Digital Skills: ಭಾರತದಲ್ಲಿ ಹೆಚ್ಚು ಬೇಡಿಕೆಯಲ್ಲಿರುವ ಡಿಜಿಟಲ್ ಕೌಶಲ್ಯಗಳು ಇವೇ ನೋಡಿ

ಭಾರತದಲ್ಲಿ ಈಗ ಅತಿ ಹೆಚ್ಚು ಚಾಲ್ತಿಯಲ್ಲಿರುವ ಕೌಶಲ್ಯಗಳೆಂದರೆ ಡಿಜಿಟಲ್‌ ಕೌಶಲ್ಯಗಳಾಗಿವೆ. ಅವುಗಳನ್ನು ಹೆಚ್ಚು ಜನರು ಕಲಿಯಲು ಮುಂದಾಗುತ್ತಿದ್ದಾರೆ. ಆ ಕೌಶಲ್ಯಗಳಿಂದ ಅತಿ ಬೇಗನೆ ಉದ್ಯೋಗಗಳು ಸಿಗುತ್ತಿರುವುದರಿಂದ ಹೆಚ್ಚಿನ ಬೆಲೆ ಬಂದಿದೆ. ಡಿಜಿಟಲ್‌ ಕೌಶಲ್ಯಗಳು ಯಾವುವು? ಅವುಗಳು ಯಾವ ಉದ್ದೇಶವನ್ನು ಹೊಂದಿವೆ? ಎಂಬುದರ ಸಂಪೂರ್ಣ ಚಿತ್ರಣ ಈ ಲೇಖನದಲ್ಲಿ ನಾವು ನೀಡಲಿದ್ದೇವೆ. ಮತ್ತಷ್ಟು ತಿಳಿಯಲು ಮುಂದೆ ಓದಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಭಾರತದಲ್ಲಿ (India) ಈಗ ಅತಿ ಹೆಚ್ಚು ಚಾಲ್ತಿಯಲ್ಲಿರುವ ಕೌಶಲ್ಯಗಳೆಂದರೆ ಡಿಜಿಟಲ್‌ ಕೌಶಲ್ಯಗಳಾಗಿವೆ (Digital Skill). ಅವುಗಳನ್ನು ಹೆಚ್ಚು ಜನರು ಕಲಿಯಲು ಮುಂದಾಗುತ್ತಿದ್ದಾರೆ. ಆ ಕೌಶಲ್ಯಗಳಿಂದ ಅತಿ ಬೇಗನೆ ಉದ್ಯೋಗಗಳು ಸಿಗುತ್ತಿರುವುದರಿಂದ ಹೆಚ್ಚಿನ ಬೆಲೆ ಬಂದಿದೆ. ಡಿಜಿಟಲ್‌ ಕೌಶಲ್ಯಗಳು ಯಾವುವು? ಅವುಗಳು ಯಾವ ಉದ್ದೇಶವನ್ನು ಹೊಂದಿವೆ? ಎಂಬುದರ ಸಂಪೂರ್ಣ ಚಿತ್ರಣ ಈ ಲೇಖನದಲ್ಲಿ ನಾವು ನೀಡಲಿದ್ದೇವೆ. ಇದರ ಬಗ್ಗೆ ಕ್ವೆಸ್‌ ಕಾರ್ಪೊರೇಷನ್‌ (Ques Corporation), “ಏಪ್ರಿಲ್-ಜೂನ್ 2022 ರ ಸಮಯಕ್ಕೆ ಡೇಟಾ ಅನಾಲಿಟಿಕ್ಸ್, ಜಾವಾ ತಂತ್ರಜ್ಞಾನಗಳು, ಕ್ಲೌಡ್ ಇನ್ಫ್ರಾ ತಂತ್ರಜ್ಞಾನಗಳು (Cloud Infra Technology) ಮತ್ತು UI ಮತ್ತು UX ಸೆಕ್ಟರ್‌ಗಳು ಭೌಗೋಳಿಕತೆಗಳಾದ್ಯಂತ ಇಂಟೆಂಟ್‌ ಪಡೆಯುವ ಉನ್ನತ ಉದ್ದೇಶವನ್ನು ಹೊಂದಿರುವ ಉನ್ನತ ಡಿಜಿಟಲ್ ಕೌಶಲ್ಯಗಳು ಇವಾಗಿವೆ” ಎಂದು ಸಮೀಕ್ಷೆಯಲ್ಲಿ ಈ ಮಾಹಿತಿಯನ್ನು ಬಹಿರಂಗಪಡಿಸಿದೆ.

ಎಲ್ಲೆಲ್ಲಿ ಮತ್ತು ಯಾವ ಕೌಶಲ್ಯಗಳಿಗೆ ಬೇಡಿಕೆ ಇದೆ?

  • ಬೆಂಗಳೂರು (ಶೇ. 40) ಮತ್ತು ಹೈದರಾಬಾದ್ (ಶೇ. 30) ನಲ್ಲಿ ಡೇಟಾ ಅನಾಲಿಟಿಕ್ಸ್‌ಗೆ ಹೆಚ್ಚಿನ ಬೇಡಿಕೆಯಿದೆ.

  • ಅದೇ ಜಾವಾ ತಂತ್ರಜ್ಞಾನಗಳು ಪುಣೆ (ಶೇ. 40) ಮತ್ತು ಬೆಂಗಳೂರಿನಲ್ಲಿ (ಶೇ. 25) ಗರಿಷ್ಠ ಬೇಡಿಕೆಯನ್ನು ಕಂಡಿವೆ.

  • ಕ್ಲೌಡ್ ಇನ್‌ಫ್ರಾ ತಂತ್ರಜ್ಞಾನಗಳು ಬೆಂಗಳೂರಿನಲ್ಲಿ (ಶೇ .60) ಮತ್ತು ಚೆನ್ನೈನಲ್ಲಿ (ಶೇ. 15) ಹೆಚ್ಚು ಜನಪ್ರಿಯವಾಗಿವೆ.

  • ಯುಐ ಮತ್ತು ಯುಎಕ್ಸ್ ತಂತ್ರಜ್ಞಾನಗಳು ಬೆಂಗಳೂರಿನಾದ್ಯಂತ (ಶೇ .72) ಮತ್ತು ಪುಣೆಯಲ್ಲಿ (ಶೇ. 14) ಬೇಡಿಕೆಯನ್ನು ಹೊಂದಿವೆ.

  • ಪೂರ್ಣ ಸ್ಟ್ಯಾಕ್ ತಂತ್ರಜ್ಞಾನಗಳು ಪುಣೆಯಾದ್ಯಂತ (ಶೇ .52) ) ಮತ್ತು ಬೆಂಗಳೂರು (ಶೇ .24) ಬೇಡಿಕೆಯನ್ನು ಹೊಂದಿವೆ.


ಇದರ ಕುರಿತು ಕ್ವೆಸ್ ಐಟಿ ಸಿಇಒ ಏನ್‌ ಹೇಳ್ತಾರೆ?
ಕ್ವೆಸ್ ಐಟಿ ಸಿಬ್ಬಂದಿಯ ಸಿಇಒ ವಿಜಯ್ ಶಿವರಾಮ್, “ಟೆಕ್ ನೇಮಕಾತಿ ಮಾರುಕಟ್ಟೆಯಲ್ಲಿ ತಲೆದೋರುತ್ತಿರುವಂತೆ ಕಾಣುತ್ತಿರುವಾಗ, ಫುಲ್ ಸ್ಟ್ಯಾಕ್ ತಂತ್ರಜ್ಞಾನಗಳಲ್ಲಿ ಮತ್ತು ಡೇಟಾ ಅನಾಲಿಟಿಕ್ಸ್ ವಿಷಯಗಳಂತಹ ಕೆಲವು ಕೌಶಲ್ಯಗಳು ಹೆಚ್ಚಿನ ಬೇಡಿಕೆಯಲ್ಲಿವೆ.

ಇದನ್ನೂ ಓದಿ: Good News: SSLC - PUC ವಿದ್ಯಾರ್ಥಿಗಳಿಗೆ 1,25,000 ವಿದ್ಯಾರ್ಥಿ ವೇತನ! ಅರ್ಜಿ ಸಲ್ಲಿಕೆ ಕೂಡ ತುಂಬಾ ಸಿಂಪಲ್​

ಸಂಸ್ಥೆಗಳು ತಮ್ಮ ಡಿಜಿಟಲ್ ಮತ್ತು ಕ್ಲೌಡ್ ಟ್ರಾನ್ಸ್‌ಫರ್ಮೇಷನ್ ಪ್ರಯಾಣದಲ್ಲಿ ಮುಂದುವರಿದಂತೆ, ನಾವು ನೇಮಕಾತಿಯ ಹೆಚ್ಚಳವನ್ನು ಮಾಡಲು ಚಿಂತನೆ ನಡೆಸಿದ್ದೇವೆ. ಸ್ಟಾರ್ಟ್‌ಅಪ್ ನೇಮಕಾತಿಯು ಮಧ್ಯಮ ಮಟ್ಟದಲ್ಲಿದೆ. ಅದರ ಜೊತೆಗೆ ಮತ್ತೊಂದೆಡೆ ಭಾರತವು ವಿಶೇಷವಾಗಿ ಟೆಕ್ ಮತ್ತು ಆರ್&ಡಿ ಕ್ಷೇತ್ರದಲ್ಲಿ ತನ್ನ ಕ್ಷೀಪ್ರ ಬೆಳವಣಿಗೆಯನ್ನು ಕಾಣುತ್ತಲೇ ಇದೆ” ಎಂದು ಹೇಳಿದರು.

ಕ್ವೆಸ್ ವರದಿ ಏನು ಹೇಳುತ್ತಿದೆ?
ಕ್ವೆಸ್ ವರದಿಯ ಪ್ರಕಾರ, “ಉನ್ನತ ಡಿಜಿಟಲ್ ಕೌಶಲ್ಯಗಳಿಗಾಗಿ ಭೌಗೋಳಿಕ ಸ್ಥಳಗಳಾದ್ಯಂತ ನೇಮಕಾತಿ ಚಟುವಟಿಕೆಯು ಪ್ರಾಥಮಿಕವಾಗಿ ಭಾರತದಲ್ಲಿ ಐಟಿ ಮೆಟ್ರೋ ಹಬ್‌ಗಳಿಂದ ಪ್ರಾಬಲ್ಯ ಹೊಂದಿದೆ. ಹೈದರಾಬಾದ್ (ಶೇ. 34) ಹೆಚ್ಚು ಬೇಡಿಕೆಯಿದ್ದು, ಬೆಂಗಳೂರು (ಶೇ. 33), ಮುಂಬೈ (ಶೇ. 12), ಪುಣೆ (ಶೇ. 9) ಮತ್ತು ಚೆನ್ನೈ (ಶೇ. 5) ಬೇಡಿಕೆಯನ್ನು ಹೊಂದಿವೆ. ಕಂಪನಿಗಳು ಇಂದು ತಮ್ಮ ಅಸ್ತಿತ್ವವನ್ನು ಗಡಿಯಾಚೆ ವಿಸ್ತರಿಸುವುದರೊಂದಿಗೆ, ಎನ್‌.ಸಿ.ಆರ್, ಅಹಮದಾಬಾದ್, ಕೋಲ್ಕತ್ತಾ, ಭುವನೇಶ್ವರ ಮತ್ತು ಜೈಪುರದಂತಹ ನಗರಗಳು ಡಿಜಿಟಲ್ ಕೌಶಲ್ಯಗಳಿಗೆ ಹೆಚ್ಚಿದ ಬೇಡಿಕೆಯನ್ನು ಸಹ ಗಮನಿಸಿವೆ" ಎಂದು ಸಮೀಕ್ಷೆಯ ವರದಿ ಪ್ರಕಟಿಸಿದೆ.

ಇದನ್ನೂ ಓದಿ:  Startup: ಸ್ಟಾರ್ಟ್​ಅಪ್​ ಕಂಪೆನಿ ಸೇರುವ ಮುನ್ನ ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಿ! ನಿಮ್ಗೆ ಸಹಾಯ ಆಗುತ್ತೆ

"ಇಂದು ಹೆಚ್ಚು ಹೆಚ್ಚು ಕಂಪನಿಗಳು ತಮ್ಮ ವ್ಯವಹಾರಗಳನ್ನು ಹೆಚ್ಚಿಸಲು ಮತ್ತು ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಪ್ರಯೋಜನವನ್ನು ಪಡೆಯಲು ಅತ್ಯಾಧುನಿಕ ಡಿಜಿಟಲ್ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುತ್ತಿವೆ. ದೊಡ್ಡ ತಂತ್ರಜ್ಞಾನದ ರೂಪಾಂತರಗಳು, ವರ್ಚುವಲೈಸೇಶನ್ ಮತ್ತು ಸಂಪರ್ಕದ ಅಳವಡಿಕೆ ಮತ್ತು ಕ್ಲೀನ್ ತಂತ್ರಜ್ಞಾನಗಳು ದೇಶದಲ್ಲಿ ಡಿಜಿಟಲ್ ಉದ್ಯಮದ ದಾರಿಯನ್ನು ಮತ್ತಷ್ಟು ಬದಲಾಯಿಸಿವೆ ಮತ್ತು ಹೊಸ ತಂತ್ರಜ್ಞಾನ ತುಂಬಿದ ವಿಷಯಗಳಿಗೆ ಬೇಡಿಕೆಯು ಹೆಚ್ಚುತ್ತಿದೆ ಎಂದು ಅಂದಾಜಿಸಲಾಗಿದೆ” ಎಂದು ಸಮೀಕ್ಷೆ ವರದಿ ಈ ಮಾಹಿತಿಯನ್ನು ಸೇರಿಸಿದೆ.
Published by:Ashwini Prabhu
First published: