• Home
  • »
  • News
  • »
  • career
  • »
  • Startups: MBA ಪದವೀಧರರಿಗಿಂತ ಎಂಜಿನಿಯರ್‌ ಪದವಿಧರರೇ ಸ್ಟಾರ್ಟಪ್‌ಗಳನ್ನು ಏಕೆ ಸ್ಥಾಪಿಸುತ್ತಿದ್ದಾರೆ? ಇಲ್ಲಿದೆ ಮಾಹಿತಿ

Startups: MBA ಪದವೀಧರರಿಗಿಂತ ಎಂಜಿನಿಯರ್‌ ಪದವಿಧರರೇ ಸ್ಟಾರ್ಟಪ್‌ಗಳನ್ನು ಏಕೆ ಸ್ಥಾಪಿಸುತ್ತಿದ್ದಾರೆ? ಇಲ್ಲಿದೆ ಮಾಹಿತಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಉದ್ಯಮಶೀಲತೆ ಕೋರ್ಸ್‌ಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳು ತಮ್ಮದೇ ಸ್ವಂತ ಉದ್ಯಮವನ್ನು ಆರಂಭಿಸುತ್ತಿರುವುದು ಮಾತ್ರವಲ್ಲದೆ ಸ್ವಂತ ಕಂಪನಿಗಳನ್ನು ಆರಂಭಿಸುವಷ್ಟು ಪರಿಣಿತಿ ಹೊಂದಿರುತ್ತಾರೆ.

  • Share this:

ಅಂಕಿಅಂಶದ ಪ್ರಕಾರ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (IITs) ಪದವೀಧರರು 5,489 ಸ್ಟಾರ್ಟಪ್‌ಗಳನ್ನು (Startups) ಬಾಂಬೆ, ದೆಹಲಿ, ಗುವಾಹಟಿ, ಕಾನ್ಪುರ್, ಖರಗ್‌ಪುರ, ಮದ್ರಾಸ್ ಮತ್ತು ರೂರ್ಕಿಯಲ್ಲಿ ಸ್ಥಾಪಿಸಿದ್ದು, ಐಐಎಂ (IIMs) ಗಳ ಪದವೀಧರರು ಅಹಮದಾಬಾದ್, ಬೆಂಗಳೂರು ಮತ್ತು ಕಲ್ಕತ್ತಾದಲ್ಲಿ 1,517 ಸ್ಟಾರ್ಟ್‌ಅಪ್‌ಗಳನ್ನು ನಿರ್ಮಿಸಿದ್ದಾರೆ ಎಂದು ವರದಿಯಾಗಿದೆ (Report).  ಬ್ಯುಸಿನೆಸ್ ಡಿಗ್ರಿಗಳನ್ನು ಒದಗಿಸುವ ಯುನಿವರ್ಸಿಟಿಗಳಲ್ಲಿ ಅಧ್ಯಯನ ನಡೆಸಿರುವ ಪದವೀಧರರು ತಮ್ಮ ಮ್ಯಾನೇಜ್‌ಮೆಂಟ್ ಕೋರ್ಸ್‌ನಲ್ಲಿ (Management course) ವ್ಯಾಪಾರ ಪರಿಣತಿಯನ್ನು ಪಡೆದುಕೊಂಡ ನಂತರ ಹೊಸ ವ್ಯವಹಾರಗಳನ್ನು ಸ್ಥಾಪಿಸುವಲ್ಲಿ ಮುಂಚೂಣಿಯಲ್ಲಿರುತ್ತಾರೆ ಎಂದು ಮಾರುಕಟ್ಟೆ ತಜ್ಞರು ಊಹಿಸಿದ್ದಾರೆ.


ಎಂಜಿನಿಯರ್ ಪದವೀರರ ಸಂಖ್ಯೆಯೇ ಸ್ಟಾರ್ಟಪ್‌ ನಿರ್ಮಾಣದಲ್ಲಿ ಹೆಚ್ಚು
ಭಾರತದ 108 ಯುನಿಕಾರ್ನ್‌ಗಳಲ್ಲಿ, 60 ಸಂಸ್ಥೆಗಳು ಏಳು ಐಐಟಿಗಳ ಒಂದೇ ಗುಂಪಿನ ಸಂಸ್ಥಾಪಕರನ್ನು ಹೊಂದಿದ್ದರೆ 25 ಐಐಎಂಎ, ಐಐಎಂಬಿ ಮತ್ತು ಐಐಎಂಸಿ ಸಂಸ್ಥಾಪಕರನ್ನು ಹೊಂದಿವೆ. ಹೀಗಾಗಿ ದೇಶದಲ್ಲಿ ಮ್ಯಾನೇಜ್‌ಮೆಂಟ್ ಪದವೀಧರ ಸ್ಥಾಪಕರಿಗಿಂತ ಎಂಜಿನಿಯರ್ ಪದವೀಧರ ಸ್ಥಾಪಕರೇ ಹೆಚ್ಚಿದ್ದಾರೆ ಎಂಬುದಾಗಿ ಹೇಳಬಹುದಾಗಿದೆ.


ಮ್ಯಾನೇಜ್‌ಮೆಂಟ್ ಪದವೀಧರರು ತಮ್ಮದೇ ಆದ ಸ್ಟಾರ್ಟಪ್‌ಗಳಲ್ಲಿ ತೊಡಗಿಸಿಕೊಳ್ಳದೇ ಇರಲು ಕಾರಣವೇನು?
ಐಐಎಂಬಿ ನಿರ್ದೇಶಕ ರಿಷಿಕೇಶ ಟಿ. ಕೃಷ್ಣನ್ ತಿಳಿಸಿರುವಂತೆ ಪದವಿಯ ನಂತರ ಸ್ವಂತವಾಗಿ ಉದ್ಯಮ ರಂಗದಲ್ಲಿ ಅದೃಷ್ಟಪರೀಕ್ಷಿಸುವ ವಿದ್ಯಾರ್ಥಿಗಳ ಸಂಖ್ಯೆ ಸುಮಾರು 2-3% ದಷ್ಟಿರಬಹುದು. ಒಟ್ಟಾಗಿ ಹೇಳುವುದಾದರೆ ಇಂಜಿನಿಯರಿಂಗ್ ಪದವೀಧರರ ಒಟ್ಟು ಸಂಖ್ಯೆಯು ಎಮ್‌ಬಿಎ ಪದವೀಧರರ ಸಂಖ್ಯೆಯನ್ನು ಮೀರಿಸುತ್ತದೆ ಎಂಬುದಾಗಿ ವರದಿಯಾಗಿದ್ದು ಭಾರತದಲ್ಲಿ ವರ್ಷಕ್ಕೆ ಅಂದಾಜು 1.5ಮಿಲಿಯನ್ ಎಂಜಿನಿಯರ್‌ಗಳು ಮತ್ತು 30,000 ಕ್ಕೂ ಹೆಚ್ಚು ಎಮ್‌ಬಿಎ ಪದವೀಧರರು ವ್ಯಾಸಂಗ ಪೂರ್ಣಗೊಳಿಸುತ್ತಿದ್ದಾರೆ.


ತಂತ್ರಜ್ಞಾನಕ್ಕೆ ಹೆಚ್ಚಿನ ಆದ್ಯತೆ
ಇನ್ನು ಭಾರತೀಯ ಸ್ಟಾರ್ಟಪ್‌ಗಳಲ್ಲಿ ತಂತ್ರಜ್ಞಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ಲಭಿಸುವುದು ಇದಕ್ಕೆ ಕಾರಣವಾಗಿದೆ. ತಂತ್ರಜ್ಞಾನ ಚಾಲಿತವಲ್ಲದ ಹೂಡಿಕೆದಾರರು ತಂತ್ರಜ್ಞಾನ ಮಟ್ಟದ ಅದೇ ಗಮನ ಹಾಗೂ ಬೆಂಬಲವನ್ನು ಪಡೆಯುವುದಿಲ್ಲ ಎಂದು ಚೆನ್ನೈ ಮೂಲದ ಗ್ರೇಟ್ ಲೇಕ್ಸ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಡೀನ್ ಸುರೇಶ್ ರಾಮನಾಥನ್ ಅಭಿಪ್ರಾಯವಾಗಿದೆ.


ಇದನ್ನೂ ಓದಿ: ಪೋಷಕರೇ ಎಚ್ಚರವಿರಲಿ, ಮೊಬೈಲ್​ ಬಳಕೆಯಿಂದ ನಿಮ್ಮ ಮಕ್ಕಳ ಕಲಿಕೆ ನಿಧಾನಗೊಳ್ಳಬಹುದು


ಮ್ಯಾನೇಜ್‌ಮೆಂಟ್ ಪದವೀಧರರು ಹಾಗೂ ಎಂಜಿನಿಯರಿಂಗ್ ಪದವೀಧರರ ವಯಸ್ಸನ್ನು ಪರಿಗಣಿಸುವುದಾದರೆ ವ್ಯತ್ಯಾಸವು ಭಿನ್ನವಾಗಿ ಕಾಣುತ್ತದೆ ಎಂಬುದು ರಾಮನಾಥನ್ ಹೇಳಿಕೆಯಾಗಿದೆ. ಬಹಳಷ್ಟು ಜನರು ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ ನಂತರ ವಿವಾಹವಾಗುತ್ತಾರೆ ಮತ್ತು ಸಂಗಾತಿಯ ಗಳಿಕೆಯ ಮೇಲೆ ಮುಂದಿನ ಭವಿಷ್ಯ ನಿರ್ಧಾರವಾಗುತ್ತದೆ ಎಂಬುದು ರಾಮನಾಥನ್ ಹೇಳಿಕೆಯಾಗಿದೆ.


ಉದ್ಯಮಶೀಲತೆ ಕೋರ್ಸ್‌ಗಳ ನೆರವು
ಹೆಚ್ಚಿನ ವಿದ್ಯಾರ್ಥಿಗಳು ಮ್ಯಾನೇಜ್‌ಮೆಂಟ್ ಕೋರ್ಸ್‌ಗಳಿಗೆ ಮಾಡಿರುವ 25-30 ಲಕ್ಷ ಸಾಲಗಳು ಇಲ್ಲಿ ಪ್ರಮುಖವಾಗಿರುತ್ತವೆ. ಇದರಿಂದ ಅವರಿಗೆ ಉದ್ಯಮಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶ ಕಡಿಮೆ ಇರುತ್ತದೆ ಹಾಗೂ ಸಾಲದ ಬಾಧ್ಯತೆಯಿಂದ ಶೀಘ್ರವೇ ಅವರು ಉದ್ಯೋಗದತ್ತ ಮುಖಮಾಡುತ್ತಾರೆ, ಹೀಗಾಗಿ ಅವರ ಉದ್ಯಮಶೀಲ ಕಲ್ಪನೆಗಳು ಜಾಗೃತಗೊಳ್ಳುವುದಿಲ್ಲ ಎಂದು ತಿಳಿಸುತ್ತಾರೆ.


ಒಂದು ವರ್ಷದ ವಿದ್ಯಾರ್ಥಿವೇತನ
ISB 2023 ರ ತರಗತಿಯಿಂದ ಉದ್ಯಮಶೀಲತೆಯಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಇದೇ ರೀತಿಯ ಒಂದು ವರ್ಷದ ವಿದ್ಯಾರ್ಥಿವೇತನವನ್ನು ಪರಿಚಯಿಸಿದೆ. ಭಾರತದ ಪ್ರಾರಂಭಿಕ ರಾಜಧಾನಿಯಾದ ಬೆಂಗಳೂರಿನಲ್ಲಿ ಐಐಎಂಬಿ-ಕೆಲವು ವರ್ಷಗಳ ಹಿಂದೆ ಉದ್ಯಮಶೀಲತೆಯ ಬಗ್ಗೆ ಕಡ್ಡಾಯ ಕೋರ್ಸ್ ಅನ್ನು ಪ್ರಾರಂಭಿಸಿದೆ.


ಸ್ವಂತ ಉದ್ಯಮ
ಉದ್ಯಮಶೀಲತೆ ಕೋರ್ಸ್‌ಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳು ತಮ್ಮದೇ ಸ್ವಂತ ಉದ್ಯಮವನ್ನು ಆರಂಭಿಸುತ್ತಿರುವುದು ಮಾತ್ರವಲ್ಲದೆ ಸ್ವಂತ ಕಂಪನಿಗಳನ್ನು ಆರಂಭಿಸುವಷ್ಟು ಪರಿಣಿತಿ ಹೊಂದಿದ್ದಾರೆ ಎಂಬುದು ಹೈದರಾಬಾದ್‌ನ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ (ISB) ನಲ್ಲಿ ಫ್ಯಾಕಲ್ಟಿ ಡೈರೆಕ್ಟರ್ ಭಗವಾನ್ ಚೌಧರಿ ಮಾತಾಗಿದೆ.

First published: