• Home
  • »
  • News
  • »
  • career
  • »
  • UPSC Interview Tips: ಯುಪಿಎಸ್​​ಸಿ ಸಂದರ್ಶನಕ್ಕೆ ತಯಾರಿ ಹೀಗಿರಲಿ, ಈ 10 ಟಿಪ್ಸ್ ಸಾಕು

UPSC Interview Tips: ಯುಪಿಎಸ್​​ಸಿ ಸಂದರ್ಶನಕ್ಕೆ ತಯಾರಿ ಹೀಗಿರಲಿ, ಈ 10 ಟಿಪ್ಸ್ ಸಾಕು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

UPSC ಪರೀಕ್ಷೆಯನ್ನು ತೆಗೆದುಕೊಳ್ಳುವ ಅಭ್ಯರ್ಥಿಗಳು ವ್ಯಕ್ತಿತ್ವ ಪರೀಕ್ಷೆಯು ಒಟ್ಟು 2025 ಅಂಕಗಳಲ್ಲಿ 275 ಅಂಕಗಳನ್ನು ಹೊಂದಿರುತ್ತದೆ. ಸಂದರ್ಶನದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯಲ್ಲಿ ಅಂತಿಮ ಶ್ರೇಣಿಯನ್ನು ನಿರ್ಧರಿಸಲಾಗುತ್ತದೆ.

  • Trending Desk
  • 4-MIN READ
  • Last Updated :
  • Share this:

    ಕೇಂದ್ರ ಲೋಕಸೇವಾ ಆಯೋಗ (UPSC) ನಡೆಸುವ ನಾಗರೀಕ ಸೇವೆಗಳ ಪರೀಕ್ಷೆ ಪೈಕಿ ಪ್ರಿಲಿಮ್ಸ್‌ ಮತ್ತು ಮೇನ್ಸ್‌ ಪರೀಕ್ಷೆ  (UPSC Mains and Prelims Exam) ನಂತರ ಸಂದರ್ಶನ ಅಥವಾ ವ್ಯಕ್ತಿತ್ವ ಪರೀಕ್ಷೆ (UPSC Interview) ಇರುತ್ತದೆ. ಈ ಸುತ್ತು ನಿಮ್ಮ ಕನಸಿನ ಹುದ್ದೆಯನ್ನು ಪಡೆಯುವ ಅಂತಿಮ ಘಟ್ಟವಾಗಿರುತ್ತದೆ. ಸಂದರ್ಶನ ಸುತ್ತು ಅಕ್ಷರಶಃ ಒಬ್ಬರ ಜೀವನವನ್ನೇ ಬದಲಾಯಿಸುವ ಸಾಮರ್ಥ್ಯ ಹೊಂದಿದೆ. ಹಲವಾರು ವರ್ಷಗಳ ಶ್ರಮಕ್ಕೆ ಸಂದರ್ಶನವೇ ಫಲ ನೀಡುವ ವೇದಿಕೆ. ಹೀಗಾಗಿ ಅಭ್ಯರ್ಥಿಗಳು ಈ ಸುತ್ತಿಗೆ ಹೇಗೆ ತಯಾರಿ ನಡೆಸಬೇಕು ಎಂಬ ಮಾಹಿತಿ ಇಲ್ಲಿದೆ. 


    UPSC ಪರೀಕ್ಷೆಯನ್ನು ತೆಗೆದುಕೊಳ್ಳುವ ಅಭ್ಯರ್ಥಿಗಳು ವ್ಯಕ್ತಿತ್ವ ಪರೀಕ್ಷೆಯು ಒಟ್ಟು 2025 ಅಂಕಗಳಲ್ಲಿ 275 ಅಂಕಗಳನ್ನು ಹೊಂದಿರುತ್ತದೆ. ಸಂದರ್ಶನದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯಲ್ಲಿ ಅಂತಿಮ ಶ್ರೇಣಿಯನ್ನು ನಿರ್ಧರಿಸಲಾಗುತ್ತದೆ. ಈ ಹಿಂದೆ ಟಾಪರ್‌ ಆದವರು ಸಂದರ್ಶನ ಸುತ್ತಿನಲ್ಲಿ ಅಗ್ರ ಅಂಕ ಗಳಿಸಿದವರು ಎಂಬುವುದನ್ನು ನಾವಿಲ್ಲಿ ಗಮನಿಸಬೇಕು.


    ಹಾಗಾದರೆ ಇಂತಹ ಒಂದು ಸಂದರ್ಶನಕ್ಕೆ ಹೇಗೆಲ್ಲಾ ತಯಾರಿ ನಡೆಸಬೇಕು ಎಂಬುದರ ಬಗ್ಗೆ ಸಿವಿಲ್ ಸರ್ವೀಸ್‌ ಸೇರಿದವರು, ಎಕ್ಸ್‌ಪರ್ಟ್‌ಗಳು ನೀಡಿದ ಮಾಹಿತಿಗಳ ಆಧಾರದಲ್ಲಿ ಈ ಕೆಳಗಿನಂತೆ ಸಲಹೆಗಳನ್ನು ನೀಡಲಾಗಿದೆ.


    UPSC ಸಂದರ್ಶನದಲ್ಲಿ ನಾಲ್ಕು ರೀತಿಯ ಪ್ರಶ್ನೆಗಳನ್ನು ಕೇಳಲಾಗುತ್ತದೆ:


    * ನಿಮ್ಮ ಪ್ರೊಫೈಲ್
    ಇದು ಒಂದು ವ್ಯಕ್ತಿತ್ವ ಪರೀಕ್ಷೆ ಆಗಿದ್ದರಿಂದ ನಿಮ್ಮ ಪ್ರೊಫೈಲ್‌ಗೆ ಸಂಬಂಧಿಸಿದಂತೆ
    ಹೆಸರು, ಜನ್ಮಸ್ಥಳ, ಶೈಕ್ಷಣಿಕ ಹಿನ್ನೆಲೆ, ವೃತ್ತಿಪರ ಹಿನ್ನೆಲೆ, ಹವ್ಯಾಸಗಳು ಮತ್ತು ಆಸಕ್ತಿಗಳ ಬಗ್ಗೆ ಕೇಳಲಾಗುತ್ತದೆ.


    * ಪ್ರಚಲಿತ ವಿಷಯ
    ಪ್ರಸ್ತುತ ನಡೆಯುತ್ತಿರುವ ಯಾವುದಾದರೂ ಒಂದು ವಿದ್ಯಮಾನದ ಬಗ್ಗೆ ಅಭ್ಯರ್ಥಿಗಳ ಅಭಿಪ್ರಾಯ ಕೇಳಲಾಗುತ್ತದೆ. ಉದಾಹರಣೆಗೆ, ಭಾರತದಿಂದ ಕೋವಿಡ್-19 ನಿಯಂತ್ರಣದ ದಕ್ಷತೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು? ಹೀಗೆ ಈ ರೀತಿಯ ಪ್ರಶ್ನೆ ಕೇಳಲಾಗುತ್ತದೆ.


    UPSC CSE Mains Resalt 2022 declared Career news in kannada


    * ಸಾಂದರ್ಭಿಕ ಪ್ರಶ್ನೆಗಳು
    ಓರ್ವ ಅಧಿಕಾರಿಯಾಗಿ ನಿಮ್ಮ ವಿಶ್ವಾಸಾರ್ಹತೆಯನ್ನು ನಿರ್ಣಯಿಸಲು ಅಥವಾ ಸನ್ನಿವೇಶಗಳನ್ನು ನೀವು ಎಷ್ಟು ಸಮರ್ಥವಾಗಿ ನಿಭಾಯಿಸುತ್ತೀರಿ ಎಂಬುವುದರ ಕುರಿತು ಪ್ರಶ್ನೆಯನ್ನು ಕೇಳಲಾಗುತ್ತದೆ.


    * ವರ್ತನೆಯ ಪ್ರಶ್ನೆಗಳು
    ಈ ರೀತಿಯ ಪ್ರಶ್ನೆಯನ್ನು ಸಾಮಾನ್ಯವಾಗಿ ನಿಮ್ಮ ವ್ಯಕ್ತಿತ್ವವನ್ನು ಅಳೆಯಲು ಕೇಳಲಾಗುತ್ತದೆ, ನಿಮ್ಮ ವ್ಯಕ್ತಿತ್ವದ ಪ್ರಶ್ನಗಳಿಗೆ ನೀವು ವಿಶ್ವಾದದಿಂದ ಉತ್ತರಿಸಬೇಕು.


    ಇದನ್ನೂ ಓದಿ: UPSC Inspirational: ಕೇವಲ 1 ಅಂಕದಿಂದ IAS ಅಧಿಕಾರಿ ಆಗುವ ಕನಸು ನುಚ್ಚುನೂರು: ಮುಂದೆ ಆಗಿದ್ದು ಇತಿಹಾಸ


    IAS ಆಫೀಸರ್ ಸಂದರ್ಶನ ತಯಾರಿಗೆ ಟಾಪರ್‌ಗಳ ಸಲಹೆ
    ಐಎಎಸ್‌ ಆಗುವ ನಿಮ್ಮ ಕನಸಿನಲ್ಲಿ ಈ ವ್ಯಕ್ತಿತ್ವ ಪರೀಕ್ಷೆ ಮುಖ್ಯವಾಗಿದ್ದರಿಂದ, ಸಂದರ್ಶನಕ್ಕೆ ತಯಾರು ನಡೆಸುತ್ತಿರುವ ನಿಮಗೆ ಟಾಪರ್‌ಗಳು, ಎಕ್ಸ್‌ಪರ್ಟ್‌ಗಳು ನೀಡಿದ ಮಾಹಿತಿಗಳ ಆಧಾರದಲ್ಲಿ ಈ ಕೆಳಗಿನಂತೆ ಸಲಹೆಗಳನ್ನು ನೀಡಲಾಗಿದೆ.


    1) ನಿಮ್ಮ ಹಿನ್ನೆಲೆ ಬಗ್ಗೆ ಆತ್ಮವಿಶ್ವಾಸದ ಉತ್ತರ ನೀಡಿ
    ನಿಮ್ಮ ವ್ಯಕ್ತಿತ್ವ ಸಂದರ್ಶನದಲ್ಲಿ, ನಿಮ್ಮ ಹಿನ್ನೆಲೆ ಬಗ್ಗೆ ಅಂದರೆ ನಿಮ್ಮ ಜಿಲ್ಲೆ, ಊರಿನ ಬಗ್ಗೆ ತಿಳಿಯಲು ಸಂದರ್ಶನಕಾರರು ಆಸಕ್ತಿ ತೋರಬಹುದು. ಆದ್ದರಿಂದ ಎಲ್ಲ ಸಂದರ್ಶಕರಿಗೆ ನಿಮ್ಮ ಡೀಟೇಲ್ಡ್‌ ಅಪ್ಲಿಕೇಶನ್‌ ಫಾರ್ಮ್‌ ಪ್ರತಿಗಳನ್ನು ನೀಡಲಾಗಿರುತ್ತದೆ. ಇದು ನಿಮ್ಮ ಬಯೋಡಾಟಾವಾಗಿರುತ್ತದೆ.


    ಆದ್ದರಿಂದ ಇದರಲ್ಲಿ ನೀಡಿದ ಪ್ರತಿಯೊಂದು ವಿಷಯದ ಬಗ್ಗೆ ನೀವು ತಿಳಿದುಕೊಂಡಿರಬೇಕು. ಅದಕ್ಕಾಗಿ ಫಾರ್ಮ್ ಅನ್ನು ಹಲವಾರು ಬಾರಿ ಓದಿ, ಕೇಳಬಹುದಾದ ಎಲ್ಲವನ್ನೂ ಬರೆಯಿರಿ ಮತ್ತು ಆ ಪ್ರತಿಯೊಂದು ಪ್ರಶ್ನೆಗಳಿಗೆ ಸಣ್ಣ ಉತ್ತರಗಳನ್ನು ತಯಾರಿಸಿಟ್ಟುಕೊಳ್ಳುವುದು ಉತ್ತಮ. ಇದರ ಮೂಲಕ ಕೇಳವ ಪ್ರಶ್ನೆಗಳಿಗೆ ಪಾಸಿಟಿವ್ ಹಾಗೂ ಸರಿಯಾದ ಉತ್ತರಗಳನ್ನು ನೀಡಬೇಕು.




    2) ಸಮಕಾಲೀನ ವಿಷಯಗಳ ಬಗ್ಗೆ ಅಭಿಪ್ರಾಯ
    ಪ್ರಸ್ತುತ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಸಂಕ್ಷಿಪ್ತವಾಗಿ ಉತ್ತರಿಸಲು ಸಾಧ್ಯವಾಗುವ ರೀತಿಯಲ್ಲಿ ಸುಮಾರು ಮೂರು ತಿಂಗಳ ಹಿಂದಿನ ಕರೆಂಟ್‌ ಅಫೇರ್‌ಗಳ ಬಗ್ಗೆ ತಿಳಿದುಕೊಂಡಿರಿ. ಮತ್ತು ಅವುಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ಸಿದ್ಧವಾಗಿರಿ. ಇದಕ್ಕಾಗಿ ನೀವು ಪ್ರತಿದಿನ ಸುದ್ದಿ ಪತ್ರಿಕೆಗಳನ್ನು ಓದುವುದು ಅತಿ ಮುಖ್ಯ.


    3) ಸಾಂದರ್ಭಿಕ ಪ್ರಶ್ನೆಗಳಿಗೆ ಉತ್ತರಿಸುವುದು
    IAS/IPS/IFS ಅಧಿಕಾರಿಯ, ಕಾನೂನು ಅಧಿಕಾರಗಳು ಮತ್ತು ಸಾಮರ್ಥ್ಯಗಳು ಯಾವುವು ಎಂಬುದನ್ನು ನೀವು ತಿಳಿದಿರಬೇಕು. ಹುದ್ದೆಯಲ್ಲಿದ್ದಾಗ ನೀವು ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತೀರಿ ಎಂದು ಕೇಳಬಹುದು.


    ಈ ಪ್ರಶ್ನೆಗೆ ನಿಮ್ಮ ಉತ್ತರಗಳು ನಿಮ್ಮ ಪ್ರೊಫೈಲ್ ಹೊಂದಿರುವ ಸಾಂವಿಧಾನಿಕ ಅಧಿಕಾರದ ವ್ಯಾಪ್ತಿಯಲ್ಲಿರಬೇಕು ಮತ್ತು ಸಮತೋಲಿತ ಉತ್ತರಗಳೊಂದಿಗೆ ನಿಷ್ಪಕ್ಷಪಾತ ಮತ್ತು ಪಕ್ಷಪಾತವಿಲ್ಲದ ಉತ್ತರ ನೀಡಬೇಕು.


    4) ವರ್ತನೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುವುದು
    ಸಂದರ್ಶನದಲ್ಲಿ ಪಾಸಿಟಿವ್ ಆಟಿಟ್ಯೂಡ್‌ ಬೆಳೆಸಿಕೊಳ್ಳಿ. ಈ ವ್ಯಕ್ತಿತ್ವ ಪರೀಕ್ಷೆಯಲ್ಲಿ ಮುಖ್ಯವಾಗಿ ನಿಮ್ಮ ನಡವಳಿಕೆ, ವರ್ತನೆ ಮೇಲೆ ಸಂದರ್ಶನ ನಡೆಸುವವರು ಗಮನ ಹರಿಸುತ್ತಾರೆ. ಹೀಗಾಗಿ ವ್ಯಕ್ತಿತ್ವ ಸಂದರ್ಶನದಲ್ಲಿ ನಿಮ್ಮ ಅಲೋಚನೆಗಳನ್ನು, ಅಭಿಪ್ರಾಯಗಳನ್ನು, ಉತ್ತರಗಳನ್ನು ಆತ್ಮವಿಶ್ವಾಸದಿಂದ ವ್ಯಕ್ತಪಡಿಸಿ.


    5) ಪದಗಳ ಆಯ್ಕೆಯಲ್ಲಿ ಜಾಗರೂಕರಾಗಿರಿ
    ನಿಮ್ಮ ಉತ್ತರಗಳಲ್ಲಿ ಪದಗಳ ಆಯ್ಕೆ ಮುಖ್ಯವಾಗುತ್ತದೆ. ಉತ್ತರ ನೀಡುವ ಭರದಲ್ಲಿ ಅತಿಯಾಗಿ ಪದ ಬಳಕೆ ಮಾಡಬೇಡಿ. ಪ್ರಶ್ನೆಗಳಿಗೆ ಉತ್ತರಿಸುವಾಗ ಸ್ಪಷ್ಟವಾಗಿರಲು ಪ್ರಯತ್ನಿಸಿ.


    Campus Placement tips How To Prepare Effectively For Campus Placements
    ಸಾಂದರ್ಭಿಕ ಚಿತ್ರ


    6) ಸುಳ್ಳು ಹೇಳಬೇಡಿ
    ಸಂದರ್ಶನಕ್ಕೆ ಇದು ಅತ್ಯಂತ ಮುಖ್ಯವಾದ ಅಂಶ. ಇಂಟರ್‌ವ್ಯೂ ಮಾಡುವವರನ್ನು ಇಂಪ್ರೆಸ್ ಮಾಡಲು ನೀವು ಸುಳ್ಳು ಮಾಹಿತಿ ನೀಡುವ ಅಥವಾ ಸುಳ್ಳು ಹೇಳಲು ಹೋಗಬೇಡಿ. ಬೋರ್ಡ್‌ನಲ್ಲಿ ಎಲ್ಲರೂ ನಿಮಗಿಂತ ಚಾಣಾಕ್ಷರು ಇರುವುದರಿಂದ ನಿಮ್ಮ ಸುಳ್ಳೇ ನಿಮಗೆ ಮುಳುವಾಗಬಹುದು. ಹೀಗಾಗಿ ಎಲ್ಲವೂ ಪಾರದರ್ಶಕವಾಗಿ ಮತ್ತು ಸ್ಪಷ್ಟವಾಗಿರಲಿ.


    7) ಅಣಕು ಸಂದರ್ಶನ
    ವ್ಯಕ್ತಿತ್ವ ಪರೀಕ್ಷೆಯನ್ನು ಪಾಸ್‌ ಮಾಡಲು ಅಣುಕು ಸಂದರ್ಶನ ಉತ್ತಮ ಅಭ್ಯಾಸ ಎನ್ನುತ್ತಾರೆ ಟಾಪರ್ಸ್. ಅದಕ್ಕೆ ನೀವು ಎಕ್ಸ್‌ಪರ್ಟ್‌ಗಳು, ಅಧಿಕಾರಿಗಳ ಸಹಾಯ ತೆಗೆದುಕೊಳ್ಳಬೇಕು.


    ವ್ಯಕ್ತಿತ್ವ ಸಂದರ್ಶನಕ್ಕೆ ಮುಂಚೆ ಇದರ ಅನುಭವ ಪಡೆಯಲು ಅಣುಕು ಸಂದರ್ಶನಗಳನ್ನು ಸಮಾನ ಮನಸ್ಕರೊಂದಿಗೆ ನಡೆಸಬಹುದು. ಹೀಗೆ ಮಾಡುವುದರಿಂದ ಭಯವನ್ನು, ಒತ್ತಡವನ್ನು ದೂರ ಮಾಡಬಹುದು.


    8) ಅಚ್ಚುಕಟ್ಟಾದ ಮತ್ತು ಆರಾಮದಾಯಕವಾದ ಉಡುಗೆ
    ಸಂದರ್ಶನದ ದಿನದಂದು ನೀವು ಪ್ರೆಸೆಂಟಬಲ್ ಆಗಿ ಕಾಣಬೇಕು, ಆದ್ದರಿಂದ ಶುಭ್ರವಾಗಿ ಮತ್ತು ಅಂದವಾಗಿ ಕಾಣುವಂತೆ ಡ್ರೆಸ್‌ ಮಾಡಿಕೊಳ್ಳಿ. ಪುರುಷರಿಗೆ, ತಿಳಿ ಬಣ್ಣದ ಶರ್ಟ್ ಮತ್ತು ಡಾರ್ಕ್ ಪ್ಯಾಂಟ್ ವೃತ್ತಿಪರ ನೋಟವನ್ನು ನೀಡಿದರೆ, ಮಹಿಳಾ ಆಕಾಂಕ್ಷಿಗಳಿಗೆ ಸರಳವಾದ ಚೂಡಿದಾರ್ ಅಥವಾ ಸೀರೆಯನ್ನು ಶಿಫಾರಸು ಮಾಡಲಾಗುತ್ತದೆ.


    9) ಡಾಕ್ಯುಮೆಂಟ್ ಚೆಕ್
    ಅಭ್ಯರ್ಥಿಗಳು ವ್ಯಕ್ತಿತ್ವ ಸಂದರ್ಶನಕ್ಕೆ ತೆರಳುವ ಮುನ್ನ ಅಗತ್ಯವಾಗಿ ಬೇಕಾದ ಎಲ್ಲ ದಾಖಲೆಗಳು ಇವೆಯೇ ಎಂದು ಎರಡು ಬಾರಿ ಪರಿಶೀಲಿಸಿಕೊಳ್ಳಿ. ಕೊನೆಯ ಕ್ಷಣದಲ್ಲಿ ಗಾಬರಿ ಮಾಡಿಕೊಳ್ಳುವ ಬದಲು ಹಿಂದಿನ ದಿನವೇ ದಾಖಲೆಗಳನ್ನು ಚೆಕ್‌ ಮಾಡಿಕೊಂಡು ಒಂದೇ ಫೈಲ್‌ನಲ್ಲಿ ಜೋಡಿಸಿದಕೊಳ್ಳಿ.


    10) ಚೆನ್ನಾಗಿ ನಿದ್ರೆ


    ಸಂದರ್ಶನಕ್ಕೆ ಹೋಗುವ ಹಿಂದಿನ ದಿನ ಚೆನ್ನಾಗಿ ನಿದ್ರೆ ಮಾಡಿ. ಅನಗತ್ಯ ಒತ್ತಡವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಇದು ಮರುದಿನ ನಿಮ್ಮನ್ನು ದಕ್ಷತೆಯಿಂದ ಇರಿಸಲು ಸಹಕಾರಿಯಾಗುತ್ತದೆ.

    Published by:Kavya V
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು