• Home
  • »
  • News
  • »
  • career
  • »
  • Twitter Layoffs: ಎಲಾನ್ ಮಸ್ಕ್ ಅವರ ಅದೊಂದು ಮಾತು ಕೇಳಿ ಅಸ್ವಸ್ಥರಾದ ಟ್ವಿಟರ್ ಮ್ಯಾನೇಜರ್!

Twitter Layoffs: ಎಲಾನ್ ಮಸ್ಕ್ ಅವರ ಅದೊಂದು ಮಾತು ಕೇಳಿ ಅಸ್ವಸ್ಥರಾದ ಟ್ವಿಟರ್ ಮ್ಯಾನೇಜರ್!

 ಎಲಾನ್​ ಮಸ್ಕ್​

ಎಲಾನ್​ ಮಸ್ಕ್​

ಕೆಲವು ಉನ್ನತ ಅಧಿಕಾರಿಗಳನ್ನು ಇಮೇಲ್ ಮೂಲಕ ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ದಾಖಲೆಗಳು ಹೇಳುತ್ತಿವೆ.  ಮ್ಯಾನೇಜರ್‌ಗೆ ನೂರಾರು ಕೆಲಸಗಾರರನ್ನು ಕೆಲಸದಿಂದ ತೆಗೆದುಹಾಕಲು ಹೇಳಿದಾಗ ಅವರು ಬಹಳ ಆತಂಕಕ್ಕೆ ಒಳಗಾದರು.

  • Share this:

    ಎಲಾನ್​​ ಮಸ್ಕ್‌ ಟ್ವಿಟರ್​ (Elon Musk Twitter)  ಅಧಿಪತಿಯಾಗಿದ್ದು, ಅವರು ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಸಂಸ್ಥೆಯ ಸಿಇಒ (CEO) ಹಾಗೂ ಪ್ರಮುಖ ಕಾನೂನು ಅಧಿಕಾರಿಯನ್ನು ಕೆಲಸದಿಂದ ಕಿತ್ತೊಗೆದಿದ್ದರು (Layoffs). ಈಗ, ಅವರು ಸಂಸ್ಥೆಯ ಸುಮಾರು ಅರ್ಧದಷ್ಟು ಉದ್ಯೋಗಿಗಳನ್ನು ಕಿತ್ತೊಗೆಯಲು ಪ್ಲ್ಯಾನ್‌ ಮಾಡುತ್ತಿದ್ದಾರೆ ಎಂದು ವರದಿಗಳು ಹೇಳುತ್ತಿವೆ. “ಟ್ವಿಟರ್​ ಕಂಪನಿಯು ಸುಮಾರು 50% ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲು ನಿರ್ಧರಿಸಿದೆ. ಆದ್ದರಿಂದ ಕಂಪನಿಯ ಭಾಗವಾಗಿರುವ ನೂರಾರು ಸಿಬ್ಬಂದಿಗಳನ್ನು ಕೆಲಸದಿಂದ ವಜಾಗೊಳಿಸಲು ಕಂಪನಿಯ ಹೊಸ ಬಾಸ್‌ ಎಲೋನ್ ಮಸ್ಕ್‌ ಅವರು ಹೇಳಿದ ನಂತರ ಇದು "ಅರ್ಥವಿಲ್ಲದ ಮಾತು" ಎಂದು ಟ್ವಿಟರ್​ ಮ್ಯಾನೆಜರ್‌ ಅಲ್ಲಗಳೆಯುವುದರ ಜೊತೆಗೆ ಆಘಾತಕ್ಕೆ ಒಳಗಾಗಿದ್ದಾರೆ” ಎಂದು ನ್ಯೂಯಾರ್ಕ್ ಟೈಮ್ಸ್‌ನ ಹೊಸ ವರದಿಯಲ್ಲಿ ಉಲ್ಲೇಖಗೊಂಡಿದೆ.


    ಏನಿದು ಹೊಸ ವರದಿ? 


    "ಟು ವೀಕ್ಸ್ ಆಫ್ ಚಾವೋಸ್: ಇನ್ಸೈಡ್ ಎಲಾನ್ ಮಸ್ಕ್ ಟೇಕ್ ಓವರ್ ಆಫ್ ಟ್ವಿಟರ್" ಎಂಬ ಟೈಟಲ್‌ ಇರುವ ವರದಿಯು ಸಾಮೂಹಿಕವಾಗಿ ಕೆಲಸದಿಂದ ತೆಗೆದುಹಾಕಿದ ಉದ್ಯೋಗಿಗಳ ವಿವರಗಳು, ಕಂಪನಿಯನ್ನು ಪರಿವರ್ತಿಸುವ ಮಸ್ಕ್ ಅವರ ನಿರ್ಧಾರ.  "ಚೀಫ್ ಟ್ವಿಟ್" ನಿಗದಿಪಡಿಸಿದ ಹೊಸ ಉತ್ಪನ್ನದ ಗಡುವನ್ನು ಈ ವರದಿಯು ವಿವರಿಸುತ್ತದೆ. ಈ ವರದಿಗಾಗಿ 36 ಟ್ವಿಟರ್ ಉದ್ಯೋಗಿಗಳನ್ನು ಇಲ್ಲಿ ಸಂದರ್ಶಿಸಿ ಸೂಕ್ತ ಉತ್ತರಗಳನ್ನು ಪಡೆಯಲಾಗಿದೆ” ಎಂದು ವರದಿಯಲ್ಲಿ ಹೇಳಲಾಗಿದೆ.


    Twitter starts laying off staff in India
    ಎಲಾನ್ ಮಸ್ಕ್​


    “36 ಉದ್ಯೋಗಿಗಳನ್ನು ಸಂದರ್ಶಿಸಿದ ನಂತರ, ಅವರ ಆಂತರಿಕ ದಾಖಲೆಗಳು ಮತ್ತು ಕಾರ್ಯಸ್ಥಳದ ಚಾಟ್ ಲಾಗ್‌ಗಳನ್ನು ಪರಿಶೀಲಿಸಿದ ನಂತರ ಈ ಉದ್ಯೋಗ ಕುಸಿತವು ಅರ್ಥವಿಲ್ಲದ್ದು ಎಂದು  ಖಚಿತವಾಗಿದೆ. ಇದರಿಂದ ಕೆಲಸಗಾರರು ಬಹಳ ಕಷ್ಟಪಡುತ್ತಿದ್ದಾರೆ” ಎಂದು ಸುದ್ದಿ ಮಾಧ್ಯಮ ಔಟ್‌ಲೆಟ್ ಹೇಳಿದೆ.


    ಮ್ಯಾನೇಜರ್​ಗೇ ಶಾಕ್​


    “ಕೆಲವು ಉನ್ನತ ಅಧಿಕಾರಿಗಳನ್ನು ಇಮೇಲ್ ಮೂಲಕ ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ದಾಖಲೆಗಳು ಹೇಳುತ್ತಿವೆ.  ಮ್ಯಾನೇಜರ್‌ಗೆ ನೂರಾರು ಕೆಲಸಗಾರರನ್ನು ಕೆಲಸದಿಂದ ತೆಗೆದುಹಾಕಲು ಹೇಳಿದಾಗ, ಅವರು ಬಹಳ ಆತಂಕಕ್ಕೆ ಒಳಗಾದರು. ಇದಕ್ಕೆ ಸೂಕ್ತ ಕಾರಣವೇನೆಂದು ತಿಳಿಯುವ ನಿಮಿತ್ತ ಮಸ್ಕ್‌ ಅವರನ್ನು ಭೇಟಿಯಾಗಲು ಕಚೇರಿಯಲ್ಲಿ ಹಗಲು ರಾತ್ರಿ ಕಾಯುತ್ತಲೇ ಇದ್ದರು” ಎಂದು ಔಟ್‌ಲೆಟ್‌ ಮಾಧ್ಯಮವು ವರದಿ ಮಾಡಿದೆ.


    “ನವೆಂಬರ್ 2 ರಂದು, ಮಾನವ ಸಂಪನ್ಮೂಲಗಳು ಮತ್ತು ಕಾನೂನು ತಂಡಗಳು ಕೆಲಸದಿಂದ ಉದ್ಯೋಗಿಗಳನ್ನು ಶೇಕಡಾ 50 ರಷ್ಟು ವಜಾಗೊಳಿಸುವ ಕುರಿತು ಚರ್ಚಿಸುತ್ತಿರುವ ಆಂತರಿಕ ಸ್ಲಾಕ್ ಸಂದೇಶ ವ್ಯವಸ್ಥೆಯಲ್ಲಿನ ಚಾನಲ್‌ನಲ್ಲಿ ಉದ್ಯೋಗಿಗಳು ಅನೇಕ ಪ್ರಶ್ನೆಗಳನ್ನು ಕೇಳುವ ಮೂಲಕ ಇದಕ್ಕೆ ಸೂಕ್ತ ಕಾರಣ ನೀಡಿ ಎಂದು ಮಸ್ಕ್‌ ಅವರನ್ನು ಒತ್ತಾಯಿಸಿದರು”.


    ಎಲಾನ್‌ ಮಸ್ಕ್


    “ಒಂದು ಸಂದೇಶದ ಮೂಲದ ಪ್ರಕಾರ, ಕಂಪನಿಯ ಉದ್ಯೋಗಿಯೊಬ್ಬರು 3,738 ಉದ್ಯೋಗಿಗಳನ್ನು ಅಥವಾ ಕಂಪನಿಯ ಅರ್ಧದಷ್ಟು ಉದ್ಯೋಗಿಗಳನ್ನು ವಜಾಗೊಳಿಸಬಹುದು. ಈ ಸಂದೇಶವನ್ನು ಕಂಪನಿಯು ಆಂತರಿಕವಾಗಿ ಈಗಾಗಲೇ ಹಂಚಿಕೊಂಡಿದೆ. ಇದಾದ ನಂತರ ಉದ್ಯೋಗಿಗಳು ಕಂಪನಿಯ ಸಂಪರ್ಕದಲ್ಲಿರಲು ವೈಯಕ್ತಿಕ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು ಪ್ರಾರಂಭಿಸಿದರು. ತಕ್ಷಣವೇ ಕೆಲಸವನ್ನು ಬಿಡಲು ಸಹ ಆರಂಭಿಸಿದರು.” ಎಂದು ಹೇಳಿದರು.


    ಇದನ್ನೂ ಓದಿ: Layoffs 2022: ಕೆಲಸ ಕಳೆದುಕೊಂಡ ಕೂಡಲೇ ಇದನ್ನು ಮಾಡಿದ್ರೆ ಸಂಕಷ್ಟದಿಂದ ಪಾರಾಗುತ್ತೀರಿ


    ʼದಿವಾಳಿಯತ್ತ ಸಾಗುತ್ತಿರುವ ಟ್ವಿಟರ್​​ʼ - ಎಲೋನ್ ಮಸ್ಕ್‌


    “ಹಲವಾರು ಉನ್ನತ ಅಧಿಕಾರಿಗಳು ಕಂಪನಿಯನ್ನು ತೊರೆಯುವುದನ್ನು ನೋಡಿದ ಕಂಪನಿಯು ಸೋಷಿಯಲ್‌ ಮೀಡಿಯಾ ಪ್ಲಾಟ್‌ಪಾರ್ಮ್‌ ಆದ ಟ್ವಿಟ್ಟರ್‌ ದಿವಾಳಿಯಾಗುತ್ತಿರುವ ಬಗ್ಗೆ ಎಲೋನ್ ಮಸ್ಕ್‌ ಅವರು ಸುಳಿವು ನೀಡಿದ್ದಾರೆ. ಬಿಲಿಯನೇರ್ ಮಸ್ಕ್‌ ಅವರು ಕಂಪನಿಯ ದಿವಾಳಿತನವನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಟ್ವಿಟರ್ ಉದ್ಯೋಗಿಗಳಿಗೆ ಕರೆ ನೀಡಿದ್ದಾರೆ” ಎಂದು ಬ್ಲೂಮ್‌ಬರ್ಗ್ ನ್ಯೂಸ್ ವರದಿ ಮಾಡಿದೆ.


    ಕಂಪನಿಯ ವೆಚ್ಚ ಕಡಿತ ಮಾಡಲು ಸಂಸ್ಥೆಯ ಸುಮಾರು 3,738 ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುತ್ತಿದೆ ಎಂದು ಬ್ಲೂಮ್‌ಬರ್ಗ್‌ ವರದಿ ಮಾಡಿದೆ. ಈ ಬಗ್ಗೆ ಸಿಬ್ಬಂದಿಗೆ ಮಸ್ಕ್‌ ಮಾಹಿತಿ ನೀಡಲಿದ್ದಾರೆ ಎಂದೂ ಈ ವರದಿ ಹೇಳುತ್ತದೆ.

    Published by:Kavya V
    First published: