• Home
  • »
  • News
  • »
  • career
  • »
  • UPSC Motivational: ಕಷ್ಟಪಟ್ಟು IAS, IPS ಅಧಿಕಾರಿಗಳಾದರೆ ಸಂಬಳ ಎಷ್ಟಿರುತ್ತೆ? ಯಾವೆಲ್ಲಾ ಸೌಲಭ್ಯ ಸಿಗುತ್ತೆ?

UPSC Motivational: ಕಷ್ಟಪಟ್ಟು IAS, IPS ಅಧಿಕಾರಿಗಳಾದರೆ ಸಂಬಳ ಎಷ್ಟಿರುತ್ತೆ? ಯಾವೆಲ್ಲಾ ಸೌಲಭ್ಯ ಸಿಗುತ್ತೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಐಎಎಸ್ ಅಧಿಕಾರಿಗೆ ತಿಂಗಳಿಗೆ ಒಟ್ಟು 1 ಲಕ್ಷ ರೂಪಾಯಿಗಿಂತ ಹೆಚ್ಚು ಸಂಬಳ ಸಿಗುತ್ತದೆ. ಕ್ಯಾಬಿನೆಟ್ ಕಾರ್ಯದರ್ಶಿ ಶ್ರೇಣಿಯಲ್ಲಿರುವ ಐಎಎಸ್ ಅಧಿಕಾರಿಯ ವೇತನವು ತಿಂಗಳಿಗೆ ಸುಮಾರು 2.5 ಲಕ್ಷ ರೂಪಾಯಿಯಾಗಿರುತ್ತದೆ.

  • Share this:

     ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು (IAS, IPS Officers)  ನೋಡಿದಾಗಲೆಲ್ಲಾ ನಮ್ಮ ತಲೆಯಲ್ಲಿ ಒಮ್ಮೊಮ್ಮೆ ಮೂಡುವ ಪ್ರಶ್ನೆಯೆಂದರೆ ಈ ಅಧಿಕಾರಿಗಳಿಗೆ ಎಷ್ಟು ಸಂಬಳವಿರಬಹುದು (Salary) ಮತ್ತು ಇವರಿಗೆ ಏನೆಲ್ಲಾ ಸೌಲಭ್ಯಗಳು ಸಿಗುತ್ತವೆ ಅನ್ನೋ ವಿಚಾರ ಅಂತ ಹೇಳಬಹುದು. ಭಾರತೀಯ ಆಡಳಿತ ಸೇವೆ ಮತ್ತು ಭಾರತೀಯ ಪೊಲೀಸ್ ಸೇವೆಯ ಅಧಿಕಾರಿಗಳನ್ನು ಆಯ್ಕೆ ಮಾಡಲು ಕೇಂದ್ರ ಲೋಕಸೇವಾ ಆಯೋಗ (UPSC) ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಅಷ್ಟೊಂದು ಸುಲಭದ ಕೆಲಸವೇನಲ್ಲ ಬಿಡಿ.


    ಎಷ್ಟೋ ವರ್ಷಗಳಿಂದ ಹಗಲು-ರಾತ್ರಿ ಎನ್ನದೆ ಚೆನ್ನಾಗಿ ಓದಿಕೊಂಡು ಈ ಪರೀಕ್ಷೆಗಳಿಗೆ ಅಭ್ಯರ್ಥಿಗಳು ತಯಾರಾಗುತ್ತಾರೆ. ಅಷ್ಟೇ ಅಲ್ಲದೆ ನುರಿತ ತರಬೇತಿ ನೀಡುವ ಕೇಂದ್ರಗಳಲ್ಲಿ ತರಬೇತಿಯನ್ನು ಸಹ ಪಡೆಯುತ್ತಾರೆ. ಪ್ರತಿ ವರ್ಷ ದೇಶಾದ್ಯಂತ ಲಕ್ಷಾಂತರ ಆಕಾಂಕ್ಷಿಗಳು ಯುಪಿಎಸ್‌ಸಿ ಪರೀಕ್ಷೆಗಳಿಗೆ ಹಾಜರಾಗುತ್ತಾರೆ. ಆದರೆ ಪ್ರತಿಭಾನ್ವಿತರು ಮಾತ್ರ ಈ ಪರೀಕ್ಷೆಗಳನ್ನು ಪಾಸ್ ಮಾಡಿಕೊಂಡು ಕೆಲಸ ಗಿಟ್ಟಿಸುವ ಅರ್ಹತೆ ಪಡೆಯುತ್ತಾರೆ. ಈ ಪರೀಕ್ಷೆಗಳಲ್ಲಿ ಯಶಸ್ಸಿನ ದರವು ಶೇಕಡಾ 0.1 ಕ್ಕಿಂತ ಕಡಿಮೆ ಇದೆ.




    ಒಬ್ಬ ವ್ಯಕ್ತಿಯು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಭಾರತೀಯ ಆಡಳಿತ ಸೇವೆ (ಐಎಎಸ್) ಅಥವಾ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿಯಾದ ನಂತರ ಹಿಂದಕ್ಕೆ ನೋಡುವ ಪ್ರಮಯವೇ ಬರುವುದಿಲ್ಲ. ಒಬ್ಬ ಅಧಿಕಾರಿಯು ಕರ್ತವ್ಯಕ್ಕೆ ದೃಢೀಕರಿಸಿದ ನಂತರ ಪ್ರೊಬೆಷನರಿ ಅವಧಿಯನ್ನು ಮುಗಿಸಬೇಕಾಗುತ್ತದೆ. ಈ ಪರಿವೀಕ್ಷಣೆಯನ್ನು ಪೂರ್ಣಗೊಳಿಸಿದ ನಂತರ, ಅವರನ್ನು ಅವರ ಕೇಡರ್ ಗಳ ಪ್ರಕಾರ ಹಲವಾರು ವರ್ಷಗಳ ಕಾಲ ಕಾರ್ಯನಿರ್ವಾಹಕ ಆಡಳಿತಾತ್ಮಕ ಪಾತ್ರಕ್ಕೆ ನಿಯೋಜಿಸಲಾಗುತ್ತದೆ.


    ಐಎಎಸ್ ಅಥವಾ ಐಪಿಎಸ್ ಅಧಿಕಾರಿಗಳಿಗಿರುವ ಸವಲತ್ತುಗಳು ಮತ್ತು ಸೌಲಭ್ಯಗಳು


    ಐಎಎಸ್ ಅಧಿಕಾರಿಗಳ ವೇತನ


    7ನೇ ವೇತನ ಆಯೋಗದ ಪ್ರಕಾರ, ಐಎಎಸ್ ಅಧಿಕಾರಿಯ ಮೂಲ ವೇತನವು ತಿಂಗಳಿಗೆ 56,100 ರೂಪಾಯಿಯಾಗಿರುತ್ತದೆ. ಅವರಿಗೆ ಪ್ರಯಾಣ ಮತ್ತು ವಸತಿ ಭತ್ಯೆಗಳಂತಹ ವಿವಿಧ ಇತರ ಪ್ರಯೋಜನಗಳನ್ನು ಸಹ ಒದಗಿಸಲಾಗುತ್ತದೆ. ವರದಿಗಳ ಪ್ರಕಾರ, ಐಎಎಸ್ ಅಧಿಕಾರಿಗೆ ಒಟ್ಟು ವೇತನದಲ್ಲಿ ತಿಂಗಳಿಗೆ 1 ಲಕ್ಷ ರೂಪಾಯಿಗಿಂತ ಹೆಚ್ಚು ಸಂಬಳ ಸಿಗುತ್ತದೆ. ಕ್ಯಾಬಿನೆಟ್ ಕಾರ್ಯದರ್ಶಿ ಶ್ರೇಣಿಯಲ್ಲಿರುವ ಐಎಎಸ್ ಅಧಿಕಾರಿಯ ವೇತನವು ತಿಂಗಳಿಗೆ ಸುಮಾರು 2.5 ಲಕ್ಷ ರೂಪಾಯಿಯಾಗಿರುತ್ತದೆ.


    Predictions Astrology Lucky person November 24


    ಐಪಿಎಸ್ ಅಧಿಕಾರಿಗಳ ವೇತನ


    ಐಪಿಎಸ್ ಅಧಿಕಾರಿಯ ಮೂಲ ವೇತನ ತಿಂಗಳಿಗೆ ಸುಮಾರು 56,000 ರೂಪಾಯಿಯಾಗಿದ್ದು, ಪ್ರತಿಯೊಬ್ಬ ಐಪಿಎಸ್ ಅಧಿಕಾರಿಗೆ ಅವರ ಸೇವೆಯ ಹಿರಿತನಕ್ಕೆ ಅನುಗುಣವಾಗಿ ಮನೆ ಮತ್ತು ಕಾರನ್ನು ಸಹ ನೀಡಲಾಗುತ್ತದೆ.


    ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಿಗೆ ವಿಭಿನ್ನ ವೇತನ ಶ್ರೇಣಿಗಳನ್ನು ನಿಗದಿಪಡಿಸಲಾಗಿದೆ..


    ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಿಗೆ ವಿಭಿನ್ನ ವೇತನ ಶ್ರೇಣಿಗಳನ್ನು ನಿಗದಿಪಡಿಸಲಾಗಿದೆ. ಇವುಗಳಲ್ಲಿ ಜೂನಿಯರ್ ಸ್ಕೇಲ್, ಸೀನಿಯರ್ ಸ್ಕೇಲ್ ಮತ್ತು ಸೂಪರ್ ಟೈಮ್ ಸ್ಕೇಲ್ ಸೇರಿವೆ. ಮೂಲ ವೇತನ ಮತ್ತು ಗ್ರೇಡ್ ವೇತನದ ಹೊರತಾಗಿ, ಅವರು ತುಟ್ಟಿ ಭತ್ಯೆ (ಡಿಎ), ಮನೆ ಬಾಡಿಗೆ ಭತ್ಯೆ (ಎಚ್ಆರ್‌ಎ), ವೈದ್ಯಕೀಯ ಭತ್ಯೆ ಮತ್ತು ಸಾರಿಗೆ ಭತ್ಯೆಯನ್ನು ಸಹ ಪಡೆಯುತ್ತಾರೆ.


    how to ask for salary increase here are useful tips
    ಸಾಂದರ್ಭಿಕ ಚಿತ್ರ


    ಅವರಿಗೆ ಮನೆ, ಅಡುಗೆಯವರು ಮತ್ತು ಇತರ ಸಿಬ್ಬಂದಿ ಸೇರಿದಂತೆ ಅವರ ವೇತನ ಪಟ್ಟಿಯ ಆಧಾರದ ಮೇಲೆ ಅನೇಕ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಿಗೆ ಕಾರು ಮತ್ತು ಚಾಲಕನನ್ನು ಸಹ ನೀಡಲಾಗುತ್ತದೆ. ಐಎಎಸ್ ಅಥವಾ ಐಪಿಎಸ್ ಅಧಿಕಾರಿಗಳು ಜೀವಮಾನದ ಪಿಂಚಣಿ ಮತ್ತು ನಿವೃತ್ತಿ ಪ್ರಯೋಜನಗಳನ್ನು ಸಹ ಪಡೆಯುತ್ತಾರೆ.


    ಶ್ರೇಣಿಯ ಪ್ರಕಾರ ಐಪಿಎಸ್ ಅಧಿಕಾರಿಗಳ ವೇತನ


    1. ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಡಿಎಸ್‌ಪಿ) - 56,100 ರೂಪಾಯಿ

    2. ಹೆಚ್ಚುವರಿ ಪೊಲೀಸ್ ಅಧೀಕ್ಷಕರು (ಎಎಸ್‌ಪಿ) - 67,700 ರೂಪಾಯಿ

    3. ಪೊಲೀಸ್ ಅಧೀಕ್ಷಕರು (ಎಸ್‌ಪಿ) - 78,800 ರೂಪಾಯಿ

    4. ಹಿರಿಯ ಪೊಲೀಸ್ ಅಧೀಕ್ಷಕರು (ಎಸ್ಎಸ್‌ಪಿ) - 1,18,000 ರೂಪಾಯಿ

    5. ಡೆಪ್ಯೂಟಿ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಡಿಐಜಿಪಿ) - 1,31,000 ರೂಪಾಯಿ

    6. ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ)- 1,44,200 ರೂಪಾಯಿ

    7. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (ಎಡಿಜಿಪಿ) - 2,05,400 ರೂಪಾಯಿ

    8. ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) - 2,25,000 ರೂಪಾಯಿ

    Published by:Kavya V
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು