• Home
  • »
  • News
  • »
  • career
  • »
  • Professions in America: ವಿಶ್ವಕ್ಕೇ ದೊಡ್ಡಣ್ಣ ಅಮೆರಿಕದ ಅತೀ ಹೆಚ್ಚು ಹಾಗೂ ಅತ್ಯಂತ ಕಡಿಮೆ ವಿಶ್ವಾಸಾರ್ಹತೆಯುಳ್ಳ ವೃತ್ತಿ ಇದು!

Professions in America: ವಿಶ್ವಕ್ಕೇ ದೊಡ್ಡಣ್ಣ ಅಮೆರಿಕದ ಅತೀ ಹೆಚ್ಚು ಹಾಗೂ ಅತ್ಯಂತ ಕಡಿಮೆ ವಿಶ್ವಾಸಾರ್ಹತೆಯುಳ್ಳ ವೃತ್ತಿ ಇದು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಉದ್ಯೋಗ ಮಾಡುವ ಯಾವುದೇ ಕ್ಷೇತ್ರವಾಗಲಿ ಅಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ವ್ಯವಹಾರಿಕ ನೈತಿಕ ಮೌಲ್ಯಗಳು ಹಾಗೂ ಪ್ರಾಮಾಣಿಕತೆಯನ್ನು ಹೊಂದಿರಬೇಕೆಂದು ಆ ಕ್ಷೇತ್ರ ಬಯಸುವುದು ಸಹಜ.

  • Share this:

ಸಾಮಾನ್ಯವಾಗಿ ವ್ಯಕ್ತಿಯೊಬ್ಬನು ತನ್ನ ಓದನ್ನು ಪೂರ್ಣಗೊಳಿಸಿ ಮುಂದೆ ವೃತ್ತಿಜೀವನಕ್ಕೆ ಕಾಲಿಡುತ್ತಾನೆ. ಇಂತಹ ಸಂದರ್ಭದಲ್ಲಿ ಸುಶಿಕ್ಷಿತನಾಗಿರುವ (Well Educated), ಒಳ್ಳೆಯ ನೈತಿಕ ಮೌಲ್ಯಗಳನ್ನು ಹೊಂದಿರುವ ಒಬ್ಬ ವಿದ್ಯಾವಂತ ವಿದ್ಯಾರ್ಥಿ ತನ್ನ ವ್ಯಕ್ತಿತ್ವಕ್ಕೆ ತಕ್ಕಂತಾದ ಉದ್ಯೋಗ ಕ್ಷೇತ್ರದಲ್ಲಿ ಕೆಲಸ ಮಾಡಲು ಉತ್ಸುಕನಾಗಿರುತ್ತಾನೆ ಎಂದರೆ ತಪ್ಪಿಲ್ಲ. ಅದರಂತೆಯೇ ಉದ್ಯೋಗ (Business) ಮಾಡುವ ಯಾವುದೇ ಕ್ಷೇತ್ರವಾಗಲಿ ಅಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ವ್ಯವಹಾರಿಕ ನೈತಿಕ ಮೌಲ್ಯಗಳು ಹಾಗೂ ಪ್ರಾಮಾಣಿಕತೆಯನ್ನು ಹೊಂದಿರಬೇಕೆಂದು ಆ ಕ್ಷೇತ್ರ ಬಯಸುವುದು ಸಹಜ. ಏಕೆಂದರೆ ಇಂತಹ ಗುಣಾತ್ಮಕ ಉದ್ಯೋಗಿಗಳಿಂದಗಿಯೇ ಸಂಸ್ಥೆಗಳು (Organisation) ಹಾಗೂ ಉದ್ಯೋಗಿಯ ಕ್ಷೇತ್ರಕ್ಕೆ ಅಪಾರವಾದ ಮನ್ನಣೆ ಸಿಗುತ್ತದೆ ಎಂದರೆ ತಪ್ಪಿಲ್ಲ.


ಹೀಗೆ ಆಯಾ ಕ್ಷೇತ್ರಗಳಲ್ಲಿ ಕೆಲಸ ಮಾಡುವ ವೃತ್ತಿಪರರು ಎಷ್ಟು ನೈತಿಕ ಮೌಲ್ಯಗಳನ್ನು ಹಾಗೂ ಪ್ರಾಮಾಣಿಕತೆಯನ್ನು ಹೊಂದಿರುತ್ತಾರೆ ಎಂಬ ಬಗ್ಗೆ ವರದಿ ಬಂದಾಗ ಅದನ್ನು ತಿಳಿದುಕೊಳ್ಳುವ ಕುತೂಹಲ ಸಹಜವಾಗಿಯೇ ಎಲ್ಲರಲ್ಲೂ ಇರುತ್ತದೆ ಎನ್ನಬಹುದು.


ಸದ್ಯ ಅಂತಹ ಒಂದು ಸಮೀಕ್ಷೆಯು ಈಗ ಅಮೆರಿಕಕ್ಕೆ ಸಂಬಂಧಿಸಿದಂತೆ ಹೊರಬಂದಿದೆ. ಕೆಲ ವೃತ್ತಿಗಳು ಇತರೆ ವೃತ್ತಿಗಳೊಂದಿಗೆ ಹೋಲಿಸಿದಾಗ ಸಾಕಷ್ಟು ಪ್ರತಿಷ್ಠೆಯನ್ನು ಹೊಂದಿರುತ್ತವೆ. ಅದರಲ್ಲೂ ಪ್ರಮಾಣಿಕತೆಯ ವಿಷಯ ಬಂದಾಗ ಕೆಲ ಕ್ಷೇತ್ರಗಳಲ್ಲಿ ಕೆಲಸ ಮಾಡುವ ವೃತ್ತಿಪರರು ಸಹಜವಾಗಿಯೇ ಸಾಕಷ್ಟು ಪ್ರಾಮಾಣಿಕರಾಗಿರಲೇಬೇಕು ಎಂದು ಸಾಮಾಜಿಕವಾಗಿ ನಿರೀಕ್ಷಿಸಲಾಗಿರುತ್ತದೆ.


ಇದಕ್ಕೆ ಸಂಬಂಧಿಸಿದಂತೆ ಯುಎಸ್ ಮೂಲದ ಗ್ಯಾಲಪ್ ಎಂಬ ಸಂಸ್ಥೆಯು ಪೋಲ್ ಒಂದನ್ನು ಏರ್ಪಡಿಸಿತ್ತು. ಅದು ತಾನು ನಡೆಸಿದ ಮತಗಣನೆಯ ಆಧಾರದ ಮೇಲೆ ಹಲವು ಹೋಲಿಕೆಗಳನ್ನು ಈಗ ಬಹಿರಂಗಪಡಿಸಿದೆ. ಅದರ ವರದಿಯ ಪ್ರಕಾರ, ಅಮೆರಿಕದಲ್ಲಿ ಶುಶ್ರೂಕಿಯರು ಅಂದರೆ ನರ್ಸುಗಳು ಅತಿ ಹೆಚ್ಚು ವಿಶ್ವಾಸಾರ್ಹತೆ ಉಳ್ಳವರು ಎಂಬ ಮನ್ನಣೆಗೆ ಪಾತ್ರರಾಗಿದ್ದು ತದನಂತರದ ಸ್ಥಾನಗಳಲ್ಲಿ ಕ್ರಮವಾಗಿ ವೈದ್ಯರು ಹಾಗೂ ಫಾರ್ಮಾ ವೃತ್ತಿಪರರು ಸ್ಥಾನ ಪಡೆದಿದ್ದಾರೆ.




ಈ ಬಗ್ಗೆ 2022 ರಲ್ಲಿ ಪೋಲ್ ನಡೆಸಿದ್ದಾಗ ಅಮೆರಿಕದ 79 ಪ್ರತಿಶತದಷ್ಟು ಜನರು ನರ್ಸುಗಳು ಹೆಚ್ಚು ಪ್ರಾಮಾಣಿಕ ಹಾಗೂ ವೃತ್ತಿಪರ ಮನೋಭಾವವುಳ್ಳವರಾಗಿರುವುದಾಗಿ ಅನಿಸಿಕೆ ಹಂಚಿಕೊಂಡಿದ್ದಾರೆ. ಇದು ಕಳೆದ ವರ್ಷ ಮಾತ್ರವಷ್ಟೇ ಅಲ್ಲ, ಕೊರೋನಾ ಆವರಿಸಿದ್ದ 2020 ರ ಸಮಯದಲ್ಲಿಯೂ ಇಂತಹ ಒಂದು ಪೋಲಿನಲ್ಲಿ ನರ್ಸುಗಳ ವಿಶ್ವಾಸಾರ್ಹತೆಗೆ ಸಹಮತ ವ್ಯಕ್ತಪಡಿಸುತ್ತ ಶೇ. 89 ಜನರು ತಮ್ಮ ಮತ ಚಲಾಯಿಸಿದ್ದರು.


ಇನ್ನು, ಆರೋಗ್ಯ ಕ್ಷೇತ್ರವನ್ನು ಹೊರತುಪಡಿಸಿದರೆ ಶಿಕ್ಷಣ, ನ್ಯಾಯ ಮತ್ತು ಕಾನೂನು ನಿಯಂತ್ರಣ ಕ್ಷೇತ್ರಗಳ ವೃತ್ತಿಪರರಿಗೂ ಸಹ ಉತ್ತಮವಾದ ಸ್ಪಂದನೆ ಅಮೆರಿಕದ ಜನರಿಂದ ಸಿಕ್ಕಿದೆ. ಇವುಗಳಲ್ಲದೆ ಅಮೆರಿಕದಲ್ಲಿ ಬಹು ಜನರು ಅಕೌಂಟಂಟ್, ಬ್ಯಾಂಕರ್ ಹಾಗೂ ರಿಯಲ್ ಎಸ್ಟೇಟ್ ಏಜೆಂಟರನ್ನು ಹೆಚ್ಚು ಧನಾತ್ಮಕ ವೃತ್ತಿಪರರ ದೃಷ್ಟಿಕೋನದಲ್ಲಿ ನೋಡುತ್ತಾರೆಂದು ಪೋಲ್ ನಿಂದ ತಿಳಿದುಬಂದಿದೆ.


ಆದರೆ, ಕಾರ್ಮಿಕ ಒಕ್ಕೂಟಗಳ ನಾಯಕರು, ನಾಯಕರು, ಮುಖಂಡರು, ವಕೀಲರು, ಪತ್ರಿಕೋದ್ಯಮದವರು ಹಾಗೂ ಬಿಸಿನೆಸ್ ಎಕ್ಸಕ್ಯೂಟಿವ್ ಗಳ ವಿಚಾರ ಬಂದಾಗ ಬಹಳಷ್ಟು ಅಮೆರಿಕದ ಜನರ ಅಭಿಪ್ರಾಯದಲ್ಲಿ ಮಿಶ್ರತೆಯಿರುವುದನ್ನು ಕಾಣಬಹುದಾಗಿದೆ.


ಇಲ್ಲಿ ಗಮನಿಸಬೇಕಾಗಿರುವ ಒಂದು ಆಸಕ್ತಿಕರ ವಿಷಯವೆಂದರೆ ಕೋವಿಡ್ ಸಂದರ್ಭಾ ನಂತರದ ದಿನಗಳಲ್ಲಿ ಪತ್ರಿಕೋದ್ಯಮದವರ ಮೇಲಿನ ವಿಶ್ವಾಸಾರ್ಹತೆ ಸಾಕಷ್ಟು ಕುಸಿದಿರುವುದನ್ನು ಗುರುತಿಸಲಾಗಿದೆ. ಇನ್ನು ಪ್ರಾಮಾಣಿಕತೆ, ನೈತಿಕ ಮೌಲ್ಯ ಹಾಗೂ ವಿಶ್ವಾಸಾರ್ಹತೆಗೆ ಸಂಬಂಧಿಸಿದಂತೆ ಬಲು ಕಳಪೆ ಸಾಧನೆ ಮಾಡಿದವರಲ್ಲಿ ಅಗ್ರವಾಗಿ ಕಂಡುಬಂದವರು ಅಲ್ಲಿನ ಕಾಂಗ್ರೆಸ್ ಸದಸ್ಯರಾಗಿದ್ದಾರೆ ಎಂದು ಪೋಲ್ ಫಲಿತಾಂಶ ಬಹಿರಂಗಪಡಿಸಿದೆ.


ಇದನ್ನೂ ಓದಿ: ನಿಮ್ಮ ಮಕ್ಕಳಿಗೆ ಯಾವುದು ಅಪಾಯ, ಯಾವುದು ಸೇಫ್ ಅನ್ನೋದನ್ನ ಹೀಗೆ ತಿಳಿಸಿಕೊಡಿ, ಇದು ಅತ್ಯವಶ್ಯಕ!


ನೈತಿಕ ಮೌಲ್ಯ ಹಾಗೂ ವಿಶ್ವಾಸಾರ್ಹತೆಗೆ ಸಂಬಂಧಿಸಿದಂತೆ ಪ್ರಮುಖ ವೃತ್ತಿಪರರ ಮತ ಫಲಿತಾಂಶದ ಪಟ್ಟಿ ಹೀಗಿದೆ. (ನೈತಿಕ ಮೌಲ್ಯ ಹಾಗೂ ವಿಶ್ವಾಸಾರ್ಹತೆ ಹೆಚ್ಚಿದೆ ಹಾಗೂ ಕಡಿಮೆ ಇದೆ ಎಂದವರ ಶೇಕಡಾವಾರು ಫಲಿತಾಂಶ)


ನರ್ಸ್


ಹೆಚ್ಚಿದೆ ಎಂದವರು - 79%
ಕಡಿಮೆಯಿದೆ ಎಂದವರು - 4%


ವೈದ್ಯರು


ಹೆಚ್ಚಿದೆ ಎಂದವರು - 62%
ಕಡಿಮೆಯಿದೆ ಎಂದವರು - 10%


ಪ್ರೌಢಶಾಲೆ ಶಿಕ್ಷಕರು


ಹೆಚ್ಚಿದೆ ಎಂದವರು - 53%
ಕಡಿಮೆಯಿದೆ ಎಂದವರು - 15%


ಪೊಲೀಸ್ ಅಧಿಕಾರಿಗಳು


ಹೆಚ್ಚಿದೆ ಎಂದವರು - 50%
ಕಡಿಮೆಯಿದೆ ಎಂದವರು - 18%


ನ್ಯಾಯಮೂರ್ತಿಗಳು


ಹೆಚ್ಚಿದೆ ಎಂದವರು - 39%
ಕಡಿಮೆಯಿದೆ ಎಂದವರು - 19%


ವಕೀಲರು


ಹೆಚ್ಚಿದೆ ಎಂದವರು - 21%
ಕಡಿಮೆಯಿದೆ ಎಂದವರು - 28%


ಕಾರ್ಮಿಕ ಮುಖಂಡರು


ಹೆಚ್ಚಿದೆ ಎಂದವರು - 24%
ಕಡಿಮೆಯಿದೆ ಎಂದವರು - 31%


ಜರ್ನಲಿಸ್ಟ್ ಗಳು


ಹೆಚ್ಚಿದೆ ಎಂದವರು - 23%
ಕಡಿಮೆಯಿದೆ ಎಂದವರು - 42%


ಕಾಂಗ್ರೆಸ್ ಸದಸ್ಯರು


ಹೆಚ್ಚಿದೆ ಎಂದವರು - 9%
ಕಡಿಮೆಯಿದೆ ಎಂದವರು - 62%

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು