Mid-career women: ವೃತ್ತಿ ಜೀವನದ ಮಧ್ಯದಲ್ಲಿ ಮಹಿಳೆಯರ ಕೆಲ್ಸಕ್ಕೆ ಬ್ರೇಕ್ ಹಾಕೋರು ಯಾರು?

Workplace Biases that Derail Mid-Career Women: ಶಿಕ್ಷಣ ಮುಗಿದ ತಕ್ಷಣ ಕೆಲಸಕ್ಕೆ ಸೇರೋದು, ಕೆಲಸ ಮಾಡೋದು ಒಂದು ರೀತಿಯಾದರೆ, ಮದುವೆ ಮಕ್ಕಳಾದ ಮೇಲೆ ಉದ್ಯೋಗ ಮಾಡೋದು ಮತ್ತೊಂದು ರೀತಿ. ಈ ರೀತಿಯ ಅನೇಕ ಕಷ್ಟಗಳನ್ನು ಎದುರಿಸುವಂತಹ ಮಹಿಳೆಯರಿಗೆ ಒಂದಷ್ಟು ಮಾತುಗಳು ಇಲ್ಲಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಹಿಳೆ ಸ್ವತಂತ್ರವಾಗಿರಬೇಕು  (Independent) ಎಂದರೆ ಉದ್ಯೋಗ ಮಾಡೋದು ಅನಿವಾರ್ಯ. ಶಿಕ್ಷಣ ಮುಗಿದ ತಕ್ಷಣ ಕೆಲಸಕ್ಕೆ ಸೇರೋದು. ಕೆಲಸ ಮಾಡೋದು ಒಂದು ರೀತಿಯಾದರೆ, ಮದುವೆ ಮಕ್ಕಳಾದ ಮೇಲೆ ಉದ್ಯೋಗ ಮಾಡೋದು ಮತ್ತೊಂದು ರೀತಿ.  ಮೊದಲನೆಯ ಹಂತದಲ್ಲಿ ಆರಾಮಾಗಿ ಮಾಡುವ ಮಹಿಳೆಯು ಉದ್ಯೋಗದ ಮಧ್ಯದ ಅವಧಿಯಲ್ಲಿ ಅಂದರೆ ಗ್ರಾಜ್ಯುಯೇಷನ್  (Graduation) ಮುಗಿದು 10 ವರ್ಷಗಳ ನಂತರ ಅಥವಾ ಒಂದು ಲಾಂಗ್‌ ಬ್ರೇಕ್‌ ತೆಗೆದುಕೊಂಡ ನಂತರ ಉದ್ಯೋಗ ( Employment)  ಮಾಡುವುದಕ್ಕೂ ತುಂಬ ವ್ಯತ್ಯಾಸ ಕಾಣುತ್ತಾಳೆ. ಉದ್ಯೋಗ ಹುಡುಕೋದಕ್ಕೇ ಸಾಕಷ್ಟು ತೊಡಕನ್ನು ಅನುಭವಿಸೋ ಮಧ್ಯ ಮಯಸ್ಸಿನ ಮಹಿಳೆ, ಹುಡುಕಿಕೊಂಡ ಉದ್ಯೋಗವನ್ನು ನಿಭಾಯಿಸೋಕೆ ಇನ್ನಷ್ಟು ಕಷ್ಟ ಪಡುತ್ತಾಳೆ.

ಇತ್ತೀಚಿಗೆ ಇದೇ ವಿಷಯದ ಮೇಲೆ ಹಾರ್ವರ್ಡ್‌ ವಿಶ್ವವಿದ್ಯಾಲಯ ಸಂಶೋಧನೆ ನಡೆಸಿದೆ. ಈ ಸಂಶೋಧಕರು ಯಾಕೆ ಕೆಲಸದ ಮಧ್ಯಾವಧಿ ಅಥವಾ ಬ್ರೇಕ್‌ ತೆಗೆದುಕೊಂಡ ಬಳಿಕ ಮಾಡುವ ಕೆಲಸದ ಮೇಲೆ ಮಹಿಳೆಯರನ್ನು ಹಾದಿ ತಪ್ಪಿಸುವ ಅತಿಮುಖ್ಯ ವಾದ ಸಮಸ್ಯೆಗಳು ಯಾವವು ಅನ್ನೋದ್ರ ಬಗ್ಗೆ ಹೇಳಿದ್ದಾರೆ.

ಈ ಸಂಶೋಧನೆಗಾಗಿ ಪ್ರಪಂಚದಾದ್ಯಂತ 100ಕ್ಕೂ ಹೆಚ್ಚು ಹಿರಿಯ ಕಾರ್ಯನಿರ್ವಾಹಕ ಮಹಿಳೆಯರನ್ನು ಬಳಸಿಕೊಳ್ಳಲಾಗಿದೆ. ತಮ್ಮ ವೃತ್ತಿಜೀವನದಲ್ಲಿ ಯಾವ ಹಂತದಲ್ಲಿ ಅವರು ಹೆಚ್ಚು ತಾರತಮ್ಯವನ್ನು ಎದುರಿಸಿದರು ಎಂಬುದನ್ನು ತಿಳಿಸಲು ಕೇಳಲಾಯಿತು.

ಅರ್ಧದಷ್ಟು ಜನರು ನಮಗೆ ವೃತ್ತಿಜೀವನದ ಮಧ್ಯದಲ್ಲಿ ಲಿಂಗ ತಾರತಮ್ಯವನ್ನು ಹೆಚ್ಚಾಗಿ ಅನುಭವಿಸಿದ್ದಾಗಿ ಹೇಳಿದ್ದಾರೆ. ಅಂದರೆ, ಸರಿಸುಮಾರು ಅವರ 30 ರಿಂದ 40 ವರ್ಷ ವಯಸ್ಸಿನಲ್ಲಿ ಅಂತ ಹೇಳಿದ್ದಾರೆ.

ಇದನ್ನೂ ಓದಿ: ವೃತ್ತಿಜೀವನದಲ್ಲಿ ಕಾಣಿಸಿಕೊಳ್ಳುವ ಮಿಡ್‌-ಲೈಫ್‌ ಸಮಸ್ಯೆಯನ್ನು ಪರಿಹರಿಸುವುದು ಹೇಗೆ?

2021 ರಲ್ಲಿ ಈ ಬಗ್ಗೆ ಒಂದು ಸಂಶೋಧನೆಯನ್ನ ನಡೆಸಲಾಗಿತ್ತು. ಕಳೆದ 10 ರಿಂದ 20 ವರ್ಷಗಳ ಹಿಂದೆ ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಿಂದ ಪದವಿ ಪಡೆದ ಮಹಿಳೆಯರನ್ನು ಸಮೀಕ್ಷೆ ನಡೆಸಲಾಗಿತ್ತು.

ಆಗ ನಡೆದ ಆ ಸಮೀಕ್ಷೆಯ ಪ್ರಕಾರ ಕೆಲಸದ ಸ್ಥಳದಲ್ಲಿ ಅವರ ವಿರುದ್ಧ ಲಿಂಗ ಪಕ್ಷಪಾತವು ಅತಿಹೆಚ್ಚು ಕಂಡುಬಂದಿದ್ದಾಗಿ ಅವರು ತಿಳಿಸಿದ್ದರು. ಅಲ್ಲದೇ ಅವರು ಪದವಿ ಪಡೆದಾಗ ಎಷ್ಟಿತ್ತೋ ಅದಕ್ಕಿಂತಲೂ ಮೂರು ಪಟ್ಟು ಹೆಚ್ಚಾಗಿರುವುದಾಗಿ ಅವರು ತಿಳಿಸಿದ್ದರು.

ಅಲ್ಲದೇ ಇದರಿಂದ ತಿಳಿದು ಬಂದಿದ್ದೇನೆಂದರೆ ಮಿಡ್‌ ಕೆರರಿಯರ್‌ ನಲ್ಲಿ ಮುಖ್ಯವಾಗಿರುವ ಮೂರು ಸಮಸ್ಯೆಗಳೇನೆಂದರೆ ತಪ್ಪು ಊಹೆಗಳು, ಗಮನ ಹರಿಸದೇ ಇರೋದು ಮತ್ತು ಅಸಮಾನ ಪ್ರವೇಶ.

ತಪ್ಪು ಊಹೆಗಳು

ಕೆಲಸದ ಸ್ಥಳಗಳಲ್ಲಿ ಲಿಂಗ ತಾರತಮ್ಯ ಇಲ್ಲ ಅಂತ ಎಷ್ಟು ಹೇಳಿದರೂ ಅದು ಇದ್ದೇ ಇರುತ್ತದೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ. ಇಲ್ಲಿ ಬರುವ ಸರಿಯಲ್ಲದ ಊಹೆಗಳು ವೃತ್ತಿಜೀವನದ ಮಧ್ಯದಲ್ಲಿ ಮಹಿಳೆಯರಿಗೆ ಅಡ್ಡಿಯಾಗುತ್ತವೆ.

ವೃತ್ತಿ ಜೀವನದಲ್ಲಿ ಸಕ್ರೀಯರಾಗಿರುವ ಮಹಿಳೆಯರು ಪುರುಷರಿಗಿಂತ ಕಡಿಮೆ ಬದ್ಧತೆ ಹೊಂದಿರುತ್ತಾರೆ ಅನ್ನೋದು ಸಾಮಾನ್ಯವಾದ ತಪ್ಪು ಊಹೆ. ಇದೇ ತಪ್ಪು ಊಹೆಯು ಮಹಿಳೆಯರಿಗೆ ತೊಡಕಾಗಿದೆ.How To Women Unequal Access her work place, Removing Mid-Career Barriers,3 Workplace Biases that Derail Mid-Career Women,Protect her Self, ಮಹಿಳೆ ತನಗೆ ತಾನು ಹೇಗೆ ಧೈರ್ಯವನ್ನು ಹೇಳಿಕೊಳ್ಳಬೇಕು, ಕೆಲಸ ಮಾಡುವ ಸ್ಥಳದಲ್ಲಿ ಭಯ ಬೇಡ, Kannada News, Karnataka News
ಸಾಂದರ್ಭಿಕ ಚಿತ್ರ


ಇದು ನೇಮಕಾತಿ, ಬಡ್ತಿ ಮತ್ತು ವೇತನದ ವಿಷಯಕ್ಕೆ ಬಂದಾಗ ಮಹಿಳೆಯರ ವಿರುದ್ಧ ತಾರತಮ್ಯಕ್ಕೆ ಕಾರಣವಾಗುತ್ತದೆ ಎಂದು ಅಧ್ಯಯನಗಳು ಕಂಡುಕೊಂಡಿವೆ. ತಜ್ಞರು ಈ ರೀತಿಯ ತಾರತಮ್ಯವನ್ನು "ಮಾತೃತ್ವದ ದಂಡ" ( Penalty of Motherhood) ಎಂದು ಕರೆಯುತ್ತಾರೆ.

ಗಮನ ಹರಿಸದೇ ಇರೋದು

ಇನ್ನು ಗಮನ ಹರಿಸದೇ ಇರೋದು ಮಧ್ಯ ವೃತ್ತಿಜೀವನದ ಮತ್ತೊಂದು ಸಮಸ್ಯೆ        ಎನ್ನುತ್ತದೆ ಸಂಶೋಧನೆ. ಮಹಿಳೆಯ ಸಾಧನೆ ಮೇಲೆ ಅಥವಾ ಅವರು ಮಾಡುವ ಕೆಲಸದ ಮೇಲೆ ಸಮಸ್ಯೆ ಹೊಂದಿ ಸರಿಯಾಗಿ ಗಮನಿಸದೇ ಇರೋದು.

ಅಲ್ಲದೇ ಮಹಿಳಾ ಉದ್ಯೋಗಿಯ ಕೆಲಸವನ್ನು ಗುರುತಿಸದೇ ಇರುವುದು. ಪುರುಷ ಉದ್ಯೋಗಿಗಳಿಗಿಂತಲೂ ಚೆನ್ನಾಗಿ ಬದ್ಧತೆಯಿಂದ ಕೆಲಸ ಮಾಡಿದರೂ ಅದನ್ನು ಮಹಿಳೆ ಮಾಡಿದ್ದ ಕಾರಣಕ್ಕಾಗಿ ಅದನ್ನು ಗಮನಿಸದಿರುವುದು ಕಂಡುಬಂದಿದೆ.

ಇದನ್ನೂ ಓದಿ: IMBನಿಂದಲೂ ವಾರ್ನಿಂಗ್: ಏನಿದು ಐಟಿ ಉದ್ಯೋಗಿಗಳ ಮೂನ್ ಲೈಟಿಂಗ್ ಕಳ್ಳಾಟ?

ಸಮಾನವಲ್ಲದ ಪ್ರವೇಶ

ಸಮಾನವಲ್ಲದ ಪ್ರವೇಶ ಅನ್ನೋದು ಮಹಿಳೆಯರಿಗೆ ವೃತ್ತಿಜೀವನದ ಮಧ್ಯದಲ್ಲಿ ಎದುರಾಗುವ ತಾರತಮ್ಯ. ಸಾಮಾನ್ಯವಾಗಿ ಆಫೀಸ್‌ ಗಳಲ್ಲಿ ಎಲ್ಲೋ ಪಾರ್ಟಿಗಳಿಗೆ ಅಥವಾ ಊಟಕ್ಕೆ, ಗಾಲ್ಫ, ಟೆನ್ನಿಸ್‌ ಮುಂತಾದ ಕ್ರೀಡೆಗಳಿಗೆ ಅಥವಾ ಕ್ಲೈಂಟ್‌ ಗಳೊಂದಿಗೆ ಮೀಟಿಂಗ್‌ ಗಳಿಗೆ ಅವರು ಹೆಚ್ಚಾಗಿ ಪುರುಷ ಉದ್ಯೋಗಿಗಳನ್ನೇ ಆಯ್ಕೆ ಮಾಡುತ್ತಾರೆ.ಇದೊಂದು ಉದಾಹರಣೆ.

ಇಂಥ ಅನೇಕ ಅಸಮಾನ ಪ್ರವೇಶಗಳನ್ನು ತಾವು ಅನುಭವಿಸಿರೋದಾಗಿ ಸಂಶೋಧನೆಯ ಪಾಲ್ಗೊಂಡ ಎಕ್ಸಿಕ್ಯೂಟಿವ್‌ ಮಹಿಳಾ ಉದ್ಯೋಗಿಗಳು ಹೇಳಿದ್ದಾರೆ.

ಇವಿಷ್ಟು ಮಹಿಳೆಯರಿಗೆ ಮಧ್ಯ ವೃತ್ತಿ ಜೀವನದಲ್ಲಿ ಅಡ್ಡಿಯಾಗುವ ಅಂಶಗಳು. ಇದರ ಹೊರಾತಾಗಿಯೂ ಅನೇಕ ಸಮಸ್ಯೆಗಳನ್ನು ಆಕೆ ಎದುರಿಸುತ್ತಾಳೆ.

ಆದರೆ, ಎಲ್ಲ ಕಡೆಗಳಲ್ಲೂ ಹೀಗೆಯೇ ಇರುತ್ತದೆ ಅಂತ ಹೇಳೋದಿಕ್ಕೆ ಬರೋದಿಲ್ಲ. ಇವೆಲ್ಲವನ್ನೂ ಮೀರಿ ವೃತ್ತಿ ಜೀವನದಲ್ಲಿ ಸಾಧನೆ ಮಾಡೋದೇ ಅಂಥ ಪ್ರತಿಭಾವಂತ ಮಹಿಳೆಯರಿಗೆ ಇರುವ ಸವಾಲು.
First published: