• Home
  • »
  • News
  • »
  • career
  • »
  • Foreign School: ಭಾರತ ಹೆಚ್ಚಿನ ಪೋಷಕರು ಮಕ್ಕಳ ಶಿಕ್ಷಣಕ್ಕೆ ಫಾರಿನ್‌ ಬೋರ್ಡ್‌ ಶಾಲೆಗಳನ್ನು ಆಯ್ಕೆ ಮಾಡ್ತಿರೋದು ಇದೇ ಕಾರಣಕ್ಕಂತೆ

Foreign School: ಭಾರತ ಹೆಚ್ಚಿನ ಪೋಷಕರು ಮಕ್ಕಳ ಶಿಕ್ಷಣಕ್ಕೆ ಫಾರಿನ್‌ ಬೋರ್ಡ್‌ ಶಾಲೆಗಳನ್ನು ಆಯ್ಕೆ ಮಾಡ್ತಿರೋದು ಇದೇ ಕಾರಣಕ್ಕಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Foreign School Boards: ವಿಧ್ಯಾಭ್ಯಾಸವು ಜೀವನದಲ್ಲಿ ಅತ್ಯಮೂಲ್ಯ. ಇಂದು ಆಂಗ್ಲ ಮಾಧ್ಯಮದ ಶಾಲೆಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಕೆಲವು ಪೋಷಕರು ಒಂದು ಹೆಜ್ಜೆ ಮುಂದೆ ಹೋಗಿ ಫಾರಿನ್‌ ಬೋರ್ಡ್ (Foreign Board)  ಇರುವ ʼಅಂತಾರಾಷ್ಟ್ರೀಯ ಮಟ್ಟದ ಶಾಲೆಗಳುʼ  (International Level School) ಎಂದು ಕರೆಯಲಾಗುವ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ.

ಮುಂದೆ ಓದಿ ...
  • Share this:

ಭಾರತದಲ್ಲಿ (India)  ಶಿಕ್ಷಣ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆಗಳು ಆಗಿವೆ. ಶಿಕ್ಷಣದ ಮಹತ್ವದ ಅರಿತಿರುವ ಪ್ರತಿ ಪೋಷಕರು ಕೂಡ ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕೆಂದು ಪಣ ತೊಟ್ಟಿದಂತಿದೆ. ಆದ್ದರಿಂದ ಇಂದು ಆಂಗ್ಲ ಮಾಧ್ಯಮದ ಶಾಲೆಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಕೆಲವು ಪೋಷಕರು ಒಂದು ಹೆಜ್ಜೆ ಮುಂದೆ ಹೋಗಿ ಫಾರಿನ್‌ ಬೋರ್ಡ್ (Foreign Board)  ಇರುವ ʼಅಂತಾರಾಷ್ಟ್ರೀಯ ಮಟ್ಟದ ಶಾಲೆಗಳುʼ  ( International Level School) ಎಂದು ಕರೆಯಲಾಗುವ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದರೆ ಮುಂದೆ ಉತ್ತಮ ಅವಕಾಶಗಳ ಜೊತೆ ವಿದೇಶಕ್ಕೆ ಹೋಗಿ ಉನ್ನತ ಶಿಕ್ಷಣ ಪಡೆದು 7 ಅಂಕಿಯ ಸಂಬಳ  ಪಡೆಯುತ್ತಾರೆ ಎಂದು ನಗರದಲ್ಲಿರುವ ಬಹುತೇಕ ಪೋಷಕರು ತಮ್ಮ ಮಕ್ಕಳನ್ನು ಇಂತಹ ಶಾಲೆಗಳಿಗೆ ಸೇರಿಸುತ್ತಿದ್ದಾರೆ ಎಂದು ಕೆಲವು ವರದಿಗಳಿಂದ ತಿಳಿದು ಬಂದಿದೆ.


ದತ್ತಾಂಶಗಳು ಏನ್‌ ಹೇಳ್ತಿವೆ?


ಭಾರತದಲ್ಲಿ ಕಳೆದ ಕೆಲವು ವರ್ಷಗಳಿಂದ, ಸ್ವಿಟ್ಜರ್ಲೆಂಡ್ ಪ್ರಧಾನ ಕಛೇರಿಯ ಇಂಟರ್ನ್ಯಾಷನಲ್ ಬ್ಯಾಕಲೌರಿಯೇಟ್ (IB) ಮತ್ತು ಯುಕೆ ಯ ಕೇಂಬ್ರಿಡ್ಜ್ ಅಸೆಸ್ಮೆಂಟ್ ಇಂಟರ್ನ್ಯಾಷನಲ್ ಎಜುಕೇಶನ್ (CAIE) ಎಂಬ ಅಂತಾರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳು ಅಪಾರ ಜನಪ್ರಿಯತೆಯನ್ನು ಗಳಿಸಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಗೆ ಸಾಕ್ಷಿಯಾಗಿದೆ ಎಂದು ದತ್ತಾಂಶಗಳು ಸೂಚಿಸಿವೆ.


ಕೇಂಬ್ರಿಡ್ಜ್ ಅಸೆಸ್ಮೆಂಟ್ ಇಂಟರ್ನ್ಯಾಷನಲ್ ಎಜುಕೇಶನ್ (CAIE) ಸಂಸ್ಥೆಯನ್ನು IGCSE (ಇಂಟರ್ನ್ಯಾಷನಲ್ ಜನರಲ್ ಸರ್ಟಿಫಿಕೇಟ್ ಆಫ್ ಸೆಕೆಂಡರಿ ಎಜುಕೇಶನ್) ಎಂದು ಕೂಡ ಕರೆಯಲಾಗುತ್ತದೆ. ಈ ಸಂಸ್ಥೆಯು 9 ಮತ್ತು 10 ನೇ ತರಗತಿಗಳ ನಂತರ 12 ನೇ ತರಗತಿಗೆ A-ಲೆವೆಲ್‌ಗಳಂತಹ ಅರ್ಹತೆಗಳನ್ನು ನೀಡುತ್ತದೆ.


ಇದರ ಜೊತೆಗೆ, 2018 ಮತ್ತು 2021 ರ ನಡುವೆ, IB ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಸುಮಾರು 24 % ರಷ್ಟು ಹೆಚ್ಚಾಗಿದೆ ಎಂದು ದತ್ತಾಂಶಗಳು ಹೇಳುತ್ತಿವೆ.


ಇದನ್ನೂ ಓದಿ:  ಇದೊಂದು ಟ್ರಾಫಿಕ್ ಪ್ರೇಮ್​ ಕಹಾನಿ​, ಈ ಜೋಡಿ ಮದ್ವೆಯಾದ್ರೂ ಆ ರೋಡ್​ ಇನ್ನೂ ಸರಿಯಾಗಿಲ್ಲ!


IB ಬೋರ್ಡ್‌ ನೀಡಿದ ಹೇಳಿಕೆಯೇನು?


“ಭಾರತದಲ್ಲಿ ಒಂದು ಅಥವಾ ಹೆಚ್ಚಿನ IB ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಬೇಕೆಂದು ಆಶಿಸುತ್ತೇವೆ. ಇದರೊಂದಿಗೆ ವಿದ್ಯಾರ್ಥಿಗಳ ಸ್ಥಿರವಾದ ಬೆಳವಣಿಗೆಗೆ ಸಹಾಯಕವಾಗುವ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ. ನಾವು ಪ್ರಸ್ತುತ ಭಾರತದಲ್ಲಿ 204 IB ಅಂತಾರಾಷ್ಟ್ರೀಯ ಶಾಲೆಗಳು ಮತ್ತು 338 ಅಧಿಕೃತ ಕಾರ್ಯಕ್ರಮಗಳನ್ನು ಹೊಂದಿದ್ದೇವೆ. ನಮ್ಮ ಪ್ರಮುಖ ಕಾರ್ಯಕ್ರಮಗಳೆಂದರೆ, ಡಿಪ್ಲೊಮಾ ಪ್ರೋಗ್ರಾಂ (DP), ಇದು ಹೆಚ್ಚಿನ ಶಾಲೆಗಳು ನೀಡುವ ಕಾರ್ಯಕ್ರಮವಾಗಿದೆ. ಇದರ ನಂತರ ನಮ್ಮ ಪ್ರಾಥಮಿಕ ವರ್ಷಗಳ ಕಾರ್ಯಕ್ರಮ (PYP) ಆಗಿದೆ” ಎಂದು ದಿ ಪ್ರಿಂಟ್‌ ಮಾಧ್ಯಮ ಕೇಳಿದ್ದ ಪ್ರಶ್ನೆಗೆ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ, IB ಬೋರ್ಡ್ ಈ ಹೇಳಿಕೆಯನ್ನು ನೀಡಿದೆ.


ಅದೇ ರೀತಿ, ಭಾರತದಲ್ಲಿ ಕೇಂಬ್ರಿಡ್ಜ್-ಸಂಯೋಜಿತ ಶಾಲೆಗಳ ಸಂಖ್ಯೆಯು ಕಳೆದ ನಾಲ್ಕು ವರ್ಷಗಳಲ್ಲಿ 15% ರಷ್ಟು ಹೆಚ್ಚಾಗಿದೆ. ಕೇಂಬ್ರಿಡ್ಜ್ ಇಂಟರ್‌ನ್ಯಾಶನಲ್ ಹಂಚಿಕೊಂಡ ಮಾಹಿತಿಯ ಪ್ರಕಾರ, ಬೋರ್ಡ್‌ನೊಂದಿಗೆ ಸಂಯೋಜಿತವಾಗಿರುವ ಶಾಲೆಗಳು 2018 ರಲ್ಲಿ 496 ಇದ್ದ ಶಾಲೆಗಳು ಈ ವರ್ಷಕ್ಕೆ 578 ಶಾಲೆಗಳು ಆಗಿವೆ.


"ಪ್ರತಿ ವರ್ಷ, ಭಾರತದಾದ್ಯಂತ ಸರಾಸರಿ 40 ರಿಂದ 50 ಹೊಸ ಶಾಲೆಗಳು ನಮ್ಮೊಂದಿಗೆ ಪಾಲುದಾರರಾಗಲು ಬಯಸುತ್ತಾರೆ” ಎಂದು ಕೇಂಬ್ರಿಡ್ಜ್ ಇಂಟರ್ನ್ಯಾಷನಲ್ ಪ್ರಾದೇಶಿಕ ನಿರ್ದೇಶಕ ಮಹೇಶ್ ಶ್ರೀವಾಸ್ತವ ದಿ ಪ್ರಿಂಟ್‌ಗೆ ವಿವರಿಸಿದ್ದಾರೆ.


“ನಮ್ಮಲ್ಲಿನ ಪಠ್ಯಕ್ರಮವು ಪ್ರೌಢಶಾಲೆಯ ಮಕ್ಕಳ ಬೇಡಿಕೆಗಳು ಮತ್ತು ಸವಾಲುಗಳನ್ನು ಪೂರೈಸಲು ಸಾಕಷ್ಟು ಸಹಾಯ ಮಾಡುತ್ತವೆ. ಇದರೊಂದಿಗೆ ಪದವಿಪೂರ್ವ ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳನ್ನು ಉತ್ತಮವಾಗಿ ಸಿದ್ಧಪಡಿಸುತ್ತವೆ” ಎಂದು ಹೇಳಿದರು.


ಇದನ್ನೂ ಓದಿ: ಕೆಲಸ ಮಾಡಿಸಿ ದುಡ್ಡು ಕೊಟ್ಟಿಲ್ಲ ಅಂತ ಕಾರಿಗೆ ಬೆಂಕಿ ಇಟ್ಟ ವ್ಯಕ್ತಿ!


ಪೋಷಕರ ಅಭಿಪ್ರಾಯವೇನು?


IB ಮತ್ತು ಕೇಂಬ್ರಿಡ್ಜ್-ಸಂಯೋಜಿತ ಶಾಲೆಗಳು ನಮ್ಮ ದೇಶದ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಗಿಂತ ಉತ್ತಮ ಪರಿಕಲ್ಪನೆ-ಆಧಾರಿತ ಗುಣಮಟ್ಟದ ಶಿಕ್ಷಣವನ್ನು ನೀಡುತ್ತವೆ ಮತ್ತು ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಆರಂಭದಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆಯೂ ಶಿಕ್ಷಣವನ್ನು ನೀಡುತ್ತವೆ. ಆದ್ದರಿಂದ ಅಂತಾರಾಷ್ಟ್ರೀಯ ಶಾಲೆಗಳು ಅತ್ಯುತ್ತಮವಾಗಿವೆ ಎಂದು ಪೋಷಕರು ದಿ ಪ್ರಿಂಟ್‌ ಜೊತೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

First published: