ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಪರೀಕ್ಷೆಗೆ ಪ್ರತಿ ವರ್ಷ ಸುಮಾರು 10 ಲಕ್ಷ ಅರ್ಜಿಗಳು ಬರುತ್ತವೆ. ಅದರಲ್ಲಿ ಸುಮಾರು ಒಂದು ಸಾವಿರ ಮಂದಿ ಆಯ್ಕೆಯಾಗುತ್ತಾರೆ. ಯುಪಿಎಸ್ಸಿಯಂತಹ ಕಠಿಣ ಪರೀಕ್ಷೆಗಳಿಗಾಗಿ ಹಲವು ಕೋಚಿಂಗ್ ಸಂಸ್ಥೆಗಳು (Coaching Centre) ಮಾರ್ಗದರ್ಶನ ನೀಡುತ್ತವೆ. ಆದರೆ ಕೆಲವರು ಇದರ ಅಗತ್ಯವಿಲ್ಲದೇ ಪರೀಕ್ಷೆಯಲ್ಲಿ ಯಶಸ್ವಿಯಾಗುತ್ತಾರೆ. ಈ ನಿಟ್ಟಿನಲ್ಲಿ ಐಎಎಸ್ ಟಾಪರ್ ಕೇತನ್ ಗಾರ್ಗ್ (IAS TOPPER KETAN GARG) ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. UPSC ಪರೀಕ್ಷೆಯ ತಯಾರಿಯ ಸಮಯದಲ್ಲಿ ತಾನು ಯಾವ ಪುಸ್ತಕಗಳನ್ನು ಓದಿದ್ದೇನೆ ಎಂದು ಕೇತನ್ ಹೇಳಿದ್ದಾರೆ.
ಕೆಲಸದ ಜೊತೆಗೆ ಪರೀಕ್ಷೆಗೆ ತಯಾರಿ
2017 ರ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಕೇತನ್ 93 ನೇ ರ್ಯಾಂಕ್ ಗಳಿಸಿದ್ದಾರೆ. 2015ರಲ್ಲಿ ಪರೀಕ್ಷೆಗೆ ತಯಾರಿ ಆರಂಭಿಸಿದ್ದರು. ಪರೀಕ್ಷೆಯ ತಯಾರಿ ಸಾಮಗ್ರಿಗಳ ಬಗ್ಗೆಯೂ ಮಾತನಾಡಿದ್ದಾರೆ. ಉದ್ಯೋಗದ ಜೊತೆಗೆ ತನ್ನ ಯುಪಿಎಸ್ ಸಿ ತಯಾರಿಯನ್ನು ಹೇಗೆ ನಿಭಾಯಿಸಲು ಸಾಧ್ಯವಾಯಿತು ಎಂಬುದನ್ನೂ ತಿಳಿಸಿದರು.
ಎಷ್ಟು ಗಂಟೆಗಳ ಕಾಲ ಓದುತ್ತಿದ್ದರು.
ಕೇತನ್ ಗರ್ಗ್ ರಾಜಸ್ಥಾನದವರು. ಪರೀಕ್ಷೆಗೆ ತಯಾರಿ ನಡೆಸಿದಾಗ ಪೂರ್ಣ ಸಮಯ ಕೆಲಸ ಮಾಡುತ್ತಿದ್ದರು. ಕೆಲಸದ ದಿನಗಳಲ್ಲೂ ದಿನಕ್ಕೆ 4-5 ಗಂಟೆ ಓದುತ್ತಿದ್ದರು. ಇದರಲ್ಲಿ ಬೆಳಿಗ್ಗೆ ಎರಡು ಗಂಟೆ ಮತ್ತು ಕೆಲಸದಿಂದ ಹಿಂತಿರುಗಿದ ನಂತರವೂ ಓದುತ್ತಿದ್ದರು. ವಾರಾಂತ್ಯ ಮತ್ತು ರಜಾದಿನಗಳಲ್ಲಿ ದಿನಕ್ಕೆ ಕನಿಷ್ಠ 10 ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ