• ಹೋಂ
  • »
  • ನ್ಯೂಸ್
  • »
  • ವೃತ್ತಿ
  • »
  • Explained: ಕೃತಕ ಬುದ್ಧಿಮತ್ತೆಯು ಭವಿಷ್ಯದಲ್ಲಿ ಮಾನವನ ಕ್ರಿಯಾತ್ಮಕತೆ ಮೇಲೆ ಪರಿಣಾಮ ಬೀರಲಿದ್ಯಾ?

Explained: ಕೃತಕ ಬುದ್ಧಿಮತ್ತೆಯು ಭವಿಷ್ಯದಲ್ಲಿ ಮಾನವನ ಕ್ರಿಯಾತ್ಮಕತೆ ಮೇಲೆ ಪರಿಣಾಮ ಬೀರಲಿದ್ಯಾ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಇಂದು ಈ ಕೃತಕ ಬುದ್ಧಿಮತ್ತೆ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನ ಪ್ರಾಬಲ್ಯ ಸ್ಥಾಪಿಸುತ್ತಿದೆ ಹಾಗೂ ಉದ್ಯಮ ರಂಗಗಳೂ ಈ ಸಾಮರ್ಥ್ಯವನ್ನು ಬಳಸಿಕೊಳ್ಳುತ್ತಿವೆ. ಇದೀಗ ಕಲಾ ಕ್ಷೇತ್ರದಲ್ಲೂ ಇದರ ಕಬಂಧ ಬಾಹು ಆವರಿಸಿದ್ದು, ಕೃತಕ ಬುದ್ಧಿಮತ್ತೆಯ (Artificial intelligence) ಮೂಲಕ ರಚಿಸಲಾದ ಚಿತ್ರಕಲೆಯೊಂದು ಅತ್ಯುನ್ನತ ಬಹುಮಾನವನ್ನು ಗೆದ್ದುಕೊಂಡಿತು. ಹಾಗಿದ್ದರೆ ಮಾನವರ ಕ್ರಿಯಾತ್ಮಕತೆ ಈ ಬುದ್ಧಿಮತ್ತೆಯ ಎದುರು ನಶಿಸಿ ಹೋಗಲಿದೆಯೇ ಎಂಬ ಪ್ರಶ್ನೆ ಇಲ್ಲಿ ಕಾಡುತ್ತದೆ.

ಮುಂದೆ ಓದಿ ...
  • Share this:

ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜನ್ಸ್) ಎನ್ನುವುದು ಕಂಪ್ಯೂಟರ್‌ (Computer) ಮೂಲಕ ನಿಯಂತ್ರಿಸಲಾಗುವ ಕಂಪ್ಯೂಟರ್ ಅಥವಾ ರೋಬೋಟ್‌ಗೆ ಮಾನವರು ಮಾಡುವ ಕಾರ್ಯಗಳನ್ನು ಮಾಡಲು ಮಾನವ ಬುದ್ಧಿವಂತಿಕೆ (Human intelligence) ಮತ್ತು ವಿವೇಚನೆಯ ಅಗತ್ಯವಿರುವ ಸಾಮರ್ಥ್ಯವಾಗಿದೆ. ಇಂದು ಈ ಕೃತಕ ಬುದ್ಧಿಮತ್ತೆ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನ ಪ್ರಾಬಲ್ಯ ಸ್ಥಾಪಿಸುತ್ತಿದೆ ಹಾಗೂ ಉದ್ಯಮ ರಂಗಗಳೂ ಈ ಸಾಮರ್ಥ್ಯವನ್ನು ಬಳಸಿಕೊಳ್ಳುತ್ತಿವೆ. ಇದೀಗ ಕಲಾ ಕ್ಷೇತ್ರದಲ್ಲೂ ಇದರ ಕಬಂಧ ಬಾಹು ಆವರಿಸಿದ್ದು, ಕೃತಕ ಬುದ್ಧಿಮತ್ತೆಯ (Artificial intelligence) ಮೂಲಕ ರಚಿಸಲಾದ ಚಿತ್ರಕಲೆಯೊಂದು ಅತ್ಯುನ್ನತ ಬಹುಮಾನವನ್ನು ಗೆದ್ದುಕೊಂಡಿತು. ಹಾಗಿದ್ದರೆ ಮಾನವರ ಕ್ರಿಯಾತ್ಮಕತೆ ಈ ಬುದ್ಧಿಮತ್ತೆಯ ಎದುರು ನಶಿಸಿ ಹೋಗಲಿದೆಯೇ ಎಂಬ ಪ್ರಶ್ನೆ ಇಲ್ಲಿ ಕಾಡುತ್ತದೆ.


ಕೃತಕ ಬುದ್ಧಿಮತ್ತೆಯ ನವೀನ ಯುಗ
ಇದೊಂದು ಸೃಜನಾತ್ಮಕ ಕ್ರಾಂತಿಯ ಲಕ್ಷಣವಾಗಿದೆ ಎಂಬುದು ಲೇಖಕರ ಅಭಿಪ್ರಾಯವಾಗಿದೆ. ಮಾನವರು ಹಾಗೂ ಕೃತಿಕ ಬುದ್ಧಿಮತ್ತೆಯ ಸೃಜನಶೀಲ ಸಹಯೋಗ ಎಂಬುದಾಗಿ ಈ ಕ್ರಾಂತಿಯನ್ನು ಲೇಖಕರು ಬಣ್ಣಿಸಿದ್ದಾರೆ.


ಈ ಕ್ರಾಂತಿಯು ಜೂನ್ 2020 ರಿಂದ ಆರಂಭವಾಯಿತು. OpenAI ಎಂಬ ಕಂಪೆನಿಯೊಂದು ಭಾಷೆಯನ್ನು ಪ್ರಕ್ರಿಯೆಗೊಳಿಸುವ ಮತ್ತು ರಚಿಸುವ GPT-3 ವ್ಯವಸ್ಥೆಯನ್ನು ನಿರ್ಮಿಸುವ ಮೂಲಕ AI (ಆರ್ಟಿಫಿಶಿಯಲ್ ಇಂಟಲಿಜನ್ಸ್) ಯಲ್ಲಿ ದೊಡ್ಡ ಪ್ರಗತಿಯನ್ನು ಸಾಧಿಸಿತು. ಈ ವ್ಯವಸ್ಥೆಯನ್ನು ಬಳಸಿಕೊಂಡು ಯಾವುದೇ ವಿಷಯದ ಕುರಿತು ಅದರೊಂದಿಗೆ ಚರ್ಚಿಸಬಹುದು, ಸಂಶೋಧನಾ ಲೇಖನ ಅಥವಾ ಕಥೆಯನ್ನು ಬರೆಯಲು ಹೇಳಬಹುದು, ಪಠ್ಯ ಸಾರಾಂಶಗೊಳಿಸಬಹುದು.


ಸುಧಾರಣೆಯತ್ತ ಕೃತಕ ಬುದ್ಧಿಮತ್ತೆ
2021 ರಲ್ಲಿ GPT-3 ಡೆವಲಪರ್‌ಗಳು, ಚಿತ್ರಗಳತ್ತ AI ಕ್ರಿಯಾತ್ಮಕತೆಯನ್ನು ಬಳಸಲು ತೊಡಗಿಸಿಕೊಂಡರು. ಬಿಲಿಯಗಟ್ಟಲೆ ಜೋಡಿ ಚಿತ್ರಗಳು, ಪಠ್ಯ ವಿವರಣೆಗಳಿಗೆ ತರಬೇತಿ ನೀಡಿದರು ಹಾಗೂ ಹೊಸ ಚಿತ್ರಗಳನ್ನು ಸೃಷ್ಟಿಸಲು ಇದನ್ನು ಬಳಸಿದರು ಹಾಗೂ ಈ ವ್ಯವಸ್ಥೆಗೆ DALL-E ಎಂದು ಹೆಸರನ್ನಿಟ್ಟರು. 2022 ರಲ್ಲಿ ಇನ್ನಷ್ಟು ಸುಧಾರಿತ ಆವೃತ್ತಿಯಾದ DALL-E 2 ಅನ್ನು ಬಿಡುಗಡೆ ಮಾಡಿದರು.


ಇದನ್ನೂ ಓದಿ:  Explained: ಉನ್ನತ ಶಿಕ್ಷಣ ಮೌಲ್ಯಮಾಪನ ಮಾಡುವ NAAC ವ್ಯವಸ್ಥೆಯಲ್ಲಿಯೂ ಲಂಚದ ಆರೋಪ!


DALL-E 2 ಎಂಬುದು ಹೊಸ ಬಗೆಯ AI (ಕೃತಕ ಬುದ್ಧಿಮತ್ತೆ) ವ್ಯವಸ್ಥೆಯಾಗಿದ್ದು ನೈಸರ್ಗಿಕ ಭಾಷೆಯಲ್ಲಿರುವ ವಿವರಣೆಯ ಮೂಲಕ ವಾಸ್ತವಿಕ ಚಿತ್ರಗಳು ಮತ್ತು ಕಲೆಯನ್ನು ರಚಿಸುವ ಸಾಮರ್ಥ್ಯ ಹೊಂದಿದೆ. GPT-3 ನಂತೆ, DALL-E 2 ಕೂಡ ಪ್ರಮುಖ ಪ್ರಗತಿ ಎಂದೆನಿಸಿದೆ. ಶೈಲಿ ಮತ್ತು ಇತರ ಅಮೂರ್ತ ಪರಿಕಲ್ಪನೆಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಂತೆ ಹೆಚ್ಚು ವಿವರವಾದ ಚಿತ್ರರಚನೆಗೆ ಸಹಕಾರಿಯಾಯಿತು.


ಆರಂಭವಾದ ಪೈಪೋಟಿ
DALL-E 2 ಆರಂಭವಾದಾಗಿನಿಂದ, ಸ್ಪರ್ಧಿಗಳೂ ಅದರಂತೆ ಬೇರೆ ಬೇರೆ ಸ್ಪರ್ಧೆಗಳು ಆರಂಭವಾಗಿವೆ. ಇದರಲ್ಲಿ ಬಳಸಲು ಉಚಿತವಾಗಿರುವ ಕಡಿಮೆ ಗುಣಮಟ್ಟದ DALL-E Mini (ಕ್ರೇಯಾನ್) ಆವೃತ್ತಿಯನ್ನು ರಚಿಸಿದ್ದು, ಮೀಮ್ ವಿಷಯದ ರಚನೆಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ.


ಇದೇ ಸಮಯದಲ್ಲಿ DALL-E 2 ಗೆ ಪೈಪೋಟಿ ನೀಡುವಂತೆ ಮಿಡ್‌ಜರ್ನಿ ಎಂಬ ಸಣ್ಣ ಕಂಪನಿಯು ಇದಕ್ಕೆ ಹೊಂದಿಕೆಯಾಗುವ ಮಾದರಿಯೊಂದನ್ನು ನಿರ್ಮಿಸಿತು. DALL-E 2 ಗಿಂತ ಕಡಿಮೆ ಸಾಮರ್ಥ್ಯವನ್ನು ಹೊಂದಿದ್ದರೂ ಆಸಕ್ತಿದಾಯಕ ಕಲಾತ್ಮಕ ಶೋಧನೆಗಳ ವಿಷಯದಲ್ಲಿ ಮಿಡ್‌ಜರ್ನಿ ಯಶಸ್ವಿಯಾಯಿತು.


ಇದೇ ರೀತಿ ಗೂಗಲ್ ಪಠ್ಯದಿಂದ-ಚಿತ್ರ (ನಿಮ್ಮ ಪದಗಳನ್ನು ಅರ್ಥೈಸಿಕೊಂಡು ಅನನ್ಯವಾದ ಚಿತ್ರವಾಗಿ ಪರಿವರ್ತಿಸುವ ಕೃತಕ ಬುದ್ಧಿಮತ್ತೆ) ಇಮೇಜಿನ್ ಎಂದು ಕರೆಯಲಾದ ಮಾದರಿಯನ್ನು ಹೊಂದಿದೆ. ಇದು DALL-E ಮತ್ತು ಇತರ ಮಾದರಿಗಳಿಗಿಂತ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಅದಾಗ್ಯೂ ಇಮೇಜಿನ್ ಅನ್ನು ಇನ್ನೂ ಬಿಡುಗಡೆ ಮಾಡಿಲ್ಲ.


ಆದಾಯದತ್ತ ಚಿತ್ತ ನೆಟ್ಟ ಕಂಪೆನಿಗಳು
ಜುಲೈನಲ್ಲಿ OpenAI ಕಂಪೆನಿಯು DALL-E ಕುರಿತ ಆಸಕ್ತಿಯನ್ನು ಲಾಭ ಮಾಡಿಕೊಳ್ಳಲು ನಿಶ್ಚಯಿಸಿತು ಅಂತೆಯೇ 1 ಮಿಲಿಯನ್ ಬಳಕೆದಾರರಿಗೆ ಪಾವತಿಸಿ ಬಳಸುವ ಮೂಲಕ ಪ್ರವೇಶಿಸುವ ಯೋಜನೆಯನ್ನು ಘೋಷಿಸಿತು. ಅದಾಗ್ಯೂ ಆಗಸ್ಟ್ 2022 ರಲ್ಲಿ ಹೊಸ ಸ್ಪರ್ಧಿಯಾದ ಸ್ಟೇಬಲ್ ಡಿಫ್ಯೂಶನ್ ಅಸ್ತಿತ್ವಕ್ಕೆ ಬಂದಿತು.


ಇದನ್ನೂ ಓದಿ: Explained: Moonlighting ಅಂದ್ರೇನು? ಒಂದು ಕಂಪೆನಿಯಲ್ಲಿದ್ದುಕೊಂಡು ಇನ್ನೊಂದು ಕಡೆ ಕೆಲಸ ಮಾಡುವುದೆಷ್ಟು ಸರಿ?


ಈ ಮಾದರಿಯಲ್ಲಿ ಯಾರು ಬೇಕಾದರೂ ಬೇಕಾದ ಕೋಡ್ ಅನ್ನು ಬಳಸಬಹುದು, ಅಳವಡಿಸಿಕೊಳ್ಳಬಹುದು ಹಾಗೂ ಮಾರ್ಪಡಿಸಬಹುದಾಗಿತ್ತು. ಇದೊಂದು ಮುಕ್ತ ವೇದಿಕೆಯಾಗಿತ್ತು. ವಿಡಿಯೋವು ಚಿತ್ರಗಳನ್ನೊಳಗೊಂಡ ಅನುಕ್ರಮವಾಗಿರುವುದರಿಂದ ಪಠ್ಯದ ಮೂಲಕ ವಿಡಿಯೋವನ್ನು ರಚಿಸಲು ಸ್ಟೇಬಲ್ ಡಿಫ್ಯೂಶನ್ ಕೋಡ್ ಅನ್ನು ಅವರು ತಿರುಚಬಹುದು ಎಂಬುದನ್ನು ಬಳಕೆದಾರರು ಬೇಗನೆ ಅರಿತುಕೊಂಡರು.


ಕ್ರಿಯಾತ್ಮಕತೆಯ ಅಂತ್ಯವೇ?
ಪಠ್ಯದ ಕೆಲವೊಂದು ಸಾಲುಗಳು ಹಾಗೂ ಬಟನ್ ಕ್ಲಿಕ್ ಮಾಡುವ ಮೂಲಕ ಯಾವುದೇ ರೀತಿಯ ದೃಶ್ಯ ವಿಷಯ, ಚಿತ್ರ ಅಥವಾ ವಿಡಿಯೋವನ್ನು ರಚಿಸಬಹುದು ಎಂಬುದನ್ನು ಕೃತಕ ಬುದ್ಧಿಮತ್ತೆ ಪ್ರದರ್ಶಿಸಿದೆ. ಹಾಗೆಯೇ GPT-3 ಬಳಸಿಕೊಂಡು ಚಲನಚಿತ್ರ ಸ್ಕ್ರಿಪ್ಟ್ ರಚಿಸಬಹುದು ಹಾಗೂ DALL-E 2 ಬಳಸಿ ಚಲನಚಿತ್ರ ಅನಿಮೇಷನ್ ಅನ್ನು ರಚಿಸಬಹುದು. ಹಾಗಿದ್ದರೆ ಮಾನವನ ಕ್ರಿಯಾತ್ಮಕತೆ ಹಾಗೂ ಸೃಜನಶೀಲತೆಗೆ ಇನ್ನು ಬೆಲೆ ಇಲ್ಲದಂತಾಗುತ್ತದೆಯೇ ಎಂಬ ಸಂದೇಹ ಇಲ್ಲಿ ಉಂಟಾಗುತ್ತದೆ. ಕೆಲವೊಂದು ವರದಿಗಳ ಪ್ರಕಾರ, ಕೃತಕ ಬುದ್ಧಿಮತ್ತೆಯಲ್ಲಿ ಪ್ರಗತಿಯುಂಟಾದಂತೆ ಇದು ಕ್ರಿಯಾತ್ಮಕತೆ ಹಾಗೂ ಪ್ರತಿಭೆಗೆ ಬೆದರಿಕೆಯನ್ನೊಡ್ಡುತ್ತದೆ ಎಂದಾಗಿದೆ.


ಯಾರು ಬೇಕಾದರೂ ತಮಗೆ ಬೇಕಾದ ಚಿತ್ರಗಳನ್ನು ರಚಿಸಬಹುದು ಎಂದಾಗ ಇಂದು ಬೇಡಿಕೆಯಲ್ಲಿರುವ ಗ್ರಾಫಿಕ್ ವಿನ್ಯಾಸಕಾರರಿಗೆ ಮೌಲ್ಯವಿರುವುದಿಲ್ಲ. ಅದಾಗ್ಯೂ ಮಾನವನ ಕ್ರಿಯಾತ್ಮಕತೆಗೆ ಇನ್ನೊಂದು ಆಧುನಿಕ ವಿಧಾನವನ್ನು ಕಂಡುಕೊಳ್ಳುತ್ತದೆ ಎಂಬ ವಾಸ್ತವಾಂಶ ಕೂಡ ಇದೆ.


ಎಲೆಕ್ಟ್ರಾನಿಕ್ ಸಿಂಥಸೈಜರ್ ಅಸ್ತಿತ್ವಕ್ಕೆ ಬಂದಾಗ ಇದು ಸಂಗೀತಕ್ಕೆ ಯಾವುದೇ ಹಾನಿಯನ್ನುಂಟು ಮಾಡಲಿಲ್ಲ ಅಂತೆಯೇ ಛಾಯಾಗ್ರಹಣ ಕೂಡ ಚಿತ್ರಕಲೆಯನ್ನು ನಾಶಮಾಡಲಿಲ್ಲ ಬದಲಿಗೆ ಇವುಗಳು ಹೊಸ ಬಗೆಯ ಕಲಾ ಪ್ರಕಾರವನ್ನು ವರ್ಧಿಸಿದವು. ಹೀಗಾಗಿ ಕೃತಕ ಬುದ್ಧಿಮತ್ತೆಯ ಮೂಲಕ ಹೊಸದಾದ ಪ್ರಕಾರವೊಂದು ಉಗಮಗೊಳ್ಳಬಹುದು ಎಂಬುದು ಲೇಖಕರ ಅಂಬೋಣವಾಗಿದೆ.

Published by:Ashwini Prabhu
First published: