• Home
  • »
  • News
  • »
  • career
  • »
  • Success Story: ಆಫೀಸ್​ನಲ್ಲಿ ಮಧ್ಯಾಹ್ನದ ಊಟದ ಟೈಂನಲ್ಲಿ ಓದ್ಕೊಂಡು UPSCಯಲ್ಲಿ ಫಸ್ಟ್ ರ‍್ಯಾಂಕ್ ಪಡೆದ ಸಾಧಕ

Success Story: ಆಫೀಸ್​ನಲ್ಲಿ ಮಧ್ಯಾಹ್ನದ ಊಟದ ಟೈಂನಲ್ಲಿ ಓದ್ಕೊಂಡು UPSCಯಲ್ಲಿ ಫಸ್ಟ್ ರ‍್ಯಾಂಕ್ ಪಡೆದ ಸಾಧಕ

ಪ್ರದೀಪ್ ಸಿಂಗ್

ಪ್ರದೀಪ್ ಸಿಂಗ್

ಸಮಯ ನಿರ್ವಹಣೆ ಸೂಕ್ತವಾಗಿ ಹೇಗೆ ಮಾಡುವುದು ಅಂತ ಗೊತ್ತಿರದೆ ಇದ್ದರೆ, ಯುಪಿಎಸ್‌ಸಿ ಪರೀಕ್ಷೆಯನ್ನು ಪಾಸ್ ಮಾಡುವುದು ತುಂಬಾನೇ ಕಷ್ಟ ಎಂದು ಸಿಂಗ್ ಅವರು ನಂಬುತ್ತಾರೆ.

  • Trending Desk
  • 2-MIN READ
  • Last Updated :
  • Share this:

ಬಹುತೇಕರು ತಮಗೆ ಕಚೇರಿಯ ಕೆಲಸ(Office Work)ವನ್ನು ಬಿಟ್ಟು ಬೇರೆ ಏನೂ ಮಾಡಲು ಸಮಯವೇ ದೊರೆಯುತ್ತಿಲ್ಲ ಅಂತ ಹೇಳುವುದನ್ನು ನಾವೆಲ್ಲಾ ಅನೇಕ ಬಾರಿ ಕೇಳಿರುತ್ತೇವೆ. ಆದರೆ ಇನ್ನೂ ಕೆಲವರು ತಮ್ಮ ಬ್ಯುಸಿ(Busy)ಯಾದ ಕೆಲಸ(Work)ದಲ್ಲಿಯೂ ಸಹ ಸಮಯವನ್ನು ತಮಗಾಗಿ ತೆಗೆದುಕೊಂಡು ಅದನ್ನು ಸದುಪಯೋಗ ಪಡಿಸಿಕೊಳ್ಳುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಅಂದರೆ ವ್ಯಕ್ತಿಗೆ ನಿರ್ದಿಷ್ಟವಾದ ಗುರಿ ಇದ್ದಾಗ, ಎಂತಹದೇ ಕಠಿಣವಾದ ವೇಳಾಪಟ್ಟಿಯಲ್ಲೂ ಸಹ ಸಮಯವನ್ನು ತೆಗೆದುಕೊಳ್ಳುತ್ತಾನೆ ಅಂತ ಹೇಳಬಹುದು. ಇದಕ್ಕೆ ಸರಿಯಾದ ಉದಾಹರಣೆ ಈ ಹರಿಯಾಣದ ಸೋನಿಪತ್ ಜಿಲ್ಲೆಯ ನಿವಾಸಿಯಾದ ಪ್ರದೀಪ್ ಸಿಂಗ್ ಅಂತ ಹೇಳಬಹುದು ನೋಡಿ.


ಪ್ರದೀಪ್ ಸಿಂಗ್ ಅವರು 2019 ರಲ್ಲಿ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ (ಸಿಎಸ್ಇ) ತಮ್ಮ ಕಚೇರಿಯ ಊಟದ ಸಮಯದಲ್ಲಿ ಅಧ್ಯಯನ ಮಾಡುವ ಮೂಲಕ ಅಗ್ರಸ್ಥಾನ ಪಡೆದಿದ್ದಾರೆ.


ಈ ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ 1ನೇ ರ್‍ಯಾಂಕ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ಪದವಿಯನ್ನು ಪೂರ್ಣಗೊಳಿಸಿದ ನಂತರ, ಸಿಂಗ್ ಎಸ್ಎಸ್‌ಸಿ ಗೆ ತಯಾರಿ ನಡೆಸಿದರು ಮತ್ತು ದೆಹಲಿಯ ತೆರಿಗೆ ಕಚೇರಿಯಲ್ಲಿ ಕೆಲಸ ಪಡೆದರು. ಆದಾಗ್ಯೂ, ಅವರು ಐಎಎಸ್ ಅಧಿಕಾರಿಯಾಗುವ ಕನಸನ್ನು ಕೈಬಿಡಲಿಲ್ಲ ಮತ್ತು ಯುಪಿಎಸ್‌ಸಿ ಪರೀಕ್ಷೆಗೆ ನಾಲ್ಕು ಬಾರಿ ಹಾಜರಾಗಿದ್ದರು.


ಪ್ರದೀಪ್ ಅವರು ಯುಪಿಎಸ್‌ಸಿ ಪರೀಕ್ಷೆಗೆ ಹೇಗೆಲ್ಲಾ ತಯಾರಿ ಮಾಡಿಕೊಂಡ್ರು ನೋಡಿ..


ಐಎಎಸ್ ಪ್ರದೀಪ್ ಸಿಂಗ್ ಅವರು ಕೆಲಸ ಮಾಡುವಾಗ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧರಾಗಿದ್ದರು. ಕೆಲಸದ ಸಮಯದಲ್ಲಿ, ಅವರಿಗೆ ಸಮಯ ಸಿಕ್ಕಾಗಲೆಲ್ಲಾ, ಅವರು ಆ ಸಮಯವನ್ನು ತಮ್ಮ ಯುಪಿಎಸ್‌ಸಿ ಪರೀಕ್ಷೆಗೆ ಅಧ್ಯಯನ ಮಾಡಲು ಬಳಸುತ್ತಿದ್ದರು.


ಇದನ್ನೂ ಓದಿ: UPSC Motivation: ತಾಯಿಯನ್ನು ಕಳೆದುಕೊಂಡ ನೋವಿನಲ್ಲೇ ಪರೀಕ್ಷೆ ಬರೆದು IAS ಆದ ಅಂಕಿತಾ ಚೌಧರಿ


ಅವರು ಕಚೇರಿಗೆ ಬರುವಾಗ ಯೂಟ್ಯೂಬ್ ಮೂಲಕವೂ ಅಧ್ಯಯನ ಮಾಡುತ್ತಿದ್ದರು. ಮಧ್ಯಾಹ್ನದ ಊಟದ ಸಮಯದಲ್ಲಿಯೂ ಸಹ ಅಧ್ಯಯನ ಮಾಡುವ ಅವಕಾಶವನ್ನು ಪಡೆಯಲು ಅವರು ತಮ್ಮ ಕೆಲಸವನ್ನು ಕಚೇರಿಯಲ್ಲಿ ಬೇಗನೆ ಮುಗಿಸುತ್ತಿದ್ದರು ಎಂದು ಅವರು ಹೇಳಿಕೊಂಡಿದ್ದಾರೆ.


ಸಮಯ ನಿರ್ವಹಣೆ ಸೂಕ್ತವಾಗಿ ಹೇಗೆ ಮಾಡುವುದು ಅಂತ ಗೊತ್ತಿರದೆ ಇದ್ದರೆ, ಯುಪಿಎಸ್‌ಸಿ ಪರೀಕ್ಷೆಯನ್ನು ಪಾಸ್ ಮಾಡುವುದು ತುಂಬಾನೇ ಕಷ್ಟ ಎಂದು ಸಿಂಗ್ ಅವರು ನಂಬುತ್ತಾರೆ.


ಕಚೇರಿಯಲ್ಲಿ ಕೆಲಸದ ಹೊರೆ ಹೆಚ್ಚಿರದ ದಿನಗಳಲ್ಲಿ ಮತ್ತು ಅವರು ಕೆಲಸವನ್ನು ಬೇಗನೆ ಮುಗಿಸುತ್ತಿದ್ದ ದಿನಗಳಲ್ಲಿ, ಅವರು ತಮ್ಮ ಹಿರಿಯರಿಂದ ಅನುಮತಿ ಪಡೆದು ಅಧ್ಯಯನ ಮಾಡಲು ಬೇಗನೆ ಮನೆಗೆ ಹೋಗುತ್ತಿದ್ದರು ಎಂದು ಅವರು ಹೇಳಿದರು. ಕಚೇರಿ ಸಿಬ್ಬಂದಿ ಸಹ ಈ ಹಂತದಲ್ಲಿ ಅವರಿಗೆ ಸಂಪೂರ್ಣವಾದ ಬೆಂಬಲವನ್ನು ನೀಡಿದರು.


ಕಿರಾಣಿ ಅಂಗಡಿ ನಡೆಸುವವರ ಮಗಳು ಯುಪಿಎಸ್‌ಸಿ ಯಲ್ಲಿ 19ನೇ ರ್‍ಯಾಂಕ್ ಪಡೆದಿದ್ದರು..


ಈ ಹಿಂದೆಯೂ ಸಹ ದಿನಸಿ ವ್ಯಾಪಾರಿಯೊಬ್ಬರ ಮಗಳು 2015ರಲ್ಲಿ ಯುಪಿಎಸ್‌ಸಿ ಸಿಎಸ್ಇ ಪರೀಕ್ಷೆಯಲ್ಲಿ 19ನೇ ರ್‍ಯಾಂಕ್ ಪಡೆದಿದ್ದರು. ಐಎಎಸ್ ಅಧಿಕಾರಿ ಶ್ವೇತಾ ಅಗರ್ವಾಲ್ ಅವರು ಸೇಂಟ್ ಜೋಸೆಫ್ ಕಾನ್ವೆಂಟ್ ಬ್ಯಾಂಡೆಲ್ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು.


ಇದರ ನಂತರ, ಅವರು ಕೋಲ್ಕತ್ತಾದ ಸೇಂಟ್ ಕ್ಸೇವಿಯರ್ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು. ಅವಳ ತಂದೆ ಕಿರಾಣಿ ಅಂಗಡಿಯನ್ನಿಟ್ಟುಕೊಂಡಿದ್ದರು.


ಅವರು ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಎರಡು ಬಾರಿ ಉತ್ತೀರ್ಣರಾಗಿದ್ದಾರೆ. ಅವರಿಗೆ ಐಎಎಸ್ ಅಧಿಕಾರಿಯಾಗಬೇಕೆಂಬ ಆಸೆ ಇತ್ತು, ಅಂತಿಮವಾಗಿ ಅದೇ ರೀತಿಯಾಗಿ ಐಎಎಸ್ ಆಗುವುದರೊಂದಿಗೆ ಅವರ ಕನಸನ್ನು ಈಡೇರಿಸಿಕೊಂಡಿದ್ದಾರೆ ಮತ್ತು ಅವರು ಬಂಗಾಳ ಕೇಡರ್ ಅನ್ನು ಪಡೆದಿದ್ದಾರೆ.


ಇದನ್ನೂ ಓದಿ: IRMS 2023: ಮುಂದಿನ ವರ್ಷ ರೈಲ್ವೆ ನೇಮಕಾತಿ ಪರೀಕ್ಷೆಯನ್ನು UPSCಯೇ ನಡೆಸಲಿದೆ, ತಯಾರಿ ಈ ರೀತಿ ಇರಲಿ


ತಮ್ಮ ಮೊದಲ ಪ್ರಯತ್ನದಲ್ಲಿಯೇ ಅವರು 497ನೇ ರ್‍ಯಾಂಕ್ ಪಡೆದರು ಮತ್ತು ಐಆರ್‌ಎಸ್ ಸೇವೆಗೆ ಸೇರಿದರು. ಮತ್ತೆ 2015 ರಲ್ಲಿ ಪರೀಕ್ಷೆ ಬರೆದ ಶ್ವೇತಾ ಅವರು 141ನೇ ರ್‍ಯಾಂಕ್ ಗಳಿಸಿದರು. ಆದರೆ ಮತ್ತೊಮ್ಮೆ ಆಕೆಗೆ ಐಎಎಸ್ ಹುದ್ದೆ ಸಿಗಲಿಲ್ಲ. ಅಂತಿಮವಾಗಿ, 2016 ರಲ್ಲಿ, ಅವರ ಕನಸು ನನಸಾಯಿತು ಮತ್ತು ಅವರು ಅಖಿಲ ಭಾರತದಲ್ಲಿ 19ನೇ ರ್‍ಯಾಂಕ್ ಪಡೆಯುವುದರೊಂದಿಗೆ ಐಎಎಸ್ ಅಧಿಕಾರಿಯಾದರು.


  

Published by:Latha CG
First published: