Free Courses: 12 ಸಾವಿರ ವೃತ್ತಿಪರ ಕೋರ್ಸ್​​ಗಳು ಉಚಿತ: ಇನ್ಫೋಸಿಸ್ ಜೊತೆ ಕೈ ಜೋಡಿಸಿದ ಶಿಕ್ಷಣ ಇಲಾಖೆ

ದೇಶದಲ್ಲಿ ಸಾಕಷ್ಟು ಶಿಕ್ಷಣ ವಿದ್ಯಾಲಯಗಳಿದ್ದಾಗಿಯೂ ವೃತ್ತಿಪರ ಕೌಶಲಗಳ ಜ್ಞಾನಾರ್ಜನೆಗೆ ವಿದ್ಯಾರ್ಥಿಗಳು ಅಲ್ಪಾವಧಿಯ ಕೋರ್ಸ್ ಕೂಡ ಮಾಡುತ್ತಿದ್ದಾರೆ. ಈಗಾಗಲೇ ಶಿಕ್ಷಣದಲ್ಲಿ ವೃತ್ತಿಪರ ಹಾಗೂ ಕ್ರಾಂತಿಕಾರಿ ಬದಲಾವಣೆಗೆ ತೆರೆದುಕೊಳ್ತಿದೆ. ಇತ್ತೀಚಿನ ದಿನಗಳಲ್ಲಿ ಕಾರ್ಪೋರೇಟ್ ಕಂಪನಿಗಳು ಸ್ನಾತಕೋತ್ತರ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಇಂಟರ್ ವ್ಯೂ ತೆಗೆದುಕೊಳ್ಳುತ್ತಿರುವುದು ಇದೆ.

ಯುವಜನತೆಗೆ ವೃತ್ತಿಪರ ಕೌಶಲ್ಯ ನೀಡುವ ದಿಶೆಯಲ್ಲಿ ಒಡಂಬಡಿಕೆ

ಯುವಜನತೆಗೆ ವೃತ್ತಿಪರ ಕೌಶಲ್ಯ ನೀಡುವ ದಿಶೆಯಲ್ಲಿ ಒಡಂಬಡಿಕೆ

 • Share this:
  ಜಗತ್ತು (World) ಸಾಕಷ್ಟು ಬದಲಾವಣೆಯ (Changes) ಪಥದಲ್ಲಿ ಹೆಜ್ಜೆಯಿಟ್ಟಿದೆ. ದಿನಕ್ಕೊಂದು (Daily) ಹೊಸ ನೀತಿ (New Rules), ಹೊಸ ಯೋಜನೆಗಳು ರೂಪುಗೊಳ್ಳುತ್ತಲೇ ಇರುತ್ತವೆ. ಈಗೇನಿದ್ದರೂ ಕಂಪ್ಯೂಟರ್ ಯುಗ. ಇಲ್ಲಿ ತಂತ್ರಜ್ಞಾನ, ಹೊಸ ಹೊಸ ಪರಿಕಲ್ಪನೆ, ಯೋಜನೆಗಳು, ತಂತ್ರಜ್ಞಾನ, ವೈಜ್ಞಾನಿಕ ಮುನ್ನಡೆಯೇ ಧ್ಯೇಯವಾಗಿ ರೂಪುಗೊಂಡಿದೆ. ಅಷ್ಟೆಲ್ಲಾ ಯಾಕೆ? ಈಗ ಹುಟ್ಟಿದ ಮಗು ಸಹ ಮೊಬೈಲ್ ಆಪರೇಟ್ ಮಾಡುತ್ತೆ ಅನ್ನೋ ಮಾತಿದೆ. ಭಾರತದಲ್ಲಿ ಪ್ರತೀ ಮನೆಯಲ್ಲೂ ಮಕ್ಕಳು ಈಗ ಹೆಚ್ಚು ಮೊಬೈಲ್ ಬಳಕೆ ಮಾಡ್ತಾರೆ. ಅದರಲ್ಲೂ ಕೊರೊನಾ ಕಾಲಘಟ್ಟದ ನಂತರ ಶೈಕ್ಷಣಿಕ ನೀತಿಯಲ್ಲಿಯೂ ಸಹ ಬದಲಾವಣೆಗಳಾಗಿವೆ. ಅಂತಹ ಬದಲಾವಣೆ ಅನಿವಾರ್ಯವಾಗಿತ್ತು.

  ಶಿಕ್ಷಣದಲ್ಲಿ ಕ್ರಾಂತಿಕಾರಿ ಬದಲಾವಣೆ

  ಮಕ್ಕಳು ಸ್ಮಾರ್ಟ್ ಫೋನ್ ಮೂಲಕ ತರಗತಿಗಳಿಗೆ ಅಟೆಂಡ್ ಆಗುವುದು, ಮೊಬೈಲ್ ನಲ್ಲಿ ಪಠ್ಯ ಪುಸ್ತಕದ ಪಿಡಿಎಫ್ ಹಾಗೂ ಹೋಂ ವರ್ಕ್ ಕೂಡ ಮೊಬೈಲ್ ಮುಖಾಂತರವೇ ಸಿಗ್ತಾ ಇದೆ. ಇನ್ನು ಶಾಲೆ ಮತ್ತು ಕಾಲೇಜು, ಸ್ನಾತಕೋತ್ತರ ವಿಭಾಗದ ಶಿಕ್ಷಣದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಯುಜಿಸಿ ಮತ್ತು ವಿಶ್ವವಿದ್ಯಾಲಯಗಳು ವೃತ್ತಿಯಾಧಾರಿತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿವೆ.

  ಇನ್ನು ಭಾರತದಲ್ಲಿ ಉನ್ನತ ವ್ಯಾಸಂಗ ಮಾಡಿ, ವಿದೇಶದಲ್ಲಿ ಕೆಲಸ ಮಾಡುತ್ತಿರುವವರೂ ಹಾಗೂ ಹೆಚ್ಚಿನ ವ್ಯಾಸಂಗಕ್ಕೆ ವಿದೇಶಕ್ಕೆ ತೆರಳಿ, ದೇಶಕ್ಕೆ ಬಂದು ಕೆಲಸ ಮಾಡುವವರೂ ಇದ್ದಾರೆ. ಒಟ್ಟಾರೆ ಶಿಕ್ಷಣವು ವೃತ್ತಿಯಾಧಾರಿತ ಎಲ್ಲಾ ಕೌಶಲಗಳನ್ನು ಕಲಿಸುವ ಸಿಸ್ಟಮ್ ಕೂಡ ಈಗ ಬಂದಿದೆ. ಕಾರ್ಪೋರೇಟ್ ವಲಯದಲ್ಲಿ ಸಂಭಾಷಣೆ, ಇಂಟರ್ ವ್ಯೂ ಅಟೆಂಡ್ ಮಾಡುವುದು, ಕಂಪನಿಗಳು ಮತ್ತು ಕೆಲಸದ ಬಗ್ಗೆ ಮಾಹಿತಿ ಕಲೆ ಹಾಕಲು ಸಹಕಾರಿ ಆಗಿವೆ.

  ಇದನ್ನೂ ಓದಿ: ಗೂಗಲ್​ನಲ್ಲಿ ಫ್ರೆಶರ್ಸ್​ಗೆ ಉದ್ಯೋಗಾವಕಾಶ; ವಾರ್ಷಿಕ 10 ಲಕ್ಷ ರೂ ಪ್ಯಾಕೇಜ್​

  ವೃತ್ತಿಪರ ಕೌಶಲಗಳ ಜ್ಞಾನಾರ್ಜನೆಗೆ ಕೋರ್ಸ್ ಗಳು

  ದೇಶದಲ್ಲಿ ಸಾಕಷ್ಟು ಶಿಕ್ಷಣ ವಿದ್ಯಾಲಯಗಳಿದ್ದಾಗಿಯೂ ವೃತ್ತಿಪರ ಕೌಶಲಗಳ ಜ್ಞಾನಾರ್ಜನೆಗೆ ವಿದ್ಯಾರ್ಥಿಗಳು ಅಲ್ಪಾವಧಿಯ ಕೋರ್ಸ್ ಕೂಡ ಮಾಡುತ್ತಿದ್ದಾರೆ. ಈಗಾಗಲೇ ಶಿಕ್ಷಣದಲ್ಲಿ ವೃತ್ತಿಪರ ಹಾಗೂ ಕ್ರಾಂತಿಕಾರಿ ಬದಲಾವಣೆಗೆ ಹೊಸ ನಾಂದಿ ಹಾಡಲಾಗಿದೆ.

  ಇತ್ತೀಚಿನ ದಿನಗಳಲ್ಲಿ ಕಾರ್ಪೋರೇಟ್ ಕಂಪನಿಗಳು ಸ್ನಾತಕೋತ್ತರ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಇಂಟರ್ ವ್ಯೂ ತೆಗೆದುಕೊಳ್ಳುತ್ತಿರುವುದು ಇದೆ. ಅದರಲ್ಲಿ ದೇಶದ ಪ್ರಮುಖ ಕಂಪನಿಗಳು ಭಾಗಿಯಾಗುತ್ತವೆ.

  ಇನ್ನು ಕೆಲಸ ಹಾಗೂ ಹುದ್ದೆಗಾಗಿ ಹೆಚ್ಚು ಸ್ಪರ್ಧೆ ಏರ್ಪಟ್ಟಿದೆ. ಹಾಗಾಗಿ ವೃತ್ತಿಯ ಕನಸು ಸಾಕಾರ ಮಾಡಿಕೊಳ್ಳಲು ಕಾಂಪಿಟೇಶನ್ ಗೆ ಒಡ್ಡಿಕೊಳ್ಳಬೇಕಾಗುತ್ತದೆ. ಅಂತಹ ತಂತ್ರಜ್ಞಾನ ಹಾಗೂ ವಿಜ್ಞಾನ ತಿಳಿವಳಿಕೆ ಅವಶ್ಯಕವಾಗಿದೆ.

  ಯುವಜನತೆಗೆ ವೃತ್ತಿಪರ ಕೌಶಲ್ಯ ನೀಡುವ ದಿಶೆಯಲ್ಲಿ ಒಡಂಬಡಿಕೆ

  ಈಗ ಯುವ ಜನತೆಗೆ ವೃತ್ತಿಪರ ಕೌಶಲ್ಯ ನೀಡುವ ದಿಸೆಯಲ್ಲಿ ಕೆಲ ಕಂಪನಿಗಳು ಆಲೋಚಿಸಿದ್ದು, ಒಡಂಬಡಿಕೆ ಕೂಡ ಮಾಡಿವೆ. @kshecb ಆಯೋಜಿಸಿದ್ದ ಕಾರ್ಯಕ್ರಮದಲ್ಲಿ @InfySpringboard ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

  ಯುವಜನತೆಗೆ ವೃತ್ತಿಪರ ಕೌಶಲ್ಯ ನೀಡುವ ದಿಶೆಯಲ್ಲಿ ಈ ಒಡಂಬಡಿಕೆ ಮಹತ್ವದ್ದಾಗಿದೆ. ಸುಮಾರು 12,000 ವಿವಿಧ ಕೋರ್ಸ್‌ಗಳು, 800ಕ್ಕೂ ಹೆಚ್ಚು ಶಿಕ್ಷಣ ತಜ್ಞರ ನೆರವು, ಈ ಮೂಲಕ ಅಧ್ಯಾಪಕರು ಹಾಗೂ ಬಹುಮುಖ್ಯವಾಗಿ ವಿದ್ಯಾರ್ಥಿಗಳಿಗೆ ಲಾಭ ಸಿಗಲಿದೆ.

  ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಟ್ವೀಟ್

  kshecb, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ರಾಜ್ಯ ಪಬ್ಲಿಕ್ ವಿಶ್ವವಿದ್ಯಾಲಯಗಳು, ಉನ್ನತ ಶಿಕ್ಷಣ ಅಕಾಡೆಮಿ, ಬೇಸ್ ಯುನಿವರ್ಸಿಟಿ, @KSRDPRUSocial ಗಳು ಒಡಂಬಡಿಕೆಗೆ ಸಹಿ ಹಾಕಿವೆ. ಈ ಬಗ್ಗೆ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

  ಇದನ್ನೂ ಓದಿ: ಡಿಆರ್​ಡಿಒದಲ್ಲಿ 1901 ಹುದ್ದೆಗೆ ಅರ್ಜಿ ಆಹ್ವಾನ; ಇಲ್ಲಿದೆ ನೇಮಕಾತಿ ಸಂಪೂರ್ಣ ಮಾಹಿತಿ

  ಒಟ್ಟಾರೆ ಯುವಜನತೆಗೆ ವೃತ್ತಿಪರ ಕೌಶಲ್ಯ ನೀಡುವ ದಿಶೆಯಲ್ಲಿ ವಿವಿಧ ವಿಶ್ವವಿದ್ಯಾಲಯಗಳ ಜೊತೆಗೆ ಕಂಪನಿಗಳು ಮಾಡಿಕೊಂಡಿರುವ ಒಡಂಬಡಿಕೆ ನಿಜಕ್ಕೂ ವೃತ್ತಿಪರ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಉಂಟು ಮಾಡಲಿದೆ. ಮೊದಲೇ ವಿದ್ಯಾರ್ಥಿಗಳು ಕೌಶಲಗಳ ಅರಿವು ಹೊಂದಲು ಇದು ಸಹಾಯ ಮಾಡಲಿದೆ. ಯುವಜನತೆಯಲ್ಲಿ ವೃತ್ತಿ ರಹಿತ ನಿರಾಸೆ ಮತ್ತು ಕೆಲಸ ಕಳೆದುಕೊಳ್ಳುವ ಭೀತಿ ಮತ್ತು ಕೆಲಸ ಸಿಗಲ್ಲ ಎಂಬ ಭೀತಿ ಹಾಗೂ ಇಂಟರ್ ವ್ಯೂ ಭಯ ತೊಲಗಿಸಲು ಇದು ಸಹಕಾರಿ ಆಗಲಿದೆ.
  Published by:renukadariyannavar
  First published: