• Home
  • »
  • News
  • »
  • career
  • »
  • Unemployment Rate: ದಿನೇ ದಿನೇ ಭಾರತದಲ್ಲಿ ನಿರುದ್ಯೋಗ ದರ ಏರಿಕೆ: ಇದಕ್ಕೆಲ್ಲಾ ಯಾರು ಕಾರಣ?

Unemployment Rate: ದಿನೇ ದಿನೇ ಭಾರತದಲ್ಲಿ ನಿರುದ್ಯೋಗ ದರ ಏರಿಕೆ: ಇದಕ್ಕೆಲ್ಲಾ ಯಾರು ಕಾರಣ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ಯ ಅಂಕಿಅಂಶಗಳ ಪ್ರಕಾರ, ಅಕ್ಟೋಬರ್ 2022 ರಲ್ಲಿ ಭಾರತದ ನಿರುದ್ಯೋಗ ದರವು ಹಿಂದಿನ ತಿಂಗಳಲ್ಲಿ ಇದ್ದ 6.4% ನಿಂದ 7.8% ಕ್ಕೆ ಏರಿಕೆ ಕಂಡಿದೆ.

  • Trending Desk
  • Last Updated :
  • Bangalore [Bangalore], India
  • Share this:

    ಭಾರತದಲ್ಲಿ ನಿರುದ್ಯೋಗದ ದರವು (Unemployment Rate) ತಿಂಗಳಿಂದ ತಿಂಗಳಿಗೆ ಗಣನೀಯವಾಗಿ ಏರುತ್ತಲಿದೆ. ಈ ಹಿಂದೆ ಆಗಸ್ಟ್‌ನಲ್ಲಿ ಒಂದು ವರ್ಷದ ಗರಿಷ್ಠ ಮಟ್ಟಕ್ಕೆ ಏರಿಕೆಯನ್ನು ಕಂಡಿತ್ತು. ಕುಸಿದ ಆರ್ಥಿಕತೆ, ಉದ್ಯೋಗಾವಕಾಶಗಳ (Job Opportunities) ನಿರಂತರ ಇಳಿಕೆಯಿಂದ ಈ ಏರಿಕೆ ಸಂಭವಿಸಿದೆ ಎಂದು ವರದಿಗಳಿಂದ ತಿಳಿದು ಬಂದಿದೆ. ಈಗ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ಯ ಅಂಕಿಅಂಶಗಳ ಪ್ರಕಾರ, ಅಕ್ಟೋಬರ್ 2022 ರಲ್ಲಿ ಭಾರತದ ನಿರುದ್ಯೋಗ ದರವು ಹಿಂದಿನ ತಿಂಗಳಲ್ಲಿ ಇದ್ದ 6.4% ನಿಂದ 7.8% ಕ್ಕೆ ಏರಿಕೆ ಕಂಡಿದೆ.


    CMIE ಡೇಟಾ ವರದಿ


    ಇದರ ಜೊತೆಗೆ, ನಗರ ಪ್ರದೇಶಗಳಲ್ಲಿ ನಿರುದ್ಯೋಗ ದರವು 7.7% ದಿಂದ 7.2% ಕ್ಕೆ ಅಂದ್ರೆ ಕನಿಷ್ಠ ಕುಸಿತವನ್ನು ಕಂಡಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ 5.8% ದಿಂದ 8.04% ಕ್ಕೆ ತೀವ್ರವಾಗಿ ಏರಿಕೆ ಕಂಡಿದೆ ಎಂದು CMIE ಡೇಟಾವು ಸೂಚಿಸಿದೆ. ಈ ತಿಂಗಳ ಆಧಾರದ ಮೇಲೆ ಗ್ರಾಮೀಣ ನಿರುದ್ಯೋಗ ದರದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆಯಾದರೂ, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಅಂತಹ ವ್ಯತ್ಯಾಸಗಳು ಏನಿಲ್ಲ. ಅಕ್ಟೋಬರ್ 2021 ಮತ್ತು 2020 ರಲ್ಲಿ, ಇದು ಕ್ರಮವಾಗಿ ಶೇಕಡಾ 7.7 ಮತ್ತು ಶೇಕಡಾ 7 ರಷ್ಟಿತ್ತು. ಸಾಂಕ್ರಾಮಿಕ ರೋಗ ಕೊರೋನಾ ಬರುವ ಮುಂಚೆ ಅಕ್ಟೋಬರ್ 2019 ರಲ್ಲಿ, ಇದು ಶೇಕಡಾ 8.1 ಆಗಿತ್ತು.


    ಇದನ್ನೂ ಓದಿ: Jobs After 10th: 10ನೇ ಕ್ಲಾಸ್ ಓದಿದವರಿಗೆ 30 ಸಾವಿರ ರೂ. ಸಂಬಳದ ಕೆಲಸ: ಇಲ್ಲಿದೆ ಮಾಹಿತಿ

    ಈ ವರ್ಷ, ಹರಿಯಾಣವು ಅಕ್ಟೋಬರ್‌ನಲ್ಲಿ ಅತಿ ಹೆಚ್ಚು ನಿರುದ್ಯೋಗ ದರವನ್ನು (31.8 %) ಕಂಡಿತು, ನಂತರ ರಾಜಸ್ಥಾನ (30.7 %) ಮತ್ತು ಜಮ್ಮು ಮತ್ತು ಕಾಶ್ಮೀರ (22.4 %), ಮಧ್ಯಪ್ರದೇಶ (0.8 % ) ಮತ್ತು ಛತ್ತೀಸ್‌ಗಢ (0.9 % ) ಮತ್ತು ಒಡಿಶಾ (1.1 %) ಕಡಿಮೆ ನಿರುದ್ಯೋಗ ದರಕ್ಕೆ ಸಾಕ್ಷಿಯಾಗಿರುವ ರಾಜ್ಯಗಳಾಗಿವೆ.


    ನಿಧಾನಗೊಂಡಿರುವ ನೇಮಕಾತಿ


    ಮಾಸಿಕ ನೌಕ್ರಿ ಜಾಬ್ಸ್‌ ಪೀಕ್ ಸೂಚ್ಯಂಕವು ಸೂಚಿಸಿರುವ ಪ್ರಕಾರ, “ಹಬ್ಬಗಳ ಕಾರಣದಿಂದಾಗಿ ನೇಮಕಾತಿ ನಿಧಾನಗೊಂಡಿದೆ ಮತ್ತು ಕಳೆದ ವರ್ಷಕ್ಕೆ ಹೋಲಿಸಿದರೆ ಅಷ್ಟೇನು ವ್ಯತ್ಯಾಸವಿಲ್ಲ, ಸಮವಾಗಿದೆ" ಎಂದು ಹೇಳಿರುವುದರಿಂದ ತಿಂಗಳಿನ ನೇಮಕಾತಿ ಚಟುವಟಿಕೆಯು ಇದೇ ರೀತಿಯ ಪ್ರವೃತ್ತಿಯನ್ನು ಪ್ರತಿಬಿಂಬಿಸುತ್ತದೆ.


    it is only the beginning employee layoffs will only get worse stg asp
    ಸಾಂಕೇತಿಕ ಚಿತ್ರ


    ಉದ್ಯೋಗ ತಜ್ಞರು ಏನ್‌ ಹೇಳ್ತಿದಾರೆ?


    Naukri.com ನ ಮುಖ್ಯ ವ್ಯಾಪಾರ ಅಧಿಕಾರಿ ಪವನ್ ಗೋಯಲ್ ಅವರು “ಹಬ್ಬದ ಋತುವಿನಲ್ಲಿ ನೇಮಕಾತಿ ಚಟುವಟಿಕೆಯಲ್ಲಿ ತಾತ್ಕಾಲಿಕ ಕುಸಿತವನ್ನು ನಿರೀಕ್ಷಿಸಲಾಗಿದೆ. ಆದರೆ ನೀವು ಕಳೆದ ವರ್ಷದ ಹಬ್ಬದ ವಿಂಡೋ (ನವೆಂಬರ್ 2021) ನೊಂದಿಗೆ ಡೇಟಾವನ್ನು ಹೋಲಿಸಿದಾಗ, ಸೂಚ್ಯಂಕವು 13 % ರಷ್ಟು ಸುಧಾರಣೆಯನ್ನು ಕಂಡಿದೆ. ಈ ತಿಂಗಳಲ್ಲಿ ಹೆಚ್ಚಿನ ಪ್ರಮುಖ ಕೈಗಾರಿಕೆಗಳು ನೇಮಕಾತಿ ವಿಸ್ತರಣೆಯನ್ನು ಕಾಯ್ದುಕೊಂಡಿವೆ ಎಂಬುದನ್ನು ಗಮನಿಸಬೇಕಾಗಿದೆ. ಇದು ವರ್ಷಾಂತ್ಯದ ಸಮೀಪಿಸುತ್ತಿದ್ದಂತೆ ಬಲಗೊಳ್ಳುವ ಸಾಧ್ಯತೆಯಿದೆ” ಎಂದು ಹೇಳಿದರು.


    ಉದ್ಯೋಗ ಕ್ಷೇತ್ರಗಳಲ್ಲಿ, ಅನುಭವದ ಬ್ಯಾಂಡ್‌ಗಳಾದ್ಯಂತ ವೃತ್ತಿಪರರಿಗೆ ಬೇಡಿಕೆಯ ಹೆಚ್ಚಳದಿಂದಾಗಿ ದೇಶದಲ್ಲಿ ವಿಮಾ ಕ್ಷೇತ್ರವು 93 % ರಷ್ಟು ಅಸಾಧಾರಣ ಬೆಳವಣಿಗೆಯನ್ನು ಮುಂದುವರೆಸಿದೆ ಎಂದು Naukri.com ವರದಿ ಸೂಚಿಸಿದೆ. ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮೆ (BFSI), ತೈಲ, ಪ್ರಯಾಣ ಮತ್ತು ಆತಿಥ್ಯ, ರಿಯಲ್ ಎಸ್ಟೇಟ್ ಮತ್ತು ಎಲೆಕ್ಟ್ರಾನಿಕ್ಸ್‌, ಆಟೋ ಮೊಬೈಲ್‌ ಕ್ಷೇತ್ರಗಳು ಹೆಚ್ಚು ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತಿವೆ.


    ಕಳೆದ ವರ್ಷದ ಅಕ್ಟೋಬರ್‌ನಲ್ಲಿ 18% ರಷ್ಟು ಕುಸಿತ


    ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಅಕ್ಟೋಬರ್‌ನಲ್ಲಿ 18% ರಷ್ಟು ಕುಸಿತ ಕಂಡುಬಂದಿದ್ದರಿಂದ ಐಟಿ ವಲಯದಲ್ಲಿ ನೇಮಕಾತಿ ನಿಧಾನಗೊಂಡಿದೆ ಎಂದು ವರದಿಯು ತಿಳಿಸಿದೆ. ಐಟಿ ಹೊರತುಪಡಿಸಿ, ಇತರ ವಲಯಗಳು ಟೆಲಿಕಾಂ ಮತ್ತು ಹೆಲ್ತ್‌ಕೇರ್ ಸೇರಿದಂತೆ ನೇಮಕಾತಿಯಲ್ಲಿ ಬಹಳ ಕುಸಿತವನ್ನು ದಾಖಲಿಸಿವೆ.


    ಕೋಲ್ಕತ್ತಾ ಮತ್ತು ಮುಂಬೈನಲ್ಲಿ ನೇಮಕಾತಿ ಬೆಳೆಯುತ್ತಲೇ ಇದ್ದರೂ, ಕಳೆದ ವರ್ಷ ಅಕ್ಟೋಬರ್‌ಗೆ ಹೋಲಿಸಿದರೆ ದೆಹಲಿಯಲ್ಲಿ ನೇಮಕಾತಿ ದರ ಸಮವಾಗಿದೆ. ಐಟಿ ವಲಯವು ಕುಸಿತವನ್ನು ಕಂಡಿರುವುದರಿಂದ, ಟೆಕ್ ಹಬ್‌ಗಳಾದ ಬೆಂಗಳೂರು, ಹೈದರಾಬಾದ್ ಮತ್ತು ಪುಣೆಯಲ್ಲಿ ನೇಮಕಾತಿ ನಿಧಾನವಾಗಿದೆ ಎಂದು ಹೇಳಲಾಗಿದೆ.

    Published by:Kavya V
    First published: