Mentally Stronger: ಕೆಲಸದಲ್ಲಿ ಮಾನಸಿಕವಾಗಿ ಬಲಶಾಲಿಯಾಗಲು ಈ 5 ಮಾರ್ಗಗಳನ್ನು ಅನುಸರಿಸಿ

ನಿಮ್ಮಲ್ಲಿ ಕೆಲಸ ಮಾಡಿ ಮಾಡಿ ಒತ್ತಡ ಹೆಚ್ಚಾಗುತ್ತಿದೆ ಎಂದರೆ ಒತ್ತಡ ನಿರ್ವಹಿಸುವುದನ್ನು ನೀವು ಕಲಿಯಬೇಕಾದ ಅಗತ್ಯ ಖಂಡಿತ ಇದೆ. ಕೆಲಸದ ಸ್ಥಳದಲ್ಲಿ ಹೇಗೆ ಒತ್ತಡ ನಿರ್ವಹಿಸುವುದು ಎಂಬುದರ ಕುರಿತು ಆಮಿ ಮೊರಿನ್, ತನ್ನ “13 ಥಿಂಗ್ಸ್ ಮೆಂಟಲಿ ಸ್ಟ್ರಾಂಗ್ ಪೀಪಲ್ ಡೋಂಟ್ ಡು” ಎಂಬ ಪುಸ್ತಕದಲ್ಲಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ನಿಮ್ಮನ್ನು ಹೇಗೆ ಬಲಪಡಿಸಿಕೊಳ್ಳುವುದು ಎಂಬುದರ ಕುರಿತು ಮಾತನಾಡುತ್ತಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಇಂದಿನ ಯುಗವೇ ಸಂಪೂರ್ಣ ಕಾರ್ಪೊರೇಟ್ (Corporate) ರಂಗದಿಂದ ಕೂಡಿದೆ ಎಂದರೆ ತಪ್ಪಾಗಲಾರದು. ಈ ಕಾರ್ಪೋರೆಟ್‌ ರಂಗದಲ್ಲಿ ಅನೇಕ ವರ್ಷಗಳು ಕೆಲಸ ಮಾಡುತ್ತಿದ್ದರೆ ಅದು ನಮ್ಮ ಮಾನಸಿಕ ಆರೋಗ್ಯದ (Mental Health) ಮೇಲೆ ಪ್ರಭಾವವನ್ನು ಬೀರುತ್ತದೆ. ಭಾರತದಲ್ಲಿನ (India) ಸರಾಸರಿ ಕಂಪನಿಗಳು ತಮ್ಮ ಕಂಪನಿಯ ಕೆಲಸಗಾರರಿಗೆ (Company Workers) ಒತ್ತಡ ನಿರ್ವಹಣೆಯ ಪಾಠಗಳನ್ನು (Lessons) ಆಗಾಗ ಮಾಡುತ್ತಿದ್ದರೂ, ಇನ್ನು ಬಹಳಷ್ಟು ಮಾಡುವುದು ಬಾಕಿ ಇದೆ. ನಿಮ್ಮಲ್ಲಿ ಕೆಲಸ ಮಾಡಿ ಮಾಡಿ ಒತ್ತಡ ಹೆಚ್ಚಾಗುತ್ತಿದೆ ಎಂದರೆ ಒತ್ತಡ (Stress) ನಿರ್ವಹಿಸುವುದನ್ನು ನೀವು ಕಲಿಯಬೇಕಾದ ಅಗತ್ಯ ಖಂಡಿತ ಇದೆ.

ಕೆಲಸದ ಸ್ಥಳದಲ್ಲಿ ಹೇಗೆ ಒತ್ತಡ ನಿರ್ವಹಿಸುವುದು ಎಂಬುದರ ಕುರಿತು ಆಮಿ ಮೊರಿನ್, ತನ್ನ “13 ಥಿಂಗ್ಸ್ ಮೆಂಟಲಿ ಸ್ಟ್ರಾಂಗ್ ಪೀಪಲ್ ಡೋಂಟ್ ಡು” ಎಂಬ ಪುಸ್ತಕದಲ್ಲಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ನಿಮ್ಮನ್ನು ಹೇಗೆ ಬಲಪಡಿಸಿಕೊಳ್ಳುವುದು ಎಂಬುದರ ಕುರಿತು ಮಾತನಾಡುತ್ತಾರೆ. ಬೇರೆ ವ್ಯಕ್ತಿಗಳಿಗಿಂತ ಇವರು ಭಿನ್ನ ವ್ಯಕ್ತಿ ಎಂದೇ ಹೇಳಬಹುದು. ಏಕೆಂದರೆ ಕೆಲಸದಲ್ಲಿ ಗೆಲುವು ಅಷ್ಟೆ ಮುಖ್ಯವಲ್ಲ. ಆ ಕೆಲಸದಿಂದ ನಮಗೆ ಮಾನಸಿಕ ತೃಪ್ತಿ ಸಿಗಬೇಕು ಅದುವೇ ಉತ್ತಮ ಕೆಲಸ ಎಂದು ಸ್ಪಷ್ಟವಾಗಿ ಹೇಳುತ್ತಾರೆ.

ಕೆಲಸದಲ್ಲಿ ಮಾನಸಿಕವಾಗಿ ಉತ್ತಮಗೊಳ್ಳಲು 5 ಮಾರ್ಗಗಳು
1) ಸೋಲಿನಿಂದ ಚಿಂತೆಗೊಳಗಾಗಬೇಡಿ
ಕೆಲಸದಲ್ಲಿ ಸೋಲು ಕಂಡರೆ ಜಾಸ್ತಿ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಸೋಲು ನಿಮ್ಮ ಆಯ್ಕೆ ಆಗಿರುವುದಿಲ್ಲ ಆದರೆ ಕೆಲವು ಸಲ ಸಂದರ್ಭಗಳು ನಾವು ಸೋಲುವ ಹಾಗೆ ಮಾಡುತ್ತವೆ. ಇವು ವಾಸ್ತವಕ್ಕೆ ದೂರವಾದ ಮತ್ತು ಸ್ವಾಭಾವಿಕವಾಗಿ ನಮ್ಮಲ್ಲಿ ಒತ್ತಡವನ್ನು ಸೃಷ್ಟಿ ಮಾಡುತ್ತವೆ. ಸೋಲಿನಿಂದ ಹೊರ ಬರಲು ಉತ್ತಮ ಯೋಜನೆಗಳನ್ನು ಕಾರ್ಯಗೊಳಿಸಿ. ಸಕಾರಾತ್ಮಕ ಮನೋಭಾವನೆಗಳನ್ನು ಬೆಳೆಸಿಕೊಳ್ಳಿ.

ಇದನ್ನೂ ಓದಿ: Self Love: ನಿಮ್ಮನ್ನು ನೀವು ಪ್ರೀತಿಸುತ್ತಿಲ್ಲವೇ? ಹಾಗಾದರೆ ಇದನ್ನು ತಪ್ಪದೆ ಓದಲೇಬೇಕು!

2) ಕೆಲಸದಲ್ಲಿ ರಿಸ್ಕ್‌ ತೆಗೆದುಕೊಂಡಾಗ ಆತಂಕವನ್ನು ಎದುರಿಸಿ
ಕೆಲಸದಲ್ಲಿ ರಿಸ್ಕ್‌ ತೆಗೆದುಕೊಳ್ಳದಂತೆ ನಿಮ್ಮನ್ನು ನಿಮ್ಮ ಬುದ್ದಿ ಅಪಾಯದ ಮುನ್ಸೂಚನೆ ಎದುರಿಸಿ ನಿಮ್ಮನ್ನು ಆತಂಕಗೊಳಿಸುತ್ತದೆ ."ಆತಂಕವು ನಮ್ಮನ್ನು ಸುರಕ್ಷಿತವಾಗಿರಿಸಲು ಉದ್ದೇಶಿಸಲಾಗಿದೆ" ಎಂದು ಮೋರಿನ್ ತಮ್ಮ ಪುಸ್ತಕದಲ್ಲಿ ವಿವರಿಸುತ್ತಾರೆ.

3) ನಿಮ್ಮ ಕಂಪರ್ಟ್‌ ಜೋನ್‌ನಿಂದ ಹೊರ ಬನ್ನಿ
ಕೆಲಸದ ಸ್ಥಳದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಒಂದು ಕಂಪರ್ಟ್‌ ಜೋನ್‌ ಎಂಬುದು ಇರುತ್ತದೆ. ಯಾವುದೋ ಸಂದರ್ಭದಲ್ಲಿ ಅದರಿಂದ ನಿಮಗೆ ಏನಾದರೂ ತೊಂದರೆ ಆದಾಗ ಜಸ್ಟ್‌ ಚಿಲ್‌ ಎಂದು ನಿಮಗೆ ನೀವೆ ಹೇಳಿಕೊಂಡು ಅದನ್ನು ಒಪ್ಪಿ ಮುಂದೆ ನಡೆಯಿರಿ. "ಇದು ನಿಮ್ಮ ಮಾನಸಿಕ ಶಕ್ತಿಯನ್ನು ನಿರ್ಮಿಸುವ ಪ್ರಮುಖ ಭಾಗವಾಗಿ ನಿಮಗೆ ಸವಾಲು ನೀಡುವ ಕೆಲಸಗಳನ್ನು ಸೃಷ್ಟಿಸುತ್ತದೆ” ಎಂದು ಮೊರಿನ್ ಹೇಳುತ್ತಾರೆ.

4) ಹೆಚ್ಚು ಆತ್ಮವಿಶ್ವಾದಿಂದ ಇರಿ
ನಿಮ್ಮ ಮೆದುಳು ಒಳ್ಳೆಯ ಉದ್ದೇಶಗಳನ್ನು ಹೊಂದಿರಬಹುದು, ಆದರೆ ಇದು ಕೆಲವೊಮ್ಮೆ ಬಾಹ್ಯ ಶಕ್ತಿಗಳು ನೀಡುವ ತಡೆಗಳಿಗಿಂತ ದೊಡ್ಡ ತಡೆಯನ್ನು ತಂದು ಕೊಡಬಹುದು. "ನಿಮ್ಮ ಮೆದುಳು ನಿಮಗೆ ಅಹಿತಕರವಾದದ್ದನ್ನು ಮಾಡದಂತೆ ಮಾಡುತ್ತದೆ ಏಕೆಂದರೆ ಅದು ನಿಮ್ಮನ್ನು ಕಂಪರ್ಟ್‌ ಜೋನ್‌ನಲ್ಲಿ ಇರಿಸುತ್ತದೆ. ಆದ್ದರಿಂದ ನಿಮ್ಮ ಮೆದುಳಿಗೆ ಆಗಾಗ ನನ್ನಿಂದ ಎಲ್ಲವೂ ಸಾಧ್ಯ ಎಂದು ಆತ್ಮವಿಶ್ವಾಸದಿಂದ ಹೇಳಿಕೊಳ್ಳಿ” ಎಂದು ಮೊರಿನ್ ಸೂಚಿಸುತ್ತಾರೆ.

5) ನೀವು ಮೊದಲಿಗಿಂತ ಉತ್ತಮವಾಗುವುದಕ್ಕೆ ಪ್ರಯತ್ನಿಸಿ
“ನೀವು ನಿಮ್ಮ ಕೆಲಸದಲ್ಲಿ ದಿನದಿಂದ ದಿನಕ್ಕೆ ಉತ್ತಮವಾಗುವುದರ ಕಡೆ ಸಂಪೂರ್ಣ ಗಮನ ಕೊಡಿ. ಹಾಗೆಯೇ ಆಗಾಗ ನಿಮಗೆ ನೀವೇ ಸವಾಲುಗಳನ್ನು ಕೊಟ್ಟುಕೊಂಡು ಕೆಲಸ ಮಾಡಿ. ಇತರರ ಬಗ್ಗೆ ಚಿಂತಿಸಿ ನಿಮ್ಮ ಸಮಯವನ್ನು ಹಾಳು ಮಾಡಿಕೊಳ್ಳಬೇಡಿ” ಎಂದು ಮೊರಿನ್‌ ಹೇಳುತ್ತಾರೆ.

ಇದನ್ನೂ ಓದಿ: Sleep: ಈ 5 ಸಂಕೇತಗಳು ನಿಮಗೆ ಹೆಚ್ಚು ನಿದ್ರೆಯ ಅವಶ್ಯಕತೆಯನ್ನು ತಿಳಿಸುತ್ತವೆ

ಕೇಳಿದಿರಲ್ಲ ಕೆಲಸದ ಸ್ಥಳದಲ್ಲಿ ಒತ್ತಡವನ್ನು ಹೇಗೆಲ್ಲ ನಿವಾರಿಸಿಕೊಂಡು ನೆಮ್ಮದಿಯಿಂದ ನಿಮ್ಮ ಕೆಲಸ ಮಾಡಿಕೊಳ್ಳಬೇಕು ಎಂಬುದನ್ನು ತಿಳಿದಿರಿ ಅಲ್ವಾ. ಇವುಗಳನ್ನು ಫಾಲೋ ಮಾಡಿ ನಿಮ್ಮ ಟೆನ್ಸ್‌ನ್ ಕಡಿಮೆ ಮಾಡಿಕೊಳ್ಳಿ.
Published by:Ashwini Prabhu
First published: