• ಹೋಂ
  • »
  • ನ್ಯೂಸ್
  • »
  • ವೃತ್ತಿ
  • »
  • Successful Career: ಜಾಬ್​ ಚೇಂಜ್​ ಮಾಡೋಕೆ ಯೋಚಿಸ್ತಿದ್ದೀರಾ? ಈ ಟಿಪ್ಸ್​ ನಿಮಗೆ ಉಪಯೋಗಕ್ಕೆ ಬರಬಹುದು ನೋಡಿ!

Successful Career: ಜಾಬ್​ ಚೇಂಜ್​ ಮಾಡೋಕೆ ಯೋಚಿಸ್ತಿದ್ದೀರಾ? ಈ ಟಿಪ್ಸ್​ ನಿಮಗೆ ಉಪಯೋಗಕ್ಕೆ ಬರಬಹುದು ನೋಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಲಸ ಬಿಟ್ಟು ಮತ್ತೊಂದು ಕೆಲಸಕ್ಕೆ ಹೋಗುವ ಮುನ್ನ ಹಲವಾರು ವಿಷಯಗಳ ಬಗ್ಗೆ ಆಲೋಚಿಸಬೇಕಾಗುತ್ತದೆ. ನಮ್ಮಲ್ಲಿರುವ ಸಾಮರ್ಥ್ಯ, ಕುಟುಂಬದ ಬೆಂಬಲ, ಖರ್ಚು-ವೆಚ್ಚ, ಧೈರ್ಯ ಹೀಗೆ ಹಲವು ವಿಚಾರಗಳ ಬಗ್ಗೆ ಒಮ್ಮೆ ಅವಲೋಕಿಸಿ ಮುಂದಿನ ದಾರಿಯನ್ನು ಕಂಡುಕೊಳ್ಳಬೇಕು. ಹಾಗಾದರೆ ವೃತ್ತಿ ಬದಲಾವಣೆಯ ಬಗ್ಗೆ ಯೋಚಿಸುತ್ತಿದ್ದರೆ, ಈ ಹೊಸ ಬದಲಾವಣೆಗೆ ಹೋಗಲು ನೀವು ತೆಗೆದುಕೊಳ್ಳಬಹುದಾದ 4 ಹಂತಗಳ ಬಗ್ಗೆ ಇಲ್ಲಿದೆ ನೋಡಿ ವಿವರ.

ಮುಂದೆ ಓದಿ ...
  • Share this:

ವೃತ್ತಿ ಬದಲಾವಣೆ (Job Change), ಇದು ಪ್ರತಿ ಉದ್ಯೋಗಿಗಳಿಗೆ (Employess) ಒಂದು ಅತಿದೊಡ್ಡ ಘಟ್ಟ ಎನ್ನಬಹುದು. ಒಂದು ಕೆಲಸದಿಂದ ಮತ್ತೊಂದು ಹೊಸ ಕೆಲಸಕ್ಕೆ ಹೋಗುವ ಹಂತದ ಹಿಂದೆ ಹಲವಾರು ಕಾರಣಗಳಿರುತ್ತವೆ. ಸಂಬಳ (Salary), ಉನ್ನತ ಹುದ್ದೆಯ (Best Post) ಸಲುವಾಗಿ ಇರಬಹುದು, ಸಾಮರ್ಥ್ಯಕ್ಕೆ ತಕ್ಕ ಕೆಲಸದ ಹುಡುಕಾಟ (Job Searching) ಇರಬಹುದು, ಇಲ್ಲಾ ಕೆಲಸ ಬಿಟ್ಟು ಉದ್ಯಮ ಆರಂಭದ ಯೋಚನೆ, ಇಲ್ಲಾ ಕಂಪನಿಯೇ ಇಷ್ಟವಾಗದೇ ಇರಬಹುದು, ಹೀಗೆ ನಾನಾ ಕಾರಣಗಳಿಂದ ಓರ್ವ ಉದ್ಯೋಗಿ ಕೆಲಸ ಬದಲು ಮಾಡುವ ಮನಸ್ಸು ಮಾಡುತ್ತಾನೆ. ಒಂದು ಉದ್ಯೋಗದಿಂದ ಇನ್ನೊಂದು ಉದ್ಯೋಗಕ್ಕೆ ಬದಲಾಗುವುದು ಅಂದರೆ ಅದು ಸುಲಭ ವಿಷಯವಲ್ಲ, ಇಲ್ಲೂ ಕೂಡ ಹಲವು ಸವಾಲುಗಳಿರುತ್ತವೆ.


ಕೆಲಸ ಬಿಟ್ಟು ಮತ್ತೊಂದು ಕೆಲಸಕ್ಕೆ ಹೋಗುವ ಮುನ್ನ ಹಲವಾರು ವಿಷಯಗಳ ಬಗ್ಗೆ ಆಲೋಚಿಸಬೇಕಾಗುತ್ತದೆ. ನಮ್ಮಲ್ಲಿರುವ ಸಾಮರ್ಥ್ಯ, ಕುಟುಂಬದ ಬೆಂಬಲ, ಖರ್ಚು-ವೆಚ್ಚ, ಧೈರ್ಯ ಹೀಗೆ ಹಲವು ವಿಚಾರಗಳ ಬಗ್ಗೆ ಒಮ್ಮೆ ಅವಲೋಕಿಸಿ ಮುಂದಿನ ದಾರಿಯನ್ನು ಕಂಡುಕೊಳ್ಳಬೇಕು. ಹಾಗಾದರೆ ವೃತ್ತಿ ಬದಲಾವಣೆಯ ಬಗ್ಗೆ ಯೋಚಿಸುತ್ತಿದ್ದರೆ, ಈ ಹೊಸ ಬದಲಾವಣೆಗೆ ಹೋಗಲು ನೀವು ತೆಗೆದುಕೊಳ್ಳಬಹುದಾದ 4 ಹಂತಗಳ ಬಗ್ಗೆ ಇಲ್ಲಿದೆ ನೋಡಿ ವಿವರ.


ಕಲಬುರಗಿಯಲ್ಲಿ ಜಾಬ್‌!
ಜಾಬ್


1. ಕಾರಣ


ಮೊದಲೇ ಹೇಳಿದಂತೆ ಉದ್ಯೋಗ ಬಲಾವಣೆಗೆ ಸರಿಯಾದ ಕಾರಣ ಕಂಡುಕೊಳ್ಳಿ. ಕಾರಣ ಎಂಬುದು ನೀವು ಯಾವ ಕೆಲಸ ಹುಡುಕುತ್ತಿದ್ದೀರಿ, ಏಕೆ ಬದಲು ಮಾಡಲು ನಿರ್ಧರಿಸಿದ್ದೀರಿ ಎಂಬುದಕ್ಕೆ ಸ್ಪಷ್ಟ ಉತ್ತರ ನೀಡುತ್ತದೆ. ಕೌಟುಂಬಿಕ ಕಾರಣ, ಆರೋಗ್ಯದ ಕಾರಣ, ವೇತನ, ಹುದ್ದೆ ಹೀಗೆ ಹಲವು ಕಾರಣಗಳಿರುತ್ತವೆ. ಹೀಗಾಗಿ ಮೊದಲಿಗೆ ಬದಲು ಮಾಡುವುದರ ಹಿಂದಿನ ಕಾರಣವನ್ನು ನಿಮಗೆ ನೀವೇ ಪ್ರಶ್ನೆ ಹಾಕಿಕೊಂಡು ಕಂಡುಕೊಳ್ಳಿ. ಉದ್ಯೋಗ ಬದಲು ಎಂದರೆ ಕಂಪನಿಯಿಂದ ಕಂಪನಿಗೆ ಹೋಗುವುದು ಮಾತ್ರವಲ್ಲ, ನಿಮ್ಮ ಆಸಕ್ತಿ ಇರುವ ಯಾವುದೇ ಕ್ಷೇತ್ರದಲ್ಲಿ ನಿಮಗೆ ಉತ್ತಮ ಸಾಮರ್ಥ್ಯ, ಕೌಶಲ್ಯ ಇದೆ ಎಂದೆನಿಸದರೂ ನೀವು ಅಲ್ಲಿ ನಿಮ್ಮದೇ ಉದ್ಯಮ ಅಥವಾ ಬೇರೆಯವರ ಜೊತೆ ಕೈಜೋಡಿಸಬಹುದು.


2. ಹೋರಾಟ


ಯಾವುದೇ ವೃತ್ತಿ ಬದಲಾವಣೆಯಾದರೂ ಸಹ ಅದು ಹೂವಿನ ಹಾಸಿಗೆ ಆಗಿರದೇ, ಮುಳ್ಳಿನ ಹಾದಿಯಾಗಿರುತ್ತದೆ. ಕೆಲಸ ಬಿಟ್ಟು ಇನ್ನೊಂದು ಕೆಲಸಕ್ಕೆ ಹೋಗುವುದು ಅಂದರೆ ಸುಲಭವಲ್ಲ. ಇಲ್ಲಿ ಅನೇಕ ಸವಾಲು ಕೂಡ ಎದುರಾಗುತ್ತದೆ. ವೃತ್ತಿ ಬದಲು ಮಾಡಲು ನಿರ್ಧಾರ ಮಾಡಿದಾಗ ಯಾವುದೇ ಕಠಿಣ ಪರಿಸ್ಥಿತಿಯನ್ನು, ಸವಾಲುಗಳನ್ನು ಎದೆಗುಂದದೆ ಸ್ವೀಕರಿಸಲು, ಎದುರಿಸಲು ಉದ್ಯೋಗಿಗಳು ತಯಾರಿರಬೇಕು. ಈ ಹೋರಾಟದ ಮನೋಭಾವ ನಿಮ್ಮ ವೃತ್ತಿ ಬದಲಾವಣೆ ನಿರ್ಧಾರವನ್ನು ಮತ್ತಷ್ಟು ಬಲಗೊಳಿಸಿ ಬೇರೆ ಹಂತಕ್ಕೆ ಹೋಗಲು ಸಹಾಯ ಮಾಡುತ್ತದೆ.


safe and unsafe jobs list after ai chatgpt
ಪ್ರಾತಿನಿಧಿಕ ಚಿತ್ರ


3. ಹುಡುಕಾಟ


ವೃತ್ತಿಜೀವನದ ಬದಲಾವಣೆ ಅಂದರೆ ಮೊದಲಿಗೆ ಯಾವ ಕೆಲಸಕ್ಕೆ ಹೋಗಬೇಕು, ಯಾವ ಕಂಪನಿ ಉತ್ತಮ, ಉದ್ಯೋಗವೋ ಇಲ್ಲಾ ಉದ್ಯಮವೋ ಹೀಗೆ ಹಲವು ವಿಷಯಗಳ ಬಗ್ಗೆ ಅವಲೋಕನ ಮಾಡಿ ಹುಡುಕಾಟ ನಡೆಸಬೇಕಾಗುತ್ತದೆ. ಅಂದರೆ ಈ ನಿಮ್ಮ ವೃತ್ತಿ ಬದಲಾವಣೆಯ ನಿರ್ಧಾರವು ಹುಡುಕಾಟದಿಂದ ಪ್ರಾರಂಭವಾಗುತ್ತದೆ ಎನ್ನಬಹುದು.


ಉದ್ಯೋಗ ತಜ್ಞರು ಕೂಡ ನಿಮ್ಮ ಸಾಮರ್ಥ್ಯಕ್ಕೆ, ಕೌಶಲ್ಯಕ್ಕೆ ಸರಿಹೊಂದುವ ಕೆಲಸ, ಕ್ಷೇತ್ರವನ್ನು ಹುಡುಕಾಟ ಮಾಡುವಂತೆ ಮೊದಲಿಗೆ ಸಲಹೆ ನೀಡುತ್ತಾರೆ. ಹಾಗೆಯೇ ನೀವು ಏನು ಮಾಡಲು ಬಯಸುತ್ತೀರೋ ಅದನ್ನು ಮಾಡುವ ಮತ್ತು ನಿಮ್ಮ ಗುರಿ ಮತ್ತು ಆಲೋಚನೆಗಳ ಬಗ್ಗೆ ಪರಿಶೀಲನೆ ನಡೆಸಲು ಹೇಳುತ್ತಾರೆ. ಈ ಕ್ರಮಗಳು ನಿಮ್ಮ ದೃಷ್ಟಿಯನ್ನು ಕಾರ್ಯಗತಗೊಳಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.


4. ಪರಿಹಾರ


ಈ ಮೇಲಿನ ಎಲ್ಲಾ ಹಂತಗಳನ್ನು ದಾಟಿ ಬಂದಲ್ಲಿ ವೃತ್ತಿ ಬದಲಾವಣೆಯ ಪ್ರಯಾಣದ ಅಂತಿಮ ಅಧ್ಯಾಯವು ನಿಮ್ಮ ಜೀವನದಲ್ಲಿ ಸಂಪೂರ್ಣ ಹೊಸ ಅಧ್ಯಾಯದ ಆರಂಭವನ್ನು ಸೂಚಿಸುತ್ತದೆ. ಅಂದರೆ ಕಾರಣ, ಹುಡುಕಾಟ, ಹೋರಾಟ ಎಲ್ಲವೂಗಳು ಈ ನಾಲ್ಕನೇ ಹಂತದಲ್ಲಿ ಪರಿಹಾರ ಕಂಡುಕೊಳ್ಳುತ್ತವೆ ಮತ್ತು ನೀವು ಏನು ಮಾಡಬೇಕೆಂದು ನಿಮಗೆ ತಿಳಿಸುತ್ತದೆ. ಮೊದಲಿಗೆ ನಿಮ್ಮ ಕೆಲಸ ಬಿಡುವುದರ ಹಿಂದಿನ ಕಾರಣ ಕಂಡುಕೊಂಡ ನಂತರ, ಆ ನಿರ್ಧಾರದಿಂದ ಎದುರಾಗುವ ಸವಾಲುಗಳನ್ನು ಎದುರಿಸುವ ಹೋರಾಟದ ಮನೋಭಾವ ಬೆಳೆಸಿಕೊಳ್ಳುತ್ತೀರಿ.




ಇದನ್ನೂ ಓದಿ: Workplace: ಆಫೀಸ್​ನಲ್ಲಿ ಹೀಗೆಲ್ಲಾ ಆಗ್ತಿದ್ರೆ ನೀವು ಮೊದ್ಲು ಕೆಲಸ ಬಿಡೋದು ಉತ್ತಮ!


ಇದಾದ ನಂತರ ಸೂಕ್ತ ಉದ್ಯೋಗಕ್ಕೆ ನಿಮ್ಮ ಹುಡುಕಾಟ ಪ್ರಾರಂಭವಾಗುತ್ತದೆ. ಈ ಎಲ್ಲದರ ಪರಿಣಾಮವೇ ಪರಿಹಾರ. ಈ ಎಲ್ಲಾ ಹಂತಗಳನ್ನು ಸರಿಯಾಗಿ ನೀವು ನಿಭಾಯಿಸಿದಲ್ಲಿ ವೃತ್ತಿ ಬದಲಾವಣೆಯ ಬಗ್ಗೆ ಮತ್ತು ನೀವು ಆರಿಸಿಕೊಳ್ಳುವ ಉದ್ಯೋಗದ ಬಗ್ಗೆ ನಿಮಗೆ ಒಂದು ಸ್ಪಷ್ಟತೆ ಸಿಗುತ್ತದೆ.

top videos
    First published: