• Home
  • »
  • News
  • »
  • career
  • »
  • Laid Off Employees: ನೂರಾರು ಉದ್ಯೋಗಿಗಳನ್ನು ವಜಾಗೊಳಿಸಿದ ಕಂಪನಿ, ಚರ್ಚೆಗೆ ಕಾರಣವಾಯ್ತು ಕಂಪನಿ ನಡೆ

Laid Off Employees: ನೂರಾರು ಉದ್ಯೋಗಿಗಳನ್ನು ವಜಾಗೊಳಿಸಿದ ಕಂಪನಿ, ಚರ್ಚೆಗೆ ಕಾರಣವಾಯ್ತು ಕಂಪನಿ ನಡೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ವಾಸ್ತವವಾಗಿ, ಟೆಸ್ಲಾ ಕಂಪನಿ ತನ್ನ ಸ್ಯಾನ್ ಮಾಟಿಯೊ, ಕ್ಯಾಲಿಫೋರ್ನಿಯಾ ಕಚೇರಿಯನ್ನು ಈಗಾಗಲೇ ಮುಚ್ಚಿದೆ ಮತ್ತು ಇತ್ತೀಚೆಗೆ ತನ್ನ ಆಟೋಪೈಲಟ್ ವಿಭಾಗದಿಂದ ನೂರಾರು ಉದ್ಯೋಗಿಗಳನ್ನು ವಜಾಗೊಳಿಸಿದೆ. ಕೇವಲ ಟೆಸ್ಲಾ ಮಾತ್ರವಲ್ಲದೇ ಪ್ರಸ್ತಕ ಆರ್ಥಿಕ ಹಿಂಜರಿತ ನಿಭಾಯಿಸಲು ಮತ್ತು ವೆಚ್ಚ ಕಡಿತಗೊಳಿಸಲು ಯಾವೆಲ್ಲಾ ದೊಡ್ಡ ಟೆಕ್ ಕಂಪನಿಗಳು ತನ್ನ ಉದ್ಯೋಗಿಗಳನ್ನು ಸಂಸ್ಥೆಯಿಂದ ತೆಗೆದು ಹಾಕಿದೆ ಎಂಬ ಮಾಹಿತಿ ಇಲ್ಲಿದೆ.

ಮುಂದೆ ಓದಿ ...
  • News18 Kannada
  • Last Updated :
  • New Delhi, India
  • Share this:

ಸ್ಟಾರ್ಟಪ್ ಗಳಾದ (Start Up) ಮಿಶೋ, ಓಲಾ, ಅನ್ ಅಕಾಡೆಮಿ ಹೀಗೆ ಹಲವಾರು ಕಂಪನಿಗಳು (Company) ತನ್ನ ನೂರಾರು ಉದ್ಯೋಗಿಗಳನ್ನು ವಜಾ ಮಾಡಿದ್ದು ಭಾರಿ ಚರ್ಚೆಗೆ ಕಾರಣವಾಗಿತ್ತು. ಉದ್ಯೋಗಿಗಳ  (Employees) ವಜಾಗೊಳಿಸುವಿಕೆ ಕೇವಲ ನವೋದ್ಯಮಗಳಲ್ಲಿ ಮಾತ್ರವಲ್ಲದೆ ತಂತ್ರಜ್ಞಾನದ ವಲಯದಲ್ಲೂ ಇದೇ ಬೆಳವಣಿಗೆ ಕಂಡು ಬರುತ್ತಿದೆ. ತಂತ್ರಜ್ಞಾನ ಉದ್ಯಮ (Technology industry) ಪ್ರಸ್ತುತ ಹಲವಾರು ತೊಂದರೆಗಳನ್ನು ಎದುರಿಸುತ್ತಿದ್ದು, ದೊಡ್ಡ ಟೆಕ್ ಕಂಪನಿಗಳೆಂದು ಗುರುತಿಸಿಕೊಂಡಿರುವ ಅದೆಷ್ಟೋ ಕಂಪನಿಗಳು ನೇಮಕಾತಿ (Recruiting companies) ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿರುವುದರ ಜೊತೆಗೆ ಅನೇಕ ಉದ್ಯೋಗಿಗಳನ್ನು ಕಂಪನಿಯಿಂದ ಕೈಬಿಟ್ಟಿದೆ. ಕಂಪನಿಗಳು ತನ್ನ ವೆಚ್ಚವನ್ನು ಕಡಿತಗೊಳಿಸುವ ಸಲುವಾಗಿ ಈ ಕ್ರಮ ತೆಗೆದುಕೊಳ್ಳುತ್ತಿವೆ.


ಇತ್ತೀಚೆಗೆ ಬಂದ ಒಂದು ವರದಿಯು, ಉದ್ಯೋಗಿಗಳ ವಜಾಗೊಳಿಸುವಿಕೆಯ ಈ ಕ್ರಮ ಕೇವಲ ಆರಂಭವಷ್ಟೇ, ಸ್ಥಿತಿ ಇನ್ನೂ ಹದಗೆಡಲಿದೆ, ಮತ್ತಷ್ಟು ನೌಕರರನ್ನು ಕಂಪನಿಗಳು ಕೈಬಿಡಲಿವೆ ಎಂದು ತಿಳಿಸಿತ್ತು.


ವಾಸ್ತವವಾಗಿ, ಟೆಸ್ಲಾ ಕಂಪನಿ ತನ್ನ ಸ್ಯಾನ್ ಮಾಟಿಯೊ, ಕ್ಯಾಲಿಫೋರ್ನಿಯಾ ಕಚೇರಿಯನ್ನು ಈಗಾಗಲೇ ಮುಚ್ಚಿದೆ ಮತ್ತು ಇತ್ತೀಚೆಗೆ ತನ್ನ ಆಟೋಪೈಲಟ್ ವಿಭಾಗದಿಂದ ನೂರಾರು ಉದ್ಯೋಗಿಗಳನ್ನು ವಜಾಗೊಳಿಸಿದೆ. ಕೇವಲ ಟೆಸ್ಲಾ ಮಾತ್ರವಲ್ಲದೇ ಪ್ರಸ್ತಕ ಆರ್ಥಿಕ ಹಿಂಜರಿತ ನಿಭಾಯಿಸಲು ಮತ್ತು ವೆಚ್ಚ ಕಡಿತಗೊಳಿಸಲು ಯಾವೆಲ್ಲಾ ದೊಡ್ಡ ಟೆಕ್ ಕಂಪನಿಗಳು ತನ್ನ ಉದ್ಯೋಗಿಗಳನ್ನು ಸಂಸ್ಥೆಯಿಂದ ತೆಗೆದು ಹಾಕಿದೆ ಎಂಬ ಮಾಹಿತಿ ಇಲ್ಲಿದೆ.


ಸಂಸ್ಥೆಯಿಂದ ಉದ್ಯೋಗಿಗಳನ್ನು ವಜಾ ಮಾಡಿದ ಟೆಕ್ ಕಂಪನಿಗಳು
1) ಮೈಕ್ರೋಸಾಫ್ಟ್
ಮೈಕ್ರೋಸಾಫ್ಟ್ ಇತ್ತೀಚೆಗೆ ತನ್ನ ವಿವಿಧ ವಿಭಾಗಗಳಲ್ಲಿ ಸುಮಾರು 1800 ಉದ್ಯೋಗಿಗಳನ್ನು ವಜಾಗೊಳಿಸಿದೆ. ಈ ಕ್ರಮವು ಅದರ ರಚನಾತ್ಮಕ ಹೊಂದಾಣಿಕೆಗಳ ಒಂದು ಭಾಗವಾಗಿದೆ ಎಂದು ಕಂಪನಿ ಹೇಳಿತ್ತು. ಜೂನ್ 30 ರಂದು ತನ್ನ ಹಣಕಾಸಿನ ವರ್ಷವನ್ನು ಮುಕ್ತಾಯಗೊಳಿಸಿದ ನಂತರ ವ್ಯಾಪಾರ ಮತ್ತು ಅಧಿಕಾರಗಳನ್ನು ಮರುಹೊಂದಿಸಿದ್ದರಿಂದ ಕೆಲವು ಉದ್ಯೋಗಗಳನ್ನು ಕಡಿತಗೊಳಿಸಿದೆ ಎಂದು ಮೈಕ್ರೋಸಾಫ್ಟ್ ಹೇಳಿದೆ. ಜೊತೆಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಹೊಸ ಉದ್ಯೋಗಿಗಳ ನೇಮಕಾತಿ ಮಾಡಿಕೊಳ್ಳುವ ಬಗ್ಗೆಯೂ ತಿಳಿಸಿದೆ.


ಇದನ್ನೂ ಓದಿ:  IT Refund: ಹೀಗಾದ್ರೆ, ನಿಮಗೆ ಒಂದು ರೂಪಾಯಿನೂ ಆದಾಯ ತೆರಿಗೆ ಮರುಪಾವತಿ ಸಿಗುವುದಿಲ್ಲ! ಯಾಕೆ ಅಂತ ನೋಡಿ


"ಎಲ್ಲಾ ಕಂಪನಿಗಳಂತೆ, ನಾವು ನಿಯಮಿತವಾಗಿ ನಮ್ಮ ವ್ಯಾಪಾರದ ಆದ್ಯತೆಗಳನ್ನು ಮೌಲ್ಯಮಾಪನ ಮಾಡುತ್ತೇವೆ ಮತ್ತು ಅದಕ್ಕೆ ಅನುಗುಣವಾಗಿ ರಚನಾತ್ಮಕ ಹೊಂದಾಣಿಕೆಗಳನ್ನು ಮಾಡುತ್ತೇವೆ" ಎಂದು ಮೈಕ್ರೋಸಾಫ್ಟ್ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ವಜಾಗೊಳಿಸುವಿಕೆಗಳು ಮೈಕ್ರೋಸಾಫ್ಟ್‌ನಲ್ಲಿನ ಒಟ್ಟು ಉದ್ಯೋಗಿಗಳ ಶೇಕಡಾ 1 ಕ್ಕಿಂತ ಕಡಿಮೆಯಿವೆ.


2) ನೆಟ್‌ಫ್ಲಿಕ್ಸ್
ಕಳೆದ ತಿಂಗಳು, ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್ ಸುಮಾರು 300 ಉದ್ಯೋಗಿಗಳನ್ನು ವಜಾಗೊಳಿಸಿದೆ. ಗಮನಾರ್ಹವಾಗಿ, ಇದು ನೆಟ್ಫ್ಲಿಕ್ಸ್ ನಲ್ಲಿ ಎರಡನೇ ಸುತ್ತಿನ ವಜಾಗೊಳಿಸುವಿಕೆ ಆಗಿದೆ. ಮೇ 2022ರಲ್ಲಿ ಮೊದಲ ಬಾರಿಗೆ 150 ಉದ್ಯೋಗಿಗಳನ್ನು ಕೈಬಿಟ್ಟಿತ್ತು. ಯುಎಸ್ ನಲ್ಲಿ ಎರಡನೇ ಸುತ್ತಿನ ವಜಾಗೊಳಿಸುವ ಸಮಯದಲ್ಲಿ, ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್ ಈ ವರ್ಷದ ನಂತರವವೂ ವಜಾಗೊಳಿಸುವ ಪ್ರಕ್ರಿಯೆ ಮುಂದುವರಿಯುವ ಬಗ್ಗೆ ಸುಳಿವು ನೀಡಿದೆ.


3) ಟ್ವಿಟ್ಟರ್
ಕಂಪನಿಯಾದ್ಯಂತ ನೇಮಕಾತಿಯನ್ನು ಸ್ಥಗಿತಗೊಳಿಸಿದ ನಂತರ ಜುಲೈನಲ್ಲಿ ಟ್ವಿಟ್ಟರ್ ತನ್ನ ಪ್ರತಿಭಾ ಸ್ವಾಧೀನ ತಂಡದ 30 ಪ್ರತಿಶತವನ್ನು ವಜಾಗೊಳಿಸಿದೆ ಎಂದು ವರದಿಯಾಗಿದೆ. ಮೈಕ್ರೋಬ್ಲಾಗಿಂಗ್ಸೈಟ್ ಟ್ವಿಟ್ಟರ್ ವಜಾಗೊಳಿಸಿದ ಉದ್ಯೋಗಿಗಳಿಗೆ ಬೇರ್ಪಡಿಕೆ ಪ್ಯಾಕೇಜ್‌ಗಳನ್ನು ನೀಡಿದೆ ಎಂದು ವರದಿಯಾಗಿದೆ.


ಇದನ್ನೂ ಓದಿ: Narayana Murthy: ಇನ್ಫೋಸಿಸ್‌ ನಾರಾಯಣಮೂರ್ತಿ ಕಲಿತ 9 ಜೀವನ ಪಾಠಗಳಿವು!


4) ಟೆಸ್ಲಾ
ಎಲೋನ್ ಮಸ್ಕ್ ನೇತೃತ್ವದ ಟೆಸ್ಲಾ ಇತ್ತೀಚೆಗೆ ತನ್ನ ಆಟೋಪೈಲಟ್ ತಂಡದಿಂದ 229 ಉದ್ಯೋಗಿಗಳನ್ನು ವಜಾಗೊಳಿಸಿದೆ ಮತ್ತು ಅದರ ಯುಎಸ್ ಕಚೇರಿಗಳಲ್ಲಿ ಒಂದನ್ನು ಸ್ಥಗಿತಗೊಳಿಸಿದೆ. ಕೇವಲ 276 ಕೆಲಸಗಾರರನ್ನು ನೇಮಿಸಿದ ಸ್ಯಾನ್ ಮ್ಯಾಟಿಯೊ ಕಚೇರಿಯಿಂದ ಟೆಸ್ಲಾ ಕೆಲಸಗಾರರನ್ನು ವಜಾಗೊಳಿಸಿದ್ದಾರೆ ಎಂದು ವರದಿಗಳು ಹೇಳಿವೆ. ಉಳಿದ 47 ಉದ್ಯೋಗಿಗಳನ್ನು ಟೆಸ್ಲಾದ 'ಬಫಲೋ ಆಟೋಪೈಲಟ್' ಕಚೇರಿಗೆ ವರ್ಗಾಯಿಸುವ ನಿರೀಕ್ಷೆಯಿದೆ. ಜೊತೆಗೆ ಕಂಪನಿ ಯಾವುದೇ ನೇಮಕಾತಿಯನ್ನು ಸಹ ಮಾಡಿಕೊಳ್ಳುತ್ತಿಲ್ಲ.

Published by:Ashwini Prabhu
First published: