Social Media: ಫೇಸ್‌ಬುಕ್‌ನಲ್ಲಿ ಸುಮ್ನೆ ಸ್ಕ್ರೋಲ್ ಮಾಡಿ ಟೈಂ ವೇಸ್ಟ್ ಮಾಡ್ಬೇಡಿ, ಇದ್ರಿಂದಾನೇ ಕರಿಯರ್ ಬಿಲ್ಡ್ ಮಾಡ್ಕೊಳ್ಳಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

‌ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲೂ ಸುಮ್ಮನೆ ಯಾರೋ ಮಾಡಿದ ಪೋಸ್ಟ್‌ಗೆ ಲೈಕ್‌, ಕಾಮೆಂಟ್‌ ಮಾಡುತ್ತಾ, ರೀಲ್ಸ್‌ಗಳನ್ನು ಶೇರ್‌ ಮಾಡುತ್ತಾ ಕುಳಿತರೆ ಅದು ಸಮಯ ವ್ಯರ್ಥ. ಇದರ ಬದಲಿಗೆ ಇವುಗಳನ್ನೇ ನಮ್ಮ ವೃತ್ತಿ ಜೀವನಕ್ಕೆ ಸಹಾಯಕವಾಗುವ ಮಾಧ್ಯಮಗಳನ್ನಾಗಿ ಮಾಡಿಕೊಂಡರೆ ಲಾಭವಾಗುತ್ತದೆ.

ಮುಂದೆ ಓದಿ ...
  • Share this:

    ಸಾಮಾಜಿಕ ಜಾಲತಾಣಗಳು (Social Media) ಜನರನ್ನು ತಪ್ಪು ದಾರಿಗೆ ಎಳೆಯುತ್ತಿವೆ ಎಂಬ ಕೆಲ ಕೆಟ್ಟ ಆರೋಪಗಳನ್ನು ಹೊಂದಿದೆ. ಆದರೆ ಕೋವಿಡ್‌ ನಂತರ ಈ ಆರೋಪಗಳು ಸ್ವಲ್ಪ ಬದಲಾಗಿವೆ ಎನ್ನಬಹುದು. ಏಕೆಂದರೆ ಹಲವಾರು ಸಣ್ಣ ಉದ್ಯಮಗಳಿಗೆ ಈ ಸಾಮಾಜಿಕ ಜಾಲತಾಣಗಳು ವೇದಿಕೆಯಾಗಿದ್ದು, ಆದಾಯದ ಮೂಲಗಳಾಗಿವೆ. ಫೇಸ್‌ಬುಕ್‌ (Facebook), ವಾಟ್ಸಾಪ್‌, ಇನ್‌ಸ್ಟಾಗ್ರಾಮ್‌ಗಳನ್ನೇ ವ್ಯಾಪಾದ ವೇದಿಕೆ ಮಾಡಿಕೊಂಡು ಉದ್ಯಮ ಶುರು ಮಾಡಿ ಬದುಕು ಕಟ್ಟಿಕೊಂಡವರು ಒಂದು ಕಡೆಯಾದರೆ, ಇನ್ನೂ ಅವುಗಳನ್ನು ಡಿಜಿಟಲ್‌ ವೇದಿಕೆಯಾಗಿ ಸಹ ಜನ ಕಲಿಯುತ್ತಿದ್ದಾರೆ ಮತ್ತು ಕೆರಿಯರ್‌ (Career) ಕಟ್ಟಿಕೊಂಡಿದ್ದಾರೆ.


    ‌ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲೂ ಸುಮ್ಮನೆ ಯಾರೋ ಮಾಡಿದ ಪೋಸ್ಟ್‌ಗೆ ಲೈಕ್‌, ಕಾಮೆಂಟ್‌ ಮಾಡುತ್ತಾ, ರೀಲ್ಸ್‌ಗಳನ್ನು ಶೇರ್‌ ಮಾಡುತ್ತಾ ಕುಳಿತರೆ ಅದು ಸಮಯ ವ್ಯರ್ಥ. ಇದರ ಬದಲಿಗೆ ಇವುಗಳನ್ನೇ ನಮ್ಮ ವೃತ್ತಿ ಜೀವನಕ್ಕೆ ಸಹಾಯಕವಾಗುವ ಮಾಧ್ಯಮಗಳನ್ನಾಗಿ ಮಾಡಿಕೊಂಡರೆ ಲಾಭ ನೋಡಿ.


    ವೃತ್ತಿಜೀವನದಲ್ಲಿ ಬೆಳೆಯಲು ಸಹಾಯ ಮಾಡಲು ಫೇಸ್‌ಬುಕ್ ಅತ್ಯಂತ ಸಹಾಯಕವಾದ ಸಾಮಾಜಿಕ ಮಾಧ್ಯಮ ಸೈಟ್‌ಗಳಲ್ಲಿ ಒಂದಾಗಿದೆ. ಸುಮ್ಮನೇ ಸ್ಕ್ರೋಲ್‌ ಮಾಡುತ್ತಾ ಕಾಲ ಕಳೆಯುವ ಬದಲು ನಿಮ್ಮ ವೃತ್ತಿಪರ ಗುರಿಗಳನ್ನು ಸಾಧಿಸಲು ನೀವು ಈ ಸಾಮಾಜಿಕ ನೆಟ್‌ವರ್ಕ್ ಅನ್ನು ಬಳಸಬಹುದು.


    ಇದನ್ನೂ ಓದಿ: Artificial Intelligence ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡವರು ನಿಜಕ್ಕೂ ಬುದ್ಧಿವಂತರು; 10 ವೃತ್ತಿ ಅವಕಾಶಗಳು ಹೀಗಿವೆ


    ವೃತ್ತಿಜೀವನದ ಬೆಳವಣಿಗೆಗೆ ಫೇಸ್‌ಬುಕ್ ಬಳಸುವ ಕೆಲವು ಸರಳ ಸಲಹೆಗಳು ಇಲ್ಲಿವೆ.


    1. ಕಲಿಕೆ ಮತ್ತು ಉನ್ನತಿ
    ಫೇಸ್‌ಬುಕ್‌ನಲ್ಲಿ ಕಲಿಕೆಗೆ, ಪರೀಕ್ಷೆ ಬರೆಯಲು ಇಲ್ಲಾ ಇನ್ಯಾವುದೋ ಸಮಾನ ಮನಸ್ಕರರನ್ನು ಹೊಂದಿರುವ ಅನೇಕ ಗ್ರೂಪ್‌ಗಳಿವೆ. ಈ ಗುಂಪುಗಳ ಮೂಲಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು ಕಲಿಯಲು ಫೇಸ್‌ಬುಕ್ ಉಚಿತ ಮಾರ್ಗಗಳನ್ನು ನೀಡುತ್ತದೆ. ಇನ್‌ಫ್ಲುಯೆನ್ಸರ್ ಮಾರ್ಕೆಟಿಂಗ್ ಹಬ್‌ನ ಫೇಸ್‌ಬುಕ್ ಅಂಕಿಅಂಶಗಳು 10 ಮಿಲಿಯನ್ ಫೇಸ್‌ಬುಕ್ ಗುಂಪುಗಳನ್ನು ಹೊಂದಿದ್ದು, ಆಗಸ್ಟ್ 2022 ರ ಹೊತ್ತಿಗೆ 1.8 ಬಿಲಿಯನ್ ಮಾಸಿಕ ಬಳಕೆದಾರರೊಂದಿಗೆ. ಈ ಗುಂಪುಗಳು ಬಳಕೆದಾರರಿಗೆ ಸಮಾನ ಆಸಕ್ತಿ ಹೊಂದಿರುವ ಇತರ ಜನರೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ.


    ನಿಮ್ಮ ಅಗತ್ಯಗಳ ಆಧಾರದ ಮೇಲೆ ನಿರ್ದಿಷ್ಟ ಗುಂಪುಗಳನ್ನು ಹುಡುಕಿ ನೀವು 6,000 ಗುಂಪುಗಳವರೆಗೆ ಸೇರಬಹುದು ಟೆಕ್ ಕೌಶಲ್ಯಗಳನ್ನು ನಿರ್ಮಿಸಲು, ಹೊಸ ವೃತ್ತಿಜೀವನಕ್ಕೆ ಪರಿವರ್ತನೆ ಮಾಡಲು, ಹವ್ಯಾಸವನ್ನು ವೃತ್ತಿಯಾಗಿ ಪರಿವರ್ತಿಸಲು, ಸ್ವತಂತ್ರವಾಗಿ ಹೇಗೆ ಪ್ರಾರಂಭಿಸಬೇಕು ಎಂಬುದನ್ನು ಕಲಿಯಲು, ನಿರ್ದಿಷ್ಟ ಉದ್ಯಮದಲ್ಲಿ ಕೆಲಸ ಮಾಡುವುದು ಮತ್ತು ಹೆಚ್ಚಿನದನ್ನು ತಿಳಿದುಕೊಳ್ಳಲು ಗುಂಪುಗಳು ನಿಮಗೆ ಸಹಾಯ ಮಾಡಬಹುದು.


    ಉದಾಹರಣೆಗೆ ನೀವು ಯಾವುದಾದರೂ ಪರೀಕ್ಷೆ ತೆಗೆದುಕೊಂಡು ಅಧ್ಯಯನ ಮಾಡುತ್ತಿದ್ದರೆ, ನಿಮ್ಮಂತೆಯೇ ಇತರ ಅಭ್ಯರ್ಥಿಗಳಿರುವ ಗುಂಪನ್ನು ಸೇರಿ ನೀವು ಸಹ ಅಲ್ಲಿ ಮಾಹಿತಿಯನ್ನು ಪಡೆಯಬಹುದು.


    2. ವೃತ್ತಿಪರ ನೆಟ್‌ವರ್ಕಿಂಗ್
    ಯಾವುದೇ ಉದ್ಯಮ, ಕಲಿಕೆ, ಹೊಸ ಅವಕಾಶಕ್ಕೆ ವೃತ್ತಿಪರ ನೆಟ್‌ವರ್ಕ್‌ ತುಂಬಾನೇ ಅಗತ್ಯವಾಗಿದೆ. ಸುಮ್ಮನೇ ಬೇಡದನ್ನೇಲ್ಲಾ ನೋಡಿಕೊಂಡು ಕೂರುವ ಬದಲು ಸಾಮಾಜಿಕ ಜಾಲತಾಣಗಳನ್ನು ನಮ್ಮ ವೃತ್ತಿಜೀವನದ ಬೆಳೆವಣಿಗೆಗೆ ಬಳಸಿಕೊಳ್ಳಬಹುದು. ಹೀಗೆ ವೃತ್ತಿಯಲ್ಲಿ ಬೆಳವಣಿಗೆಯಲ್ಲಿ ಏಳಿಗೆ ಕಾಣಲು ಫೇಸ್‌ಬುಕ್‌ ಅನ್ನು ವೃತ್ತಿಪರ ನೆಟ್‌ವರ್ಕಿಂಗ್ ಆಗಿ ಬಳಸಿಕೊಳ್ಳಬಹುದು. ಗುಂಪುಗಳಲ್ಲಿ ನಿಮ್ಮ ಅಭಿಪ್ರಾಯ, ಮಾಹಿತಿ ಅಥವಾ ಕೆಲಸಕ್ಕೆ, ಕಲಿಕೆಗೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ನೀವು ನೆಟ್‌ವರ್ಕ್‌ ಅನ್ನು ಬೆಳಸಬಹುದು.


    3. ಗ್ರಾಹಕರನ್ನು ಸೆಳೆಯಲು
    ಫೇಸ್‌ಬುಕ್‌ ಅತಿದೊಡ್ಡ ಸಂಖ್ಯೆಯಲ್ಲಿ ಬಳಕೆದಾರರನ್ನು ಹೊಂದಿರುವುದರಿಂದ ಉದ್ಯಮಿಗಳಿಗೆ, ವ್ಯಾಪರಸ್ಥರಿಗೆ ಈ ನೆಟ್‌ವರ್ಕ್‌ ಮೂಲಕ ಹೆಚ್ಚು ಗ್ರಾಹಕರನ್ನು ಸೆಳೆಯುವಲ್ಲಿ ಫೇಸ್‌ಬುಕ್‌ ಪರಿಣಾಮಕಾರಿಯಾಗಿದೆ.
    ಫೇಸ್‌ಬುಕ್ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲು ಸು‌ಲಭದ ಮಾರ್ಗವಾಗಿದ್ದು, ನಿಮ್ಮ ಸೇವೆಗಳನ್ನು ಪ್ರಚಾರ ಮಾಡಲು ನಿಮ್ಮದೇ ಸ್ವಂತ ಫೇಸ್‌ಬುಕ್ ಪುಟವನ್ನು ನೀವು ರಚಿಸಬಹುದು. ಜೊತೆಗೆ ಗ್ರಾಹಕರ ಜೊತೆ ಸಂಪರ್ಕ ಸಾಧಿಸಲು Facebook ನ ಜಾಹೀರಾತು ವೈಶಿಷ್ಟ್ಯಗಳ ಲಾಭವನ್ನು ಪಡೆದುಕೊಳ್ಳಬಹುದು.


    4. ಉದ್ಯೋಗ ಹುಡುಕಾಟ
    ಕೇವಲ ವ್ಯಾಪರ, ಕಲಿಕೆಗೆ ಮಾತ್ರವಲ್ಲದೇ ಫೇಸ್‌ಬುಕ್‌ ಅನ್ನು ಉದ್ಯೋಗ ಹುಡಕಾಟದಲ್ಲೂ ಬಳಸಿಕೊಳ್ಳಬಹುದು. ಓದಿನ ನಂತರ ಕೆಲಸಕ್ಕಾಗಿ ಅಲೆಯುವಾಗ ಫೇಸ್‌ಬುಕ್‌ ಸಹಾಯವನ್ನು ಉದ್ಯೋಗಾಂಕ್ಷಿಗಳು ಪಡೆಯಬಹುದು. ಉದ್ಯೋಗವಕಾಶಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಫೇಸ್‌ಬುಕ್‌ನಲ್ಲಿ ಹಲವಾರು ಗುಂಪುಗಳಿವೆ, ಇವುಗಳನ್ನು ಫಾಲೋ ಮಾಡುವ ಮೂಲಕ ಫೇಸ್‌ಬುಕ್‌ ಮುಖಾಂತರ ನೀವು ಕೆಲಸ ಹುಡುಕಬಹುದು,
    ಹಾಗೆಯೇ ನೀವು ನಿರ್ದಿಷ್ಟ ಕಂಪನಿಯಲ್ಲಿ ಕೆಲಸ ಮಾಡಲು ಬಯಸಿದರೆ, ಕಂಪನಿಗೆ ಸಂಬಂಧಿಸಿದ ಫೇಸ್‌ಬುಕ್ ಪುಟವನ್ನು ಅನುಸರಿಸಿ. ಅವರು ಅಲ್ಲಿ ಯಾವುದಾದರು ನೇಮಕಾತಿ ಬಗ್ಗೆ ಪ್ರಕಟಿಸಿದ್ದಲ್ಲಿ ಕೂಡಲೇ ಅರ್ಜಿಯನ್ನು ಸಹ ನೀವು ಅನುಸರಿಸಬಹುದು. ಹಾಗೆಯೇ ಫೇಸ್‌ಬುಕ್‌ನಲ್ಲಿ ನೀವು ನಿಮ್ಮ ರೆಸ್ಯೂಮ್‌ ಅನ್ನು ಕೂಡ ಅಪ್ಲೋಡ್‌ ಮಾಡಬಹುದು.


    ಸಾಂದರ್ಭಿಕ ಚಿತ್ರ


    5. ನಿಮ್ಮ ಬ್ರ್ಯಾಂಡ್ ಪ್ರಚಾರಕ್ಕೆ ಬಳಸಿಕೊಳ್ಳಿ
    ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು, ಬ್ರ್ಯಾಂಡ್ ಪ್ರಚಾರದ ಬಗ್ಗೆ ಹೆಚ್ಚೇನು ಹೇಳುವ ಅಗತ್ಯವಿಲ್ಲ. ಫೇಸ್‌ಬುಕ್‌ ಅಥವಾ ಇನ್ಯಾವುದೋ ಮಾಧ್ಯಮ ತೆರೆದರೆ ಸಾಕು ವಿಷಯಕ್ಕಿಂತ ಹೆಚ್ಚು ಬ್ರ್ಯಾಂಡ್‌ಗಳ ಪ್ರಚಾರ ಹೆಚ್ಚಿರುತ್ತದೆ. ಹೀಗಾಗಿ ನೀವು ಉದ್ಯಮ ಹೊಂದಿದ್ದರೆ ಫೇಸ್‌ಬುಕ್‌ ಅನ್ನು ನಿಮ್ಮ ಉತ್ಪನ್ನದ ಪ್ರಚಾರ ಮಾಧ್ಯಮವಾಗಿ ಬಳಸಿಕೊಳ್ಳಬಹುದು. ಮಾರುಕಟ್ಟೆಯಲ್ಲಿ ಹೆಚ್ಚು ಪ್ರಸ್ತುತಬಾಗಿರಲು ಬಯಸಿದರೆ ನಿಮ್ಮ ವ್ಯಾಪಾರಕ್ಕೆ ಸಂಬಂಧಿಸಿದ ಫೇಸ್‌ಬುಕ್‌ ಅಕೌಂಟನ್ನು ಸಹ ತೆರೆಯಬಹುದು.ಇದು ಗ್ರಾಹಕರ ಜೊತೆ ಹೆಚ್ಚು ಸಂಪರ್ಕದಲ್ಲಿರಲು ಸಹಕಾರಿಯಾಗಿದೆ.


    6. ಉದ್ಯಮ ಪ್ರವೃತ್ತಿಗಳು
    ವೃತ್ತಿಜೀವನದ ಬೆಳವಣಿಗೆ ಕಾಣಲು ಕಂಪನಿಗಳು ಬಯಸುವಂತೆ ಉದ್ಯೋಗಿಗಳು ನವೀಕರಣಗೊಳ್ಳುವುದು ಮುಖ್ಯವಾಗಿದೆ. ಇದು ಉದ್ಯಮದಲ್ಲಿನ ಟ್ರೆಂಡ್‌ಗೆ ನಮ್ಮನ್ನು ತಯಾರು ಮಾಡುತ್ತದೆ. ಉದ್ಯಮ ಲೋಕದಲ್ಲಿ ವೃತ್ತಿ ಪ್ರವೃತ್ತಿ ಹೇಗಿದೆ ಎಂಬುದನ್ನು ಫೇಸ್‌ಬುಕ್‌ ಮೂಲಕವೂ ತಿಳಿಯಬಹುದು.




    ಉದ್ಯಮದಲ್ಲಿ ಏನು ನಡೆಯುತ್ತಿದೆ ಎಂಬುದರ ಕುರಿತು ನಿಮ್ಮನ್ನು ನವೀಕರಿಸಲು, ಆನ್‌ಲೈನ್ ಸುದ್ದಿ ಸೈಟ್‌ಗಳು, ಲಿಂಕ್ಡ್‌ಇನ್‌ನಲ್ಲಿ ಮತ್ತು ಕಂಪನಿಯ Facebook ಪುಟಗಳನ್ನು ಫಾಲೋ ಮಾಡಬಹುದು. ನಿಮ್ಮ ಉದ್ಯಮದಲ್ಲಿನ ಇತ್ತೀಚಿನ ಉತ್ಪನ್ನಗಳು, ತಂತ್ರಗಳು, ಸಮಸ್ಯೆಗಳು ಮತ್ತು ಅಭಿಪ್ರಾಯಗಳ ಬಗ್ಗೆ ಕಲಿಯುವುದು ವೃತ್ತಿ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.

    Published by:Prajwal B
    First published: