• Home
 • »
 • News
 • »
 • career
 • »
 • Virtual Meeting: ಉದ್ಯೋಗಿಗಳೇ ಹುಷಾರು, ವರ್ಚ್ಯುವಲ್ ಮೀಟಿಂಗ್ ವೇಳೆ ಇದನ್ನು ಮಾಡಬೇಡಿ

Virtual Meeting: ಉದ್ಯೋಗಿಗಳೇ ಹುಷಾರು, ವರ್ಚ್ಯುವಲ್ ಮೀಟಿಂಗ್ ವೇಳೆ ಇದನ್ನು ಮಾಡಬೇಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಮೀಟಿಂಗ್ ಗಳು ನಿಮ್ಮ ಕೆಲಸದ ಸಮಯದ ಒಂದು ದೊಡ್ಡ ಭಾಗವಾಗಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಇದರಲ್ಲಿ ಅತ್ಯುತ್ತಮವನ್ನು ಸಾಧಿಸುವುದು ಎಂದರೆ ನಿಮ್ಮ ದಿನದ ಕೆಲಸಕ್ಕೆ ಒಂದು ಹೊಸ ಮೆರುಗನ್ನು ತಂದು ಕೊಡುತ್ತಿದ್ದೀರಿ ಅಂತ ಅರ್ಥ. ಅಷ್ಟೇ ಅಲ್ಲದೆ ಇದು ನಿಮ್ಮ ವೈಯಕ್ತಿಕ ಬ್ರ್ಯಾಂಡ್ ಅನ್ನು ಸಹ ಹೆಚ್ಚಿಸುತ್ತಿದೆ ಎಂದರ್ಥ.

ಮುಂದೆ ಓದಿ ...
 • Trending Desk
 • 3-MIN READ
 • Last Updated :
 • Share this:

  ಸುಮಾರು ಎರಡೂವರೆ ವರ್ಷ ಎಂದರೆ ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿ ಶುರುವಾದಾಗಿನಿಂದ ಎಲ್ಲಾ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ‘ವರ್ಕ್ ಫ್ರಂ ಹೋಂ’  (Work from Home) ಅನ್ನು ನೀಡಿದ್ದು, ಬಹುತೇಕರು ತಮ್ಮ ಕಂಪನಿಯಲ್ಲಿ ದಿನನಿತ್ಯ ನಡೆಯುವ ವರ್ಚ್ಯುವಲ್ ಮೀಟಿಂಗ್ ಗಳಿಗೆ (Virtual Meetings) ಹೊಂದಿಕೊಂಡಿದ್ದಾರೆ ಅಂತ ಹೇಳಬಹುದು. ಬಹುತೇಕರು ಜೂಮ್ (Zoom Call) ಅಥವಾ ಗೂಗಲ್ ಮೀಟ್ (Google Meet), ಮೈಕ್ರೋಸಾಫ್ಟ್ ಟೀಮ್ಸ್ ಮತ್ತು ಸಿಸ್ಕೋ ವೆಬೆಕ್ಸ್ ನಲ್ಲಿ ನಡೆಯುವ ವರ್ಚ್ಯುವಲ್ ಮೀಟಿಂಗ್ ನ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


  ಆದರೆ ಇನ್ನೂ ಕೆಲವರು ಈ ಡಿಜಿಟಲ್ ಮೀಟಿಂಗ್ ಗಳನ್ನು ಕರಗತ ಮಾಡಿಕೊಳ್ಳುವಲ್ಲಿನ ಅವರ ಕೌಶಲ್ಯವು ಇನ್ನೂ ಸಹ ಪ್ರಬುದ್ಧವಾಗಿಲ್ಲ ಅಂತ ಹೇಳಬಹುದು.


  ವರ್ಚ್ಯುವಲ್ ಮೀಟಿಂಗ್ ಗಳು ನಿಮ್ಮ ವೃತ್ತಿಜೀವನದ ಯಶಸ್ಸಿಗೆ ಏಕೆ ಅತ್ಯಗತ್ಯ?


  ಈಗ ಮತ್ತೆ ಬಹುತೇಕ ಕಂಪನಿಗಳು ತಮ್ಮ ಆಫೀಸಿನಿಂದ ಕೆಲಸ ಶುರು ಮಾಡಿದ್ದು, ಈ ಡಿಜಿಟಲ್ ಮೀಟಿಂಗ್ ಗಳು ಪೂರ್ತಿಯಾಗಿ ನಿಂತಿವೆ ಅನ್ನೋ ಹಾಗಿಲ್ಲ. ಏಕೆಂದರೆ ಕೆಲವು ಜನರು ತಮ್ಮ ತಮ್ಮ ಕಚೇರಿಗೆ ಮರಳುತ್ತಿದ್ದರೂ, ಎಲ್ಲಾ ಸಭೆಗಳು ಅಲ್ಲದಿದ್ದರೂ ಕೆಲವು ಮೀಟಿಂಗ್ ಗಳು ಇನ್ನೂ ಸಹ ವರ್ಚ್ಯುವಲ್ ಆಗಿಯೇ ನಡೆಯುತ್ತಿವೆ.


  • ಈ ಮೀಟಿಂಗ್ ಗಳು ನಿಮ್ಮ ಕೆಲಸದ ಸಮಯದ ಒಂದು ದೊಡ್ಡ ಭಾಗವಾಗಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಇದರಲ್ಲಿ ಅತ್ಯುತ್ತಮವನ್ನು ಸಾಧಿಸುವುದು ಎಂದರೆ ನಿಮ್ಮ ದಿನದ ಕೆಲಸಕ್ಕೆ ಒಂದು ಹೊಸ ಮೆರುಗನ್ನು ತಂದು ಕೊಡುತ್ತಿದ್ದೀರಿ ಅಂತ ಅರ್ಥ. ಅಷ್ಟೇ ಅಲ್ಲದೆ ಇದು ನಿಮ್ಮ ವೈಯಕ್ತಿಕ ಬ್ರ್ಯಾಂಡ್ ಅನ್ನು ಸಹ ಹೆಚ್ಚಿಸುತ್ತಿದೆ ಎಂದರ್ಥ.

  • ನೀವು ಈ ರೀತಿಯ ಮೀಟಿಂಗ್ ಗಳಲ್ಲಿ ಪ್ರದರ್ಶಿಸುತ್ತಿರುವ ಕೌಶಲ್ಯಗಳು ನಿಮ್ಮ ವೃತ್ತಿಜೀವನದಲ್ಲಿ ತುಂಬಾನೇ ಮುಖ್ಯವಾಗುತ್ತವೆ. ಆದರೆ ಅನೇಕ ವೃತ್ತಿಪರರು ತಮ್ಮ ಡಿಜಿಟಲ್ ಮೀಟಿಂಗ್ ಕೌಶಲ್ಯಗಳನ್ನು ಪರಿಪೂರ್ಣಗೊಳಿಸಲು ಅಷ್ಟೊಂದು ತಲೆಕೆಡಿಸಿಕೊಳ್ಳುತ್ತಿಲ್ಲ. ಏಕೆಂದರೆ ಆ ವಿಷಯದ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ ಎಂದು ಅವರು ಭಾವಿಸುತ್ತಾರೆ. ಆದರೆ ಸತ್ಯ ಏನೆಂದರೆ ಅನೇಕ ಉದ್ಯಮಗಳಲ್ಲಿ ನಮ್ಮ ಕ್ಲೈಂಟ್ ಗಳೊಂದಿಗೆ ಇಂತಹ ಮೀಟಿಂಗ್ ಗಳಲ್ಲಿ ನಾವು ಅನೇಕ ತಪ್ಪುಗಳನ್ನು ಮಾಡುತ್ತಿದ್ದೇವೆ. ಇದು ನಮ್ಮ ಕೆಲಸದ ಮೇಲೆ ಮತ್ತು ಕಂಪನಿಯ ಗುಣಮಟ್ಟದ ಮೇಲೂ ಸಹ ಪರಿಣಾಮ ಬೀರಬಹುದು.
  ವರ್ಚ್ಯುವಲ್ ಮೀಟಿಂಗ್ ನಲ್ಲಿ ಮಾಡುವ ತಪ್ಪುಗಳು ಇವು..


  • ಕ್ಯಾಮೆರಾ ಆನ್ ಆಗಿರುವುದಿಲ್ಲ: ವರ್ಚ್ಯುವಲ್ ಮೀಟಿಂಗ್ ನಲ್ಲಿ ಕೆಲವೊಮ್ಮೆ ನಿಮ್ಮ ಲ್ಯಾಪ್‌ಟಾಪ್ ನ ಕ್ಯಾಮೆರಾ ಆನ್ ಆಗಿರುವುದಿಲ್ಲ, ಅದು ನಿಮ್ಮನ್ನು ಅದೃಶ್ಯವಾಗಿಸುತ್ತದೆ ಮತ್ತು ನೀವು ಪ್ರಭಾವ ಬೀರಲು ಪ್ರಯತ್ನಿಸಿದರೆ ಅದು ಸರಿಯಾಗಿ ಕಾಣುವುದಿಲ್ಲ. ಇದಲ್ಲದೆ, ಸಭೆಯಲ್ಲಿದ್ದ ಜನರು ನೀವು ಏನನ್ನಾದರೂ ಮರೆ ಮಾಚುತ್ತಿದ್ದೀರಿ ಎಂದು ಭಾವಿಸುತ್ತಾರೆ ಅಥವಾ ಕೆಟ್ಟದಾಗಿ ಕಾಣಿಸುತ್ತದೆ.

  • ನಿಮ್ಮ ಕ್ಯಾಮೆರಾ ಸರಿಯಾದ ಸ್ಥಳದಲ್ಲಿರದಿರುವುದು: ಕೋವಿಡ್ ಸಾಂಕ್ರಾಮಿಕ ರೋಗದ ಆರಂಭದಲ್ಲಿ ಹೀಗೆ ಕ್ಯಾಮೆರಾ ಸರಿಯಾದ ಸ್ಥಳದಲ್ಲಿ ಇರದೆ ಇದ್ದಾಗ ನಗೆಪಾಟಿಲಿಗೆ ಗುರಿಯಾಗಿದ್ದ ಘಟನೆಗಳು ನಡೆದಿರುತ್ತವೆ. ಆಗ ವರ್ಚ್ಯುವಲ್ ಮೀಟಿಂಗ್ ಹೊಸತಾಗಿತ್ತು, ಆದರೆ ಈಗ ಕ್ಯಾಮೆರಾದಲ್ಲಿ ನಿಮ್ಮ ಹಣೆಯನ್ನು ತೋರಿಸುವುದು ಅಥವಾ ಪರದೆಯ ಎಡಭಾಗದಲ್ಲಿ ನಿಮ್ಮನ್ನು ನೋಡುವುದು ಇದೆಲ್ಲವೂ ನಿಮಗೆ ಮೀಟಿಂಗ್ ಬಗ್ಗೆ ಗಂಭೀರತೆ ಇಲ್ಲ ಎಂದು ಹೇಳುತ್ತದೆ. ಕ್ಯಾಮೆರಾ ಸರಿಯಾದ ಸ್ಥಳದಲ್ಲಿ ಇರದೆ ಇದ್ದಾಗ ಅದನ್ನು ಕೂಡಲೇ ನಿಮ ಸ್ನೇಹಿತರಿಗೆ ಅಥವಾ ಸಹದ್ಯೋಗಿಗಳಿಗೆ ಕೇಳಿ ಸರಿಪಡಿಸಿಕೊಳ್ಳುವುದು ಇದಕ್ಕೆ ಪರಿಹಾರವಾಗಿದೆ.  • ಹಸಿರು ಪರದೆಯನ್ನು ಬಳಸದೆ ವರ್ಚ್ಯುವಲ್ ಹಿನ್ನೆಲೆಯನ್ನು ಬಳಸುವುದು: ನೀವು ಮೀಟಿಂಗ್ ನಲ್ಲಿ ಇರುವಾಗ ನಿಮ್ಮ ಪರದೆಯ ಹಿನ್ನೆಲೆಯನ್ನು ಬದಲಾಯಿಸಿಕೊಳ್ಳುವುದು ತುಂಬಾನೇ ವಿಲಕ್ಷಣವಾಗಿ ಕಾಣಿಸುತ್ತದೆ ಮತ್ತು ಇದು ಬೇರೆಯವರನ್ನ ವಿಚಲಿತಗೊಳಿಸುತ್ತದೆ. ಹಸಿರು ಪರದೆಗಳು ತುಂಬಾ ಅಗ್ಗವಾಗಿವೆ, ಮತ್ತು ನಿಮ್ಮ ಗೃಹ ಕಚೇರಿಯಲ್ಲಿ ಸ್ಥಳವನ್ನು ತೆಗೆದುಕೊಳ್ಳದ ಅನೇಕ ಪೋರ್ಟಬಲ್ ಪರದೆಗಳಿವೆ.  • ಮೈಕ್ ಆನ್ ಅಥವಾ ಆಫ್ ಆಗಿದೆ ಎಂದು ತಿಳಿಯದೆ ಇರುವುದು: "ನೀವು ಮ್ಯೂಟ್ ನಲ್ಲಿದ್ದೀರಿ" ಎಂಬುದು 2020 ರಲ್ಲಿ ವರ್ಚ್ಯುವಲ್ ಮೀಟಿಂಗ್ ಗಳಲ್ಲಿ ನೀವು ತುಂಬಾನೇ ಸಲ ಕೇಳಿರುವ ಮಾತಾಗಿರಬಹುದು. ಆದರೆ ದುಃಖಕರವಾದ ವಿಷಯವೆಂದರೆ ಎರಡೂವರೆ ವರ್ಷವಾದರೂ ಸಹ ನಾವು ಅದನ್ನು ಇನ್ನೂ ಕೇಳುತ್ತಿದ್ದೇವೆ. ನಿಮಗೆ ನೆನಪಿಲ್ಲದಿದ್ದರೆ, ನೀವು ವರ್ಚ್ಯುವಲ್ ಮೀಟಿಂಗ್ ಗಳಲ್ಲಿದ್ದಾಗ ನಿಮ್ಮ ಪರದೆಯ ಮೇಲೆ ಪೋಸ್ಟ್-ಇಟ್ ಟಿಪ್ಪಣಿಯನ್ನು ಇರಿಸಿಕೊಳ್ಳಿ.
  • ಓದಲು ಅಸಾಧ್ಯವಾದ ವಿಷಯವನ್ನು ಸ್ಕ್ರೀನ್ ಮೇಲೆ ಹಂಚಿಕೊಳ್ಳುವುದು: ನೀವು ಓದಲು ಅಸಾಧ್ಯವಾದ ಮತ್ತು ಕಠಿಣವಾದ ವಿಷಯವನ್ನು ಸ್ಕ್ರೀನ್ ಮೇಲೆ ಹಂಚಿಕೊಂಡು ನಿಮ್ಮ ಸಹೋದ್ಯೋಗಿಗಳನ್ನು ಹೆಣಗಾಡುವಂತೆ ಮಾಡಬೇಡಿ. ಪರದೆಯನ್ನು ನಿಮ್ಮ ವೈಯಕ್ತಿಕ ಟೆಲಿಪ್ರಾಂಪ್ಟರ್ ಆಗಿ ಬಳಸಬೇಡಿ. ಆನ್ಲೈನ್ ಮೀಟಿಂಗ್ ಗಳಿಗಾಗಿ ಸಾಮಗ್ರಿಗಳನ್ನು ರಚಿಸುವಾಗ, 32 ಫಾಂಟ್ ಅಥವಾ ಅದಕ್ಕಿಂತ ಹೆಚ್ಚಿನದನ್ನು ಬಳಸಿ ಮತ್ತು ಅವರು ನೋಡುವ ಪದಗಳ ಸಂಖ್ಯೆಯನ್ನು ಮಿತಿಗೊಳಿಸಿ. ನಿಮ್ಮ ಪ್ರಸ್ತುತಿಗಾಗಿ ನೀವು ಸ್ಕ್ರಿಪ್ಟ್ ಅನ್ನು ಬಳಸಲು ಬಯಸಿದರೆ, ಅದನ್ನು ಟ್ಯಾಬ್ಲೆಟ್ ನಲ್ಲಿ ಅಥವಾ ನಿಮ್ಮ ಡೆಸ್ಕ್ ನಲ್ಲಿ ಹಾರ್ಡ್ ಕಾಪಿಯಲ್ಲಿ ಇರಿಸಿ. ಆಕರ್ಷಕ ಜಾಹೀರಾತು ಫಲಕಗಳನ್ನು ರಚಿಸುವ ಜಾಹೀರಾತುದಾರನಂತೆ, ನಿಮ್ಮ ಪ್ರೇಕ್ಷಕರನ್ನು ತೊಡಗಿಸಿಕೊಳ್ಳಲು ಆನ್-ಸ್ಕ್ರೀನ್ ಪ್ರಸ್ತುತಿಯನ್ನು ಬಳಸಿ.


  ಉದ್ಯೋಗ ಸಂದರ್ಶನಗಳಲ್ಲಿಯೂ ಸಹ ಇದು ತುಂಬಾನೇ ಮುಖ್ಯವಾಗುತ್ತದೆ..


  ಆಶ್ಚರ್ಯವೆಂಬಂತೆ ಉದ್ಯೋಗಕ್ಕಾಗಿ ಸಂದರ್ಶನ ಮಾಡುತ್ತಿರುವ ಅನೇಕ ಜನರು, 33 ಪ್ರತಿಶತದಷ್ಟು ಉದ್ಯೋಗದಾತರು ಪ್ರತ್ಯೇಕವಾಗಿ ವರ್ಚ್ಯುವಲ್ ಸಂದರ್ಶನದ ಪ್ರಕ್ರಿಯೆಯನ್ನು ಒದಗಿಸುತ್ತಾರೆ, ಹೆಚ್ಚುವರಿ 21 ಪ್ರತಿಶತದಷ್ಟು ಜನರು ಅಂತಿಮ ಸುತ್ತುಗಳಿಗೆ ಮಾತ್ರ ವೈಯಕ್ತಿಕ ಸಂದರ್ಶನಗಳನ್ನು ನಡೆಸುತ್ತಾರೆ ಎಂಬ ಅಂಶದ ಹೊರತಾಗಿಯೂ, ಒಂದು ಸಕಾರಾತ್ಮಕ ಆನ್-ಸ್ಕ್ರೀನ್ ಉಪಸ್ಥಿತಿಯ ಪ್ರಾಮುಖ್ಯತೆಯ ಬಗ್ಗೆ ಅರಿತುಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ.


  ಉದ್ಯೋಗಾಕಾಂಕ್ಷಿಗಳು ವರ್ಚ್ಯುವಲ್ ಸಂದರ್ಶನ ನೀಡುವಾಗ ಮಾಡುವ ತಪ್ಪುಗಳು ಇಲ್ಲಿವೆ ನೋಡಿ.


  • ಸಂದರ್ಶಕರ ಮುಖವನ್ನು ಸರಿಯಾಗಿ ನೋಡದೆ ಇರುವುದು ಮತ್ತು ಬೇರೆ ಕಡೆಯಲ್ಲಿ ದಿಟ್ಟಿಸಿ ನೋಡುವುದು.

  • ಗೊಂದಲಮಯ ಕೋಣೆಯಲ್ಲಿ ಕುಳಿತುಕೊಳ್ಳುವುದು

  • ಸ್ಕ್ರೀನ್ ಹಂಚಿಕೊಳ್ಳುವಾಗ ಸೂಕ್ತವಲ್ಲದ ಟ್ಯಾಬ್ ಗಳು ಅಥವಾ ಅಪ್ಲಿಕೇಶನ್ ಗಳನ್ನು ತೆರೆದಿಡುವುದು

  • ವೃತ್ತಿಪರವಲ್ಲದ ಹಿನ್ನೆಲೆಯನ್ನು ಬಳಸುವುದು

  • ಅಭ್ಯರ್ಥಿಯ ಕುಟುಂಬ ಸದಸ್ಯರಿಂದ ಅಡ್ಡಿಪಡಿಸಲ್ಪಡುವುದು

  Published by:Kavya V
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು