• Home
  • »
  • News
  • »
  • career
  • »
  • Employment Bond: ಬಾಂಡ್​ಗೆ ಸಹಿ ಮಾಡಿರುವ ಉದ್ಯೋಗಿ ಕೆಲಸ ಬಿಟ್ಟರೆ ಕಂಪನಿಗೆ ₹10 ಲಕ್ಷ ಕೊಡಬೇಕೇ?

Employment Bond: ಬಾಂಡ್​ಗೆ ಸಹಿ ಮಾಡಿರುವ ಉದ್ಯೋಗಿ ಕೆಲಸ ಬಿಟ್ಟರೆ ಕಂಪನಿಗೆ ₹10 ಲಕ್ಷ ಕೊಡಬೇಕೇ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಲಸಕ್ಕೆ ಜಾಯ್ನ್​ ಆಗುವ ವೇಳೆ ನೀವು ಎಂಪ್ಲಾಯ್​​ಮೆಂಟ್​ ಬಾಂಡ್​ಗೆ ಸಹಿ ಮಾಡಿದ್ದು, 3 ವರ್ಷದೊಳಗೆ ನೀವೇನಾದರೂ ಕೆಲಸ ಬಿಟ್ಟರೆ ದಂಡವಾಗಿ ಕಂಪನಿಗೆ 10 ಲಕ್ಷ ನೀಡಬೇಕು. ಇಲ್ಲವಾದಲ್ಲಿ ಕೋರ್ಟ್​​ನಲ್ಲಿ ನಿಮ್ಮ ವಿರುದ್ಧ ಕೇಸ್​ ಹಾಕುತ್ತೇವೆ ಎಂದು HR ಹೇಳುತ್ತಾರೆ.

  • Share this:

ನೀವು ಫ್ರೆಶರ್​ (Freshers) ಆಗಿರಬಹುದು ಇಲ್ಲವೇ ಈಗಾಗಲೇ ಕೆಲಸದಲ್ಲಿರಬಹುದು (Employee). ನಿಮಗೆ ಬೇರೆ ಕಂಪನಿಯಿಂದ ಒಂದೊಳ್ಳೆಯ ಜಾಬ್​​ ಆಫರ್​ (Job Offer) ಸಿಗುತ್ತೆ. ಆಕರ್ಷಕ ಸಂಬಳ, ಹುದ್ದೆ ಎಲ್ಲವೂ ಆ ಉದ್ಯೋಗದಲ್ಲಿರುತ್ತೆ (High Salary Positions). ಖುಷಿಯಿಂದಲೇ ಹೊಸ ಕೆಲಸಕ್ಕೆ ಸೇರುವ ನಿಮಗೆ ಕೆಲ ತಿಂಗಳುಗಳು ನಂತರ ಭ್ರಮನಿರತವಾಗುತ್ತೆ. ತಾನು ಬಯಸಿದ ಕೆಲಸ ಇದಲ್ಲ ಎನಿಸುತ್ತೆ. ಇಲ್ಲವೇ ನಿಮಗೆ ಬೇರೆ ಕಂಪನಿಯಿಂದ ಮತ್ತಷ್ಟು ಒಳ್ಳೆಯ ಕೆಲಸದ ಆಫರ್​ ಸಿಗಬಹುದು.  ಆಗ ನೀವು ಕೆಲಸವನ್ನು ಬಿಡಲು ಮುಂದಾಗುತ್ತೀರಿ. ಕಂಪನಿಯ HR ಗೆ ರಿಸೈನ್​ ಲೆಟರ್​ ಕೂಡ ನೀಡುತ್ತೀರಿ. ಆದರೆ ಅವರು ನಿಮ್ಮನ್ನು ಕ್ಯಾಬಿನ್​ಗೆ ಕರೆದು ಕೆಲಸ ಬಿಡಲು ಮುಂದಾಗಿದ್ದೀರಾ ಎಂದು ಪ್ರಶ್ನಿಸುತ್ತಾರೆ. ಹೌದು ಅಂತ ನೀವು ಹೇಳುತ್ತಲೇ, ನೀವು ಕೆಲಸ ಬಿಡಲು ಸಾಧ್ಯವಿಲ್ಲ ಎಂದು HR ಕುಡ್ಡಿ ತುಂಡಾದಂತೆ ಹೇಳಿಬಿಡುತ್ತಾರೆ. ಕೆಲಸಕ್ಕೆ ಜಾಯ್ನ್​ ಆಗುವ ವೇಳೆ ನೀವು ಎಂಪ್ಲಾಯ್​​ಮೆಂಟ್​ ಬಾಂಡ್​ಗೆ ಸಹಿ ಮಾಡಿದ್ದು, 3 ವರ್ಷದೊಳಗೆ ನೀವೇನಾದರೂ ಕೆಲಸ ಬಿಟ್ಟರೆ ದಂಡವಾಗಿ ಕಂಪನಿಗೆ 10 ಲಕ್ಷ ನೀಡಬೇಕು. ಇಲ್ಲವಾದಲ್ಲಿ ಕೋರ್ಟ್​​ನಲ್ಲಿ ನಿಮ್ಮ ವಿರುದ್ಧ ಕೇಸ್​ ಹಾಕುತ್ತೇವೆ ಎಂದು HR ಹೇಳುತ್ತಾರೆ.


ಮುಂದೇನು ಮಾಡುವುದು?


ಹೌದು, ಬಹುತೇಕ ಕಂಪನಿಗಳು ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವಾಗ 1, 2 ಇಲ್ಲವೇ 3 ವರ್ಷಗಳ ಬಾಂಡ್​ಗೆ ಸಹಿ ಮಾಡಿಸಿಕೊಳ್ಳುತ್ತಾರೆ. ಕೆಲಸಕ್ಕೆ ಸೇರುವಾಗ ಇದನ್ನು ಗಂಭೀರವಾಗಿ ಪರಿಗಣಿಸದ ಉದ್ಯೋಗಿಗೆ ನಂತರದ ದಿನಗಳಲ್ಲಿ ಅದೇ ಬಾಂಡ್​ ಬಿಸಿ ತುಪ್ಪವಾಗುತ್ತೆ. ಉದ್ಯೋಗಿ ಬೇರೆ ವಿಧಿ ಇಲ್ಲದೇ ಇಷ್ಟವಿಲ್ಲದ ಕೆಲಸದಲ್ಲೇ ಮುಂದುವರಿಯಲು ಮುಂದಾಗುತ್ತಾರೆ. ಆದರೆ ಸ್ವಲ್ಪ ತಡೆಯಿರಿ ನೀವು ಬಾಂಡ್​ಗೆ ಸಹಿ ಮಾಡಿದ್ದೀರಿ ಎಂದ ಮಾತ್ರಕ್ಕೆ ಕಂಪನಿ ಹೇಳಿದಂತೆ ಇಷ್ಟವಿಲ್ಲದಿದ್ದರೂ ಅವರ ಬಳಿ ಕೆಲಸ ಮುಂದುವರೆಸುವ ಅಗತ್ಯವಿಲ್ಲ.


Career Tips in kannada every employee should know How to Deal with bad Boss
ಸಾಂದರ್ಭಿಕ ಚಿತ್ರ


ಕಾರ್ಮಿಕರ ಕಾನೂನು ಏನು ಹೇಳುತ್ತೆ?


ಕಾನೂನು ಪ್ರಕಾರ ಎಂಪ್ಲಾಯ್​​ಮೆಂಟ್​ ಬಾಂಡ್​ನಿಂದ ಅವರು ನಿಮಗೆ 10 ಲಕ್ಷ ದಂಡ ಇಲ್ಲವೇ ಕಾನೂನು ಹೋರಾಟಕ್ಕೆ ಮುಂದಾಗಲು ಸಾಧ್ಯವಿಲ್ಲ. ಇದಕ್ಕಾಗಿ ನೀವು ಭಾರತೀಯ ನೌಕರರ ಕಾನೂನನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಯಾವುದೇ ಉದ್ಯೋಗಿಯನ್ನು ಅವರ ಇಚ್ಛೆಗೆ ವಿರುದ್ಧವಾಗಿ ಕಂಪನಿ ಅವರಿಂದ ಕೆಲಸ ಪಡೆಯಲು ಸಾಧ್ಯವಿಲ್ಲ. ಉದ್ಯೋಗಿಗೆ ಬೇರೆಡೆ ಒಳ್ಳೆಯ ಅವಕಾಶ ಬಂದರೆ ಅದನ್ನು ತಡೆಯಲು ಕೂಡ ಸಾಧ್ಯವಿಲ್ಲ.


ಇದನ್ನೂ ಓದಿ: Notice Period ಮಾಡದೇ ಸಡನ್ ಆಗಿ ಕೆಲಸ ಬಿಟ್ಟರೆ, ಯಾವೆಲ್ಲಾ ಸಮಸ್ಯೆ ಎದುರಾಗುತ್ತೆ?


ಯಾವ ಹಣವನ್ನು ಉದ್ಯೋಗಿ ನೀಡಬೇಕಾಗುತ್ತೆ?


ಹಾಗಾದರೆ ಕಂಪನಿ ಮಾಡಿಕೊಳ್ಳುವ ಬಾಂಡ್​ಗೆ ಯಾವುದೇ ಬೆಲೆ ಇಲ್ಲವೇ? ಅದು ಪೂರ್ಣ ಸತ್ಯವಲ್ಲ. ನೀವೇನಾದರೂ ಬಾಂಡ್​ಗೆ ಸಹಿ ಹಾಕಿದ್ದರೆ, ಅಲ್ಲಿ ನಿಗದಿಪಡಿಸಿದ ಅವಧಿಗಿಂತ ಮೊದಲೇ ಕೆಲಸ ಬಿಡಲು ಮುಂದಾಗಿದ್ದರೆ. ಅವರು ನಿಮಗೆ ಕೆಲಸದ ಸಂಬಂಧ ತರಬೇತಿ ಏನಾದರೂ ನೀಡಿದ್ದರೆ ಅದರ ಶುಲ್ಕವನ್ನು ಮಾತ್ರ ನೀವು ಹಿಂತಿರುಗಿಸಬೇಕು. ಯಾವುದೇ ಟ್ರೈನಿಂಗ್ ನೀಡಿಲ್ಲವಾದರೆ ಉದ್ಯೋಗಿ ಯಾವುದೇ ಮೊತ್ತವನ್ನು ಕಂಪನಿಗೆ ನೀಡಬೇಕಾಗಿಲ್ಲ.


Portrait of smiling young man holding box of personal belongings being hired to work in business company, copy space


ಕೋರ್ಟ್​ ಏನು ಹೇಳಿದೆ?


ಇನ್ನು ಕಂಪನಿ ಹೇಳುವಂತೆ ದಂಡವಾಗಿ 10 ಲಕ್ಷ ರೂಪಾಯಿಯನ್ನು ಕಟ್ಟುವ ಅಗತ್ಯವಂತು ಇಲ್ಲವೇ ಇಲ್ಲ. ಇದು ಕಾರ್ಮಿಕರ ಕಾನೂನಿಗೆ ವಿರುದ್ಧವಾಗಿದೆ. ಇನ್ನು ಕೋರ್ಟ್​ನಲ್ಲಿ ಕೇಸ್​ ಹಾಕುತ್ತೇವೆ ಎಂದು ಸಹ ಕಂಪನಿ ನಿಮ್ಮನ್ನು ಹೆದರಿಸುವಂತಿಲ್ಲ. ಇದು ಭಾರತೀಯ ಕಾನೂನಿ ಉಲ್ಲಂಘನೆಯಾಗುತ್ತೆ. ಇದೇ ಮಾದರಿಯ ಅನೇಕ ಕೇಸ್​ಗಳಲ್ಲಿ ಕೋರ್ಟ್​ ಸ್ಪಷ್ಟವಾಗಿ ಹೇಳಿದೆ. ಉದ್ಯೋಗಿಗೆ ಬೇರೆಡೆ ಉದ್ಯೋಗಾವಕಾಶ ಬಂದರೆ, ಅವರಿಗೆ ಆಸಕ್ತಿ ಇದ್ದರೆ. ಅದನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ.  ಉದ್ಯೋಗಿ ನಿಮ್ಮಲ್ಲಿಯೇ ಕೆಲಸ ಮಾಡಬೇಕು ಎಂದು ಯಾವ ಕಂಪನಿಯೂ ಬಾಂಡ್​ಗಳ ಮೂಲಕ ಬಲವಂತಪಡಿಸುವಂತಿಲ್ಲ ಎಂದು ಹೇಳಿದೆ.


ನೀವೇನಾದರೂ ಇಂತಹ ಬಾಂಡ್​ಗಳ ಮಧ್ಯೆ ಸಿಲುಕ್ಕಿದ್ದರೆ ಇನ್ಮುಂದೆ ಧೈರ್ಯವಾಗಿ ಅದನ್ನು ಎದುರಿಸಿ. ದಂಡ ಇಲ್ಲವೇ ಕೋರ್ಟ್​​ಗೆ ಅಲೆಸುತ್ತಾರೆ ಎಂದು ಹೆದರಿಕೊಳ್ಳುವ ಅಗತ್ಯವಿಲ್ಲ.

Published by:Kavya V
First published: