Artificial Intelligence: ಮಹತ್ವ ಪಡೆದುಕೊಳ್ಳುತ್ತಿರುವ Artificila Intelligence, ಇದ್ರಿಂದ ವೃತ್ತಿಜೀವನದ ಮೇಲಾಗುತ್ತಾ ಪರಿಣಾಮ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೃತಕ ಬುದ್ಧಿಮತ್ತೆಯು ಪ್ರವರ್ಧಮಾನಕ್ಕೆ ಬರುತ್ತಿದೆಯಾದರೂ, ಎಲ್ಲೋ ಒಂದು ಕಡೆ ಇದು ಮಾನವ ಸಂಪನ್ಮೂಲದ ಮೇಲೆ ಪರಿಣಾಮ ಬೀರುತ್ತಿದೆ ಎನ್ನಬಹುದು.

  • Share this:

ಜಗತ್ತಿನಾದ್ಯಂತ AI- ಆಧಾರಿತ ತಂತ್ರಜ್ಞಾನ ಪ್ರಸ್ತುತ ಮುಂಚೂಣಿಯಲ್ಲಿದೆ. ಅದರಲ್ಲೂ ಈ ಚಾಟ್‌ಜಿಪಿಟಿ ಬಂದ ಮೇಲಂತೂ ಈ ವಲಯದಲ್ಲಿ ದೊಡ್ಡ ಕ್ರಾಂತಿಯೇ ಆಗುತ್ತಿದೆ. ಇಂದು ಈ ಕೃತಕ ಬುದ್ಧಿಮತ್ತೆ (Artificial Intelligence) ಪ್ರತಿಯೊಂದು ಕ್ಷೇತ್ರದಲ್ಲೂ ತನ್ನ ಕಬಂಧ ಬಾಹು ಆವರಿಸಿದ್ದು, AI- ಆಧಾರಿತ ತಂತ್ರಜ್ಞಾನ ಇಲ್ಲದಿದ್ದರೇ ಜಗತ್ತೇ ನಿಂತು ಬಿಡುತ್ತದೆ ಎನ್ನುವಷ್ಟರ ಮಟ್ಟಿಗೆ ಇದು ಪ್ರತಿ ವಲಯದಲ್ಲೂ ಹಾಸುಹೊಕ್ಕಿದೆ. ಕೃತಕ ಬುದ್ಧಿಮತ್ತೆ ಸಾಧಕ-ಬಾಧಕಗಳೆರಡನ್ನೂ ಹೊಂದಿದೆ. ತಂತ್ರಜ್ಞಾನ ವಲಯದಲ್ಲಿ ಅಭಿವೃದ್ಧಿ ಹೊಂದಲು ಇದು ಉಪಯುಕ್ತವಾಗಿದ್ದರೆ, ಇನ್ನೊಂದು ರೀತಿಯ ಉದ್ಯೋಗ (Job) ಬಿಕ್ಕಟ್ಟಿಗೂ ಇದು ಕಾರಣವಾಗಿದೆ. ಕೃತಕ ಬುದ್ಧಿಮತ್ತೆಯು ಪ್ರವರ್ಧಮಾನಕ್ಕೆ ಬರುತ್ತಿದೆಯಾದರೂ, ಎಲ್ಲೋ ಒಂದು ಕಡೆ ಇದು ಮಾನವ ಸಂಪನ್ಮೂಲದ ಮೇಲೆ ಪರಿಣಾಮ ಬೀರುತ್ತಿದೆ ಎನ್ನಬಹುದು.


ಏನಿದು ಕೃತಕ ಬುದ್ಧಿಮತ್ತೆ?


ಕೃತಕ ಬುದ್ಧಿಮತ್ತೆ ಎನ್ನುವುದು ಕಂಪ್ಯೂಟರ್‌ ಮೂಲಕ ನಿಯಂತ್ರಿಸಲಾಗುವ ಕಂಪ್ಯೂಟರ್ ಅಥವಾ ರೋಬೋಟ್‌ಗೆ ಮಾನವರು ಮಾಡುವ ಕಾರ್ಯಗಳನ್ನು ಮಾಡಲು ಮಾನವ ಬುದ್ಧಿವಂತಿಕೆ ಮತ್ತು ವಿವೇಚನೆಯ ಅಗತ್ಯವಿರುವ ಸಾಮರ್ಥ್ಯವಾಗಿದೆ.


ಕೃತಕ ಬುದ್ಧಿಮತ್ತೆ ಅದರ ಸಾಮರ್ಥ್ಯಗಳಿಂದಾಗಿ ಈಗ ಎಲ್ಲಾ ರಂಗದಲ್ಲೂ ಮುನ್ನುಗ್ಗುತ್ತಿದೆ. ಆದರೆ ಈ ಲಗಾಮು ಇಲ್ಲದ ಓಡುವಿಕೆಯನ್ನು ತಜ್ಞರು ಅಪಾಯ ಅಂತಾನೂ ಎಚ್ಚರಿಸುತ್ತಿದ್ದಾರೆ.


ಅಷ್ಟೇ ಅಲ್ಲ AI- ಆಧಾರಿತ ತಂತ್ರಜ್ಞಾನವು ಜನರ ಉದ್ಯೋಗಗಳನ್ನು ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಕಳವಳವನ್ನೂ ಕೂಡ ವ್ಯಕ್ತಪಡಿಸುತ್ತಿದ್ದಾರೆ.


* ಉದ್ಯೋಗಗಳನ್ನು ಬದಲಿಸುವುದೇ ಅಥವಾ ಸೃಷ್ಟಿಸುವುದೇ?


ಈ ತಂತ್ರಜ್ಞಾನ ಕೆಲವು ಉದ್ಯೋಗಗಳನ್ನು ಬದಲಾಯಿಸುತ್ತದೆಯೇ ಎಂಬ ಪ್ರಶ್ನೆಗೆ ಪರಿಣಿತರು ಹೌದು ಎಂದು ಉತ್ತರಿಸಿದ್ದಾರೆ. ಕೃತಕ ಬುದ್ಧಿಮತ್ತೆಯಲ್ಲಿನ ಬೆಳವಣಿಗೆ ಹೆಚ್ಚಾದಂತೆ ಉದ್ಯೋಗಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಸಿಂಗಾಪುರ್ ಮ್ಯಾನೇಜ್‌ಮೆಂಟ್ ವಿಶ್ವವಿದ್ಯಾಲಯದ ಮಾಹಿತಿ ವ್ಯವಸ್ಥೆಗಳ ಪ್ರೊಫೆಸರ್ ಸ್ಟೀವನ್ ಮಿಲ್ಲರ್ ಹೇಳುತ್ತಾರೆ.


ಇದನ್ನೂ ಓದಿ: ಹುಲಿ ರೀತಿ ಬೇಟೆಯಾಡುತ್ತೇನೆ, ಅದೆಷ್ಟು ಜಿಂಕೆಗಳು ಮನೆಗೆ ಹೋಗುತ್ತವೆ ಕಾದು ನೋಡಿ; ಮಾಜಿ ಸಚಿವರ ವಾರ್ನಿಂಗ್


"ಭೌತಿಕ ಯಂತ್ರಗಳು, ಸಾಫ್ಟ್‌ವೇರ್ ವ್ಯವಸ್ಥೆಗಳು ಮತ್ತು ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್‌ಗಳ ಸಂಯೋಜನೆಗಳು AI- ಸಕ್ರಿಯಗೊಳಿಸುವಿಕೆಯ ಪರಿಣಾಮವಾಗಿ ಹೆಚ್ಚು ಸಾಮರ್ಥ್ಯವನ್ನು ಪಡೆದುಕೊಳ್ಳುವುದರಿಂದ, ಇಂದಿನ ಮಾನವ ಕೆಲಸದ ಹೆಚ್ಚಿನ ಪಾಲನ್ನು ಯಂತ್ರಗಳೇ ಮಾಡುತ್ತಿದ್ದು, ಉದ್ಯೋಗಿಗಳ ಕೆಲಸವನ್ನು ತಂತ್ರಜ್ಞಾನ, ಯಂತ್ರ ಬದಲಾಯಿಸಿವೆ" ಎಂದು ಅವರು ಹೇಳಿದರು.


ಈ ಮೂಲಕ ಉದ್ಯೋಗ ಸೃಷ್ಟಿಯ ಕಾರಣಕ್ಕಿಂತ ಉದ್ಯೋಗ ಬದಲು ಮಾಡುತ್ತಿದೆ ಕೃತಕ ಬುದ್ಧಿಮತ್ತೆ ಎನ್ನುವುದು ಕೆಲವರ ವಾದ.


* ಉದ್ಯೋಗ ನಷ್ಟದ ಭಯ


ಉದ್ಯೋಗಿಗಳು ಈ ಚಾಟ್‌ಜಿಪಿಟಿಯಂತಹ ಹೆಚ್ಚಿನ ಸುಧಾರಿತ ತಂತ್ರಜ್ಞಾನ ಬಂದಾಗಿನಿಂದ ಉದ್ಯೋಗಗಳ ಬಗ್ಗೆ ಹೆಚ್ಚು ಕಳವಳ ವ್ಯಕ್ತಪಡಿಸುವಂತಾಗಿದೆ. ಹೆಚ್ಚಿನ ತಾಂತ್ರಿಕ ಪ್ರಗತಿಗಳಂತೆ, ಕೆಲಸಗಾರರಲ್ಲಿ ಉದ್ಯೋಗ ನಷ್ಟ ಮತ್ತು ಸ್ಥಳಾಂತರದ ಭಯವು ಹೆಚ್ಚಾಗಿದೆ ಎಂದು ವರದಿಗಳು ತಿಳಿಸಿವೆ.


ಹೊಸ ತಂತ್ರಜ್ಞಾನ ಪರಿಚಯವಾದಾಗ ಉದ್ಯೋಗಗಳು ಬದಲಾಗುವುದು ಸೇರಿ ಈ ಪ್ರಕ್ರಿಯೆ ಹೊಸದೇನಲ್ಲ, ಇದು ಶತಮಾನಗಳಷ್ಟು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಉದ್ಯೋಗ ಬದಲಾದರೆ, ಅವುಗಳ ಬದಲಿಗೆ ಇತರ ಪಾತ್ರಗಳನ್ನು ರಚಿಸಲಾಗಿದೆ ಎಂದು ಮಿಲ್ಲರ್ ಹೇಳುತ್ತಾರೆ.


* ಉದ್ಯೋಗದಲ್ಲಿ ದಕ್ಷತೆ ಹೆಚ್ಚಿಸಲು AI ಬಳಕೆ


ಪ್ರಪಂಚದಾತ್ಯಂತ ಈ ತಂತ್ರಜ್ಞಾನ ಹಾಸು ಹೊಕ್ಕಿರುವಾಗ ಅದನ್ನು ಮೈಗೂಡಿಸಿಕೊಳ್ಳುವ ಪ್ರಯತ್ನ ಮಾಡುವುದು ಅನಿವಾರ್ಯ. ಮಾನವರ ಕೆಲಸವನ್ನು ಸಂಪೂರ್ಣವಾಗಿ ಸ್ವಯಂಚಾಲಿತಗೊಳಿಸುವುದಕ್ಕಿಂತ ಮಾನವ ಉದ್ಯೋಗಿಗಳ ಕೆಲಸವನ್ನು ಹೆಚ್ಚಿಸಲು AI ಅನ್ನು ಬಳಸಿಕೊಳ್ಳಬೇಕಾಗಿದೆ. ಅನೇಕ ವ್ಯವಹಾರಗಳು ದಕ್ಷತೆಯನ್ನು ಹೆಚ್ಚಿಸಲು ಅಥವಾ ಉದ್ಯೋಗಿಗಳನ್ನು ಬೆಂಬಲಿಸಲು AI ಅನ್ನು ಬಳಸುತ್ತಿವೆ.




* ಕೌಶಲ್ಯ ಕಲಿಸುತ್ತದೆ


ಕೆಲಸದಲ್ಲಿ ತಂತ್ರಜ್ಞಾನ ಎಂದರೆ ಹೊಸ ಹೊಸ ಕೌಶಲ್ಯಗಳನ್ನು ಕಲಿಯಬೇಕಾಗುತ್ತದೆ. ಈ ದೃಷ್ಟಿಯಲ್ಲಿ ಕೃತಕ ಬುದ್ಧಿಮತ್ತೆ ಉದ್ಯೋಗಿಗಳಿಗೆ ಹಲವು ಕೌಶಲ್ಯಗಳನ್ನು ಕಲಿಸಿ ಕೊಡುತ್ತದೆ.


ಇದು ಉದ್ಯೋಗಿಗಳಿಗೆ ಶಿಕ್ಷಣ ನೀಡುವುದು, ಕೌಶಲ್ಯ ಮತ್ತು ಮರುಕೌಶಲ್ಯವನ್ನು ಹೆಚ್ಚಿಸಲು ಸಹಾಯ ಮಾಡುವುದು ಮತ್ತು AI ತಂತ್ರಜ್ಞಾನವನ್ನು ಜವಾಬ್ದಾರಿಯುತ ರೀತಿಯಲ್ಲಿ ಬಳಸುವ ಬಗ್ಗೆ ಚೌಕಟ್ಟುಗಳನ್ನು ರಚಿಸುವುದನ್ನು ಕಲಿಸುತ್ತದೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು