ಪ್ರತಿಯೊಬ್ಬರೂ ತಮ್ಮ ಜೀವನದ ಒಳ್ಳೆಯ ಕ್ಷಣಗಳನ್ನು ಸೆರೆಹಿಡಿಯಲು ಬಯಸುತ್ತಾರೆ. ಕಳೆದು ಹೋಗುವ ಕ್ಷಣಗಳನ್ನು ಸೆರೆಹಿಡಿದು ಭದ್ರವಾಗಿ ಜೋಪಾನ ಮಾಡುತ್ತಾರೆ. ತಮ್ಮದೇ ಬದುಕಿನ ವಿಶೇಷ ಘಟನೆಗಳ ಫೋಟೋಗಳನ್ನು (Photos) ಹಾಗೂ ವಿಡಿಯೋಗಳನ್ನು (VIDEOS) ಪ್ರೀತಿಸದವರು ಬಹುಶಃ ಯಾರೂ ಇರಲಾರರು. ಫೋಟೋಗ್ರಫಿ (Photography) ಅಥವಾ ಛಾಯಾಗ್ರಹಣವು ವಿಶಿಷ್ಟ ವೃತ್ತಿ. ಕಲ್ಪನೆ, ಕೌಶಲ್ಯ, ಕ್ರಿಯೇಟಿವಿಟಿಯ ಜೊತೆಗೆ ಅಪಾರ ತಾಳ್ಮೆಯನ್ನು ಬಯಸುವ ಈ ವೃತ್ತಿಯು ಕಳೆದ ಕೆಲವು ವರ್ಷಗಳಲ್ಲಿ ಉತ್ತಮ ವೃತ್ತಿಜೀವನದ ಆಯ್ಕೆಯಾಗಿ ಹೊರಹೊಮ್ಮಿದೆ.
ಇಂದು ಸೋಷಿಯಲ್ ಮೀಡಿಯಾ ಗೀಳು ಹೆಚ್ಚಾಗಿದ್ದರಿಂದಲೋ ಏನೋ ಜನರು ವಿಶೇಷ ಸಂದರ್ಭಗಳ ಫೋಟೋಗಳನ್ನು ವೃತ್ತಿಪರರಿಂದ ಮಾಡಿಸುವುದೂ ಹೆಚ್ಚಾಗಿದೆ. ಹಾಗಾಗಿ ಛಾಯಾಗ್ರಾಹಕರ ಟ್ರೆಂಡ್ ಕೂಡ ಹೆಚ್ಚಿದೆ. ನೀವು ಛಾಯಾಗ್ರಹಣದಲ್ಲಿ ನಿಮ್ಮ ವೃತ್ತಿಜೀವನವನ್ನು ಕಂಡುಕೊಂಡರೆ ನೀವು ಹಲವಾರು ಕ್ಷೇತ್ರಗಳಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಅದರಲ್ಲಿ ಮುಖ್ಯವಾದವುಗಳು ಹೀಗಿವೆ:
1) ಈವೆಂಟ್ ಫೋಟೋಗ್ರಫಿ: ಇದು ಯಾವುದೇ ಸಮಾರಂಭದ ಛಾಯಾಗ್ರಹಣವಾಗಿದೆ. ಮದುವೆ, ನಾಮಕರಣಗಳು, ಪಾರ್ಟಿಗಳು, ಜನ್ಮದಿನಗಳು, ನೃತ್ಯ ಕಾರ್ಯಕ್ರಮ, ನಿಶ್ಚಿತಾರ್ಥಗಳಂತಹ ಕಾರ್ಯಕ್ರಗಳಲ್ಲಿ ಸಮಾರಂಭದ ಆಚರಣೆಗಳ ಹಾಗೂ ಅತಿಥಿಗಳ ಫೋಟೋಗಳನ್ನು ಸೆರೆಹಿಡಿಯುವುದನ್ನು ಇದು ಒಳಗೊಂಡಿರುತ್ತದೆ.
ಹಿಮ ಪ್ರದೇಶ, ದಟ್ಟಕಾಡು ಹೀಗೆ ಕೆಲವು ಪ್ರಾಣಿಗಳು ಮತ್ತು ಪಕ್ಷಿಗಳನ್ನು ಸಮೀಪಿಸಲು ಕಷ್ಟವಾಗುತ್ತದೆ. ಹೀಗಾಗಿ ಅವುಗಳ ಚಲನವಲನಗಳನ್ನು ಊಹಿಸಲು ಸಾಧ್ಯವಾಗುವಂತೆ ಪ್ರಾಣಿ ಮತ್ತು ಪಕ್ಷಿಗಳ ನಡವಳಿಕೆಯ ಜ್ಞಾನದ ಅಗತ್ಯವಿದೆ.
ಇದನ್ನೂ ಓದಿ: UPSC Success Story: ಮೊದಲ ಪ್ರಯತ್ನದಲ್ಲೇ, ಕೇವಲ 21 ವರ್ಷಕ್ಕೆ IPS ಅಧಿಕಾರಿಯಾದ ದಿವ್ಯಾ
3) ಪೋರ್ಟ್‌ಫೋಲಿಯೋ: ಪೋರ್ಟ್ಫೋಲಿಯೊಗಳು ಛಾಯಾಗ್ರಾಹಕರ ಅತ್ಯುತ್ತಮ ಕೆಲಸದ ಎಡಿಶನ್‌ಗಳಾಗಿವೆ. ಇವು ಸಾಮಾನ್ಯವಾಗಿ ಕಲಾವಿದರ ಶೈಲಿ ಮತ್ತು ಕಲಾವಿದರ ದೃಷ್ಟಿಕೋನವನ್ನು ಒಳಗೊಂಡಿರುತ್ತವೆ.
ಪೋರ್ಟ್‌ಫೋಲಿಯೋಗಳನ್ನು ಒಳಗೊಂಡ ಛಾಯಾಗ್ರಹಣದ ವೆಬ್‌ಸೈಟ್ ಕಲಾವಿದನಿಗೆ ತಮ್ಮ ಸೇವೆಗಳನ್ನು ಮಾರಾಟ ಮಾಡಲು ಸಹಾಯ ಮಾಡುತ್ತದೆ.
4) ಪ್ರಾಡಕ್ಟ್ ಫೋಟೋಗ್ರಫಿ: ಯಾವುದೇ ಇ-ಕಾಮರ್ಸ್ ವ್ಯವಹಾರಕ್ಕೆ ಉತ್ಪನ್ನದ ಛಾಯಾಗ್ರಹಣ ಅತ್ಯಗತ್ಯ. ಆನ್‌ಲೈನ್ ವ್ಯವಹಾರಗಳಲ್ಲಿ ಗ್ರಾಹಕರಿಗೆ ನಿಮ್ಮ ಉತ್ಪನ್ನಗಳ ವಿವರಗಳನ್ನು ನೀಡಲು ಪ್ರಾಡಕ್ಟ್ ಫೋಟೋಗಳು ಸಹಾಯ ಮಾಡುತ್ತವೆ. ವೃತ್ತಿಪರ ಉತ್ಪನ್ನದ ಫೋಟೋಗಳನ್ನು ಒದಗಿಸುವುದರಿಂದ ನಿಮ್ಮ ಬ್ರ್ಯಾಂಡ್‌ನಲ್ಲಿ ಗ್ರಾಹಕರ ನಂಬಿಕೆಯನ್ನು ಬೆಳೆಸಬಹುದು.
5) ಫ್ಯಾಷನ್ ಫೋಟೋಗ್ರಫಿ : ಇದು ಛಾಯಾಗ್ರಹಣದ ಒಂದು ಪ್ರಕಾರವಾಗಿದೆ. ಇದು ಕಾಸ್ಟ್ಯೂಮ್ ಹಾಗೂ ಇತರ ಫ್ಯಾಶನ್ ಸಂಬಂಧಿತ ವಸ್ತುಗಳನ್ನು ಪ್ರದರ್ಶಿಸಲು ಮೀಸಲಾಗಿರುತ್ತದೆ. ಸೆಲೆಬ್ರಿಟಿಗಳ, ಮಾಡೆಲ್‌ಗಳ ಫ್ಯಾಷನ್ ಫೋಟೋಗ್ರಫಿ ಇಂದು ಅತ್ಯುತ್ತಮ ಆದಾಯ ಗಳಿಸುವ ವೃತ್ತಿಯಲ್ಲಿ ಒಂದಾಗಿದೆ.
ಫೋಟೋಗ್ರಫಿ ಕೋರ್ಸ್‌ಗಳು
ಛಾಯಾಗ್ರಹಣದಲ್ಲಿ ವೃತ್ತಿಪರ ತಂತ್ರಗಳನ್ನು ಕಲಿಯಲು, ಫೋಟೋಗ್ರಫಿ ಕೋರ್ಸ್ ಮಾಡಲು ಬಯಸಿದರೆ, ನೀವು BFA ಫೋಟೋಗ್ರಫಿ ಅಥವಾ MFA ಫೋಟೋಗ್ರಫಿ ಕೋರ್ಸ್ಅನ್ನು ಮಾಡಬಹುದು. ಇವುಗಳ ಹೊರತಾಗಿ, ಅನೇಕ ಬ್ರಿಡ್ಜ್ ಕೋರ್ಸ್‌ಗಳು, ಪ್ರಮಾಣಪತ್ರಗಳು ಮತ್ತು ಡಿಪ್ಲೊಮಾಗಳನ್ನೂ ಸಹ ನೀವು ಮಾಡಬಹುದು.
ಛಾಯಾಗ್ರಹಣವನ್ನು ಅಧ್ಯಯನ ಮಾಡಲು, ನೀವು AJK ಮಾಸ್ ಕಮ್ಯುನಿಕೇಷನ್ ಸೆಂಟರ್, ಹಾಗೆಯೇ ದೆಹಲಿ ಕಾಲೇಜ್ ಆಫ್ ಫೋಟೋಗ್ರಫಿ, AAFT, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ ಅಹಮದಾಬಾದ್ ಮುಂತಾದ ಕಾಲೇಜುಗಳಲ್ಲಿ ಪದವಿ ಪಡೆದುಕೊಳ್ಳಬಹುದು.
ಫೋಟೋಗ್ರಫಿ ಎನ್ನುವುದು ಬಹಳ ಆಸಕ್ತಿದಾಯಕ ಕೆಲಸದ ಪ್ರೊಫೈಲ್ ಆಗಿದ್ದು ಈ ವೃತ್ತಿ ಆಯ್ಕೆ ಮಾಡಿಕೊಂಡವರು ತಿಂಗಳಿಗೆ ಲಕ್ಷಗಳಲ್ಲಿ ಗಳಿಸಬಹುದು. ಇದರಲ್ಲಿ ನೀವು ನಿರ್ದಿಷ್ಟ ಸಂಸ್ಥೆಯೊಂದಿಗೆ ಕೆಲಸ ಮಾಡಬಹುದು. ನಿರ್ದಿಷ್ಟ ಉದ್ಯೋಗದ ಹೊರತಾಗಿ, ನೀವು ಫ್ರಿಲ್ಯಾನ್ಸರ್ ಆಗಿಯೂ ಕೆಲಸ ಮಾಡಬಹುದು. ಹಾಗಾಗಿ ಛಾಯಾಗ್ರಹಣ ನಿಮ್ಮ ಫ್ಯಾಷನ್ ಆಗಿದ್ದರೆ ಖಂಡಿತವಾಗಿಯೂ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಒಳ್ಳೆಯ ವೃತ್ತಿ ಜೀವನ ನಡೆಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ