• Home
 • »
 • News
 • »
 • career
 • »
 • Unemployment: ನವೆಂಬರ್‌ನಲ್ಲಿ ನಿರುದ್ಯೋಗ ದರವು ಕಳೆದ ಮೂರು ತಿಂಗಳಿಗಿಂತ ಹೆಚ್ಚಾಗಿದೆಯಂತೆ! ಕಾರಣ ನೋಡಿ

Unemployment: ನವೆಂಬರ್‌ನಲ್ಲಿ ನಿರುದ್ಯೋಗ ದರವು ಕಳೆದ ಮೂರು ತಿಂಗಳಿಗಿಂತ ಹೆಚ್ಚಾಗಿದೆಯಂತೆ! ಕಾರಣ ನೋಡಿ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಕೇಂದ್ರ ಸರಕಾರವು ಉದ್ಯೋಗದ ಕುರಿತು ರಾಷ್ಟ್ರೀಯ ಅಂಕಿಅಂಶ ಕಚೇರಿ (NSO) ಡೇಟಾವನ್ನು ಬಿಡುಗಡೆ ಮಾಡಿದೆ. NSO ಬಿಡುಗಡೆ ಮಾಡಿರುವ ಕಾರ್ಮಿಕ ಬಲ ಸಮೀಕ್ಷೆಯ ಪ್ರಕಾರ ದೇಶದ ಉದ್ಯೋಗ ದರವು ಈ ವರ್ಷ ಜುಲೈ-ಸೆಪ್ಟೆಂಬರ್‌ನಲ್ಲಿ ನಗರ ಪ್ರದೇಶಗಳಲ್ಲಿರುವ 15 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರಲ್ಲಿ ಕಳೆದ ವರ್ಷ 9.8% ರಷ್ಟಿದ್ದ ಉದ್ಯೋಗ ದರವು ಈ ಬಾರಿ 7.2% ಕ್ಕೆ ಇಳಿಮುಖಗೊಂಡಿದೆ.

ಮುಂದೆ ಓದಿ ...
 • News18 Kannada
 • 4-MIN READ
 • Last Updated :
 • Karnataka, India
 • Share this:

ಇದೀಗ ಭಾರತದಲ್ಲಿ ನಿರುದ್ಯೋಗ ಸಮಸ್ಯೆ (Unemployment Problem) ಇನ್ನಷ್ಟು ಕಳವಳಕಾರಿಯಾಗಿ ಏರುತ್ತಿದ್ದು, ಕಳೆದ ತಿಂಗಳು 7.77% ದರವಿದ್ದ ನಿರುದ್ಯೋಗ ದರ ಮೂರು ತಿಂಗಳಲ್ಲೇ ಅತ್ಯಧಿಕ ದರವಾದ 8.0% ಕ್ಕೆ ಏರಿಕೆಯಾಗಿದೆ ಎಂದು ಭಾರತದ ಆರ್ಥಿಕತೆಯನ್ನು ನಿರ್ವಹಣೆ ಮಾಡುವ ಕೇಂದ್ರ CMIE ಬಹಿರಂಗಪಡಿಸಿದೆ. ಇನ್ನು ನಗರ ವ್ಯಾಪ್ತಿಯಲ್ಲಿ ನಿರುದ್ಯೋಗ ದರವು 7.21% ರಿಂದ ನವೆಂಬರ್‌ನಲ್ಲಿ 8.96% ಕ್ಕೆ ಏರಿದೆ ಅಂತೆಯೇ ಗ್ರಾಮೀಣ (Rural) ವಲಯದಲ್ಲಿ ನಿರುದ್ಯೋಗ ದರವು 8.04% ರಿಂದ 7.55% ಕ್ಕೆ ಇಳಿದಿದೆ ಎಂದು ಅಂಕಿಅಂಶಗಳು ತೋರಿಸಿವೆ.


ನಿರುದ್ಯೋಗ ದರವನ್ನು ಹೇಗೆ ಅಂದಾಜಿಸಲಾಗುತ್ತದೆ?


ಅಕ್ಟೋಬರ್‌ನಲ್ಲಿ, ನಿರುದ್ಯೋಗ ದರವು ಭಾರತದ ನಗರ ಪ್ರದೇಶದಲ್ಲಿ 7.21% ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 8.04% ರಷ್ಟಿತ್ತು ಎಂದು ಅಂಕಿಅಂಶಗಳು ತೋರಿಸಿವೆ. 1.78 ಲಕ್ಷ ಕುಟುಂಬಗಳ ಗಾತ್ರವನ್ನು ಆಧರಿಸಿ CMIE ದೇಶದ ನಿರುದ್ಯೋಗ ದರವನ್ನು ಮಾಪನ ಮಾಡುತ್ತದೆ. ಇದೊಂದು ಅಂದಾಜು ಲೆಕ್ಕಾಚಾರವಾಗಿದೆ.


ನಿರುದ್ಯೋಗ ದರ ಎಂದರೇನು?


ಕಾರ್ಮಿಕ ಬಲದಲ್ಲಿರುವ ನಿರುದ್ಯೋಗಿ ಜನರ ಶೇಕಡಾವಾರು ಮೊತ್ತವೇ ನಿರುದ್ಯೋಗ ದರವಾಗಿದೆ. ಕಾರ್ಮಿಕರ ಗುಂಪಿನಲ್ಲಿ ಯಾರು ಉದ್ಯೋಗಿಗಳು ಹಾಗೂ ಯಾರು ನಿರುದ್ಯೋಗಿಗಳು ಎಂಬುದನ್ನು ನಿರ್ಧರಿಸಬೇಕಾಗುತ್ತದೆ. ಏಕೆಂದರೆ ಉದ್ಯೋಗದಲ್ಲಿರುವವರು ಹಾಗೂ ಉದ್ಯೋಗದಲ್ಲಿಲ್ಲದವರು ಕಾರ್ಮಿಕ ಬಲದಲ್ಲಿ ಸೇರಿಕೊಂಡಿದ್ದಾರೆ.


ನಿರುದ್ಯೋಗ ಸಮಸ್ಯೆಗೆ ಮೂಲ ಕಾರಣವೇನು?


ಕಾರ್ಮಿಕ ಬಲ ಹಾಗೂ ಉದ್ಯಮ ಪ್ರಗತಿ ಒಂದಕ್ಕೊಂದು ಕೊಂಡಿಯಂತೆ ಕೆಲಸ ಮಾಡುತ್ತದೆ. ಉದ್ಯಮ ರಂಗಗಳಲ್ಲಿ ಹೆಚ್ಚಿನ ಉದ್ಯೋಗಿಗಳನ್ನು ನೇಮಿಸಿದಾಗ ಹಾಗೂ ಹೆಚ್ಚುವರಿ ವೇತನಗಳನ್ನು ನೀಡಿದಾಗ ಉದ್ಯೋಗ ಹುಡುಕುವ ಉದ್ಯೋಗಿಗಳಿಗೆ ಪ್ರೋತ್ಸಾಹಗಳು ಹೆಚ್ಚಿರುತ್ತವೆ. ಇನ್ನು ಸಂಸ್ಥೆಗಳು ಯಾವುದೇ ನೇಮಕಾತಿಯನ್ನು ಮಾಡದೇ ಇದ್ದಾಗ ಹಾಗೂ ಹೆಚ್ಚುವರಿ ವೇತನಗಳನ್ನು ನೀಡದೇ ಇದ್ದಾಗ ಉದ್ಯೋಗ ಹುಡುಕುವವರಿಗೆ ಅವಕಾಶಗಳು ಕಡಿಮೆ ಇರುತ್ತವೆ ಇದರಿಂದ ನಿರುದ್ಯೋಗ ಸಮಸ್ಯೆ ಸಾಮಾನ್ಯವಾಗಿ ಸಂಭವಿಸುತ್ತದೆ.


ಇದನ್ನೂ ಓದಿ: ವರ್ಕ್ ಫ್ರಮ್ ಹೋಮ್​​ನಲ್ಲಿದ್ದವರು 6 ತಿಂಗಳಲ್ಲೇ ರಿಸೈನ್ ಮಾಡುತ್ತಿದ್ದಾರಂತೆ, ಶಾಕಿಂಗ್ ವರದಿ


ಯಾವ ರಾಜ್ಯಗಳಲ್ಲಿ ಹೆಚ್ಚು ನಿರುದ್ಯೋಗ ದರ ದಾಖಲಾಗಿದೆ?


ರಾಜ್ಯಗಳ ಪೈಕಿ ನಿರುದ್ಯೋಗ ದರದಲ್ಲಿ ಹರಿಯಾಣ ದೇಶದಲ್ಲೇ ಅತಿ ಹೆಚ್ಚು ನಿರುದ್ಯೋಗ ದರವಾದ 30.6% ವನ್ನು ನವೆಂಬರ್‌ನಲ್ಲಿ ಹೊಂದಿದ್ದು, ತದನಂತರದ ಸ್ಥಾನವನ್ನು 24.%5 ದರವನ್ನು ದಾಖಲಿಸುವ ಮೂಲಕ ರಾಜಸ್ಥಾನ ಪಡೆದಿದೆ.


ಇನ್ನುಳಿದಂತೆ ಜಮ್ಮು ಮತ್ತು ಕಾಶ್ಮೀರ 23.9% ದಷ್ಟು ನಿರುದ್ಯೋಗ ದರವನ್ನು ದಾಖಲಿಸಿದರೆ, ಬಿಹಾರ 17.3% ಹಾಗೂ ತ್ರಿಪುರಾ 14.5% ನಿರುದ್ಯೋಗದ ದರವನ್ನು ದಾಖಲಿಸಿವೆ.


ಕಡಿಮೆ ನಿರುದ್ಯೋಗ ದರ ದಾಖಲಾದ ರಾಜ್ಯಗಳು


ಹಿಂದಿನ ತಿಂಗಳಲ್ಲಿ ಕನಿಷ್ಟ ನಿರುದ್ಯೋಗ ದರ ದಾಖಲಿಸಿದ ರಾಜ್ಯಗಳೆಂದರೆ ಛತ್ತೀಸ್‌ಗಢ 0.1%, ಉತ್ತರಾಖಾಂಡ 1.2%, ಒಡಿಸ್ಸಾ 1.6%, ಕರ್ನಾಟಕ 1.8% ಹಾಗೂ ಮೇಘಾಲಯ 2.1% ಗಳಾಗಿವೆ. ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಅಕ್ಟೋಬರ್ ತಿಂಗಳಲ್ಲಿ ನಿರುದ್ಯೋಗ ದರ 7.77 % ದಷ್ಟಿದ್ದರೆ, ಸೆಪ್ಟೆಂಬರ್‌ನಲ್ಲಿ ಇದು ಶೇಕಡಾ 6.43% ದಷ್ಟಿತ್ತು.


ಕೇಂದ್ರ ಸರಕಾರ ಬಿಡುಗಡೆ ಮಾಡಿದ ಡೇಟಾದಲ್ಲೇನಿದೆ?


ಕೇಂದ್ರ ಸರಕಾರವು ಉದ್ಯೋಗದ ಕುರಿತು ರಾಷ್ಟ್ರೀಯ ಅಂಕಿಅಂಶ ಕಚೇರಿ (NSO) ಡೇಟಾವನ್ನು ಬಿಡುಗಡೆ ಮಾಡಿದೆ. NSO ಬಿಡುಗಡೆ ಮಾಡಿರುವ ಕಾರ್ಮಿಕ ಬಲ ಸಮೀಕ್ಷೆಯ ಪ್ರಕಾರ ದೇಶದ ಉದ್ಯೋಗ ದರವು ಈ ವರ್ಷ ಜುಲೈ-ಸೆಪ್ಟೆಂಬರ್‌ನಲ್ಲಿ ನಗರ ಪ್ರದೇಶಗಳಲ್ಲಿರುವ 15 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರಲ್ಲಿ ಕಳೆದ ವರ್ಷ 9.8% ರಷ್ಟಿದ್ದ ಉದ್ಯೋಗ ದರವು ಈ ಬಾರಿ 7.2% ಕ್ಕೆ ಇಳಿಮುಖಗೊಂಡಿದೆ.


ಈ ಅಂಕಿಅಂಶವು ಕಾರ್ಮಿಕ ಬಲದ ಅನುಪಾತದೊಂದಿಗೆ ನಿರುದ್ಯೋಗ ದರದಲ್ಲಿನ ಕುಸಿತವನ್ನು ಒತ್ತಿಹೇಳಿದ್ದು, ದೇಶವು ಸಾಂಕ್ರಾಮಿಕ ರೋಗದಿಂದ ನಿಧಾನವಾಗಿ ಆರ್ಥಿಕ ಚೇತರಿಕೆಯತ್ತ ಮುಖಮಾಡುತ್ತಿದೆ ಎಂಬ ಆಶಾಭಾವನೆಯನ್ನುಂಟು ಮಾಡಿದೆ. 2021 ರ ಜುಲೈ-ಸಪ್ಟೆಂಬರ್‌ನಲ್ಲಿ ದೇಶದಲ್ಲಿ ಕೋವಿಡ್ ಸಂಬಂಧಿತ ನಿರ್ಬಂಧಗಳಿಂದಾಗಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿತ್ತು ಎಂದು ಸುದ್ದಿಮಾಧ್ಯಮ ವರದಿ ಮಾಡಿದೆ.

First published: