• Home
  • »
  • News
  • »
  • career
  • »
  • Work From Home: ವರ್ಕ್ ಫ್ರಮ್ ಹೋಂ ಕೆಲಸಗಳನ್ನ ಹುಡುಕುತ್ತಿದ್ದೀರಾ? ಅದಕ್ಕೂ ಮುನ್ನ ಈ ಟಿಪ್ಸ್‌ಗಳನ್ನ ಫಾಲೋ ಮಾಡಿ

Work From Home: ವರ್ಕ್ ಫ್ರಮ್ ಹೋಂ ಕೆಲಸಗಳನ್ನ ಹುಡುಕುತ್ತಿದ್ದೀರಾ? ಅದಕ್ಕೂ ಮುನ್ನ ಈ ಟಿಪ್ಸ್‌ಗಳನ್ನ ಫಾಲೋ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಿಮೋಟ್ ಕೆಲಸಗಳು ನಿರ್ದಿಷ್ಟ ಕೌಶಲ್ಯವನ್ನು ಕೇಳುವುದರಿಂದ, ನೀವು ನಿಮ್ಮ ಸಂದರ್ಶನದಲ್ಲಿ ವರ್ಚುವಲ್ ಆಗಿ ಕೆಲಸ ಮಾಡುವ ನಿಮ್ಮ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡುವ ಪ್ರಶ್ನೆಗಳಿಗೆ ಒಳಗಾಗಬಹುದು.

  • Share this:

ಮೊದಲೆಲ್ಲಾ ನಮ್ಮ ಭಾರತದಲ್ಲಿ (India) ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಅನಿವಾರ್ಯ ಕಾರಣಗಳಿಂದಾಗಿ ಯಾವತ್ತಾದರೂ ಒಂದು ದಿನ ಮನೆಯಲ್ಲಿ (Home) ಕುಳಿತು ಕೆಲಸ ಮಾಡಿದರೆ ಅದು ಅವರಿಗೆ ಸಿಗುವಂತಹ ತುಂಬಾನೇ ವಿಶೇಷವಾದ ಸೌಲಭ್ಯವಾಗಿತ್ತು. ಅದೇ ಅಮೆರಿಕದಂತಹ ದೇಶಗಳಲ್ಲಿ ಅನೇಕ ಕಂಪನಿಗಳು (Campany) ಎಷ್ಟೋ ವರ್ಷಗಳಿಂದ ತಮ್ಮ ಉದ್ಯೋಗಿಗಳನ್ನು ಮನೆಯಿಂದಲೇ ಕೆಲಸ ಮಾಡಿ ಎಂದರೆ ‘ವರ್ಕ್ ಫ್ರಮ್ ಹೋಂ’ (Work From Home) ಆಯ್ಕೆಯನ್ನು ನೀಡುತ್ತಾ ಬಂದಿವೆ ಅಂತ ಹೇಳಿದರೆ ತಪ್ಪಾಗಲಾರದು.


ಈಗ ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿ ಶುರುವಾದಾಗಿನಿಂದ ನಮ್ಮ ಭಾರತದಲ್ಲಿ ಅಲ್ಲದೆ ಬೇರೆಲ್ಲಾ ರಾಷ್ಟಗಳಲ್ಲಿಯೂ ಸಹ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಹೆಚ್ಚು ಕಡಿಮೆ ಎರಡು ವರ್ಷಗಳ ಕಾಲ ‘ವರ್ಕ್ ಫ್ರಮ್ ಹೋಂ’ ಆಯ್ಕೆಯನ್ನು ನೀಡಿದರು. ಈಗ ಮತ್ತೆ ಎಲ್ಲಾ ಕಂಪನಿಗಳು ಉದ್ಯೋಗಿಗಳನ್ನು ಕೆಲಸಕ್ಕೆ ಕಂಪನಿಗೆ ಕರೆದಾಗ, ಎಷ್ಟೋ ಜನರು ತಮ್ಮ ಕೆಲಸವನ್ನು ಬಿಟ್ಟು ‘ರಿಮೋಟ್’ ಕೆಲಸಗಳತ್ತ ಮುಖ ಮಾಡಿದ್ದಾರೆ ಅಂತ ಹೇಳಬಹುದು.


ಈ ಎರಡು ವರ್ಷಗಳಲ್ಲಿ ಉದ್ಯೋಗಿಗಳಿಗೆ ಆಫೀಸಿಗೆ ಹೋಗಲು ಬೆಳಿಗ್ಗೆ ಬೆಳಿಗ್ಗೆ ಟ್ರಾಫಿಕ್ ನಲ್ಲಿ ಬೈಕ್ ಓಡಿಸಿಕೊಂಡು ಹೋಗುವ ಯಾವುದೇ ತೊಂದರೆ ಇರುವುದಿಲ್ಲ ಮತ್ತು ಪ್ರಯಾಣದಿಂದ ಸುಸ್ತಾಗುವ ಮಾತಿರುವುದಿಲ್ಲ. ಮನೆಯಲ್ಲಿಯೇ ಹಾಯಾಗಿ ಕುಳಿತುಕೊಂಡು ಸಾಧ್ಯವಾದಷ್ಟು ಕೆಲಸವನ್ನು ಮಾಡಿಕೊಂಡು ಹೋಗಬಹುದು ಅಂತ ತೀರ್ಮಾನಕ್ಕೆ ಬಂದಿದ್ದಾರೆ.


ಇದನ್ನೂ ಓದಿ: Ronnie Teja: ಬ್ರಾಂಜಿಯೊ ವಾಚ್‌ ಸಂಸ್ಥಾಪಕನ ಗೆಲುವಿನ ಕಥೆ: ಸೋಲುಗಳನ್ನು ಸವಾಲಾಗಿ ತೆಗೆದುಕೊಂಡು ಯಶಸ್ವಿ ಉದ್ಯಮಿಯಾದ ರೋನಿ ತೇಜಾ


ಏನಿದು ‘ರಿಮೋಟ್’ ಕೆಲಸ?
ಈ ರಿಮೋಟ್ ಕೆಲಸಗಳು ಎಂದರೆ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಯಾವುದೇ ರೀತಿಯ ಆಫೀಸನ್ನು ಹೊಂದಿರುವುದಿಲ್ಲ ಮತ್ತು ಉದ್ಯೋಗಿಗಳು ಆಫೀಸಿಗೆ ಬರುವ ಯಾವುದೇ ನಿಯಮಗಳಿರುವುದಿಲ್ಲ. ಎಲ್ಲವೂ ಆನ್ಲೈನ್ ನಲ್ಲಿಯೇ ನಡೆಯುತ್ತವೆ. ಈಗ ಈ ರೀತಿಯ ಕೆಲಸಗಳಿಗೆ ಉದ್ಯೋಗಿಗಳನ್ನು ಹೆಚ್ಚಾಗಿಯೇ ನೋಡುತ್ತಿವೆ ಈ ಕಂಪನಿಗಳು ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈಗ ಕೆಲಸವನ್ನು ಹುಡುಕುವ ಮತ್ತು ಕೆಲಸಗಾರರಿಗೆ ಇಂತಹ ಕಂಪನಿಯಲ್ಲಿ ಕೆಲಸ ಖಾಲಿ ಇದೆ ಅಂತ ತಿಳಿಸುವಂತಹ ಜಾಬ್ ಸರ್ಚ್ ವೆಬ್‌ಸೈಟ್ ಗಳಲ್ಲಿಯೂ ಸಹ ರಿಮೋಟ್ ಕೆಲಸಕ್ಕೆ ಅಂತಾನೆ ಉದ್ಯೋಗಿಗಳನ್ನು ಹುಡುಕುವ ಟ್ರೆಂಡ್ ಶುರುವಾಗಿದೆ ಅಂತ ಹೇಳಬಹುದು.


ಆದರೆ ಅನೇಕರಿಗೆ ಈ ‘ರಿಮೋಟ್’ ಕೆಲಸಗಳು ಇಷ್ಟ, ಆದರೆ ಇವುಗಳನ್ನು ಪಡೆದುಕೊಳ್ಳುವುದು ಹೇಗೆ ಅನ್ನೋದರ ಬಗ್ಗೆ ಅನೇಕ ರೀತಿಯ ಗೊಂದಲಗಳಿರುತ್ತವೆ. ಫೋರ್ಬ್ಸ್ ಕೊಡುಗೆದಾರರಾದ ಸಿಸಿಲಿಯಾ ಸೀಟರ್ ವರ್ಚುವಲ್ ಕೆಲಸಗಳನ್ನು ಹೇಗೆ ಪಡೆಯುವುದು ಎಂಬುದರ ಬಗ್ಗೆ ಸಲಹೆ ನೀಡಿದ್ದಾರೆ ನೋಡಿ.


1. ರಿಮೋಟ್ ಕೆಲಸಕ್ಕಾಗಿ ನಿಮ್ಮ ರೆಸ್ಯೂಮ್ ಸರಿ ಹೊಂದುವಂತೆ ತಯಾರಿಸಿಕೊಳ್ಳಿ
ನಿಮ್ಮ ಸಾರಾಂಶ ಅಥವಾ ವೈಯಕ್ತಿಕ ಹೇಳಿಕೆಯಲ್ಲಿ ನೀವು ಉದ್ದೇಶಪೂರ್ವಕವಾಗಿ ರಿಮೋಟ್ ಕೆಲಸವನ್ನು ಹುಡುಕುತ್ತಿದ್ದೀರಿ ಎಂದು ಸ್ಪಷ್ಟವಾಗಿ ಬರೆದುಕೊಳ್ಳಿರಿ. ನಿಮ್ಮ ವಿಳಾಸವನ್ನು ನೀಡಲು ಪರ್ಯಾಯವಾಗಿ "ಲೋಕೇಶನ್ ಇಂಡಿಪೆಂಡೆಂಟ್“ ನಂತಹ ಪದಗಳನ್ನು ಬಳಸಿ.


ರಿಮೋಟ್ ಕೆಲಸಕ್ಕೆ ನಿಮ್ಮಲ್ಲಿ ಪ್ರಸ್ತುತವಾಗಿರುವ ಯಾವುದೇ ಕೆಲಸದ ಅನುಭವ ಅಥವಾ ಕೌಶಲ್ಯಗಳಿದ್ದರೆ, ಅವುಗಳನ್ನು ನಿಮ್ಮ ರೆಸ್ಯೂಮ್ ನಲ್ಲಿ ಹೈಲೈಟ್ ಮಾಡಿ. ನೀವು ಯಾವುದೇ ಹಿಂದಿನ ರಿಮೋಟ್ ಕೆಲಸದ ಅನುಭವವನ್ನು ಹೊಂದಿದ್ದರೆ, ಅದನ್ನು ನಿಮ್ಮ ಸಿವಿಯಲ್ಲಿ ಸೇರಿಸಲು ಎಂದಿಗೂ ಮರೆಯಬೇಡಿ.


2. ರಿಮೋಟ್ ಕೆಲಸಗಳನ್ನು ಒದಗಿಸುವ ಪೋರ್ಟಲ್ ಗಳಿಗೆ ಸೇರಿ


ನಿಮ್ಮ ಬೆರಳ ತುದಿಯಲ್ಲಿ ನೀವು ಪ್ರವೇಶಿಸಬಹುದಾದ ಸಾವಿರಾರು ಪಟ್ಟಿಗಳನ್ನು ಹೊಂದಿರುವ ಸಾಕಷ್ಟು ಜಾಬ್ ಬೋರ್ಡ್ ಗಳಿವೆ. ಎಂದರೆ ಈ ರಿಮೋಟ್ ಕೆಲಸಗಳನ್ನು ನೀಡುವ ಎಲ್ಲಾ ಜಾಬ್ ಬೋರ್ಡ್ ಗಳ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು ಮತ್ತು ಅವುಗಳಲ್ಲಿ ತಮ್ಮನ್ನು ತಾವು ನೋಂದಾಯಿಸಿಕೊಳ್ಳುವುದು ಒಳ್ಳೆಯದು.


3. ರಿಮೋಟ್ ಕೆಲಸದ ಸಂದರ್ಶನದಲ್ಲಿ ಕೇಳುವ ಪ್ರಶ್ನೆಗಳಿಗೆ ಸಿದ್ಧರಾಗಿ


ರಿಮೋಟ್ ಕೆಲಸಗಳು ನಿರ್ದಿಷ್ಟ ಕೌಶಲ್ಯವನ್ನು ಕೇಳುವುದರಿಂದ, ನೀವು ನಿಮ್ಮ ಸಂದರ್ಶನದಲ್ಲಿ ವರ್ಚುವಲ್ ಆಗಿ ಕೆಲಸ ಮಾಡುವ ನಿಮ್ಮ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡುವ ಪ್ರಶ್ನೆಗಳಿಗೆ ಒಳಗಾಗಬಹುದು. ನೀವು ಈ ಹಿಂದೆ ರಿಮೋಟ್ ಕೆಲಸವನ್ನು ಹೊಂದಿದ್ದರೆ, ಡಿಜಿಟಲ್ ಸಹಯೋಗದ ಸಾಧನಗಳೊಂದಿಗೆ ಅನುಭವ, ಡಿಜಿಟಲ್ ಕೆಲಸದ ಸ್ಥಳದಲ್ಲಿ ನೀವು ಹೇಗೆ ಸಂಘಟಿತರಾಗಿರುತ್ತೀರಿ ಮತ್ತು ಸಂವಹನ ಕೌಶಲ್ಯವನ್ನು ಹೊಂದಿದ್ದರೆ ಕೆಲವು ಉದಾಹರಣೆಗಳನ್ನು ಸಹ ಅವರ ಮುಂದೆ ತೋರಿಸಬಹುದು.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು