• Home
 • »
 • News
 • »
 • career
 • »
 • Career Tips: ಉದ್ಯೋಗಿಗಳ Performance Review ಅನ್ನು ಏಕೆ ಹಾಗೂ ಹೇಗೆ ಮಾಡಬೇಕು?

Career Tips: ಉದ್ಯೋಗಿಗಳ Performance Review ಅನ್ನು ಏಕೆ ಹಾಗೂ ಹೇಗೆ ಮಾಡಬೇಕು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಿಬ್ಬಂದಿಯ ಕೆಲಸದ ಅನುಗಣವಾಗಿ ಉದ್ಯೋಗದಾತನು ಉದ್ಯೋಗಿಗೆ ಪ್ರೊಮೋಷನ್‌, ವೇತನ ಹೆಚ್ಚಳ ನೀಡಬಹುದು. ಇಲ್ಲ ಕಳಪೆ ಪ್ರದರ್ಶನದಿಂದಾಗಿ ಮನೆಗೆ ಸಹ ಕಳಿಸಬಹುದು.

 • Share this:

  ಯಾವುದೇ ವ್ಯವಹಾರವಾಗಲಿ ಅಲ್ಲಿ ಉದ್ಯೋಗಿಗಳ ಕಾರ್ಯಕ್ಷಮತೆಯ ವಿಮರ್ಶೆ (Performance Review) ಮುಖ್ಯವಾಗಿದೆ. ಒಬ್ಬ ನೌಕರ (Employee) ಹೇಗೆ ಕೆಲಸ ಮಾಡುತ್ತಾನೆ, ಅವರು ತಿದ್ದಿಕೊಳ್ಳಬೇಕಾಗಿದ್ದು ಏನು? ಉತ್ಪಾದಕತೆಯನ್ನು (Productivity) ಹೆಚ್ಚಿಸಲು ಅವರು ಯಾವ ವಿಷಯಕ್ಕೆ ಗಮನ ಕೊಡಬೇಕು, ಹೇಗೆ ಮಾಡಬೇಕು ಅಥವಾ ಏನು ಮಾಡಬಾರದು ಎಂಬ ಸಲಹೆ ಮತ್ತು ವಿಮರ್ಶೆಗಳನ್ನು ನೀಡುವುದರಿಂದ ಒಂದು ಕಂಪನಿ ಪರಿಣಾಮಕಾರಿಯಾದ ಬೆಳವಣಿಗೆ ಕಾಣಬಹುದು. ಉದ್ಯೋಗಿಗಳ ಕಾರ್ಯಕ್ಷಮತೆ ಮೇಲೆಯೇ ಒಂದು ಕಂಪನಿ ನಿಂತಿರುತ್ತದೆ. ಹಲವು ಕಂಪನಿಗಳು ನೌಕರರ ಕಾರ್ಯವೈಖರಿಯ ಕಾರಣ ನೀಡಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದಿರುವ ನಿದರ್ಶನಗಳು ಬೇಕಾದಷ್ಟಿವೆ. ಸಿಬ್ಬಂದಿಯ ಕೆಲಸದ ಅನುಗಣವಾಗಿ ಉದ್ಯೋಗದಾತನು ಉದ್ಯೋಗಿಗೆ ಪ್ರೊಮೋಷನ್‌, ವೇತನ ಹೆಚ್ಚಳ ನೀಡಬಹುದು. ಇಲ್ಲ ಕಳಪೆ ಪ್ರದರ್ಶನದಿಂದಾಗಿ ಮನೆಗೆ ಸಹ ಕಳಿಸಬಹುದು.


  ಒಟ್ಟಾರೆ ಉದ್ಯೋಗಿಗಳು ಕೆಲಸದಲ್ಲಿ ಉತ್ತಮ ಪ್ರದರ್ಶನ ನೀಡಲು ಈ ವಿಮರ್ಶೆ ಹೆಚ್ಚು ಸಹಕಾರಿಯಾಗಿದೆ.


  ಉದ್ಯೋಗಿ ಕಾರ್ಯಕ್ಷಮತೆಯ ವಿಮರ್ಶೆ ಎಂದರೇನು?


  ಉದ್ಯೋಗಿ ಕಾರ್ಯಕ್ಷಮತೆಯ ವಿಮರ್ಶೆಯನ್ನು ಕಾರ್ಯಕ್ಷಮತೆಯ ಮೌಲ್ಯಮಾಪನ ಎಂದೂ ಕರೆಯುತ್ತಾರೆ, ಇದು ನಿರ್ದಿಷ್ಟ ಅವಧಿಯಲ್ಲಿ ಉದ್ಯೋಗಿಯ ಕೆಲಸದ ಔಪಚಾರಿಕ ಮೌಲ್ಯಮಾಪನವಾಗಿದೆ. ಉದ್ಯೋಗಿ ಕಾರ್ಯಕ್ಷಮತೆಯ ವಿಮರ್ಶೆಯಲ್ಲಿ, ವ್ಯವಸ್ಥಾಪಕರು ಆ ವ್ಯಕ್ತಿಯ ಒಟ್ಟಾರೆ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುತ್ತಾರೆ, ಅವರ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗುರುತಿಸುತ್ತಾರೆ, ಪ್ರತಿಕ್ರಿಯೆಯನ್ನು ನೀಡುತ್ತಾರೆ ಮತ್ತು ಎಲ್ಲಿ ಸುಧಾರಿಸಿಕೊಳ್ಳಬೇಕೆಂದು ತಿಳಿಸಿ ಸಹಾಯ ಮಾಡುತ್ತಾರೆ.


  ಸಾಮಾನ್ಯವಾಗಿ ಕಂಪನಿಗಳಲ್ಲಿ ಕಾರ್ಯಕ್ಷಮತೆಯ ಮೌಲ್ಯಮಾಪನಗಳು ಸಾಂಪ್ರದಾಯಿಕವಾಗಿ ವರ್ಷಕೊಮ್ಮೆ ನಡೆಯುತ್ತವೆ. ಈಗಿನ ಹೆಚ್ಚಿನ ಕಂಪನಿಗಳು ತಿಂಗಳಿಗೆ, ಮೂರು ತಿಂಗಳಿಗೆ ಇಲ್ಲ ವಾರಕ್ಕೊಮ್ಮೆ ಸಹ ನಡೆಸುತ್ತವೆ.


  ಇದನ್ನೂ ಓದಿ: Career Tips: ಬೆಂಗಳೂರಲ್ಲಿ ಬೇಗ ಕೆಲಸ ಸಿಗಬೇಕು ಎಂದರೆ ಇಷ್ಟು ಮಾಡಿ ಸಾಕು


  ಉದ್ಯೋಗಿ ಕಾರ್ಯಕ್ಷಮತೆಯ ವಿಮರ್ಶೆಯಲ್ಲಿ ಯಾವ ಅಂಶಗಳನ್ನು ಪರಿಗಣಿಸಬೇಕು?


  ಉದ್ಯಮದ ಹೊರತಾಗಿ, ಹೆಚ್ಚಿನ ಉದ್ಯೋಗಿ ವಿಮರ್ಶೆಗಳು ಈ ಕೌಶಲ್ಯಗಳ ಮೌಲ್ಯಮಾಪನವನ್ನು ಒಳಗೊಂಡಿವೆ: ಅವು,
  - ಸಂವಹನ
  - ಸಹಯೋಗ ಮತ್ತು ಟೀಮ್‌ ವರ್ಕ್
  - ಸಮಸ್ಯೆ ಪರಿಹರಿಸುವ ಕೌಶಲ್ಯ
  - ಕೆಲಸದ ಗುಣಮಟ್ಟ ಮತ್ತು ನಿಖರತೆ
  - ಹಾಜರಾತಿ, ಸರಿಯಾದ ಸಮಯಕ್ಕೆ ಕೆಲಸಕ್ಕೆ ಬರುವುದು ಮತ್ತು ವಿಶ್ವಾಸಾರ್ಹತೆ
  - ಗುರಿಗಳನ್ನು ಸಾಧಿಸುವ ಮತ್ತು ಡೆಡ್‌ಲೈನ್‌ ಒಳಗೆ ಕೆಲಸ ಒಪ್ಪಿಸುವ ಸಾಮರ್ಥ್ಯ


  ಈ ಎಲ್ಲಾ ಅಂಶಗಳ ಆಧಾರದ ಮೇಲೆ ಉದ್ಯೋಗಿಗಳಿಗೆ ವಿವರಣೆ ಮೂಲಕ ಅಥವಾ ಗ್ರೇಡ್‌ ಮೂಲಕ ವಿಮರ್ಶೆಗಳನ್ನು ನೀಡಬಹುದು. ಹಾಗಂತ ವಿಮರ್ಶೆಯನ್ನು ಹೇಗೆ ಬೇಕಾದರೂ ನೀಡಲು ಸಾಧ್ಯವಿಲ್ಲ. ಅದಕ್ಕೂ ಕೆಲ ಪರಿಣಾಮಕಾರಿ ವಿಧಾನಗಳಿವೆ. ಹಾಗಾದರೆ ವಿಮರ್ಶೆಯನ್ನು ನೀಡಲು ಬೇಕಾದ ಕೆಲ ಸಲಹೆಗಳು ಇಲ್ಲಿದ್ದು, ಕಂಪನಿ ನಡೆಸುವವರು, ಮೇಲ್ವೀಚಾರಕರು ಇದನ್ನು ಅನುಸರಿಸಬಹುದು.


  1. ನಿಯಮಿತ, ಅನೌಪಚಾರಿಕ ಪ್ರತಿಕ್ರಿಯೆಯನ್ನು ಒದಗಿಸಿ
  ಕಾರ್ಯಕ್ಷಮತೆಯ ವಿಮರ್ಶೆಗಳು ಸಾಮಾನ್ಯವಾಗಿ ವರ್ಷಕ್ಕೊಮ್ಮೆ ಅಥವಾ ಎರಡು ಬಾರಿ ಸಂಭವಿಸಿದಾಗ, ಪ್ರತಿಕ್ರಿಯೆಯು ಸಣ್ಣ ವಿಮರ್ಶೆ ಅವಧಿಗಳಿಗೆ ಸೀಮಿತವಾಗಿರಬಾರದು. ಉದ್ಯೋಗಿ ಕಾರ್ಯಕ್ಷಮತೆಯ ಬಗ್ಗೆ ನೀವು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿರಬೇಕು.


  ಸಾಮಾನ್ಯವಾಗಿ ಉತ್ತಮ ಉದ್ಯೋಗಿಗಳನ್ನು ರಿವ್ಯೂವ್‌ ಮಾಡುವ ಸಮಯದಲ್ಲಿ ನಿರ್ಲಕ್ಷ್ಯಿಸಿ ಬಿಡುತ್ತವೆ ಕಂಪನಿಗಳು. ಇತರ ಉದ್ಯೋಗಿಗಳಂತೆ ಅವರಿಗೆ ಹೆಚ್ಚಿನ ಮಾರ್ಗದರ್ಶನ ಅಗತ್ಯವಿಲ್ಲದಿದ್ದರೂ, ಈ ವ್ಯಕ್ತಿಗಳು ಸಾಂದರ್ಭಿಕವಾಗಿ ಗುರುತಿಸಲ್ಪಡದಿದ್ದರೆ ಅವರು ಉತ್ಸಾಹ ಅಥವಾ ಪ್ರೇರಣೆಯನ್ನು ಕಳೆದುಕೊಳ್ಳಬಹುದು. ಹೀಗಾಗಿ ಅವರಿಗೆ ಇಮೇಲ್‌, ಸಂದೇಶ ಕಳುಹಿಸುವ ಮೂಲಕ ಅವರನ್ನು ಗುರುತಿಸುತ್ತಿರಬೇಕು. ಒಟ್ಟಾರೆ ಕಂಪನಿಗಳು ನಿಯಮಿತ, ಅನೌಪಚಾರಿಕ ಪ್ರತಿಕ್ರಿಯೆಯನ್ನು ಇಲ್ಲಿ ಅನುಸರಿಸಬೇಕು.

  2. ಪ್ರಾಮಾಣಿಕವಾಗಿರಿ
  ಒಬ್ಬ ಉದ್ಯೋಗಿಯ ಬಗ್ಗೆ ರಿವ್ಯೂವ್‌ ಕೊಡಬೇಕಾದರೆ ಕಂಪನಿ ಅಥವಾ ಮೇಲ್ವಿಚಾರಕರು ತುಂಬಾ ಪ್ರಾಮಾಣಿಕವಾಗಿ ವಿಮರ್ಶೆ ನೀಡಬೇಕು. ನೀವು ಕೊಡುವ ಒಂದು ವಿಮರ್ಶೆ ಅವರನ್ನು ಮತ್ತಷ್ಟು ಸುಧಾರಿಸಿಕೊಳ್ಳಲು ಸಹಾಯ ಮಾಡುವುದರಿಂದ ಇಲ್ಲಿ ಹೆಚ್ಚು ಜಾಗೃತೆ ವಹಿಸಬೇಕು. ಸರಿ ಇಲ್ಲದ್ದನ್ನು ನೇರವಾಗಿ ಹೇಳಬೇಕು, ಇದು ಕಂಪನಿಗೂ ಸಹ ಲಾಭ. ಹಾಗಂತ ಕ್ರೂರವಾಗಿ ಏನನ್ನು ಹೇಳಬಾರದು, ನಿಮ್ಮದೇ ಆದ ಅದ್ಭುತ ಶೈಲಿಯಲ್ಲಿ ಅದನ್ನು ವ್ಯಕ್ತಪಡಿಸಬೇಕು.
  3. ಮುಖಾಮುಖಿಯಾಗಿ ಮಾಡಿ
  ಲಿಖಿತ ವಿಮರ್ಶೆಯು ಚರ್ಚೆಯ ಅಂಶಗಳು ನೇರವಾದ ಅವಲೋಕನವಾಗಿರಬೇಕು. ಅಂದರೆ ಕಂಪನಿಗಳು ಉದ್ಯೋಗಿಗಳಿಗೆ ನೇರ ಸಂಭಾಷಣೆ ಮೂಲಕ ತಿಳಿಸುವುದು ಇಲ್ಲಿ ಪರಿಣಾಮಕಾರಿ. ಹಾಗೆಯೇ ಉತ್ತಮ ವಾತಾವರಣದಲ್ಲಿ ಹೇಳುವುದು ಕೂಡ ಮುಖ್ಯ. ಕಾಫಿ ಶಾಪ್ ಅಥವಾ ಕಚೇರಿಯ ಹೊರಗಿನ ಸ್ಥಳದಲ್ಲಿ ಸಭೆಯನ್ನು ನಿಗದಿಪಡಿಸಲು ಬಯಸಬಹುದು. ಈ ವಿಧಾನವು ಚರ್ಚೆ ಮತ್ತು ಪ್ರತಿಕ್ರಿಯೆಗೆ ಅವಕಾಶ ನೀಡುತ್ತದೆ ಮತ್ತು ತಪ್ಪು ಸಂವಹನವನ್ನು ತಡೆಯುತ್ತದೆ.


  4. ಸ್ಪಷ್ಟವಾದ, ಸೂಕ್ತವಾದ ಉದಾಹರಣೆಗಳನ್ನು ಬಳಸಿ.
  ಯಾವುದೆ ನೌಕರನ ಕಾರ್ಯಕ್ಷಮತೆ ಬಗ್ಗೆ ಮೆಚ್ಚುಗೆ ಸೂಚಿಸಬೇಕಾದರೆ ಅಥವಾ ತಪ್ಪನ್ನು ತೋರಿಸ ಬೇಕಾದರೆ ಸ್ಪಷ್ಟವಾದ, ಸೂಕ್ತವಾದ ಘಟನೆಗಳನ್ನು ಉಲ್ಲೇಖಿಸುವ ಪ್ರಯತ್ನ ಮಾಡಿ. ಇದಕ್ಕಾಗಿ ಅವರನ್ನು ದೀರ್ಘಕಾಲದವರೆಗೆ ಮೇಲ್ವಿಚಾರಣೆ ಮಾಡುತ್ತಿರಬೇಕು.


  ನೌಕರನು ಕೆಲವು ಪ್ರಮುಖ ಕಾರ್ಯಕ್ಷಮತೆಯ ಕ್ಷೇತ್ರಗಳಲ್ಲಿ ಹಿಂದೆ ಬೀಳುತ್ತಿದ್ದರೆ, ಒಂದು ಅಥವಾ ಎರಡು ನಿರ್ದಿಷ್ಟ ಉದಾಹರಣೆಗಳನ್ನು ಸೂಚಿಸಿ ಮತ್ತು ಭವಿಷ್ಯದಲ್ಲಿ ಅವುಗಳನ್ನು ಹೇಗೆ ವಿಭಿನ್ನವಾಗಿ ನಿರ್ವಹಿಸಬೇಕೆಂದು ತಿಳಿಸಲು ಇದು ಸಹಕಾರಿ.


  Predictions Astrology Lucky person November 21 Monday
  ಸಾಂದರ್ಭಿಕ ಚಿತ್ರ


  5. ಧನಾತ್ಮಕವಾಗಿ ಹೇಳಿ
  ಪರಸ್ಪರ ತಿಳುವಳಿಕೆ ಮತ್ತು ಗೌರವವಿಲ್ಲದೆ ವಿಮರ್ಶೆಯನ್ನು ವ್ಯಕ್ತಪಡಿಸಬೇಡಿ. ನಿಮ್ಮ ಉದ್ಯೋಗಿಗಳನ್ನು ಪ್ರೋತ್ಸಾಹಿಸುವುದು ಮತ್ತು ನಿಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುವುದು ಪ್ರಾಥಮಿಕವಾಗಿ ಉತ್ತಮ ವಿಮರ್ಶೆಯನ್ನು ಹೆಚ್ಚಿಸುತ್ತದೆ.


  ನೀವು ಕೆಲವರನ್ನು ಉಲ್ಲೇಖಿಸಿ ನೀವು ಉತ್ತಮವಾಗಬೇಕು ಎಂಬುವುದನ್ನೇ ನೆಗೆಟಿವ್‌ ಆಗಿ ಹೇಳದೇ ಪಾಸಿಟಿವ್‌ ಆಗಿ ಹೇಳಿ. ಆಗ ಉದ್ಯೋಗಿಗಳು ಅದನ್ನು ಹೆಚ್ಚು ಧನಾತ್ಮಕವಾಗಿ ತೆಗೆದುಕೊಳ್ಳುತ್ತಾರೆ.


  6. ವಿಮರ್ಶೆ ಮಾಡುವಾಗ ಪದ ಬಳಕೆ ಸರಿಯಾಗಿರಲಿ
  ಒಬ್ಬ ಉದ್ಯೋಗಿಯ ರಿವ್ಯೂವ್‌ ಮಾಡಬೇಕಾ ಸಂದರ್ಭದಲ್ಲಿ ಮೇಲ್ವಿಚಾರಕರು ತಮ್ಮ ಪದ ಬಳಕೆ ಬಗ್ಗೆ ನಿಗಾವಹಿಸಬೇಕು. ಉತ್ತಮ, ನಿಮ್ಮ ಕೆಲಸ ತೃಪ್ತಿ ನೀಡಿದೆ ಹೀಗೆ ಸೌಮ್ಯವಾದ ಪದ ಬಳಕೆ ವಿಮರ್ಶೆಯಲ್ಲಿ ಸೂಕ್ತವೆನಿಸುತ್ತೆ.

  Published by:Kavya V
  First published: