• Home
 • »
 • News
 • »
 • career
 • »
 • Twitter Layoffs: ನೆಲದ ಮೇಲೆ ಮಲಗಿದ್ದ ಟ್ವಿಟರ್ ಉದ್ಯೋಗಿ ಬಚಾವ್: ಇದರಿಂದಲೇ ಉಳಿಯಿತಾ ಕೆಲಸ?

Twitter Layoffs: ನೆಲದ ಮೇಲೆ ಮಲಗಿದ್ದ ಟ್ವಿಟರ್ ಉದ್ಯೋಗಿ ಬಚಾವ್: ಇದರಿಂದಲೇ ಉಳಿಯಿತಾ ಕೆಲಸ?

ಆಫೀಸ್​​ನಲ್ಲೇ ನೆಲದ ಮೇಲೆ ಮಲಗಿರುವ ಉದ್ಯೋಗಿ

ಆಫೀಸ್​​ನಲ್ಲೇ ನೆಲದ ಮೇಲೆ ಮಲಗಿರುವ ಉದ್ಯೋಗಿ

ಜಾಗತಿಕವಾಗಿ ವೈರಲ್ ಆದ ಆ ಉದ್ಯೋಗಿ ಹೆಸರು ಎಸ್ತರ್ ಕ್ರಾಫೋರ್ಡ್ ಅಂತ ಹೇಳಲಾಗುತ್ತಿದೆ. ಸಾಮೂಹಿಕ ವಜಾಗೊಳಿಸುವಿಕೆಯಿಂದ ಎಂದರೆ ಲೇ ಆಫ್ ನಿಂದ ಬಚಾವ್ ಆದ ಅದೃಷ್ಟಶಾಲಿಗಳಲ್ಲಿ ಇವರು ಒಬ್ಬರು.

 • Share this:

  ಎಲಾನ್ ಮಸ್ಕ್  ( Elon Musk) ಟ್ವಿಟರ್  (Twitter) ಅನ್ನು ಸ್ವಾಧೀನಪಡಿಸಿಕೊಂಡ ನಂತರವಂತೂ ವಿಶ್ವದಾದ್ಯಂತ ಅದರ ಸಾವಿರಾರು ಉದ್ಯೋಗಿಗಳು (Employees) ಎಂತಹ ಅವ್ಯವಸ್ಥೆಯನ್ನು ಎದುರಿಸಬೇಕಾಗಿ ಬಂದಿದೆ ಅಂತ ನಾವೆಲ್ಲಾ ನೋಡುತ್ತಲೇ ಇದ್ದೇವೆ. ಹೌದು.. ಈ ಲೇ ಆಫ್ ನಿಂದಾಗಿ (ಉದ್ಯೋಗ ಕಡಿತ) ಅನೇಕರು ಕೆಲಸವನ್ನು ಕಳೆದುಕೊಂಡಿದ್ದಾರೆ ಮತ್ತು ಇನ್ನೂ ಅನೇಕ ಜನ ಉದ್ಯೋಗಿಗಳು ತಮ್ಮ ಕೈತುಂಬ ಸಂಬಳ ಬರುವ ಕೆಲಸವನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಅಂತ ಹೇಳಬಹುದು. ಈ ಲೇ-ಆಫ್ ಡ್ರಾಮಾದ ನಡುವೆ, ಟ್ವಿಟರ್ ಉದ್ಯೋಗಿಯೊಬ್ಬರು ಕಂಪನಿಯಲ್ಲಿಯೇ ನೆಲದ ಮೇಲೆ ಮಲಗಿರುವ ಒಂದು ಫೋಟೋ ಕಳೆದ ವಾರ ಹಂಚಿಕೊಂಡಿದ್ದು ಅದು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಕೋಲಾಹಲಕ್ಕೆ ಕಾರಣವಾಗಿತ್ತು. ಅನೇಕರಿಗೆ, ಈ ಫೋಟೋ ಬಹುಶಃ ಎಲೋನ್ ಮಸ್ಕ್ ಅವರ ಕಟ್ಟುನಿಟ್ಟಾದ ಗಡುವಿನ ಪರಿಣಾಮದಿಂದಾಗಿ ಅಂತ ಅಂದುಕೊಂಡಿದ್ದರು.


  ಕಂಪನಿಯಲ್ಲಿ ಮಲಗಿದ್ದ ಉದ್ಯೋಗಿ ‘ಲೇ-ಆಫ್’ ಡ್ರಾಮಾದಿಂದ ಪಾರು


  ಕುತೂಹಲಕಾರಿಯಾಗಿ, ಜಾಗತಿಕವಾಗಿ ವೈರಲ್ ಆದ ಆ ಉದ್ಯೋಗಿ ಹೆಸರು ಎಸ್ತರ್ ಕ್ರಾಫೋರ್ಡ್ ಅಂತ ಹೇಳಲಾಗುತ್ತಿದೆ. ಸಾಮೂಹಿಕ ವಜಾಗೊಳಿಸುವಿಕೆಯಿಂದ ಎಂದರೆ ಲೇ-ಆಫ್ ನಿಂದ ಬಚಾವ್ ಆದ ಅದೃಷ್ಟಶಾಲಿಗಳಲ್ಲಿ ಇವರು ಒಬ್ಬರು ಎಂದು ಬಿಸಿನೆಸ್ ಇನ್ಸೈಡರ್ ವರದಿ ಮಾಡಿದೆ. ಟ್ವಿಟ್ಟರ್ ನಲ್ಲಿ ಅನೇಕರು ಆಕೆಯ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದರು ಮತ್ತು ಅವಳ ಕೆಲಸದ ನೈತಿಕತೆಯನ್ನು ಪ್ರಶ್ನಿಸಿದ್ದರು. ಜನರ ಭಾವನೆ ಮತ್ತು ಅಭಿಪ್ರಾಯಗಳು ಏನೇ ಇದ್ದರೂ ಕ್ರಾಫರ್ಡ್ ಅವರ ಕೆಲಸವು ಈ ಸಮಯದಲ್ಲಿ ಸುರಕ್ಷಿತವಾಗಿದೆ ಎಂದು ಹೇಳಲಾಗುತ್ತಿದೆ.


  Twitter starts laying off staff in India
  ಎಲಾನ್ ಮಸ್ಕ್​


  ಅವರ ಲಿಂಕ್ಡ್ಇನ್ ಪ್ರೊಫೈಲ್ ಪ್ರಕಾರ, ಕ್ರಾಫರ್ಡ್ ಸುಮಾರು ಎರಡು ವರ್ಷಗಳಿಂದ ಟ್ವಿಟ್ಟರ್ ನಲ್ಲಿ ಉತ್ಪನ್ನ ನಿರ್ವಹಣೆಯ ನಿರ್ದೇಶಕರಾಗಿದ್ದಾರೆ. ಅವರು ಕಂಪನಿಯ ಪರಿವರ್ತನೆಯ ಪ್ರಮುಖ ಭಾಗವಾಗಿದ್ದಾರೆ, ಬಿಸಿನೆಸ್ ಇನ್ಸೈಡರ್, ಈ ಸ್ಲೀಪ್-ಗೇಟ್ ಅನ್ನು "ಲೇ-ಆಫ್ ನಂತಹ ವಿಪತ್ತಿನ ಪರಿಸ್ಥಿತಿಯನ್ನು ಎದುರಿಸಲು ಕ್ರಾಫೋರ್ಡ್ ಅವರ ಸಾಮರ್ಥ್ಯ" ಎಂದು ಉಲ್ಲೇಖಿಸಿದೆ. ಮಸ್ಕ್ ತನ್ನ ಟ್ವಿಟ್ಟರ್ ಖರೀದಿಯನ್ನು ಪೂರ್ಣಗೊಳಿಸಿದ ನಂತರ ಮ್ಯಾನೇಜರ್ ಅವರ ಪ್ರಾಮುಖ್ಯತೆ ಏರುತ್ತಿರುವಂತೆ ತೋರುತ್ತಿರುವುದಾಗಿ ಎಂಬ ಮಾಹಿತಿ ಕಳೆದ ವಾರ ವರದಿ ಮಾಡಿದೆ.


  ಈ ವೈರಲ್ ಪಿಕ್ ಹಂಚಿಕೊಂಡಿದ್ದು ಯಾರು?


  ಈ ವೈರಲ್ ಫೋಟೋವನ್ನು ಟ್ವಿಟ್ಟರ್ ಸ್ಪೇಸ್ ಪ್ರಾಡಕ್ಟ್ ಮ್ಯಾನೇಜರ್ ಇವಾನ್ ಜೋನ್ಸ್ ಮೊದಲು ಹಂಚಿಕೊಂಡಿದ್ದು, ಕಚೇರಿಯ ಮಹಡಿಯಲ್ಲಿ ತನ್ನ ಬಾಸ್ ಗಾಢ ನಿದ್ರೆಯಲ್ಲಿರುವುದನ್ನು ತೋರಿಸುತ್ತದೆ, ಸ್ಲೀಪಿಂಗ್ ಬ್ಯಾಗ್ ನಲ್ಲಿ ಸುರುಳಿ ಸುತ್ತಿಕೊಂಡಿದ್ದಾರೆ ಮತ್ತು ಅವರ ಕಣ್ಣುಗಳನ್ನು ಸ್ಲೀಪ್ ಮಾಸ್ಕ್ ನಿಂದ ಮುಚ್ಚಿಕೊಂಡಿದ್ದಾರೆ ಎಂದಿದ್ದರು.


  "ಎಲಾನ್ ಅವರ ಟ್ವಿಟ್ಟರ್ ನಲ್ಲಿ ನಿಮ್ಮ ಬಾಸ್ ನಿಂದ ನಿಮಗೆ ಏನಾದರೂ ಅಗತ್ಯವಿದ್ದಾಗ" ಎಂದು ಇವಾನ್ ಜೋನ್ಸ್ ಫೋಟೋವನ್ನು ಹಂಚಿಕೊಳ್ಳುವಾಗ ಶೀರ್ಷಿಕೆಯನ್ನು ಬರೆದಿದ್ದಾರೆ. ಕ್ರಾಫೋರ್ಡ್ ಈ ಫೋಟೋವನ್ನು ಮರು ಟ್ವೀಟ್ ಮಾಡಿ "ನಿಮ್ಮ ತಂಡವು ಡೆಡ್ಲೈನ್ ಗಳನ್ನು ತಲುಪಲು ಹಗಲಿರುಳು ಕೆಲಸ ಮಾಡುವಾಗ ಕೆಲವೊಮ್ಮೆ ನೀವು ಹೀಗೆ ನಿದ್ರಿಸಬೇಕಾಗುತ್ತದೆ" ಎಂದು ಬರೆದಿದ್ದರು.


  ಇದನ್ನೂ ಓದಿ: Elon Musk Warns: ಹೀಗೆಲ್ಲಾ ಆಡಿದ್ರೆ Twitter ದಿವಾಳಿ ಆಗುತ್ತೆ ಹುಷಾರ್; ಉದ್ಯೋಗಿಗಳಿಗೆ ಮಸ್ಕ್ ವಾರ್ನಿಂಗ್


  ಈ ವೈರಲ್ ಫೋಟೋದ ಹಿಂದಿನ ಅಸಲಿ ಕಥೆ ಏನು?


  ಬಿಸಿನೆಸ್ ಇನ್ಸೈಡರ್ ಪ್ರಕಾರ, ಮಸ್ಕ್ ಅವರು ಪ್ರಮುಖ ಯೋಜನೆಗಳ ಬಗ್ಗೆ ಜಟಿಲವಾದ ಗಡುವನ್ನು ನಿಗದಿಪಡಿಸಿರುವುದರಿಂದ ಟ್ವಿಟರ್ ನ ಉದ್ಯೋಗಿಗಳು ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ಮಸ್ಕ್ ಅವರ ಗಡುವನ್ನು ಪೂರೈಸಲು ಹೆಚ್ಚುವರಿ ಗಂಟೆಗಳನ್ನು ಮೀಸಲಿಡುವಂತೆ ವ್ಯವಸ್ಥಾಪಕರನ್ನು, ಉದ್ಯೋಗಿಗಳನ್ನು ಕೇಳಲಾಗಿದ್ದು, ಇದು ಕ್ರಾಫರ್ಡ್ ಅವರನ್ನು ಕಂಪನಿಯಲ್ಲಿಯೇ ಮಲಗುವಂತೆ ಮಾಡಿತ್ತು ಎಂಬುದನ್ನು ವಿವರಿಸುತ್ತದೆ.


  ಅವರ ಫೋಟೋ ವೈರಲ್ ಆದ ನಂತರ, ಅವರು ತಮ್ಮ ಫಾಲೋವರ್ಸ್ ಗಳಿಂದ ಪಡೆದ ಟೀಕೆಗಳ ಬಗ್ಗೆ ಮಾತನಾಡಿ ಕೆಲವೊಮ್ಮೆ ಈ ಕೆಲಸಕ್ಕೆ "ತ್ಯಾಗದ ಅಗತ್ಯವಿದೆ" ಎಂದು ಹೇಳಿದರು.


  ತನ್ನನ್ನು ಸಮರ್ಥಿಸಿಕೊಳ್ಳುತ್ತಾ ಕ್ರಾಫರ್ಡ್ ಅವರು “ಕಠಿಣ ಕೆಲಸಗಳನ್ನು ಮಾಡಲು ಕೆಲವು ತ್ಯಾಗಗಳ ಅಗತ್ಯವಿದೆ. ನಾನು ಪ್ರಪಂಚದಾದ್ಯಂತದ ಸಹದ್ಯೋಗಿಗಳನ್ನು ಹೊಂದಿದ್ದೇನೆ, ಅವರು ಹೊಸದನ್ನು ಪರಿಚಯಿಸಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ಅವರಿಗಾಗಿ ಕೆಲಸ ಮಾಡುವುದು ಮತ್ತು ತಂಡವನ್ನು ನಿರ್ಬಂಧಿಸದೆ ಇಡುವುದು ನನಗೆ ಮುಖ್ಯವಾಗಿದೆ" ಎಂದು ಹೇಳಿದರು.

  Published by:Kavya V
  First published: