• Home
  • »
  • News
  • »
  • career
  • »
  • Navjot Simi Success Story: ಡೆಂಟಿಸ್ಟ್ ಆಗಿದ್ದ ನವಜೋತ್ ಸಿಮಿ IPS ಅಧಿಕಾರಿಯಾಗಿದ್ದು ಹೇಗೆ? ಬ್ಯೂಟಿ ಕ್ವೀನ್ ಸಾಹಸಗಾಥೆ ಇದು!

Navjot Simi Success Story: ಡೆಂಟಿಸ್ಟ್ ಆಗಿದ್ದ ನವಜೋತ್ ಸಿಮಿ IPS ಅಧಿಕಾರಿಯಾಗಿದ್ದು ಹೇಗೆ? ಬ್ಯೂಟಿ ಕ್ವೀನ್ ಸಾಹಸಗಾಥೆ ಇದು!

ನವಜೋತ್ ಸಿಮಿ

ನವಜೋತ್ ಸಿಮಿ

IPS Navjot Simi Success Story: ನವಜೋತ್ ಸಿಮಿಗೆ ಭಾರತದ ಅತ್ಯಂತ ಸುಂದರ ಐಪಿಎಸ್ ಅಧಿಕಾರಿ ಎಂಬ ಹೆಸರೂ ಇದೆ. ಐಪಿಎಸ್ ಅಧಿಕಾರಿಯಾಗಲು ನವಜೋತ್ ಮಾಡಿದ ತ್ಯಾಗ ಹಾಗೂ ಹೋರಾಟ ನಿಜಕ್ಕೂ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ ಹಾಗೂ ಮನಸ್ಸಿದ್ದರೆ ಮಾರ್ಗ ಎಂಬ ಮಾತನ್ನು ಪುನರುಚ್ಚರಿಸುತ್ತದೆ.

ಮುಂದೆ ಓದಿ ...
  • Trending Desk
  • 4-MIN READ
  • Last Updated :
  • Share this:

ಕೋಟ್ಯಾಂತರ ವಿದ್ಯಾರ್ಥಿಗಳು(Students), ವೈದ್ಯರು(Doctors), ಶಿಕ್ಷಕರು(Teachers), ಎಂಜಿನಿಯರ್‌ಗಳು(Engineers) ಹಾಗೂ ಇನ್ನಿತರ ವೃತ್ತಿಪರರು ಪ್ರತೀ ವರ್ಷ ನಾಗರಿಕ ಸೇವಾ ಪರೀಕ್ಷೆಗಳಿಗೆ(Civil Service Exams) ಹಾಜರಾಗುತ್ತಾರೆ ಹಾಗೂ ಇವರುಗಳಲ್ಲಿ ಕೆಲವರು ಮಾತ್ರವೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ(Pass) ಅಪೇಕ್ಷಿತ ಹುದ್ದೆಗಳನ್ನು ಪಡೆಯುತ್ತಾರೆ.  ಪರೀಕ್ಷೆಗಳನ್ನು(Exams) ಚೆನ್ನಾಗಿ ಬರೆಯಬೇಕು ಎಂದರೆ ಅದಕ್ಕೆ ನಡೆಸುವ ತಯಾರಿ(Preparation) ಕೂಡ ಅಷ್ಟೇ ಚೆನ್ನಾಗಿರಬೇಕು ಹಾಗೂ ಸೂಕ್ತವಾದ ಮಾರ್ಗದರ್ಶನವನ್ನು(Guidance) ಪಡೆದುಕೊಳ್ಳಬೇಕು.


ಈ ದಿಸೆಯಲ್ಲಿ ಸೂಕ್ತ ಉದಾಹರಣೆಯಾಗಿರುವವರು ವೃತ್ತಿಯಲ್ಲಿ ದಂತವೈದ್ಯೆಯಾಗಿ UPSC ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪಂಜಾಬ್‌ನ ನವಜೋತ್ ಸಿಮಿ.

ದಂತಶಾಸ್ತ್ರ ಕಲಿತರೂ ಐಪಿಎಸ್ ಕ್ಷೇತ್ರದಲ್ಲಿ ಹುದ್ದೆ


ತಾವು ಕಲಿತಿರುವ ಶಿಕ್ಷಣಕ್ಕೂ ಮಾಡುತ್ತಿರುವ ವೃತ್ತಿಗೂ ಅಜಗಜಾಂತರ ವ್ಯತ್ಯಾಸವಿದ್ದರೂ ನವಜೋತ್ ಸಿಮಿ, ತಮ್ಮ ಬಾಲ್ಯದ ಕನಸನ್ನು ಈಡೇರಿಸಿಕೊಂಡಿದ್ದಾರೆ. ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ.


ನವಜೋತ್ ಸಿಮಿಗೆ ಭಾರತದ ಅತ್ಯಂತ ಸುಂದರ ಐಪಿಎಸ್ ಅಧಿಕಾರಿ ಎಂಬ ಹೆಸರೂ ಇದೆ. ಐಪಿಎಸ್ ಅಧಿಕಾರಿಯಾಗಲು ನವಜೋತ್ ಮಾಡಿದ ತ್ಯಾಗ ಹಾಗೂ ಹೋರಾಟ ನಿಜಕ್ಕೂ ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ ಹಾಗೂ ಮನಸ್ಸಿದ್ದರೆ ಮಾರ್ಗ ಎಂಬ ಮಾತನ್ನು ಪುನರುಚ್ಚರಿಸುತ್ತದೆ.


ಪಂಜಾಬ್‌ನ ಗುರುದಾಸ್‌ಪುರದವರಾದ ನವಜೋತ್ ಮೂವರು ಮಕ್ಕಳಲ್ಲಿ ಹಿರಿಯವರಾಗಿದ್ದರು. ಇವರ ತಂದೆ ಬ್ಯಾಂಕ್ ಉದ್ಯೋಗಿಯಾಗಿದ್ದು ತಾಯಿ ಗೃಹಿಣಿಯಾಗಿದ್ದಾರೆ.


ಇದನ್ನೂ ಓದಿ: Success Story: ಆಫೀಸ್​ನಲ್ಲಿ ಮಧ್ಯಾಹ್ನದ ಊಟದ ಟೈಂನಲ್ಲಿ ಓದ್ಕೊಂಡು UPSCಯಲ್ಲಿ ಫಸ್ಟ್ ರ‍್ಯಾಂಕ್ ಪಡೆದ ಸಾಧಕ

ಸ್ನಾತಕೋತ್ತರ ಪದವಿಗೆ ಆರ್ಥಿಕ ಅಡಚಣೆ


ನವಜೋತ್ ತಮ್ಮ ಶಾಲಾ ಶಿಕ್ಷಣವನ್ನು ಸರಕಾರಿ ಶಾಲೆಯಲ್ಲಿ ಪೂರ್ಣಗೊಳಿಸಿದ್ದು ನಂತರ, ತಮ್ಮ ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ (BDS) ಪದವಿಯನ್ನು ಲುಧಿಯಾನದ ಬಾಬಾ ಜಸ್ವಂತ್ ಸಿಂಗ್ ಡೆಂಟಲ್ ಹಾಸ್ಪಿಟಲ್ ಮತ್ತು ರಿಸರ್ಚ್ ಇನ್‌ಸ್ಟಿಟ್ಯೂಟ್‌ನಿಂದ ಪಡೆದರು. ಆರ್ಥಿಕ ಅಡಚಣೆಗಳಿಂದಾಗಿ ಸಿಮಿಗೆ ದಂತ ಶಸ್ತ್ರಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಲಾಗಲಿಲ್ಲ.


ಬಾಲ್ಯದಿಂದಲೂ ನಾಗರಿಕ ಸೇವಾ ಕ್ಷೇತ್ರಗಳಲ್ಲಿ ಹೆಚ್ಚಿನ ಒಲವು ಹೊಂದಿದ್ದ ಸಿಮಿಗೆ ಇದೇ ರಂಗದಲ್ಲಿ ವೃತ್ತಿಯನ್ನು ಮುಂದುವರಿಸಬೇಕೆಂಬ ಇಚ್ಛೆಯನ್ನು ಹೊಂದಿದ್ದರು. ಅವರ ಇಚ್ಛೆಗೆ ಬೆಂಬಲವಾಗಿ ನಿಂತ ಪೋಷಕರು. ಹೀಗೆ ಅವರ ನೆರವಿನಿಂದ ಸಿಮಿ ನವದೆಹಲಿಯಲ್ಲಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಗೆ ತರಬೇತಿ ಪಡೆಯಲು ಪ್ರಾರಂಭಿಸಿದರು.

ಪಂಜಾಬ್ ಸಿವಿಲ್ ಸರ್ವೀಸ್‌ಗೆ ಆಯ್ಕೆಗೊಂಡ ಸಿಮಿ


2016 ರಲ್ಲಿ ಮೊದಲ ಪ್ರಯತ್ನದಲ್ಲೇ ಸಿಮಿ, ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾದರು ಆದರೆ ಸಂದರ್ಶನಕ್ಕೆ ಅರ್ಹತೆ ಗಳಿಸಲು ಸಾಧ್ಯವಾಗಲಿಲ್ಲ. ಅದಾಗ್ಯೂ ಪಂಜಾಬ್ ಸಿವಿಲ್ ಸರ್ವೀಸ್‌ಗೆ ಆಕೆ ಆಯ್ಕೆಯಾದರು ಹಾಗೂ ಟ್ರೈನಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.


ಇದರ ನಡುವೆಯೂ ಯುಪಿಎಸ್‌ಸಿಗೆ ಆಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ತಮ್ಮ ಪರಿಶ್ರಮ ಹಾಗೂ ಸಮಪರ್ಣಾ ಭಾವದಿಂದ ಸಿಮಿ 2017 ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು.


ಐಪಿಎಸ್ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಸಿಮಿ, ಬಿಹಾರ ಕೇಡರ್ ಅನ್ನು ಪಡೆದುಕೊಂಡರು ಹಾಗೂ ಪ್ರಸ್ತುತ ಪಾಟ್ನಾದ ಡಿವೈಎಸ್‌ಪಿಯಾಗಿ ನೇಮಕಗೊಂಡಿದ್ದಾರೆ.

ಯುಪಿಎಸ್‌ಸಿ ಪರೀಕ್ಷೆ ತಯಾರಿಗೆ ದುಬಾರಿ ಕೋಚಿಂಗ್ ಅಗತ್ಯವಿಲ್ಲ


ತಮ್ಮ ಯುಪಿಎಸ್‌ಸಿಗೆ ಸಿಮಿ ಕೈಗೊಂಡ ಪ್ರಯಾಣ ಅತ್ಯಂತ ಕಷ್ಟಕರವಾದುದು ಎಂದು ಸ್ವತಃ ಅವರೇ ತಿಳಿಸಿದ್ದಾರೆ. ಆಕೆ ಅನೇಕ ಸವಾಲುಗಳನ್ನು ಎದುರಿಸಿದ್ದು, ಈ ಸವಾಲುಗಳನ್ನು ಮೆಟ್ಟಿನಿಂತು ಸಿಮಿ ಇಂದು ಹುದ್ದೆಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.


ದುಬಾರಿ ತರಬೇತಿಗಳನ್ನು ಪಡೆದುಕೊಳ್ಳದೆಯೇ ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬಹುದು ಎಂಬ ಕಿವಿಮಾತು ಹೇಳಿರುವ ಸಿಮಿ, ಆನ್‌ಲೈನ್‌ಗಳಲ್ಲಿ ದೊರೆಯುವ ವಿವರಗಳನ್ನು ಪಡೆದುಕೊಂಡು ತಯಾರಿ ನಡೆಸಿದರೆ ಸಾಕು ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: UPSC Motivation: ತಾಯಿಯನ್ನು ಕಳೆದುಕೊಂಡ ನೋವಿನಲ್ಲೇ ಪರೀಕ್ಷೆ ಬರೆದು IAS ಆದ ಅಂಕಿತಾ ಚೌಧರಿ

ಮಹಿಳಾ ಸಬಲೀಕರಣದ ಕುರಿತು ಕರೆ


ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹೆಚ್ಚು ಸಕ್ರಿಯರಾಗಿರುವ ನವಜೋತ್ ಸಿಮಿ, ಮಹಿಳಾ ಸಬಲೀಕರಣದ ಕುರಿತು ತಾಣಗಳಲ್ಲಿ ಜಾಗೃತಿ ಮೂಡಿಸುತ್ತಿರುತ್ತಾರೆ.


ಇನ್‌ಸ್ಟಾದಲ್ಲಿ ಹೆಚ್ಚಿನ ಫಾಲೋವರ್ಸ್‌ಗಳನ್ನು ಹೊಂದಿರುವ ಸಿಮಿ ಟ್ವಿಟರ್‌ನಲ್ಲಿ ಕೂಡ ಸಕ್ರಿಯರಾಗಿದ್ದಾರೆ. ಕ್ರಿಕೆಟ್‌ನಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಸಿಮಿ, ತಮ್ಮ ಪೋಸ್ಟ್‌ನಲ್ಲಿ ಕ್ರಿಕೆಟ್ ಕುರಿತ ಮಾಹಿತಿಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ.

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು