• Home
 • »
 • News
 • »
 • career
 • »
 • UX Design: ಜಾಗತಿಕವಾಗಿ UX ವಿನ್ಯಾಸದಲ್ಲಿ ಟರ್ನಿಂಗ್ ಪಾಯಿಂಟ್ ತಂದ ಭಾರತದ YUJ ಡಿಸೈನ್ಸ್ ಸಂಸ್ಥೆ

UX Design: ಜಾಗತಿಕವಾಗಿ UX ವಿನ್ಯಾಸದಲ್ಲಿ ಟರ್ನಿಂಗ್ ಪಾಯಿಂಟ್ ತಂದ ಭಾರತದ YUJ ಡಿಸೈನ್ಸ್ ಸಂಸ್ಥೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

UX ವಿನ್ಯಾಸವು ಈಗ ವಿಶ್ವಾದ್ಯಂತ ಬೇಡಿಕೆಯಲ್ಲಿರುವ 5 ಪ್ರಮುಖ ಕೌಶಲ್ಯಗಳಲ್ಲಿ ಒಂದಾಗಿದೆ. ಭಾರತ ಸರ್ಕಾರವು ತನ್ನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ (NEP) ಈ ಕೌಶಲ್ಯವನ್ನು ಸೇರಿಸಿದೆ. ಕಲ್ಪನೆ, ನಾವೀನ್ಯತೆಯ ಸಂಸ್ಕೃತಿಯನ್ನು ಬೆಳೆಸಲು CBSE ಪಠ್ಯಕ್ರಮದಲ್ಲಿ ಇದನ್ನು ಕಲಿಸಲಾಗುತ್ತದೆ.

ಮುಂದೆ ಓದಿ ...
 • Share this:

  ಬಳಕೆದಾರ ಅನುಭವ ವಿನ್ಯಾಸ (UX- User Experience Design) ಹಾಗೂ ಸಂಶೋಧನೆಯು ಪ್ರಪಂಚದಾದ್ಯಂತ ಅಸಾಧಾರಣ ಬೆಳವಣಿಗೆಗೆ ಸಾಕ್ಷಿಯಾಗುತ್ತಿದ್ದು,  ಇದಕ್ಕೆ ಕಾರಣ ಉದ್ಯಮಗಳು ಉತ್ಪನ್ನದ ಅನುಭವಗಳನ್ನು ಸುಧಾರಿಸಲು ಅದನ್ನು ಬಳಸಿಕೊಳ್ಳುತ್ತಿರುವುದಾಗಿದೆ.  UX ವಿನ್ಯಾಸವು ಈಗ ವಿಶ್ವಾದ್ಯಂತ ಬೇಡಿಕೆಯಲ್ಲಿರುವ ಐದು ಪ್ರಮುಖ ಕೌಶಲ್ಯಗಳಲ್ಲಿ ಒಂದಾಗಿದೆ. ಭಾರತ ಸರಕಾರವು ತನ್ನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ (NEP) ಈ ಕೌಶಲ್ಯವನ್ನು ಸೇರಿಸಿದೆ ಹಾಗೂ ಕಲ್ಪನೆ, ನಾವೀನ್ಯತೆಯ ಸಂಸ್ಕೃತಿಯನ್ನು ಬೆಳೆಸಲು CBSE ಪಠ್ಯಕ್ರಮದಲ್ಲಿ ಇದನ್ನು ಕಲಿಸಲಾಗುತ್ತದೆ.


  ಸ್ಪಷ್ಟವಾಗಿ ಹೇಳುವುದಾದರೆ, ಭಾರತದಲ್ಲಿ ಯುಎಕ್ಸ್ ವಿನ್ಯಾಸವು ಅಂತಿಮ ರೂಪವನ್ನು ಪಡೆದುಕೊಳ್ಳುತ್ತಿದ್ದು YUJ ಡಿಸೈನ್ಸ್‌ನ ಸಂಸ್ಥಾಪಕರಾದ ಸಮೀರ್ ಚಬುಕ್ಸ್‌ವರ್ ಮತ್ತು ಪ್ರಸಾದ್ ಬರ್ತ ಯುಎಕ್ಸ್ ಉದ್ಯಮದಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.


  ಯುಎಕ್ಸ್ ವಿನ್ಯಾಸದಲ್ಲಿ ಟರ್ನಿಂಗ್ ಪಾಯಿಂಟ್ ತಂದ YUJ ಡಿಸೈನ್ಸ್‌


  2000 ರ ದಶಕದ ಆರಂಭದಿಂದಲೂ, ತಂತ್ರಜ್ಞಾನ ಸೇವೆಗಳು ಭಾರತದಲ್ಲಿ ಮುಂಚೂಣಿಯಲ್ಲಿವೆ. 2010 ರವರೆಗೆ ಭಾರತದಲ್ಲಿ UX ವಿನ್ಯಾಸ/ಉಪಯೋಗದ ಬಗ್ಗೆ ಕೆಲವೇ ಜನರು ಮಾತನಾಡುತ್ತಿದ್ದರು. ಈ ಸಮಯದಲ್ಲಿ ಎಲ್ಲರ ಗಮನ ತಂತ್ರಜ್ಞಾನ ಸೇವೆಗಳ ಮೇಲೆ ಮಾತ್ರ ಕೇಂದ್ರೀಕೃತವಾಗಿತ್ತು.


  ಇದನ್ನೂ ಓದಿ: Success Story: ಡಿಗ್ರಿಯಲ್ಲಿ ಅನೇಕ ಸಬ್ಜೆಕ್ಟ್ ಫೇಲ್ ಆಗಿದ್ದ ಹುಡ್ಗ IAS ಆದ ಸ್ಟೋರಿ ಇಲ್ಲಿದೆ


  ಸಮೀರ್ ಹೇಳುವಂತೆ ಎಲ್ಲರಿಗೂ ತಿಳಿದಿರುವಂತೆ ಕೋಡ್ ಮಾಡಬೇಕು ಎಂದಾದಲ್ಲಿ ನೀವು ಭಾರತಕ್ಕೆ ಹೋಗಲೇಬೇಕು. ಆದರೆ ವಿನ್ಯಾಸವನ್ನು ಅರಸಿಕೊಂಡು ಭಾರತದಿಂದ ಯಾರೂ ಬಂದಿರಲಿಲ್ಲ. ಭಾರತಕ್ಕೆ ಉತ್ತಮ ವಿನ್ಯಾಸವನ್ನು ನಾವೇ ತರಬೇಕು ಎಂದು ಮನಗಂಡೆವು ಹಾಗೂ ಅತ್ಯುತ್ತಮ ವಿನ್ಯಾಸಗಳನ್ನು ಪರಿಚಯಿಸುವಲ್ಲಿ ಭಾರತ ಕೂಡ ಸಿದ್ಧಹಸ್ತ ಎಂಬುದನ್ನು ನಾವು ತಿಳಿಸಬೇಕಿತ್ತು ಎಂದು ಸಮೀರ್ ಹೇಳಿದ್ದಾರೆ.


  ತಮ್ಮ ಹಿಂದಿನ ವೃತ್ತಿ ಅನುಭವಗಳಿಂದ ನಿರ್ಧಾರವನ್ನು ತಾಳಿದ ಸಮೀರ್ ಮಾನವ-ಯಂತ್ರ ಸಮಗ್ರ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸುವುದು ಮತ್ತು ಉತ್ತರ ಅಮೆರಿಕಾದ ಗ್ರಾಹಕರಿಗಾಗಿ ಹಲವಾರು ಯಶಸ್ವಿ ಉಪಯೋಗ ಯೋಜನೆಗಳನ್ನು ನಡೆಸುವುದು ಮೊದಲಾದ ಯೋಜನೆಗಳನ್ನು ಕೈಗೆತ್ತಿಕೊಂಡರು.


  ಸಂಸ್ಥೆಯ ಪಾಲುದಾರ ಪ್ರಸಾದ್ ಹೇಳಿಕೆ ಏನು?


  ಅತ್ಯಂತ ವಿಭಿನ್ನವಾದ ಜಗತ್ತಿನಲ್ಲಿ ಪ್ರಸಾದ್ ಕೂಡ ಹಲವಾರು ಏರಿಳಿತಗಳನ್ನು ಕಂಡುಕೊಂಡಿದ್ದಾರೆ ಎಂದೇ ತಿಳಿಸಿದ್ದಾರೆ. ಬಳಕೆದಾರರಿಗೆ ನಿಜವಾಗಿ ಏನು ಬೇಕು ಎಂಬುದರ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಪ್ರಸಾದ್ ತಿಳಿಸಿದ್ದಾರೆ.


  ವಿನ್ಯಾಸವು ವಿಶ್ವವನ್ನೇ ಬದಲಾಯಿಸಬಲ್ಲುದು ಎಂಬ ನಂಬಿಕೆಯೊಂದಿಗೆ ಸಮೀರ್ ಮತ್ತು ಪ್ರಸಾದ್ 2009 ರಲ್ಲಿ YUJ ಡಿಸೈನ್ಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಇದು ಬಳಕೆದಾರರಿಗೆ ಉತ್ಪನ್ನ ವಿತರಿಸುವ ಹಾಗೂ ವ್ಯವಹಾರ ಮೌಲ್ಯದ ಮೇಲೆ ಕೇಂದ್ರೀಕರಿಸಿರುವ ಸಂಸ್ಥೆಯಾಗಿದೆ. ಇಬ್ಬರಿಗೂ ಇದು ಹೊಸ ಅನುಭವವಾಗಿತ್ತು ಹಾಗೂ ತಮ್ಮ ವೃತ್ತಿಜೀವನದ ಅನುಭವಗಳನ್ನು ಬಳಸಿಕೊಂಡು ಮುನ್ನಡೆಸಿದರು.


  ಯುಎಕ್ಸ್ ವಿನ್ಯಾಸದಲ್ಲಿ ಸರಿಯಾದ ದೃಷ್ಟಿಕೋನವನ್ನು ಹೊಂದಿಸಲು ಹಾಗೂ ವ್ಯವಹಾರ ಮೌಲ್ಯವನ್ನು ಪರಿಚಯಿಸಲು ಇದು ಸಕಾಲ ಎಂಬುದನ್ನು ಸಮೀರ್ ಹಾಗೂ ಪ್ರಸಾದ್ ಇಬ್ಬರೂ ಮನಗಂಡರು. ವಿನ್ಯಾಸದ ಆಯಾಮಗಳನ್ನು ಚೆನ್ನಾಗಿ ತಿಳಿದುಕೊಳ್ಳುವ ಸಲುವಾಗಿ ಸಮೀರ್ ಯುಎಸ್‌ಗೆ ಹೋದರು. ಪ್ರಸಾದ್ ಕ್ಯುರೇಟೆಡ್ ಸಂಶೋಧನಾ ಆಧಾರಿತ ಕೆಲಸದ ವಿಧಾನವನ್ನು ಬಳಸಿಕೊಂಡು ವಿನ್ಯಾಸದ ವ್ಯಾಪ್ತಿ ಮತ್ತು ಮೌಲ್ಯವನ್ನು ಹೆಚ್ಚಿಸುವ ಪಣ ತೊಟ್ಟರು.


  ಪ್ರಕ್ರಿಯೆಯ ಪರಿಷ್ಕರಣೆ


  ಬಳಕೆದಾರ ಕೇಂದ್ರೀಕತೆಯನ್ನು ಖಚಿತಪಡಿಸಿಕೊಳ್ಳಲು ಸಂಶೋಧನೆ-ಚಾಲಿತ ವಿಧಾನವು ಏಕೈಕ ಮಾರ್ಗವಾಗಿದೆ ಎಂದು ಅವರು ತಿಳಿದಿದ್ದರು. ಪ್ರಕ್ರಿಯೆಯನ್ನು ಹಲವಾರು ಬಾರಿ ಪರಿಷ್ಕರಿಸುವ ಮೂಲಕ, ಪ್ರಸಾದ್ ಅವರು ಸಂಪೂರ್ಣ ಸಂಶೋಧನೆಯನ್ನು ಅದರ ಕೇಂದ್ರವಾಗಿ ವಿನ್ಯಾಸಗೊಳಿಸಲು ವಿವರವಾದ ವಿಧಾನವನ್ನು ರಚಿಸಿದರು.


  ಪ್ರಸಾದ್ ಹೇಳುವಂತೆ ಯಾವುದೇ ಸಮಸ್ಯೆಯ ಪರಿಹಾರಕ್ಕೆ ನಿಮ್ಮ ವಿನ್ಯಾಸ ಸಮಯದ 60% ವನ್ನು ವಿನಿಯೋಗಿಸಬೇಕು ಎಂಬುದನ್ನು ನಾನು ಕಂಡುಕೊಂಡಿರುವೆ ಎಂದು ತಿಳಿಸಿದ್ದಾರೆ. ಇದರಿಂದ ಸವಾಲು, ಕಷ್ಟ, ಪ್ರೇರಣೆ, ಹತಾಶೆ ಹಾಗೂ ಬಳಕೆದಾರ ನಡವಳಿಕೆಗಳನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ ಎಂಬುದು ಪ್ರಸಾದ್ ಮಾತಾಗಿದೆ.


  ಇದನ್ನೂ ಓದಿ: 7th Pay Commission: 7ನೇ ವೇತನ ಆಯೋಗ ರಚನೆ; ಸರ್ಕಾರಿ ನೌಕರರಿಗೆ ಬಂಪರ್!


  YUJ ಸಂಸ್ಥೆಯು ವಿನ್ಯಾಸದ ಮೇಲೆ ತನ್ನ ಗಮನವನ್ನು ಮತ್ತು ವ್ಯವಹಾರಗಳ ಮೇಲೆ ಅದರ ಪ್ರಭಾವವನ್ನು ಉಳಿಸಿಕೊಂಡಿದೆ. ಈಗ ಒಂದು ದಶಕಕ್ಕೂ ಹೆಚ್ಚು ಕಾಲ, YUJ ಜಾಗತಿಕ ಯೋಜನೆಗಳಲ್ಲಿ ಮುಂಚೂಣಿಯಲ್ಲಿದೆ. ಅಂದಿನ ಮತ್ತು ಇಂದಿನ ವಿನ್ಯಾಸವನ್ನು ನೋಡಿದ ಸಮೀರ್ ಮತ್ತು ಪ್ರಸಾದ್ ಅವರು ಅಸಾಧಾರಣ ವಿನ್ಯಾಸ ಚಿಂತನೆಯೊಂದಿಗೆ ಜಗತ್ತನ್ನು ಸುಧಾರಿಸುವ ಅನ್ವೇಷಣೆಯಲ್ಲಿದ್ದಾರೆ. ಸ್ಫೂರ್ತಿ ಎಂಬುದು ಶಕ್ತಿಯಾಗಿರಬೇಕೇ ಹೊರತು ಹೊರೆಯಾಗಿರಬಾರದು ಎಂಬುದು ಸಮೀರ್ ಹಾಗೂ ಪ್ರಸಾದ್ ಇವರಿಬ್ಬರ ತತ್ವವಾಗಿದೆ.


  ಇದೀಗ ಸಂಸ್ಥೆಯು ವಿಶ್ವದ ಅಗ್ರ 100 ಬ್ರ್ಯಾಂಡ್‌ಗಳೊಂದಿಗೆ ಕೆಲಸ ಮಾಡುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಉತ್ತರ ಅಮೇರಿಕಾಕ್ಕೆ ಹೋಲಿಸಿದರೆ ಭಾರತದಲ್ಲಿ ವಿನ್ಯಾಸ ಮಾರುಕಟ್ಟೆಯು ಇನ್ನೂ ಚಿಕ್ಕದಾಗಿದೆ ಅದಾಗ್ಯೂ ಭಾರತವು ವಿಶ್ವದಲ್ಲಿ UX ವಿನ್ಯಾಸಕರ ಪ್ರಮುಖ ಪೂರೈಕೆದಾರನಾಗಿ ಹೊರಹೊಮ್ಮಿದೆ. ಭಾರತದ ವಿನ್ಯಾಸವನ್ನು ಪ್ರಶಂಸಿಸಲಾಗುತ್ತಿದೆ ಮತ್ತು UX ಕ್ರಾಂತಿಗೆ ಕೊಡುಗೆ ನೀಡಲು YUJ ಸಂಸ್ಥೆ ಜವಾಬ್ದಾರಿ ಹೊತ್ತಿದೆ.

  Published by:Kavya V
  First published: