Career in Economics: ಎಕನಾಮಿಕ್ಸ್ ಓದಿದವರಿಗೆ ಎಷ್ಟೆಲ್ಲಾ ಉದ್ಯೋಗಾವಕಾಶಗಳಿವೆ ತಿಳಿಯಿರಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಎಕನಾಮಿಕ್ಸ್ ವಿಷಯವನ್ನು ಒಂದು ಆರ್ಟ್ ಆಂಡ್ ಸೈನ್ಸ್ ಎಂಬ ಪರಿಕಲ್ಪನೆಯಡಿಯಲ್ಲಿ ನೋಡಲಾಗಿದ್ದರೂ ಅದರಲ್ಲಿ ಗಣಿತದ ಸೂತ್ರಗಳು ವಿಶಾಲವಾಗಿ ಬಳಸಲ್ಪಡುತ್ತವೆ.

  • Trending Desk
  • 5-MIN READ
  • Last Updated :
  • Share this:

    ಶಿಕ್ಷಣ (Education) ಎಂಬುದು ಜ್ಞಾನದ ದೀವಿಗೆಯಾಗಿದೆ. ಶಿಕ್ಷಣವು ಕಲಿಯುವವನ ಕಲಿಕಾ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಮಾಪನವಾಗಿದೆ ಎಂದರೂ ತಪ್ಪಿಲ್ಲ. ಶಿಕ್ಷಣವು ವಿದ್ಯಾರ್ಥಿಗಳ ಅಭ್ಯುದಯಕ್ಕೆ ಕಾರಣವಾಗುವುದು ಮಾತ್ರವಲ್ಲದೆ ಅವರನ್ನು ಇಂದಿನ ಸ್ಪರ್ಧಾತ್ಮಕ ಯುಗದ (Competitive World) ಜಾಗತಿಕ ವೇದಿಕೆಯಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ದಕ್ಷರನ್ನಾಗಿ ಮಾಡುತ್ತದೆ. ವಿದ್ಯಾರ್ಥಿ ದೆಸೆಯಲ್ಲಿದ್ದಾಗ ಪ್ರಾಥಮಿಕ ಹಂತದ ಶಿಕ್ಷಣ ಮುಗಿದ ತಕ್ಷಣ ಹಲವು ಕ್ಷೇತ್ರಗಳ ಮಹತ್ವ ಹಾಗೂ ಅದರದ್ದೆ ಆದ ಆಂತರಿಕ ಜ್ಞಾನವನ್ನು ಸುಲಲಿತವಾಗಿ ತಿಳಿಯಲು ಅನುಕೂಲವಾಗುವಂತೆ ವಿವಿಧ ಬಗೆಯ ಪದವಿ, ಸ್ನಾತಕೊತ್ತರ ಹಾಗೂ ಪ್ರಮಾಣೀಕೃತ ಕೋರ್ಸುಗಳು ಲಭ್ಯವಿರುತ್ತದೆ.


    ಹಾಗಾಗಿ ಕಲಿಯುವಿಕೆ ಎಂಬುದು ನಿರಂತರವಾಗಿ ಹರಿಯುವ ನೀರಿನಂತೆ. ಪ್ರತಿದಿನ ಪ್ರತಿಕ್ಷಣ ಜ್ಞಾನ ವೃದ್ಧಿಸಿಕೊಳ್ಳುವುದಕ್ಕೆ ಯಾವುದೇ ಮೀತಿಯಿಲ್ಲ. ಮನುಷ್ಯ ಮನಸ್ಸು ಮಾಡಿದರೆ ಹಲವು ಕ್ಷೇತ್ರಗಳ ಹಲವು ವಿಷಯಗಳ ಅಧ್ಯಯನದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಹೆಚ್ಚಿನ ಜ್ಞಾನಾರ್ಜನೆ ಮಾಡಬಲ್ಲ. ಕಲಿತಷ್ಟು ಮನಸ್ಸು ಹಾಗೂ ಬುದ್ಧಿಗಳು ಪಕ್ವವಾಗಿ ಎಲ್ಲ ಸಂದರ್ಭಗಳನ್ನು ಸಮರ್ಥವಾಗಿ ಎದುರಿಸುವ ಆತ್ಮವಿಶ್ವಾಸ ಮೂಡುತ್ತದೆ.


    ವಿಷಯಗಳು ಅಂತರ್ಸಂಬಂಧ ಹೊಂದಿವೆ


    ವಿದ್ಯಾರ್ಥಿಗಳಿದ್ದಾಗ ಶಾಲೆಯಲ್ಲಿ ಅಥವಾ ಕಾಲೇಜುಗಳಲ್ಲಿ ಕಲಿಯುವಾಗಿನ ವಾತಾವರಣ ಭಿನ್ನವಾಗಿರುತ್ತದೆ. ಅಲ್ಲಿ ಒಂದು ಬಗೆಯ ಮೀತಿಯನ್ನು ಹೊಂದಿರುವ ಶಿಕ್ಷಣವನ್ನಷ್ಟೇ ಪಡೆಯಲು ಸಾಧ್ಯವಾಗುತ್ತದೆ. ಆದರೆ ವಾಸ್ತವದಲ್ಲಿ ನೋಡಿದಾಗ ನಾವು ಕಲಿಯುವ ಪ್ರತಿ ವಿಷಯಗಳು ಒಂದಕ್ಕೊಂದು ಲಿಂಕ್ ಹೊಂದಿವೆ ಎಂಬುದನ್ನು ಅರಿಯಲು ನಮಗೆ ಕ್ಲಾಸ್ ರೂಂ ತರಗತಿಗಳಿಂದ ಸಾಧ್ಯವಾಗುವುದಿಲ್ಲ.




    ಇದಕ್ಕೊಂದು ಉದಾಹರಣೆ ನೀಡಬೇಕೆಂದರೆ, ಕುಟುಂಬವೊಂದು ತಮ್ಮ ಮನೆಯ ಭೌಗೋಳಿಕತೆ ಹಾಗೂ ಅಲ್ಲಿನ ವಾತಾವರಣದ ಪ್ರಮುಖ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳದೆ ಮನೆಯ ಬಜೆಟ್ ಅನ್ನು ಹೊಂದಿಸಲು ಸಾಧ್ಯವಾಗುವುದಿಲ್ಲ. ಇದಲ್ಲದೆ ಆ ಕುಟುಂಬದಲ್ಲಿರುವ ಇತರೆ ಸದಸ್ಯರ ಅಭಿರುಚಿ, ಆಹಾರದ ಬಗ್ಗೆ ಇರುವ ಆದ್ಯತೆಗಳು, ಮಾನಸಿಕ ಸ್ಥಿತಿ, ಸಾಮಾಜಿಕ ಕಟ್ಟಳೆಗಳು ಇತ್ಯಾದಿ ಬಜೆಟ್ ಹೊಂದಿಸುವಲ್ಲಿ ಪ್ರಭಾವ ಬೀರುತ್ತವೆ. ಹಾಗಾಗಿ ಕಲಿಯಲು ಸಾಕಷ್ಟು ವಿಷಯಗಳಿವೆ, ಕ್ಷೇತ್ರಗಳಿವೆ ಎಂದು ಹೇಳಬಹುದು.


    ಆದರೆ ಮಾನವನ ಜೀವಿತಾವಧಿಯನ್ನು ಪರಿಗಣನೆಗೆ ತೆಗೆದುಕೊಂಡರೆ ಜೀವನದಲ್ಲಿ ನೋಡಬಹುದಾದ ಅಥವಾ ಅನುಭವಕ್ಕೆ ಬರಬಹುದಾದ ಎಲ್ಲ ಕ್ಷೇತ್ರಗಳ, ವಿಷಯಗಳಲ್ಲಿ ಪರಿಣಿತಿ ಹೊಂದಲು ಸಾಧ್ಯವೆ? ಇಲ್ಲ, ಅದು ಖಂಡಿತ ಸಾಧ್ಯವಿಲ್ಲ. ಹಾಗಾಗಿ ಸಾಮಾನ್ಯ ಜ್ಞಾನಾರ್ಜನೆ ಮಹತ್ವದ್ದಾಗಿದ್ದರೂ ಯಾವುದಾದರೂ ಒಂದು ವಿಷಯದಲ್ಲಿ ಪರಿಣತಿ ಪಡೆಯುವುದು ಜೀವನದಲ್ಲಿ ಮಹತ್ವದ ವಿಷಯವಾಗಿದೆ.


    ಸಾಮಾನ್ಯ ಅಭ್ಯರ್ಥಿಗಿಂತಲೂ ಒಬ್ಬ ಪರಿಣಿತ ಅಭ್ಯರ್ಥಿಗೆ ಸಮಾಜದಲ್ಲಿ ಸಾಕಷ್ಟು ಬೆಲೆಯಿದೆ ಅಂತೆಯೇ ಉದ್ಯೊಗ ಪಡೆಯುವ ವಿಷಯದಲ್ಲೂ ಅದು ಹೆಚ್ಚು ನೆರವಿಗೆ ಬರುತ್ತದೆ. ಇದನ್ನು ಅರಿತಿರುವ ಇಂದಿನ ಯುವಜನಾಂಗವು ಹೆಚ್ಚಾಗಿ ಯಾವುದಾದರೂ ವಿಷಯದಲ್ಲಿ ಉನ್ನತ ಶಿಕ್ಷಣ ಅಥವಾ ಸ್ಪೆಷಲೈಸೇಷನ್ ಮಾಡಲು ಬಯಸುತ್ತಾರೆ.




    ಭಾರತದಲ್ಲಿ ಸಾಮಾನ್ಯವಾಗಿ ವಿದ್ಯಾರ್ಥಿಗಳು ಸಾಮಾಜಿಕ, ಕೌಟುಂಬಿಕ ಹಾಗೂ ಸಹವರ್ತಿಗಳ ಒತ್ತಡದಿಂದಾಗಿ ಯಾವುದಾದರೂ ವಿಷಯದಲ್ಲಿ ಪರಿಣತಿ ಹೊಂದುವ ಗುರಿಯನ್ನು ಇಟ್ಟುಕೊಳ್ಳುತ್ತಾರೆ. ಆದರೆ, ಈ ಸಂದರ್ಭದಲ್ಲಿ ಅವರು ತಮ್ಮ ನಿಜವಾದ ಅಭಿರುಚಿಗೆ ಅಥವಾ ಕ್ಷಮತೆಗೆ ತಕ್ಕಂತೆ ಪರಿಣತಿಯ ವಿಷಯವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆಯೇ ಎಂಬುದು ಮುಖ್ಯವಾಗುತ್ತದೆ.


    ಪ್ರತಿಯೊಬ್ಬ ವಿದ್ಯಾರ್ಥಿಗೆ ಅವರದ್ದೇ ಆದ ಒಂದು ವಿಶೇಷ ಕ್ಷಮತೆ ಇರುತ್ತದೆ. ಅದನ್ನು ಅವರು ಅರಿತುಕೊಂಡು ತಮ್ಮ ಪರಿಣತಿಯ ವಿಷಯವನ್ನು ಆಯ್ದುಕೊಂಡಾಗ ಯಶಸ್ಸು ದೊರೆಯುವುದು ಅಷ್ಟೊಂದು ಕಠಿಣವಾಗುವುದಿಲ್ಲ.


    ಎಕನಾಮಿಕ್ಸ್ ವಿಷಯದ ಮಹತ್ವ


    ಭಾರತದಲ್ಲಿ ಸರಳವಾಗಿ ಹೇಳಬೇಕೆಂದರೆ ಅರ್ಥಶಾಸ್ತ್ರ ಸಾಕಷ್ಟು ಮಹತ್ವ ಪಡೆದಿದೆ. ಸಂಸ್ಕೃತದ ಅರ್ಥ ಹಾಗೂ ಶಾಸ್ತ್ರದಿಂದ ಈ ವಿಷಯದ ವ್ಯುತ್ಪತ್ತಿಯಾಗಿದೆ. ಇಲ್ಲಿ ಅರ್ಥ ಎಂಬುದು ಆಬ್ಜೇಕ್ಟಿವ್ ಆಗಿದ್ದು ಸಂಪತ್ತನ್ನು ಸಂಭೋದಿಸಿದರೆ ಶಾಸ್ತ್ರ ಎಂಬುದು ಅಧ್ಯಯನ ಎಂದಾಗಿದೆ.


    ಇದನ್ನೂ ಓದಿ: Top 5 Courses: ಈ 5ರಲ್ಲಿ ಒಂದು ಕೋರ್ಸ್ ಮಾಡಿದ್ರೂ ಕೆಲಸ ಸಿಗೋ ಚಾನ್ಸ್ ದುಪ್ಪಟ್ಟಾಗುತ್ತೆ!


    ಇಂಗ್ಲೀಷ್ ನಲ್ಲಿ ಬಳಸಲಾಗುವ ಎಕನಾಮಿಕ್ಸ್ ಪದವು ಗ್ರೀಕ್ ಭಾಷೆಯ ಒಯ್ಕೊನೋಮಿಯಾದಿಂದ ಬಂದಿದೆ. ಪ್ರಸ್ತಿದ್ಧ ಗ್ರೀಕ್ ತತ್ವಜ್ಞಾನಿ ಆರಿಸ್ಟಾಟಲ್ ಅವರು ಮನೆಯನ್ನು ಆರ್ಥಿಕವಾಗಿ ನಿರ್ವಹಿಸುವುದಕ್ಕೆ ಸಂಬಂಧಿಸಿದಂತೆ ಈ ಪದವನ್ನು ಬಳಕೆಗೆ ತಂದಿದ್ದರು ಎನ್ನುತ್ತದೆ ಇತಿಹಾಸ.


    ಸುಮಾರು ನಾಲ್ಕನೇ ಶತಮಾನದ ಸಂದರ್ಭದಲ್ಲಿ ಅರ್ಥಶಾಸ್ತ್ರವನ್ನು ರಚಿಸಲಾಗಿದ್ದು ಆ ಸಮಯದಲ್ಲಿ ಜಗತ್ತಿನ ಬಹುತೇಕ ದೇಶಗಳು ಕೃಷಿಯ ಮೇಲೆ ಅವಲಂಬಿತವಾಗಿದ್ದವು. ಕ್ರಮೇಣ ಶತಮಾನಗಳು ಸರಿದಂತೆ ಮನುಷ್ಯ ಆರ್ಥಿಕ ವಾತಾವರಣವನ್ನು ಸೃಷ್ಟಿಸಿಕೊಂಡು ಅದರಲ್ಲಿ ಬದುಕನ್ನು ನೆಮ್ಮದಿಯಿಂದ ಬದುಕಲು ಅನುಕೂಲ ಮಾಡಿಕೊಳ್ಳುತ್ತ ಸಾಗಿದ.




    ಅಷ್ಟಕ್ಕೂ ಬಲು ಹಿಂದೆ ಕೃಷಿಯನ್ನೇ ಉತ್ಪನ್ನಶೀಲ ಕ್ಷೇತ್ರವನ್ನಾಗಿ ಪರಿಗಣಿಸಲಾಗಿತ್ತು. ಆದರೆ, ಅರ್ಥ ಶಾಸ್ತ್ರಜ್ಞರಾದ ಆಡಂ ಸ್ಮಿತ್ ಎಂಬುವವರು 1776 ರಲ್ಲಿ ಪ್ರಕಟವಾದ ತಮ್ಮ ಪುಸ್ತಕ The Wealth of Nations ನಲ್ಲಿ ಭೂಮಿ, ಕೂಲಿ ಹಾಗೂ ಬಂಡವಾಳ ಈ ಮೂರು ಅಂಶಗಳನ್ನು ದೇಶದ ಸಂಪತ್ತಿನ ಪ್ರಮುಖ ಮೂರು ಉತ್ಪನ್ನಶೀಲ ವಸ್ತುಗಳೆಂದು ವ್ಯಾಖ್ಯಾನಿಸಿದ್ದಾರೆ.


    ಒಟ್ಟಿನಲ್ಲಿ ಹೇಳಬೇಕೆಂದರೆ ಎಕನಾಮಿಕ್ಸ್ ವಿಷಯವು ಒಬ್ಬ ವಿದ್ಯಾರ್ಥಿಯಲ್ಲಿ ಅವನ/ಅವಳ ಲಾಜಿಕ್, ರೀಸನಿಂಗ್, ಸಮಸ್ಯೆ ಬಗೆ ಹರಿಸುವಿಕೆಯಂತಹ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುತ್ತದೆ. ಮನುಷ್ಯನ ಬದುಕಿನ ಅವಶ್ಯಕತೆಗಳಿಗೆ ಸಂಬಂಧಿಸಿದಂತೆ ಬೇಕಾದ ಆರ್ಥಿಕತೆಯ ಬೇಡಿಕೆಗಳನ್ನು ಸಮಗ್ರವಾಗಿ ತಿಳಿದುಕೊಳ್ಳುವಂತೆ ವಿದ್ಯಾರ್ಥಿಗೆ ಅರ್ಥಶಾಸ್ತ್ರವು ಉತ್ತೇಜನ ನೀಡುತ್ತದೆ.


    ಶಾಲೆಗಳಲ್ಲಿ ಎಕನಾಮಿಕ್ಸ್ ವಿಷಯವನ್ನು ಒಂದು ಸ್ವತಂತ್ರ ಕಲಿಕಾ ವಿಷಯವಾಗಿ ಒಂಭತ್ತನೇ ತರಗತಿಯಲ್ಲಿ ಪರಿಚಯಿಸಲಾಗಿದೆ. ಪದವಿ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ವಿದ್ಯಾರ್ಥಿಯೊಬ್ಬ ಎಕನಾಮಿಕ್ಸ್ ಅಧ್ಯಯನ ಮಾಡಿರಬೇಕೆಂಬ ಕಟ್ಟಳೆ ಇಲ್ಲದಿದ್ದರೂ ಆ ವಿದ್ಯಾರ್ಥಿ ಗಣಿತ ವಿಷಯದಲ್ಲಿ ಉತ್ತಮ ಹಿಡಿತ ಹೊಂದಿರುವುದು ಅನುಕೂಲ. ಏಕೆಂದರೆ, ಎಕನಾಮಿಕ್ಸ್ ವಿಷಯವನ್ನು ಒಂದು ಆರ್ಟ್ ಆಂಡ್ ಸೈನ್ಸ್ ಎಂಬ ಪರಿಕಲ್ಪನೆಯಡಿಯಲ್ಲಿ ನೋಡಲಾಗಿದ್ದರೂ ಅದರಲ್ಲಿ ಗಣಿತದ ಸೂತ್ರಗಳು ವಿಶಾಲವಾಗಿ ಬಳಸಲ್ಪಡುತ್ತವೆ.


    ಎಷ್ಟೆಲ್ಲಾ ಉದ್ಯೋಗಾವಕಾಶಗಳಿವೆ?


    ಹಾಗಾಗಿ ಅರ್ಥಶಾಸ್ತ್ರದಲ್ಲಿ ಸ್ನಾತಕೊತ್ತರ ಡಿಗ್ರಿ ಪಡೆದವರು ಹಲವು ವಿಭಿನ್ನ ಕ್ಷೇತ್ರಗಳಲ್ಲಿ ಉದ್ಯೋಗಗಳನ್ನು ಪಡೆಯಬಹುದಾಗಿದೆ. ಉದಾಹರಣೆಗೆ, ಬ್ಯಾಂಕಿಂಗ್, ಫೈನಾನ್ಸ್, ಇನ್ಶುರೆನ್ಸ್, ಸ್ಟಾಕ್ ಮಾರ್ಕೆಟ್, ಸೇಲ್ಸ್, ಮಾರ್ಕೆಟಿಂಗ್, ಸರ್ಕಾರಿ ಕೆಲಸ, ನೀತಿ ನಿರೂಪಣೆ, ಸಂಶೋಧನೆ ಹಾಗೂ ಬೋಧಕ ವೃತ್ತಿಗಳಲ್ಲಿ ಉತ್ತಮ ಭವಿಷ್ಯವನ್ನು ಕಂಡುಕೊಳ್ಳಬಹುದಾಗಿದೆ. ಪ್ರೊಫಸರ್, ಉಪನ್ಯಾಸಕ, ಪ್ರಾಧ್ಯಾಪಕ ವೃತ್ತಿಗಳನ್ನು ಪಡೆಯಲು ಎಕನಾಮಿಕ್ಸ್ ವಿಷಯದಲ್ಲಿ ಎಂಫಿಲ್ ಅಥವಾ ಪಿಹೆಚ್ಡಿ ಪದವಿಗಳನ್ನು ನಿರೀಕ್ಷಿಸಲಾಗುತ್ತದೆ.

    Published by:Kavya V
    First published: