಲಕ್ಷ ರೂಪಾಯಿ ಇದೆ.


ವೆಬ್ ಡಿಸೈನರ್- ವೆಬ್ ಡಿಸೈನರ್ ಗಳು ವಿವಿಧ ರೀತಿಯ ಡಿಸೈನಿಂಗ್ ಸಾಫ್ಟ್‌ವೇರ್ ಗಳನ್ನು ಬಳಸಿಕೊಂಡು ವೆಬ್‌ಸೈಟ್ ಗೆ ಮೋಷನ್ ಡಿಸೈನ್ ಮತ್ತು ಲೇಔಟ್ ಅನ್ನು ರಚಿಸುತ್ತಾರೆ. ಭಾರತದಲ್ಲಿ ಎಂಟ್ರಿ ಲೆವೆಲ್ ನಲ್ಲಿ ಈ ವೆಬ್ ಡಿಸೈನರ್ ಗಳ ಸರಾಸರಿ ಸಂಬಳ ವರ್ಷಕ್ಕೆ 3.5 ಲಕ್ಷ ರೂಪಾಯಿ ಆಗಿರುತ್ತದೆ.


top videos



    ಗ್ರಾಫಿಕ್ ಡಿಸೈನ್ ಮ್ಯಾನೇಜರ್- ಗ್ರಾಫಿಕ್ ಡಿಸೈನ್ ಮ್ಯಾನೇಜರ್ ಗಳು ಡಿಸೈನರ್ ಸಂಪೂರ್ಣ ತಂಡವನ್ನು ನಿರ್ವಹಿಸುತ್ತಾರೆ. ಅವರು ಡಿಸೈನಿಂಗ್ ಪ್ರಕ್ರಿಯೆ ಮತ್ತು ಜ್ಯೂನಿಯರ್ ಡಿಸೈನರ್ ಗಳಿಗೆ ಮಾರ್ಗದರ್ಶನ ಮಾಡುತ್ತಾರೆ. ಭಾರತದಲ್ಲಿ ಗ್ರಾಫಿಕ್ ಡಿಸೈನ್ ಮ್ಯಾನೇಜರ್ ಗೆ ವಾರ್ಷಿಕ ಸರಾಸರಿ ಸಂಬಳ 12 ಲಕ್ಷ ರೂಪಾಯಿ ಆಗಿರುತ್ತದೆ.

    First published: