• Home
  • »
  • News
  • »
  • career
  • »
  • New Job Offers: ಕೆಲಸನೂ ಬೇಕು, ಟ್ರಾವೆಲಿಂಗ್​ ಮಾಡ್ಬೇಕು ಎಂದ್ರೆ ಇಲ್ಲಿದೆ ನೋಡಿ ಅವಕಾಶ; ಕೈ ತುಂಬಾ ಸಂಬಳ

New Job Offers: ಕೆಲಸನೂ ಬೇಕು, ಟ್ರಾವೆಲಿಂಗ್​ ಮಾಡ್ಬೇಕು ಎಂದ್ರೆ ಇಲ್ಲಿದೆ ನೋಡಿ ಅವಕಾಶ; ಕೈ ತುಂಬಾ ಸಂಬಳ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆಫೀಸ್‌ ಅಥವಾ ಮನೆಯಿಂದ ನಿಯಮಿತವಾಗಿ ಕುಳಿತು ಮಾಡುವ ಕಚೇರಿ ಕೆಲಸವು ಸಾಕಷ್ಟು ಬೋರ್‌ ಹೊಡೆಸಬಹುದು

  • Share this:

ಕಾಲ ಬದಲಾಗಿದೆ. ಮೊದಲಿನಂತೆ ಆಫೀಸಿಗೆ (Office) ಹೋಗುವುದು, ಅಲ್ಲಿಯೇ 9-10 ಗಂಟೆಗಳ ಕಾಲ ಕೆಲಸ ಮಾಡುವುದು ಮಾತ್ರ ಉದ್ಯೋಗ ಎನ್ನುವಂತಿಲ್ಲ. ಇಂದು ಉದ್ಯೋಗ ಅಥವಾ ನೌಕರಿ ಅನ್ನೋದ್ರ ವ್ಯಾಖ್ಯೆ ಬದಲಾಗಿದೆ. ತಮಗೇನಿಷ್ಟವೋ ಅದನ್ನೇ ಮಾಡಿ ಹಣ ಸಂಪಾದನೆ ಮಾಡೋಕೆ ನೂರಾರು ದಾರಿಗಳಿವೆ. ಆಫೀಸ್‌ ಅಥವಾ ಮನೆಯಿಂದ ನಿಯಮಿತವಾಗಿ ಕುಳಿತು ಮಾಡುವ ಕಚೇರಿ ಕೆಲಸವು ಸಾಕಷ್ಟು ಬೋರ್‌ ಹೊಡೆಸಬಹುದು. ಅಲ್ಲದೇ ಇದು ನಿಮ್ಮ ಉತ್ಸಾಹವನ್ನೂ ಕುಗ್ಗಿಸಬಹುದು. ಹಾಗಾಗಿ ನೀವು ಆಗಾಗ ಟ್ರಿಪ್‌ ಹೋಗುವ ಅಥವಾ ನಿಮಗೆ ನೋಡಬೇಕೆಂದಿರುವ ಸ್ಥಳಗಳಿಗೆ ಅಲೆದಾಡೋಕೆ ಹೋಗಬಹುದು.


ಇದರಿಂದ ನಿಮಗೆ ಮತ್ತಷ್ಟು ಸಂತೋಷ ಸಿಗೋದಲ್ಲದೇ ನಿಮ್ಮ ಉತ್ಸಾಹವೂ ಇಮ್ಮಡಿಯಾಗುತ್ತೆ. ಈ ಮಧ್ಯೆ ತಿರುಗಾಡೋದು ಅಥವಾ ಸುತ್ತಾಡೋದು ನಿಮಗೆ ಅತ್ಯಂತ ಪ್ರೀತಿಯ ಕೆಲಸ ಎಂದಾದಲ್ಲಿ ಅದರಿಂದ ನೀವು ನಿಯಮಿತವಾಗಿ ಆದಾಯವನ್ನೂ ಪಡೆಯಬಹುದು.


ಹೌದು ಟ್ರಾವೆಲಿಂಗ್‌ ಪ್ಯಾಷನ್‌ ನಿಮ್ಮಲ್ಲಿದ್ದರೆ ಅದನ್ನು ನೀವು ವೃತ್ತಿಯನ್ನಾಗಿಯೂ ಬದಲಾಯಿಸಿಕೊಳ್ಳಬಹುದು. ಹಾಗಿದ್ದರೆ ಟ್ರಾವೆಲಿಂಗ್‌ ಇಷ್ಟ ಪಡುವವರು ಈ ವೃತ್ತಿಗಳನ್ನ ಆಯ್ಕೆ ಮಾಡಿಕೊಳ್ಳಬಹುದು.


1. ಈವೆಂಟ್ ಪ್ಲಾನಿಂಗ್‌


ಈವೆಂಟ್ ಪ್ಲಾನಿಂಗ್‌ ಅನ್ನೋದು ಟ್ರೆಂಟ್‌ ನಲ್ಲಿರೋ ವೃತ್ತಿಯಾಗಿದೆ. ಇದರಲ್ಲಿ ದೊಡ್ಡ ಮಟ್ಟದ ಗ್ಯಾದರಿಂಗ್‌, ಪಾರ್ಟಿಗಳು, ಪ್ರದರ್ಶನಗಳು, ಮದುವೆ, ರಿಸೆಪ್ಶನ್‌ ಗಳಂಥ ಕಾರ್ಯಕ್ರಮಗಳನ್ನು ಬಹಳ ಅಚ್ಚುಕಟ್ಟಾಗಿ ನಡೆಸಿಕೊಡಬೇಕಾಗುತ್ತದೆ. ಈವೆಂಟ್ ಸಂಯೋಜಕರು ತಮ್ಮ ಕರ್ತವ್ಯಗಳ ಭಾಗವಾಗಿ ಬೇರೆ ಬೇರೆ ಕಡೆಗಳಲ್ಲಿ ನಡೆಯುವ ಈವೆಂಟ್‌ ಗಾಗಿ ಪ್ರಯಾಣಿಸುತ್ತ ಇರುತ್ತಾರೆ.


ಹಾಗಾಗಿ ಪ್ರಯಾಣ ಇಷ್ಟಪಡುವವರಿಗೆ ಇದು ಬೆಸ್ಟ್‌ ವೃತ್ತಿ. ಅಲ್ಲದೇ ನೀವು ಹೊಸ ಸ್ಥಳವನ್ನು, ಹೊಸ ಜನರನ್ನು ಭೇಟಿಯಾಗುತ್ತೀರಿ. ಅಲ್ಲದೇ ಹೊಸ ಅನುಭವಗಳನ್ನು ಪಡೆಯುತ್ತೀರಿ.
2. ಇಂಗ್ಲೀಷ್‌ ಭಾಷಾ ಶಿಕ್ಷಕ ವೃತ್ತಿ


ನೀವು ಇಂಗ್ಲೀಷ್‌ ಭಾಷೆಯನ್ನು ಮಾತನಾಡುವ ಮತ್ತು ಅರ್ಥಮಾಡಿಕೊಳ್ಳುವಲ್ಲಿ ಪ್ರವೀಣರಾಗಿದ್ದರೆ ಇಂಗ್ಲಿಷ್ ಬೋಧನೆಯು ನಿಮ್ಮನ್ನು ಪ್ರಪಂಚದಾದ್ಯಂತ ಕರೆದೊಯ್ಯುತ್ತದೆ. ಇಂಗ್ಲೀಷ್‌ ಅನ್ನೋದು ಜಾಗತಿಕ ಭಾಷೆಯಾಗಿರೋದ್ರಿಂದ ವ್ಯಾಕರಣ, ಗ್ರಾಮರ್‌, ಸ್ಪೋಕನ್‌ ಇಂಗ್ಲೀಷ್‌ ಹಾಗೂ ಭಾಷೆಯ ಮೂಲಭೂತ ಅಂಶಗಳನ್ನು ಕಲಿಸಲು ವಿವಿಧ ರಾಷ್ಟ್ರಗಳಲ್ಲಿ ಭಾರಿ ಬೇಡಿಕೆಯಿದೆ.


ಶಿಕ್ಷಕರಿಗೆ ಬೋಧನೆಯಿಂದ ಆರ್ಥಿಕವಾಗಿ ಪ್ರಯೋಜನ ದೊರೆಯುವುದಲ್ಲದೆ, ವಿವಿಧ ವಿದೇಶಿ ದೇಶಗಳನ್ನು ನೋಡಲು, ಇತರ ವಲಸಿಗರೊಂದಿಗೆ ವಾಸಿಸಲು ಮತ್ತು ಇತರ ಸಂಸ್ಕೃತಿಗಳ ಬಗ್ಗೆ ಸಂಪೂರ್ಣ ತಿಳುವಳಿಕೆಯನ್ನು ಪಡೆಯಲು ಅವಕಾಶ ಸಿಗುತ್ತದೆ.


ಇದನ್ನು ಓದಿ: ಲೇಬರ್​ ಇನ್ಸ್​ಪೆಕ್ಟರ್​ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ


3. ಫ್ಲೈಟ್ ಅಟೆಂಡೆಂಟ್‌


ನೀವು ಟ್ರಾವೆಲಿಂಗ್‌ ಇಷ್ಟ ಪಡುತ್ತೀರೆಂದಾದರೆ ಫ್ಲೈಟ್ ಅಟೆಂಡೆಂಟ್ ವೃತ್ತಿ ಒಂದೊಳ್ಳೆ ಆಯ್ಕೆಯಾಗಿದೆ. ವಿಮಾನದಲ್ಲಿರುವ ಪ್ರಯಾಣಿಕರ ಸೌಕರ್ಯ ಮತ್ತು ಸುರಕ್ಷತೆಯು ಫ್ಲೈಟ್ ಅಟೆಂಡೆಂಟ್‌ಗಳ ಜವಾಬ್ದಾರಿಯಾಗಿದೆ. ಅವರು ಆಹಾರ ಮತ್ತು ಪಾನೀಯವನ್ನು ಪೂರೈಸುತ್ತಾರೆ.


ಅಗತ್ಯವಿರುವಂತೆ ಪ್ರಯಾಣಿಕರೊಂದಿಗೆ ಸಂಭಾಷಣೆ ಮತ್ತು ಮಾರ್ಗದರ್ಶನ ನೀಡುತ್ತಾರೆ. ತುರ್ತು ಸೇವಾ ಪ್ರೋಟೋಕಾಲ್‌ಗಳನ್ನು ಪ್ರದರ್ಶಿಸುತ್ತಾರೆ. ಆದಾಗ್ಯೂ ವಿಮಾನಗಳು ಪ್ರಪಂಚದಾದ್ಯಂತ ಪ್ರಯಾಣಿಸುವಾಗ, ಕೆಲಸವು ದೇಶೀಯವಾಗಿ ಮತ್ತು ಅಂತರರಾಷ್ಟ್ರೀಯವಾಗಿ ಪ್ರಯಾಣಿಸಲು ಯೋಗ್ಯವಾದ ವೇತನ, ಉಳಿದುಕೊಳ್ಳಲು ವ್ಯವಸ್ಥೆ ಹಾಗೂ ಪ್ರವಾಸದ ಸಮಯದಲ್ಲಿ ಖರ್ಚು ಮಾಡಲು ವಿಮಾನಯಾನ ಸಂಸ್ಥೆಗಳು ನೀಡುವ ಹೆಚ್ಚುವರಿ ಹಣವನ್ನು ಒದಗಿಸುತ್ತದೆ.


4. ಟ್ರಾವೆಲ್ ಬ್ಲಾಗರ್‌


ಟ್ರಾವೆಲ್‌ ಬ್ಲಾಗರ್‌ ಅನ್ನೋದು ನಿಮ್ಮ ಕಥೆ ಹೇಳುವಿಕೆ ಮತ್ತು ಅದನ್ನು ಚಿತ್ರದಂತೆ ಹೇಳುವ ಸಾಮರ್ಥ್ಯದ ಮೇಲೆ ನಿಲ್ಲುತ್ತೆ. ಟ್ರಾವೆಲ್ ಬ್ಲಾಗರ್‌ಗಳು ತಮ್ಮ ಸಾಹಸಗಳ ಕುರಿತು ವೀಡಿಯೊಗಳನ್ನು ಮಾಡುತ್ತಾರೆ. ಅದನ್ನು ಚೆನ್ನಾಗಿ ಪ್ರೆಸೆಂಟ್‌ ಮಾಡ್ತಾರೆ.


Tips For Solo Female Travelers
ಸಾಂದರ್ಭಿಕ ಚಿತ್ರ


ಇದರಿಂದ ಓದುಗರು, ವೀಕ್ಷಕರು ತಮ್ಮ ದೃಷ್ಟಿಕೋನದಿಂದ ಜಗತ್ತನ್ನು ಅನುಭವಿಸಬಹುದು. ಪ್ರಯಾಣ ಬ್ಲಾಗ್‌ಗಳು ಮತ್ತು ವೀಡಿಯೊಗಳನ್ನು ಮಾಡುವುದು ನಿಮಗೆ ಹಣ ಗಳಿಸೋಕೂ ನೆರವಾಗುತ್ತವೆ. ಅಲ್ಲದೇ ಆನ್‌ಲೈನ್ ಬ್ಲಾಗ್ ಅನ್ನು ರಚಿಸುವ ಮೂಲಕ ಅಥವಾ ಇನ್‌ ಸ್ಟಾಗ್ರಾಂ ಮತ್ತು ಯಟ್ಯೂಬ್‌ ಗಾಗಿ ವೀಡಿಯೊಗಳನ್ನು ಮಾಡುವ ಮೂಲಕ ನೀವೇ ಕೆಲಸ ಮಾಡಬಹುದು. ಟ್ರಾವೆಲ್ ಬ್ಲಾಗಿಂಗ್‌ನಲ್ಲಿ ವೃತ್ತಿಜೀವನವನ್ನು ಮಾಡಲು, ವಿಷಯ ರಚನೆಗೆ ಒಂದು ಕೌಶಲ್ಯವನ್ನು ಹೊಂದಿರಬೇಕಾಗುತ್ತದೆ.


5. ಫ್ರಿಲಾನ್ಸರ್‌ ಅಥವಾ ಸ್ವತಂತ್ರ ಉದ್ಯೋಗಿ


ಯಾವುದೇ ಸಮಯದ ಬದ್ಧತೆಗಳಿಲ್ಲದೆ ಕೆಲಸ ಮಾಡಲು ಅದ್ಭುತವಾದ ಮಾರ್ಗವೆಂದರೆ ಫ್ರಿಲ್ಯಾನ್ಸಿಂಗ್. ನಿಮ್ಮಿಷ್ಟದಂತೆ, ನಿಮಗೆ ಅನುಕೂಲವಾಗುವಂತೆ ಕೆಲಸ ಮಾಡುವ ಅನುಕೂಲತೆ ಇರೋದ್ರಿಂದ ನೀವು ಪ್ರಯಾಣಿಸಲು ಮತ್ತು ಅನ್ವೇಷಿಸಲು ಇದು ಅತ್ಯುತ್ತಮ ಆಯ್ಕೆಯಾಗಿದೆ.


ಇದನ್ನು ಓದಿ:  ಡಾಟಾ ಎಂಟ್ರಿ ಆಪರೇಟರ್​ ಹುದ್ದೆಗೆ ಅರ್ಜಿ ಆಹ್ವಾನ; ಪಿಯುಸಿ ಆಗಿದ್ರೆ ಸಾಕು


ಇಲ್ಲಿ ನೀವು ಸ್ವತಂತ್ರವಾಗಿ ಯೋಜನೆಗಳನ್ನು ತೆಗೆದುಕೊಳ್ಳಬಹುದು. ನಿಮಗೆ ಬೇಕಾದಾಗ ಎಲ್ಲಿಯಾದರೂ ಪ್ರಯಾಣಿಸಬಹುದು. ಫುಲ್‌ಟೈಮ್ ಪ್ರಯಾಣ ಮಾಡುವಾಗ ಕಾಫಿ ಶಾಪ್‌ಗಳಿಂದ ಕೆಲಸ ಮಾಡುವುದು ಸಹ ಸಾಕಷ್ಟು ಟ್ರೆಂಡ್ ಆಗುತ್ತಿದೆ.


ಒಟ್ಟಾರೆ, ಟ್ರಾವೆಲ್ ಬ್ಲಾಗಿಂಗ್ ಆಗಿರಲಿ, ಭಾಷೆಯನ್ನು ಕಲಿಸುವುದು ಅಥವಾ ಛಾಯಾಗ್ರಹಣವಾಗಿರಬಹುದು, ಇವುಗಳು ಪ್ರತಿ ದಿನ ನಿಮಗಾಗಿ ಹೊಸ ಅನುಭವಗಳನ್ನು ರಚಿಸಲು ಮತ್ತು ಅಮೂಲ್ಯವಾದ ನೆನಪುಗಳು ಮತ್ತು ರೋಮಾಂಚಕಾರಿ ಸಾಹಸಗಳ ಸಂಗ್ರಹವನ್ನು ನಿರ್ಮಿಸಲು ಅನುವು ಮಾಡಿಕೊಡುವ ವೃತ್ತಿಗಳಾಗಿವೆ ಅನ್ನೋದ್ರಲ್ಲಿ ಸಂದೇಹವೇ ಇಲ್ಲ.

Published by:Seema R
First published: