Career: 50ರ ನಂತರ ವೃತ್ತಿಜೀವನ ಆಯ್ಕೆ ಮಾಡಲು ಈ ಟಿಪ್ಸ್ ಸಹಾಯ ಮಾಡುತ್ತೆ

ಅಮೆರಿಕನ್ನರಿಗೆ 50 ರ ಹರೆಯದ ನಂತರ ವೃತ್ತಿಯನ್ನು ಬದಲಾಯಿಸುವುದು ಹೆಚ್ಚು ಸಾಮಾನ್ಯವಾದ ವಿಷಯವಾಗಿದೆ. ಮೊದಲನೇ ವೃತ್ತಿಜೀವನದಂತೆ ದೀರ್ಘಸಮಯದ್ದಾಗಿರದೇ ಇದ್ದರೂ ಎರಡನೇ ಹಾಗೂ ಮೂರನೇ ವೃತ್ತಿಗಳು ಐವತ್ತು ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ 108 ಮಿಲಿಯನ್‌ಗಿಂತಲೂ ಹೆಚ್ಚಿನ ಜನರ ಭವಿಷ್ಯವನ್ನು ರೂಪಿಸುತ್ತದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

 • Share this:
  ಐವತ್ತರ ನಂತರ ವೃತ್ತಿಜೀವನವನ್ನು (Career) ಬದಲಾಯಿಸುವುದು ನಮ್ಮಲ್ಲಿ ಯೋಚಿಸದೇ ಇರುವ ಕಲ್ಪನೆಯಾಗಿದ್ದರೂ ಅಮೆರಿಕನ್ನರಿಗೆ (Americans) 50 ರ ಹರೆಯದ ನಂತರ ವೃತ್ತಿಯನ್ನು ಬದಲಾಯಿಸುವುದು ಹೆಚ್ಚು ಸಾಮಾನ್ಯವಾದ ವಿಷಯವಾಗಿದೆ. ಮೊದಲನೇ ವೃತ್ತಿಜೀವನದಂತೆ ದೀರ್ಘಸಮಯದ್ದಾಗಿರದೇ ಇದ್ದರೂ ಎರಡನೇ ಹಾಗೂ ಮೂರನೇ ವೃತ್ತಿಗಳು ಐವತ್ತು ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ 108 ಮಿಲಿಯನ್‌ಗಿಂತಲೂ ಹೆಚ್ಚಿನ ಜನರ ಭವಿಷ್ಯವನ್ನು (Future) ರೂಪಿಸುತ್ತದೆ. ಯುಎಸ್‌ನಲ್ಲಿ ದಿನವೊಂದಕ್ಕೆ ಸುಮಾರು 10,000 ಜನರು 65 ರ ಹರೆಯಕ್ಕೆ ಕಾಲಿಡುತ್ತಿದ್ದಾರೆ ಹಾಗೂ 2030 ರಲ್ಲಿ ಐದರಲ್ಲಿ ಒಬ್ಬ ಅಮೇರಿಕನ್ನರು ತಮ್ಮ 65 ಅಥವಾ ಅದಕ್ಕೂ ಹೆಚ್ಚು ವಯಸ್ಸಿನವರಾಗಿರುವುದರಿಂದ ನಿವೃತ್ತಿಯ ಕಲ್ಪನೆಯನ್ನು ಕೊನೆಗೊಳಿಸುವ ಬಯಕೆಯನ್ನು ಹೊಂದಿದ್ದಾರೆ.

  50 ರ ನಂತರದ ವೃತ್ತಿ ಜೀವನ
  ಉದಾಹರಣೆಗೆ ಹೇಳುವುದಾದರೆ ಯಾರಾದರೂ ಅರವತ್ತೈದರ ಹರೆಯದವರಾಗಿದ್ದು ಆರೋಗ್ಯವಂತರಾಗಿದ್ದರೆ ಅವರು ಇನ್ನೂ ಇಪ್ಪತ್ತೈದು ಹಾಗೂ ಅದಕ್ಕೂ ಹೆಚ್ಚು ಕಾಲ ಬದುಕಬಹುದು ಆಗ ಅವರ ಮನದಲ್ಲಿ ಏನಾದರೂ ಉದ್ದೇಶವಿರುತ್ತದೆ ಅಂತೆಯೇ ನೀವು ಐವತ್ತರ ಹರೆಯದವರಾಗಿದ್ದರೆ ನಲವತ್ತು ವರ್ಷಗಳ ಬಾಳುವೆಯನ್ನು ಕಲ್ಪಿಸಿಕೊಳ್ಳಬಹುದು.

  ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದ ಸೆಂಟರ್ ಫಾರ್ ಲಾಂಗ್ವಿಟಿ ನ್ಯೂ ಮ್ಯಾಪ್ ಆಫ್ ಲೈಫ್ ವರದಿಯ ಪ್ರಕಾರ ನಲವತ್ತು ವರ್ಷಗಳ ವೃತ್ತಿಜೀವನವು ಅರವತ್ತು ವರ್ಷಗಳ ವೃತ್ತಿಜೀವನದ ಅವಧಿಯಾಗುತ್ತಿದೆ ಹೀಗಾಗಿ ನಡುವಯಸ್ಸಿನಲ್ಲಿ ಮುಂದಿನ ವೃತ್ತಿಜೀವನವನ್ನು ಆರಿಸಿಕೊಳ್ಳುವುದು ಸಾಮಾನ್ಯವಾಗಿದೆ ಅದರಲ್ಲೂ ಸಹಸ್ರವರ್ಷದವರು ಬರೇ ಎಂಟು ವರ್ಷಗಳಲ್ಲಿ ಐವತ್ತಕ್ಕೆ ಕಾಲಿಡಲು ಆರಂಭಿಸಿರುತ್ತಾರೆ ಆಗ ದೀರ್ಘಾವಧಿಯ ಜೀವಿತಾವಧಿಯಲ್ಲಿ ವಿವಿಧ ರೀತಿಯ ಕೆಲಸದ ಸಾಧ್ಯತೆಗಳನ್ನು ಮರುರೂಪಿಸುವ ನಿರಂತರತೆ ಸ್ಥಿತಿಯ ಅಗತ್ಯವಿರುತ್ತದೆ

  ಕೌಶಲ್ಯ ಹಾಗೂ ಜ್ಞಾನ ವೃತ್ತಿಗೆ ಅಗತ್ಯ
  ಇನ್ ಕಂಟ್ರೋಲ್ ಎಟ್ 50+ ಲೇಖನದ ಲೇಖಕರಾಗಿರುವ ಕೆರಿ ಹ್ಯಾನನ್ ಪ್ರಕಾರ, ದೀರ್ಘಾವಧಿಯ ನಿಯಮಗಳಿಲ್ಲ ಎಂದಾಗಿದೆ ಜನರು ಯಾವಾಗ ವೃತ್ತಿಯನ್ನು ಬದಲಾಯಿಸಬಹುದು ಹಾಗೂ ಮೊದಲನೇ ವೃತ್ತಿಯಂತೆಯೇ ತಮ್ಮ ಎರಡನೇ ವೃತ್ತಿಯನ್ನು ಆರಿಸಿಕೊಳ್ಳಬಾರದು ಎಂಬುದು ಹ್ಯಾನನ್ ಅಭಿಪ್ರಾಯವಾಗಿದೆ. ಜೀವನದ ದ್ವಿತಿಯಾರ್ಧದಲ್ಲಿ ನೀವು ಇಷ್ಟರವರೆಗೆ ನಿಮ್ಮ ವೃತ್ತಿಯಲ್ಲಿ ಸಂಪಾದಿಸಿದ ಕೌಶಲ್ಯಗಳನ್ನು ಮರುಹಂಚಿಕೆ ಮಾಡುವ ಸಮಯವಾಗಿರುತ್ತದೆ.

  ಇದನ್ನೂ ಓದಿ:  Mitti Cafe: ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಇವರ ಜೀವನ, ವಿಶೇಷ ಚೇತನರ ಸಾಧನೆಯ ಕಥೆ ಈ ಮಿಟ್ಟಿ ಕೆಫೆ!

  ನೀವು ಯಾವ ವಿಷಯದಲ್ಲಿ ಸಮರ್ಥರು ಹಾಗೂ ಆ ವಿಷಯವನ್ನು ಅನುಸರಿಸಿಕೊಂಡು ಬೇರೆ ವಿಧಾನದಲ್ಲಿ ಹೇಗೆ ಕೆಲಸ ಮಾಡುತ್ತೀರಿ ಎಂಬುದನ್ನು ವಿಶ್ಲೇಷಿಸಿ ಅಂತೆಯೇ ಹತ್ತು ವರ್ಷಗಳ ಕಾಲ ಉಳಿಯಬಹುದಾದ ವೃತ್ತಿಯನ್ನು ಆರಿಸಿಕೊಳ್ಳಿ ಹಾಗೂ ಇನ್ನೊಂದು ಅದನ್ನು ಅನುಸರಿಸಲಿ ಎಂಬುದು ಹ್ಯಾನನ್ ಮಾತಾಗಿದೆ. ಒಟ್ಟಾರೆ ಇದೆಲ್ಲವೂ ಜೀವಮಾನ ಪೂರ್ತಿ ಕಲಿಯುವ ಹಂತವಾಗಿದ್ದು ಹೊಸ ಹೊಸ ಕೌಶಲ್ಯಗಳನ್ನು ಅರಿಯುವುದೂ ಕೂಡ ಎಂದು ಹ್ಯಾನನ್ ಹೇಳುತ್ತಾರೆ.

  ಯಾವುದೇ ವೃತ್ತಿಗೆ ವಯಸ್ಸು ಅಡ್ಡಿಯಲ್ಲ
  ಹೊಸ ವೃತ್ತಿ ಜೀವನದ ಆರಂಭಕ್ಕೆ ಸಾಧ್ಯತೆಗಳೊಂದಿಗೆ ತಾಳ್ಮೆ, ನಿರ್ಣಯ, ಕೇಂದ್ರೀಕೃತ ತಂತ್ರ ಮತ್ತು ಆದಾಯದ ಅನಿವಾರ್ಯ ಪ್ರಶ್ನೆ ಕೂಡ ಇದರೊಂದಿಗಿರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಮುಂದಿನ ವೃತ್ತಿಜೀವನದ ಅಧ್ಯಾಯದಲ್ಲಿ ನಿಮ್ಮ ಸಮಯವನ್ನು ಏನು ಮತ್ತು ಹೇಗೆ ಕಳೆಯಲು ನೀವು ಬಯಸುತ್ತೀರಿ ಎಂಬುದರ ಕುರಿತು ಆಳವಾದ ಆಲೋಚನೆಗಳ ಅಗತ್ಯವೂ ಇದೆ.

  ಪೀಟರ್ ಲಿಚ್ಟೆಂತಾಲ್ ಪ್ರಮುಖ ಸೌಂದರ್ಯ ಬ್ರ್ಯಾಂಡ್‌ನ ಅಧ್ಯಕ್ಷರಾಗಿದ್ದು ಮೂವತ್ತೈದು ವರ್ಷಗಳ ಕಾರ್ಪೋರೇಟ್ ವಲಯದಲ್ಲಿ ವೃತ್ತಿ ರಂಗದ ಉತ್ತುಂಗಕ್ಕೇರಿದರು. ಐವತ್ತರ ಹರೆಯಕ್ಕೆ ತಲುಪಿದಾಗ ತಮ್ಮ ವೃತ್ತಿ ಜೀವನವನ್ನು ಬದಲಾಯಿಸುವ ಸಮಯದಲ್ಲಿ ಹೆಚ್ಚು ಭಾವೋದ್ರಿಕ್ತರಾದರು ಇದರ ಕುರಿತಾಗಿಯೇ ಅವರು ಯೋಚಿಸಿ ಎರಡು ವರ್ಷಗಳನ್ನು ಕಳೆಯುತ್ತಾರೆ. ಉತ್ತಮ ಹುದ್ದೆಯಲ್ಲಿರುವ ಪೀಟರ್ ಇತರ ಜನರ ಜೀವನವನ್ನು ಸುಧಾರಿಸಲು ಇಷ್ಟಪಡುತ್ತೇನೆ ಹಾಗೂ ಅವರ ವೃತ್ತಿಜೀವನದ ಮೂಲಕವೇ ಮಾರ್ಗದರ್ಶನ ನೀಡುತ್ತೇನೆ ಎಂದು ಹೇಳುತ್ತಾರೆ ಇದನ್ನೇ ವೃತ್ತಿಯನ್ನಾಗಿಸಿಕೊಂಡ ಪೀಟರ್, ತಮ್ಮ ನಡುವಯಸ್ಸಿನಲ್ಲಿ ವೃತ್ತಿಜೀವನವನ್ನು ಬದಲಾಯಿಸುವುದರ ಕುರಿತು ಯೋಚಿಸಿ ಕಾರ್ಯನಿರ್ವಾಹಕ ಸಲಹೆಗಾರ ಮತ್ತು ನಾಯಕತ್ವ ತರಬೇತುದಾರರಾಗಿ ತಮ್ಮ ವೃತ್ತಿಯನ್ನು ಬದಲಾಯಿಸಿಕೊಂಡರು.

  ಪೀಟರ್ ಕಾರ್ಪೋರೇಟ್ ಹಣಕಾಸು ಕಾರ್ಯನಿರ್ವಾಹಕರಿಗೆ ಸಹಾಯ ಮಾಡುತ್ತಾರೆ. ಅಂತೆಯೇ ಸಂವಹನ ಉದ್ಯಮದ ಕಾರ್ಯನಿರ್ವಾಹಕರನ್ನು ಹೊಸ ವ್ಯವಹಾರಕ್ಕೆ ಮಾರ್ಗದರ್ಶನ ನೀಡುತ್ತಾರೆ

  ಇಚ್ಛೆಗೆ ತಕ್ಕಂತೆ ವೃತ್ತಿ ಆರಿಸಿ
  ಐವತ್ತರ ನಂತರ ನಡುವಯಸ್ಸಿನಲ್ಲಿ ವೃತ್ತಿ ಬದಲಾಯಿಸಿದವರು ಬೇರೆ ಬೇರೆ ವೃತ್ತಿಗಳನ್ನು ಆರಿಸಿಕೊಂಡರು. ಕೆಲವರು ಬರಹಗಾರ, ವೈದ್ಯರು, ಕಾರ್ಯನಿರ್ವಾಹಕರು, ವ್ಯಾಪಾರಿ ಹೀಗೆ ಅವರವರ ಬಯಕೆಗೆ ಇಚ್ಛೆಗೆ ತಕ್ಕಂತೆ ತಮ್ಮ ವೃತ್ತಿಯನ್ನು ಬದಲಾಯಿಸಿಕೊಂಡಿದ್ದಾರೆ. ಜಾಗತಿಕ ಸಂಸ್ಥೆಯ ಸ್ಪೆನ್ಸರ್ ಸ್ಟುವರ್ಟ್‌ನ ಪಾಲುದಾರರಾದ ಸುಝೇನ್ ಬರ್ನ್ಸ್ ಹೇಳುವಂತೆ, ಈ ಹಂತದಲ್ಲಿ ಯಶಸ್ಸು ಗುರುತಿಸುವುದು ಮುಖ್ಯ ಎಂದಾಗಿದೆ. ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಬಯಸುತ್ತೀರಾ? ಹೈಬ್ರೀಡ್ ವಿಧಾನ ಅನುಸರಿಸುತ್ತೀರಾ ಎಂಬುದನ್ನು ಆರಿಸಿ ಎಂದು ತಿಳಿಸಿದ್ದಾರೆ. ಕೋವಿಡ್ ನಂತರ ವೃತ್ತಿರಂಗದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ ಎಂಬುದು ಸುಝೇನ್ ಅಭಿಪ್ರಾಯವಾಗಿದೆ. ಕೆಲವರು ಪೋರ್ಟ್‌ಫೋಲಿಯೊ ವೃತ್ತಿಜೀವನವನ್ನು ರಚಿಸಲು ಮುಖ್ಯವಾಹಿನಿಯ ಉದ್ಯೋಗ ಮಾರುಕಟ್ಟೆಯಿಂದ ಹೊರಬರಲು ಆಯ್ಕೆಮಾಡುತ್ತಿದ್ದು ಮುಂದಿನ ವೃತ್ತಿಗೆ ಅನುಕೂಲಕರವಾಗಿರುವ ಚಟುವಟಿಕೆಗಳ ಮೇಲೆ ಗಮನ ಹರಿಸಿದ್ದಾರೆ.

  ವೃತ್ತಿಜೀವನಕ್ಕೆ ಕೋರ್ಸ್‌ಗಳು ಹೇಗೆ ಪರಿಣಾಮಕಾರಿ ಎಂಬುದನ್ನು ಸೂಚಿಸಿರುವ ಮಾರ್ಥಾ ಹೆಲ್ಲರ್ ವೃತ್ತಿಜೀವನಕ್ಕೆ ಸಂಬಂಧಿಸಿರುವ ಕೋರ್ಸ್‌ಗಳನ್ನು ಅಭ್ಯಸಿಸಿ ಎಂದು ಸಲಹೆ ನೀಡುತ್ತಾರೆ. ಯಾವುದೇ ವೃತ್ತಿಯನ್ನು ಆರಿಸುವ ಮುನ್ನ ತಮ್ಮೊಂದಿಗೆ ತಾವು ಮಾತನಾಡಿಕೊಳ್ಳುವುದು ಮುಖ್ಯ ಎಂಬುದು ಮಾರ್ಥಾ ಹೇಳಿಕೆಯಾಗಿದೆ. ತಮ್ಮ ವೃತ್ತಿ ಆಯ್ಕೆಯ ಬಗ್ಗೆ ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ಮಾತನಾಡಿ ಎಂದಾಗಿದೆ. ಇನ್ನು ಹಿಂದಿನ ವೃತ್ತಿಯನ್ನು ಆಧರಿಸಿ ಭವಿಷ್ಯದ ವೃತ್ತಿ ಜೀವನವನ್ನು ಆರಿಸಬೇಡಿ ಎಂಬ ಕಿವಿಮಾತನ್ನೂ ಮಾರ್ಥಾ ಹೇಳಿದ್ದಾರೆ. ತಂತ್ರಜ್ಞಾನದ ಟ್ರೆಂಡ್‌ಗಳಲ್ಲಿ ಸ್ವಲ್ಪ ತರಬೇತಿ ಪಡೆಯುವುದು, ಸಾಮಾಜಿಕ ಮಾಧ್ಯಮದಲ್ಲಿ ಪ್ರವೀಣರಾಗಿರುವುದು ಮತ್ತು ನಿಮ್ಮ ಗುರಿಯನ್ನು ಯೋಜಿಸುವಾಗ ಇತರ ಕೌಶಲ್ಯಗಳು ಮುಖ್ಯವೆಂಬುದನ್ನು ಪರಿಗಣಿಸಿ ಎಂದು ಮಾರ್ಥಾ ತಿಳಿಸಿದ್ದಾರೆ.

  ಇದನ್ನೂ ಓದಿ:  Work Tips: ಹೊಸದಾಗಿ ಕೆಲಸಕ್ಕೆ ಸೇರಿದವರು ಗಮನಿಸಿ, ಈ ಟಿಪ್ಸ್ ತಪ್ಪದೆ ಫಾಲೋ ಮಾಡಿ

  ಲಂಡನ್ ಮೂಲದ ಬಾಟಿಕ್ ಸಂಸ್ಥೆ ಎಟನ್‌ಬ್ರಿಡ್ಜ್ ಪಾರ್ಟ್‌ನರ್ಸ್‌ನ ಪಾಲುದಾರರಾದ ಕ್ಲೇರ್ ಒ'ಡೊನೊವನ್ ತಿಳಿಸಿರುವಂತೆ ನಡುವಯಸ್ಸಿನ ವೃತ್ತಿ ಆಯ್ಕೆ ಪ್ರಮುಖ ವಿಧಾನವೆಂದು ಗುರುತಿಸಿದ್ದಾರೆ. ಯುಕೆ ಮತ್ತು ಫ್ರಾನ್ಸ್‌ನಲ್ಲಿ, ಈ ಟ್ರೆಂಡ್ ಹೆಚ್ಚು ಪ್ರಚಲಿತದಲ್ಲಿದೆ. ಕಂಪನಿಗಳು ಅನುಭವಿ ಮ್ಯಾನೇಜರ್‌ಗಳು ಮತ್ತು ಸಿ-ಸೂಟ್ ಕಾರ್ಯನಿರ್ವಾಹಕರನ್ನು ಅಲ್ಪಾವಧಿಯಲ್ಲಿ ಕಾರ್ಯಯೋಜನೆಯಲ್ಲಿ ಕೆಲಸ ಮಾಡಲು ನೇಮಿಸಿಕೊಳ್ಳುತ್ತವೆ ಎಂಬುದು ಅವರ ಹೇಳಿಕೆಯಾಗಿದೆ.

  ವಯಸ್ಸಿಗಿಂತ ಪ್ರತಿಭೆಗೆ ಮಾನ್ಯತೆ ನೀಡಿ
  ಹಸಿವು, ಹೆಚ್ಚಿನ ಶಕ್ತಿ ಮತ್ತು ಡಿಜಿಟಲ್ ಸ್ಥಳೀಯ ಪದಗಳ ಬಗ್ಗೆ ತಿಳಿದಿರಲಿ. ವಯಸ್ಸನ್ನು ಆಧರಿಸಿ ಕೌಶಲ್ಯವನ್ನು ಅಳತೆ ಮಾಡದಿರಿ ಎಂದು ಕ್ಲೇರ್ ತಿಳಿಸಿದ್ದಾರೆ. ಇನ್ನು ಐವತ್ತರ ನಂತರ ವೃತ್ತಿಜೀವನವನ್ನು ಮುಂದುವರಿಸಲು ಹಲವಾರು ಆಯ್ಕೆಗಳಿವೆ ಎಂಬುದನ್ನು ಕ್ಲೇರ್ ತಿಳಿಸಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಸಾಹಸೋದ್ಯಮ ಬಂಡವಾಳ ಮತ್ತು ಖಾಸಗಿ ಇಕ್ವಿಟಿ ಉದ್ಯಮಗಳ ಆರಂಭಿಕ ಪ್ರವರ್ತಕರಲ್ಲಿ ಒಬ್ಬರಾದ ಅಲನ್ ಪ್ಯಾಟ್ರಿಕೋಫ್ ಎಪ್ಪತ್ತೆರಡರಲ್ಲಿ ಹೊಸ ವ್ಯವಹಾರವನ್ನು ಪ್ರಾರಂಭಿಸಿದರು ನಂತರ 85 ರಲ್ಲಿ ಇನ್ನೊಂದು ಸಂಸ್ಥೆಯನ್ನು ಸ್ಥಾಪಿಸಿದರು.

  ಹ್ಯಾನನ್ ತಮ್ಮ ಲೇಖನದಲ್ಲಿ ವಯಸ್ಸನ್ನು ಆಧರಿಸಿ ವೃತ್ತಿ ಆಯ್ಕೆಮಾಡಿಕೊಳ್ಳಿ ಎಂಬ ಸಲಹೆಯನ್ನು ನೀಡಿದ್ದಾರೆ. ಐವತ್ತರ ಹರೆಯದಲ್ಲಿ ಕಾರ್ಪೋರೇಟ್ ವಲಯಕ್ಕೆ ಪ್ರವೇಶಿಸುತ್ತೀರಿ ಎಂದಾದಲ್ಲಿ ಅದಕ್ಕೆ ಬೇಕಾದ ಕೌಶಲ್ಯಗಳನ್ನು ಅರಿತುಕೊಳ್ಳಿ ಎಂದು ತಿಳಿಸುತ್ತಾರೆ. ಇದರಿಂದ ಕಂಪನಿಯ ಬಗ್ಗೆ ಜ್ಞಾನ, ಅನುಭವ ಮತ್ತು ಜನರ ಕೌಶಲ್ಯಗಳು ಅವರಿಗೆ ಹೊಸ ವೃತ್ತಿ ನಿರ್ದೇಶನವನ್ನು ರಚಿಸಲು ಅವಕಾಶ ದೊರೆಯುತ್ತದೆ ಎಂಬುದು ಹ್ಯಾನನ್ ಅಭಿಪ್ರಾಯವಾಗಿದೆ.

  ಸ್ವಂತ ಉದ್ಯಮಿಯಾಗಲು ಇರಬೇಕಾದ ಬಂಡವಾಳವೇನು?
  ಉದ್ಯಮಿಯಾಗಲು ಕಾರ್ಪೋರೇಟ್ ವಲಯವನ್ನು ತ್ಯಜಿಸುವವರಿಗೆ ತಾವು ಸಂಪಾದಿಸಿದ ವೃತ್ತಿ ಕೌಶಲ್ಯ, ಜ್ಞಾನ ಹಾಗೂ ಸಂಪರ್ಕಗಳು ಸಹಕಾರಿಯಾಗಿರುತ್ತವೆ ಇದರಿಂದ ವಯಸ್ಸಾದರೂ ತಮ್ಮ ಸ್ವಂತ ಉದ್ಯಮದಲ್ಲಿ ತೊಡಗಿಸಿಕೊಳ್ಳಬಹುದು ಎಂದು ಹ್ಯಾನನ್ ಹೇಳುತ್ತಾರೆ. ಎವಿಂಗ್ ಮರಿಯನ್ ಕೌಫ್‌ಮನ್ ಫೌಂಡೇಶನ್‌ನ 2019 ರ ಅಧ್ಯಯನವು ಸರಿಸುಮಾರು 25% ದಷ್ಟು ಹೊಸ ಉದ್ಯಮಿಗಳು ಐವತ್ತೈದು ಹಾಗೂ ಅರವತ್ತನಾಲ್ಕು ನಡುವಿನವರು ಎಂಬುದನ್ನು ತಿಳಿಸಿದೆ. ಇಪ್ಪತ್ತು ವರ್ಷಗಳಿಗಿಂತ ಈ ಅಂಕಿ ಅಂಶ ದ್ವಿಗುಣಗೊಂಡಿದೆ ಎಂದು ಅಧ್ಯಯನವು ಗುರುತಿಸಿದೆ.

  ವಾಷಿಂಗ್ಟನ್ ರಾಜ್ಯದ ವಕೀಲರಾದ ಡೇವ್ ಬೇಟ್‌ಮ್ಯಾನ್ ಮತ್ತು ಅವರ ಪತ್ನಿ ಟ್ರುಡಿ, ಎಮರ್ಜೆನ್ಸಿ ಕೊಠಡಿಯ ದಾದಿಯಾಗಿ ಸೇವೆ ಸಲ್ಲಿಸಿದವರು, ಇದೀಗ ಹವಾಯಿಯ ಕೋನಾದಲ್ಲಿ ಕಾಫಿ ಬೆಳೆಗಾರರಾಗಿದ್ದಾರೆ ಇಬ್ಬರೂ ದಂಪತಿಗಳು ತಮ್ಮ ಐವತ್ತರ ವಯಸ್ಸಿನಲ್ಲಿ ಹವಾಯಿಯನ್ ಫಾರ್ಮ್‌ಗಳನ್ನು ಪ್ರಾರಂಭಿಸಿದರು.

  ಇದನ್ನೂ ಓದಿ:  Mindful Everyday: ಯಾವಾಗ್ಲೂ ಸಮಾಧಾನದಿಂದಿರಲು ಇಲ್ಲಿವೆ ಕೆಲವು ಸಲಹೆಗಳು

  ಇನ್ನು ಲಾಭರಹಿತ ವಲಯಕ್ಕೆ ಆದ್ಯತೆ ನೀಡುವುದೂ ಕೂಡ ನಡುಹರೆಯದಲ್ಲಿ ಧನಾತ್ಮಕವಾದುದು ಎಂಬುದು ಹ್ಯಾನನ್ ಕಿವಿಮಾತಾಗಿದೆ ಅಂದರೆ ಚ್ಯಾರಿಟಿ ಬೋರ್ಡ್‌ಗೆ ಸೇರ್ಪಡೆಗೊಳ್ಳುವುದು, ಸಮಯವನ್ನು ಪ್ರೀತಿಪಾತ್ರರಿಗಾಗಿ ಮೀಸಲಿಡುವುದು, ಪ್ರಮಾಣ ಪತ್ರಗಳನ್ನು, ಡಿಗ್ರಿಗಳನ್ನು ಸಂಪಾದಿಸುವುದು ಹೀಗೆ ಮಾಡುವುದರಿಂದ ಮಾನಸಿಕ ನೆಮ್ಮದಿ ಕೂಡ ದೊರೆಯುತ್ತದೆ ಇದಕ್ಕೆ ಉದಾಹರಣೆಯೆಂದರೆ ದೀರ್ಘಕಾಲ ವಾಲ್ ಸ್ಟ್ರೀಟ್ ಕಾರ್ಯನಿರ್ವಾಹಕರಾಗಿ ಕೆಲಸ ಮಾಡಿದ ಡೊನ್ನಾ ಎಮ್ಮಾ ತಮ್ಮ ಐವತ್ತರ ವಯಸ್ಸಿನಲ್ಲಿ ಸ್ನಾತಕೋತ್ತರ ಪದವೀಧರರಾದರು. ಇದೀಗ ಆಕೆ ಮಾಸ್ ಜನರಲ್ ಹಾಸ್ಪಿಟಲ್‌ನ ಲೀಡರ್‌ಶಿಪ್ ಕೌನ್ಸಿಲ್ ಫಾರ್ ಸೈಕಿಯಾಟ್ರಿಯ ಸಹ-ಅಧ್ಯಕ್ಷರಾಗಿದ್ದಾರೆ. ಹೀಗೆ ನಡುವಯಸ್ಸಿನಲ್ಲಿ ನೀವು ಸಂಪಾದಿಸುವ ಡಿಗ್ರಿಗಳು ವೃತ್ತಿಯಲ್ಲೂ ಮನ್ನಣೆಯನ್ನು ತಂದುಕೊಡುತ್ತವೆ ಎಂಬುದು ಹ್ಯಾನನ್ ಅಭಿಪ್ರಾಯವಾಗಿದೆ.
  Published by:Ashwini Prabhu
  First published: