ಮನೆಯಿಂದ ಕಚೇರಿ ಕೆಲಸಗಳನ್ನು (Work From Home) ನಿರ್ವಹಿಸುವ ತಾಯಂದಿರು/ಮಹಿಳೆಯರು ಅನೇಕ ಸವಾಲುಗಳನ್ನು (Challenge) ಎದುರಿಸುತ್ತಲೇ ಇರುತ್ತಾರೆ. ಮನೆಗೆಲಸದೊಂದಿಗೆ ಕಚೇರಿ ಕೆಲಸಗಳನ್ನು ನಿರ್ವಹಿಸುವ ತಾಯಂದಿರು ಮಗುವಿನ ಲಾಲನೆ ಪಾಲನೆಗಳನ್ನು ಕೂಡ ಮಾಡಬೇಕಾಗುತ್ತದೆ. ಮಗುವಿನ ಪೋಷಣೆ, ಮನೆಗೆಲಸದಲ್ಲಿ ಮಹಿಳೆಯರಿಗೆ ನೆರವು ದೊರೆಯುವುದು ತುಂಬಾ ಕಡಿಮೆ. ಕೆಲವೊಮ್ಮೆ ಎಲ್ಲವನ್ನೂ ಆಕೆಯೇ ನಿಭಾಯಿಸಬೇಕಾದ ಒತ್ತಡ ಇರುತ್ತದೆ. ಆದರೂ ಸವಾಲುಗಳನ್ನು ಎದುರಿಸಿಕೊಂಡೇ ಅಮ್ಮಂದಿರು (MOTHERS) ಎಲ್ಲವನ್ನೂ ನಿಭಾಯಿಸುತ್ತಾರೆ. ಆದರೆ ಇದು ಮಹಿಳೆಯರಿಗೆ ಹೆಚ್ಚಿನ ಹೊರೆಯನ್ನು ಉಂಟುಮಾಡುತ್ತದೆ ಎಂಬುದು ಪರಿಣಿತರ ಸಲಹೆಯಾಗಿದೆ.
ಕಚೇರಿ ಕೆಲಸದಲ್ಲಿ ಹೆಚ್ಚಿನ ಸ್ವಾತಂತ್ರ್ಯ ಇದೆ
ಕೋವಿಡ್ ಸಮಯದಲ್ಲಿ ಹೆಚ್ಚಿನ ಸಂಸ್ಥೆಗಳು ವರ್ಕ್ ಫ್ರಮ್ ಹೋಮ್ ಆಯ್ಕೆಯನ್ನು ನೀಡಿವೆ. ಆದರೆ ಮನೆಯಿಂದ ಕೆಲಸ ಮಾಡುವ ಸೌಲಭ್ಯವು ಮಹಿಳೆಯರಿಗೆ ಹೆಚ್ಚಿನ ಒತ್ತಡವನ್ನು ಉಂಟು ಮಾಡುತ್ತದೆ ಎಂದು ಮೆಕೆನ್ಸಿ ವರದಿಯಾದ ವುಮೆನ್ ಇನ್ ದ ವರ್ಕ್ಪ್ಲೇಸ್ 2022 ವರದಿ ಸೂಚಿಸಿದೆ.
ಕಚೇರಿಗೆ ಬಂದು ಕಾರ್ಯನಿರ್ವಹಿಸುವುದು ಮಹಿಳೆಯರಿಗೆ ಹೆಚ್ಚಿನ ಖಾಸಗಿತನ ಹಾಗೂ ಸ್ವಾತಂತ್ರ್ಯವನ್ನು ನೀಡುತ್ತವೆ. ಆದರೆ ಮನೆಯಿಂದ ಮಾಡುವ ಕಚೇರಿ ಕೆಲಸದಲ್ಲಿ ಒತ್ತಡ ಹೆಚ್ಚು ಎಂಬುದಾಗಿ ಈ ವರದಿ ತಿಳಿಸಿದೆ. ಮನೆಯ ಕೆಲಸ, ಮಕ್ಕಳ ಲಾಲನೆ ಪಾಲನೆ, ಕಚೇರಿಯ ಕೆಲಸಗಳು ಹೀಗೆ ಪ್ರತಿಯೊಂದನ್ನು ನಿಭಾಯಿಸಬೇಕಾದ ಪರಿಸ್ಥಿತಿಯಿಂದ ಮಹಿಳೆ ಹೈರಾಣಾಗುತ್ತಾಳೆ ಎಂದೇ ಈ ವರದಿ ದಾಖಲಿಸಿದೆ. ಈ ರೀತಿ ಕೆಲಸ ನಿಭಾಯಿಸುವುದು ಕಷ್ಟ ಎಂದೇ ಮಹಿಳೆಯರೇ ಸ್ವಯಂ ಆಗಿ ಅಭಿಪ್ರಾಯ ಮಂಡಿಸಿದ್ದಾರೆ.
ಇದನ್ನೂ ಓದಿ: Success Story: ಅಕ್ಕ-ತಂಗಿ ಇಬ್ಬರೂ ಒಟ್ಟಿಗೆ UPSC ಪರೀಕ್ಷೆಯಲ್ಲಿ ಯಶಸ್ವಿ: ಅಂಕಿತಾ ಪತಿ ಕೂಡ IPS ಅಧಿಕಾರಿ
ಮಹಿಳಾ ಉದ್ಯೋಗಿಗಳ ದರ
ಉದ್ಯೋಗ ವಲಯದಲ್ಲಿ ಮಹಿಳೆಯರ ಪಾತ್ರದ ಕುರಿತು ಕೇಂದ್ರ ಅಂಕಿಅಂಶ ಸಚಿವಾಲಯದ ವರದಿಯು ಮಹತ್ವಪೂರ್ಣ ಡೇಟಾವನ್ನು ನೀಡಿದ್ದು, ಮಹಿಳಾ ಉದ್ಯೋಗಿಗಳ ದರವು ಸಾಂಕ್ರಾಮಿಕದ ಮೊದಲು 16.1% ಇದ್ದಿದ್ದು ಈಗ 15.5% ಕ್ಕೆ ಇಳಿದಿದೆ ಎಂದು ತಿಳಿದು ಬಂದಿದೆ. ಮನೆಯ ಜವಾಬ್ದಾರಿಗಳಿಂದ ಬೇರೆಯದೇ ವೈಯಕ್ತಿಕ ವಲಯವನ್ನು ಕಚೇರಿ ವಾತಾವರಣವು ಮಹಿಳೆಯರಿಗೆ ನೀಡುತ್ತದೆ ಎಂಬುದು ರಾಯಿಟರ್ಸ್ ಹೇಳಿಕೆಯಾಗಿದೆ. ಕಚೇರಿಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಅಲ್ಲಿನ ವಾತಾವರಣವು ಒತ್ತಡವನ್ನು ಉಂಟುಮಾಡಿದರೂ ಸಹೋದ್ಯೋಗಿಗಳ ಬೆಂಬಲ, ಮುಕ್ತ ವಾತಾವರಣ ಕೊಂಚ ಬಿಡುವನ್ನು ಒದಗಿಸುತ್ತದೆ ಎಂಬುದು ತಿಳಿದು ಬಂದಿದೆ.
ಉದ್ಯೋಗ ಸ್ಥಳ ಮಹಿಳೆಯರಿಗೆ ಏಕೆ ಮಹತ್ವಪೂರ್ಣ?
ಉದ್ಯೋಗ ಸ್ಥಳ ಎಂಬುದು ಮಹಿಳೆಯರನ್ನು ಇನ್ನಷ್ಟು ಸ್ವಾಭಿಮಾನಿಯಾಗಿಸುತ್ತದೆ ಹಾಗೂ ತಮ್ಮ ವೃತ್ತಿಪರತೆಯನ್ನು ಅನ್ವೇಷಿಸಲು ನೆರವಾಗಿದೆ ಎಂದು ವರದಿ ತಿಳಿಸುತ್ತದೆ. ವೃತ್ತಿಪರವಾಗಿ ಮಹಿಳೆಯರು ದೃಢವಾಗಿರಬೇಕು ಎಂಬ ನೆಲೆಯಲ್ಲಿ ಕೂಲ್ ಕನ್ಯಾ ಸಂಸ್ಥಾಪಕಿ ವಂಶಿಕಾ ಗೋಯೆಂಕಾ ನಿಮ್ಮ ಗುರುತನ್ನು ನೀವೇ ರೂಪಿಸಿ ಎಂದು ಸಲಹೆ ನೀಡುತ್ತಾರೆ. ನಿಮ್ಮ ಪತಿ, ತಂದೆ, ಮಕ್ಕಳು ಎಷ್ಟೇ ಉನ್ನತ ಹುದ್ದೆಯಲ್ಲಿರಲಿ ಏನೇ ಆಗಿರಲಿ ನಿಮ್ಮ ಅಸ್ತಿತ್ವನ್ನು ನೀವೇ ರೂಪಿಸಿಕೊಳ್ಳಿ ಹಾಗೂ ನಿಮ್ಮ ಹೆಗ್ಗುರುತನ್ನು ನೀವೇ ಬೆಳೆಸಿಕೊಳ್ಳಿ ಎಂದು ಸಲಹೆ ನೀಡುತ್ತಾರೆ. ನೀವು ಉದ್ಯೋಗ ಮಾಡುವ ಸ್ಥಳ ನಿಮ್ಮದೇ ಸ್ವಂತ ಸ್ಥಳವಾಗಿದೆ ಹಾಗೂ ನಿಮ್ಮ ತನವನ್ನು ರಚಿಸಲು ಅದೊಂದು ಸ್ಥಳವಾಗಿದೆ ಎಂಬುದು ವಂಶಿಕಾ ಹೇಳಿಕೆಯಾಗಿದೆ.
ಕಚೇರಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಅನುಕೂಲ
ಮನೆಯಿಂದ ಕೆಲಸ ಮಾಡುವುದಕ್ಕಿಂತ ಕಚೇರಿಗೆ ಬಂದು ಮಹಿಳೆಯರು ಕೆಲಸ ಮಾಡುವುದು ಒಬ್ಬ ಮಹಿಳೆಗೆ ಸಾಕಷ್ಟು ಅವಕಾಶವನ್ನು ಒದಗಿಸುತ್ತದೆ ಹಾಗೂ ಸೃಜನಾತ್ಮಕವಾಗಿ ಅವರಿಗೆ ಯೋಚಿಸಲು ಮತ್ತು ಮನೆಯ ಒತ್ತಡದಿಂದ ನಿರಾಳವಾಗಿರಲು ಅವಕಾಶ ನೀಡುತ್ತದೆ ಎಂದು ದೆಹಲಿಯ ಕ್ರಿಯಾ ವಿಶ್ವವಿದ್ಯಾಲಯದ ಲೀಡ್ನ ಉಪಕ್ರಮವಾದ IWWAGE ನಲ್ಲಿ ಪ್ರಧಾನ ಅರ್ಥಶಾಸ್ತ್ರಜ್ಞರಾದ ಸೋನಾ ಮಿತ್ರಾ ಅಭಿಪ್ರಾಯವಾಗಿದೆ. ಉದ್ಯೋಗದಲ್ಲಿ ಒತ್ತಡಗಳಿದ್ದರೂ ಅದನ್ನು ಸುಲಭವಾಗಿ ನಿರ್ವಹಿಸುವ ಸಲಹೆಗಳೂ ದೊರೆಯುತ್ತವೆ. ಅದೇ ರೀತಿ ಕಚೇರಿ ಕೆಲಸಗಳನ್ನು ಸುವ್ಯವಸ್ಥಿತವಾಗಿ ನಿರ್ವಹಿಸುವವರು ಮನೆಗೆಲಸಗಳನ್ನು ಸರಳವಾಗಿ ನಿಭಾಯಿಸುತ್ತಾರೆ ಎಂಬುದು ಸೋನಾ ಹೇಳಿಕೆಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ