• Home
 • »
 • News
 • »
 • career
 • »
 • UPSC Exam Preparation: ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಈ ಸ್ಟಡಿ ಟೆಕ್ನಿಕ್​​ಗಳನ್ನು ಅನುಸರಿಸಿ: IAS ದಿವ್ಯಾ ಮಿತ್ತಲ್

UPSC Exam Preparation: ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಈ ಸ್ಟಡಿ ಟೆಕ್ನಿಕ್​​ಗಳನ್ನು ಅನುಸರಿಸಿ: IAS ದಿವ್ಯಾ ಮಿತ್ತಲ್

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

IAS Officer Divya Mittal: ಮೊಬೈಲ್‌ ಬಳಕೆ ಕಡಿಮೆ ಮಾಡುವುದಷ್ಟೇ ಅಲ್ಲ. ಅಧ್ಯಯನದ ಸಮಯದಲ್ಲಿ ಅದನ್ನು ನಿಮ್ಮಿಂದ ದೂರವಿಡಿ. ಅದರ ಜೊತೆಗೆ ಇಂಟರ್‌ನೆಟ್‌ ಆಫ್‌ ಮಾಡಿ ಇಲ್ಲ ಸ್ವಿಚ್‌ ಆಫ್‌ ಮಾಡಿ ಓದೋಕೆ ಕೂರಿ.

 • Trending Desk
 • Last Updated :
 • Bangalore, India
 • Share this:

  ಭಾರತದ ಅತ್ಯಂತ ಉನ್ನತ ಪರೀಕ್ಷೆ ಅಂತ ಕರೆಯೋದು ಯಾವುದನ್ನು ಹೇಳಿ ನೋಡೋಣ. ಅದುವೇ ನಾಗರಿಕ ಸೇವಾ ಪರೀಕ್ಷೆ (Civil Service Exam). ಈ ಪರೀಕ್ಷೆಯನ್ನ ತೆಗೆದುಕೊಂಡ ಪ್ರತಿಯೊಬ್ಬ ಆಕಾಂಕ್ಷಿ ಕೂಡ ಇದು ಅತ್ಯಂತ ಕಷ್ಟದ ಪರೀಕ್ಷೆ ಅಂತ ಒಪ್ಪಿಕೊಳ್ತಾರೆ. ಅದ್ಕೆ ಈ ಪರೀಕ್ಷೆಯಲ್ಲಿ ಯಶಸ್ಸು ಗಳಿಸಬೇಕೆಂದ್ರೆ (How to Succeed in Exams)  ಆಕಾಂಕ್ಷಿಗಳು ತಮ್ಮ ಅಧ್ಯಯನದ ಮೇಲೆ ಕೇಂದ್ರಿಕರಿಸುವುದು ಎಷ್ಟು ಮುಖ್ಯ ಅಂತ ಗೊತ್ತೇ ಇರುತ್ತೆ. ಆದರೆ ಇದನ್ನ ಹೇಳುವುದು ಸುಲಭ, ಅಧ್ಯಯನವನ್ನ ನಿರಂತರವಾಗಿ ಮಾಡೋದು ಕಷ್ಟ. ಇದೆಲ್ಲದರ ಮಧ್ಯೆ ದಿವ್ಯಾ ಮಿತ್ತಲ್ ( Divya Mittal) ಅವರು ಭಾರತೀಯ ಆಡಳಿತ ಸೇವೆಯ (IAS) ಅಧಿಕಾರಿಯಾಗಿದ್ದು, ಅವರು ಈ ಎಲ್ಲ ಕಷ್ಟಗಳ ನಡುವೆಯೂ ಅಗಾಧವಾಗಿ ಪರಿಶ್ರಮ ಪಟ್ಟಿದ್ದಾರೆ. ಅವರು 2012 ರ UPSC CSE ನಲ್ಲಿ 68 ರ ಆಲ್ ಇಂಡಿಯನ್ ರ್‍ಯಾಂಕ್‌ (AIR) ಪಡೆದುಕೊಂಡರು. ಪ್ರಸ್ತುತ ಮಿರ್ಜಾಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.


  ಐಐಎಂ ಬೆಂಗಳೂರು ಮತ್ತು ಐಐಟಿ ದೆಹಲಿಯ ಹಳೆಯ ವಿದ್ಯಾರ್ಥಿಯಾಗಿರುವ ಅವರು ದೇಶದ ಕೆಲವು ಕಠಿಣ ಪರೀಕ್ಷೆಗಳನ್ನು ಪಾಸ್‌ ಮಾಡುವುದರ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಇತ್ತೀಚೆಗೆ, ಟ್ವಿಟರ್ ಥ್ರೆಡ್‌ನಲ್ಲಿ ಅವರು ಯುಪಿಎಸ್‌ಸಿ, ಐಐಟಿ, ಐಐಎಂ ಮತ್ತು ಇತರ ಪ್ರವೇಶ ಪರೀಕ್ಷೆಗಳಲ್ಲಿ ಯಶಸ್ವಿಯಾದ  ಅನುಭವದ ಆಧಾರದ ಮೇಲೆ ಕೆಲವು ಸಲಹೆಗಳು ಮತ್ತು ಸ್ಟಡಿ ಟೆಕ್ನಿಕ್‌ಗಳನ್ನು ಹಂಚಿಕೊಂಡಿದ್ದಾರೆ.


  ದಿವ್ಯಾ ಮಿತ್ತಲ್


  ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಅಳವಡಿಸಿಕೊಳ್ಳಬೇಕಾದ ಕೆಲವು ಸ್ಟಡಿ ಟೆಕ್ನಿಕ್‌ಗಳು


  ಮೊಬೈಲ್‌ ಬಳಕೆಯನ್ನ ಕಡಿಮೆ ಮಾಡೋದು


  ಹೆಚ್ಚಿನ ಜನರು ಮೊಬೈಲ್‌ ಅನ್ನು ಹೆಚ್ಚು ಬಳಕೆ ಮಾಡುತ್ತಿದ್ದಾರೆ. ಹೆಚ್ಚಿನ ಸಮಯ ಜನರು ವಿವಿಧ ಮೊಬೈಲ್ ಅಪ್ಲಿಕೇಶನ್‌ಗಳನ್ನು ಬಳಸುತ್ತಾ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. ಸಮಯಕ್ಕೆ ಬೆಲೆಯನ್ನೇ ನೀಡೋದಿಲ್ಲ. ಆದ್ದರಿಂದ ಅವರು ಪ್ರತಿ ವಾರ ಫೋನ್ ಬಳಕೆ ಮತ್ತು ಅಪ್ಲಿಕೇಶನ್‌ಗಳಲ್ಲಿ ಕಳೆಯುವ ಸಮಯವನ್ನು ಟ್ಯಾಬ್‌ನಲ್ಲಿ ಇರಿಸಿಕೊಳ್ಳುವುದರಿಂದ ಈ ವಾರ ನೀವೆಷ್ಟು ಮೊಬೈಲ್‌ ಬಳಸಿದಿದ್ದಿರಿ ಎಂಬುದರ ಬಗ್ಗೆ ನಿಮಗೆ ಮಾಹಿತಿ ಸಿಗುತ್ತೆ ಎಂಬಂತಹ ಸಲಹೆ ನೀಡುತ್ತಾರೆ.


  Danger if these apps are on your mobile If left like that the battery will explode
  ಸಾಂದರ್ಭಿಕ ಚಿತ್ರ


  ಮೊಬೈಲ್‌ ಅನ್ನು ದೂರವಿಡಿ


  ಮೊಬೈಲ್‌ ಬಳಕೆ ಕಡಿಮೆ ಮಾಡುವುದಷ್ಟೇ ಅಲ್ಲ. ಅಧ್ಯಯನದ ಸಮಯದಲ್ಲಿ ಅದನ್ನು ನಿಮ್ಮಿಂದ ದೂರವಿಡಿ. ಅದರ ಜೊತೆಗೆ ಇಂಟರ್‌ನೆಟ್‌ ಆಫ್‌ ಮಾಡಿ ಇಲ್ಲ ಸ್ವಿಚ್‌ ಆಫ್‌ ಮಾಡಿ ಓದೋಕೆ ಕೂರಿ. ಇಲ್ಲವೆಂದ್ರೆ ಅಧ್ಯಯನದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗುವುದಕ್ಕೆ ನಿಮ್ಗೆ ತೊಂದರೆ ಆಗೋದು ಖಚಿತ.


  ಇದನ್ನೂ ಓದಿ: Government Teacher: ಸರ್ಕಾರಿ ಶಿಕ್ಷಕರಾಗಲು ಸರಿಯಾದ ಮಾರ್ಗ ಇಲ್ಲಿದೆ: ಅರ್ಹತೆ, ಕೋರ್ಸ್ ಮಾಹಿತಿ ತಿಳಿದುಕೊಳ್ಳಿ


  ಮೊಬೈಲ್ ಬಳಕೆಯನ್ನು ಕಡಿಮೆ ಮಾಡಲು ಇರುವ ಕೆಲವು ತಾಂತ್ರಿಕ ಪರಿಹಾರಗಳು


  ದಿವ್ಯಾ ಅವರು ದಿನಕ್ಕೆ ಕನಿಷ್ಠ ಆರು ಗಂಟೆಗಳ ಕಾಲ ಇಂಟರ್ನೆಟ್ ಅನ್ನು ನಿರ್ಬಂಧಿಸಲು ಬ್ಲ್ಯಾಕ್‌ಔಟ್‌ನಂತಹ ಕೆಲವು ಅಪ್ಲಿಕೇಶನ್‌ಗಳ ಬಳಕೆಯನ್ನು ಸೂಚಿಸುತ್ತಾರೆ. “ಆ ಸಮಯದಲ್ಲಿ ಅಧ್ಯಯನ ಮಾಡುವುದು ಹೆಚ್ಚು ಸೂಕ್ತ. ಇದು ಉಚಿತ ಅಪ್ಲಿಕೇಶನ್ ಅಲ್ಲ, ಆದರೆ ಇದು ತುಂಬಾ ಪರಿಣಾಮಕಾರಿಯಾದ ಅಪ್ಲಿಕೇಶನ್‌ ಆಗಿರುತ್ತೆ ”ಎಂದು ಅವರು ಸಲಹೆ ನೀಡುತ್ತಾರೆ.


  However it is not an exaggeration to say that insomnia is the most common problem faced by youngsters and adults in recent times
  ಸಾಂದರ್ಭಿಕ ಚಿತ್ರ


  ಮುಂಜಾನೆಯ ಓದು


  ಮುಂಜಾನೆ ಬೇಗ ಏಳಲು ದಿವ್ಯಾ ಅವರು ಸಲಹೆ ನೀಡ್ತಾರೆ. ನಿಮಗೆ ಬೇಗ ಏಳಕ್ಕೆ ಕಷ್ಟವಾಗ್ತಿದ್ದರೆ, ಅಲಾರಾಂ ಅನ್ನು ದೂರಲ್ಲಿ ಇರಿಸಿ, ಅಲಾರಾಂ ಅನ್ನು ಸ್ವಿಚ್‌ ಆಫ್‌ ಮಾಡಕ್ಕೆ ನೀವು ಎದ್ದೇಳಲೇಬೇಕು. ಮುಂಜಾನೆ ನಡೆಸುವ ಅಧ್ಯಯನ ನಿಜಕ್ಕೂ ತುಂಬಾ ಒಳ್ಳೆಯದು. ವಿಷಯಗಳನ್ನು ಬೇಗನೆ ಗ್ರಹಿಸುವ ಸಾಮರ್ಥ್ಯ  ಮುಂಜಾನೆ  ಹೆಚ್ಚಿರುತ್ತದೆ  ಅಂತ ಅನೇಕ ವಿಜ್ಞಾನಿಗಳು ಸಾಬೀತು ಪಡಿಸಿದ್ದಾರೆ ಎಂದು ದಿವ್ಯಾ ಅವರು ಸಲಹೆ ನೀಡುತ್ತಾರೆ.


  ಇದರ ಜೊತೆಗೆ ನಿಮ್ಮ ಏಕಾಗ್ರತೆ ಹೆಚ್ಚಾಗುವುದಕ್ಕೆ ನೀವು ಧ್ಯಾನ ಮಾಡಿ, ಉತ್ತಮ ಆಹಾರ ಸೇವಿಸಿ, ದಿನಕ್ಕೆ 30 ನಿಮಿಷ ವಾಕ್‌ ಮಾಡಿ. ಪದೇ ಪದೇ ಓದಿ ಪ್ರಾಕ್ಟಿಸ್‌ ಮಾಡಿ ಅಂತ ಸಲಹೆ ನೀಡ್ತಾರೆ.

  Published by:Kavya V
  First published: