• Home
  • »
  • News
  • »
  • career
  • »
  • Moonlighting: ಭಾರತದಲ್ಲಿ 73% ಉದ್ಯೋಗಿಗಳು ಎರಡೆರಡು ಕೆಲಸದಲ್ಲಿದ್ದಾರಂತೆ, ಮೂನ್​​ಲೈಟಿಂಗ್​ಗೆ ಕಾರಣವೇನು?

Moonlighting: ಭಾರತದಲ್ಲಿ 73% ಉದ್ಯೋಗಿಗಳು ಎರಡೆರಡು ಕೆಲಸದಲ್ಲಿದ್ದಾರಂತೆ, ಮೂನ್​​ಲೈಟಿಂಗ್​ಗೆ ಕಾರಣವೇನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಮೀಕ್ಷೆಯಲ್ಲಿ 73% ಉದ್ಯೋಗಿಗಳು ಮೂನ್‌ಲೈಟಿಂಗ್‌ ಪ್ರವೃತ್ತಿಯಲ್ಲಿ ತೊಡಗಿರುವ ಬಗ್ಗೆ ಮತ್ತು 61% ಜನರು ಇದನ್ನು ಅನೈತಿಕ ಕ್ರಮ ಎಂದು ತಿಳಿಸಿದ್ದಾರೆ. ಸಮೀಕ್ಷೆಯ ಫಲಿತಾಂಶಗಳ ಬಗ್ಗೆ ತಿಳಿಯುವ ಮುನ್ನ ಮೂನ್‌ಲೈಟಿಂಗ್‌ ಎಂದರೇನು? ಕಂಪನಿಗಳು ಈ ಕ್ರಮವನ್ನು ಹೇಗೆ ನಿಭಾಯಿಸುತ್ತಿವೆ ನೋಡೋಣ.

ಮುಂದೆ ಓದಿ ...
  • Share this:

     ಕಾರ್ಪೊರೇಟ್‌ ಉದ್ಯೋಗ ವಲಯದಲ್ಲಿ (Corporate Industry) ಮೂನ್‌ಲೈಟಿಂಗ್ (Moonlighting) ಹೆಚ್ಚು ಸದ್ದು ಮಾಡುತ್ತಿರುವ ವಿಚಾರ. ಈಗಾಗಲೇ ಹಲವು ಕಂಪನಿಗಳು ಈ ವಿಚಾರವಾಗಿ ಅನೇಕ ಉದ್ಯೋಗಿಗಳನ್ನು ವಜಾ (Eemployees Fired) ಮಾಡಿದೆ ಕೂಡ. ಅನೇಕ ಟೆಕ್‌ ಕಂಪನಿಗಳು ಈ ಕ್ರಮವನ್ನು ಸ್ವೀಕಾರಾರ್ಹವಲ್ಲ ಎಂದು ಹೇಳಿವೆ. ಇತ್ತೀಚೆಗೆ ಹೊರಬಂದ ಅಧ್ಯಯನ, ಮೂನ್‌ಲೈಟಿಂಗ್‌ ಬಗ್ಗೆ ಸಮೀಕ್ಷೆ ನಡೆಸಿದೆ. ಸಮೀಕ್ಷೆಯಲ್ಲಿ 73% ಉದ್ಯೋಗಿಗಳು ಮೂನ್‌ಲೈಟಿಂಗ್‌ ಪ್ರವೃತ್ತಿಯಲ್ಲಿ ತೊಡಗಿರುವ ಬಗ್ಗೆ ಮತ್ತು 61% ಜನರು ಇದನ್ನು ಅನೈತಿಕ ಕ್ರಮ ಎಂದು ತಿಳಿಸಿದ್ದಾರೆ.


    ಸಮೀಕ್ಷೆಯ ಫಲಿತಾಂಶಗಳ ಬಗ್ಗೆ ತಿಳಿಯುವ ಮುನ್ನ ಮೂನ್‌ಲೈಟಿಂಗ್‌ ಎಂದರೇನು? ಕಂಪನಿಗಳು ಈ ಕ್ರಮವನ್ನು ಹೇಗೆ ನಿಭಾಯಿಸುತ್ತಿವೆ ನೋಡೋಣ.


    ಮೂನ್‌ಲೈಟಿಂಗ್‌ ಎಂದರೇನು?


    ಒಂದು ಕಂಪನಿಯಲ್ಲಿ ಪೂರ್ಣಕಾಲಿಕ ಉದ್ಯೋಗ ಮಾಡಿಕೊಂಡಿರುವಾಗಲೇ, ಹೆಚ್ಚುವರಿ ಹೊಣೆಗಾರಿಕೆ ಮತ್ತು ಹೊರಗಿನ ಜಾಬ್‌ಗಳನ್ನು ಮಾಡುವುದು. ಅಥವಾ ಇನ್ನೊಂದು ಕಂಪನಿಯಲ್ಲೂ ಮತ್ತೊಂದು ಕೆಲಸವನ್ನು ಅರೆಕಾಲಿಕ ಅಥವಾ ಪೂರ್ಣಕಾಲಿಕವಾಗಿ ಮಾಡುವುದು, ಉದ್ಯೋಗಿಗಳು ಈ ರೀತಿ ಮಾಡುವಾಗ ಉದ್ಯೋಗದಾತ ಕಂಪನಿಯ ಗಮನಕ್ಕೆ ತಂದಿರುವುದಿಲ್ಲ. ಈ ಪ್ರವೃತ್ತಿಯನ್ನೇ ಮೂನ್‌ಲೈಟಿಂಗ್‌ ಎನ್ನುತ್ತಾರೆ.


    ಮೂನ್‌ಲೈಟಿಂಗ್‌ ವಿರುದ್ಧ ಕಂಪನಿಗಳ ಗುಡುಗು..ಉದ್ಯೋಗಿಗಳಿಗೆ ಗೇಟ್‌ಪಾಸ್‌


    ಉದ್ಯೋಗಿಗಳ ಈ ವರ್ತನೆಯನ್ನು ಹಲವು ಪ್ರತಿಷ್ಠಿತ ಕಂಪನಿಗಳು ಸ್ವೀಕಾರಾರ್ಹವಲ್ಲ ಇದು ಉದ್ಯೋಗ ಒಪ್ಪಂದದ ಉಲ್ಲಂಘನೆಯಾಗಿದೆ ಎಂದಿವೆ. ಇನ್ಫೋಸಿಸ್, ವಿಪ್ರೋ ಮತ್ತು ಐಬಿಎಂನಂತಹ ಪ್ರಮುಖ ಐಟಿ ಕಂಪನಿಗಳು ಕಂಪನಿಯಲ್ಲಿ ಉದ್ಯೋಗದಲ್ಲಿರುವಾಗ ತಮ್ಮ ಉದ್ಯೋಗಿಗಳಿಗೆ ಎರಡನೇ ಉದ್ಯೋಗವನ್ನು ತೆಗೆದುಕೊಳ್ಳಲು ಅನುಮತಿಸದೆ ಅದರ ವಿರುದ್ಧ ಕಟ್ಟುನಿಟ್ಟಿನ ನಿಲುವು ತೆಗೆದುಕೊಂಡಿರುವುದು ಮೂನ್‌ಲೈಟಿಂಗ್ ಅಭ್ಯಾಸವನ್ನು ಇತ್ತೀಚೆಗೆ ಎತ್ತಿ ತೋರಿಸಿದೆ.


    ವಿಪ್ರೋ ಅಧ್ಯಕ್ಷ ರಿಷಾದ್ ಪ್ರೇಮ್‌ಜಿ ಅವರು ಟ್ವಿಟರ್‌ನಲ್ಲಿ ಮೂನ್‌ಲೈಟಿಂಗ್ ಸಮಸ್ಯೆಯನ್ನು ವಂಚನೆ ಎಂದು ಸಮೀಕರಿಸಿದಾಗಿನಿಂದ ಮೂನ್‌ಲೈಟ್ ಅಥವಾ ದ್ವಿ ಉದ್ಯೋಗದ ಸಮಸ್ಯೆಯು ಐಟಿ ಉದ್ಯಮದಲ್ಲಿ ದೊಡ್ಡ ಚರ್ಚೆಯ ವಿಷಯವಾಗಿ ಹೊರಹೊಮ್ಮಿದೆ. ವಿಪ್ರೋ, ಮೂನ್‌ಲೈಟಿಂಗ್ ಉದ್ಯೋಗಿಗಳ ವಿರುದ್ಧ ಖಡಕ್‌ ಕ್ರಮ ತೆಗೆದುಕೊಂಡಿದ್ದು, ಈ ಪ್ರವೃತ್ತಿಯಲ್ಲಿದ್ದ 300 ಉದ್ಯೋಗಿಗಳನ್ನು ವಜಾಗೊಳಿಸಿದೆ.


    Wipro now says it is fine with employees doing side jobs but not for competitors - India Today
    ವಿಪ್ರೋ


    ವಿಪ್ರೋದಂತೆಯೇ ಇನ್ಫೋಸಿಸ್ ಕೂಡ ಮೂನ್‌ಲೈಟಿಂಗ್‌ ಕಾರಣಕ್ಕೆ ಉದ್ಯೋಗಿಗಳನ್ನು ವಜಾಗೊಳಿಸಿದೆ. “ಗೌಪ್ಯತೆಯ ಸಮಸ್ಯೆಗಳು ಉದ್ಭವವಾಗುವ ಎರಡು ವಿಭಿನ್ನ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳನ್ನು ಕಳೆದ 12 ತಿಂಗಳಿಂದ ನಾವು ವಜಾ ಮಾಡುತ್ತಿದ್ದೇವೆ," ಎಂದು ಸಿಇಒ ಸಲೀಲ್ ಪರೇಖ್ ಈ ಹಿಂದೆ ಹೇಳಿದ್ದರು.


    ಸಮೀಕ್ಷೆಯ ನಡೆದಿದ್ದು ಹೇಗೆ?


    ವ್ಯಾಪಾರ ಪರಿಸರ ವ್ಯವಸ್ಥೆಯ ಮೇಲೆ ಮೂನ್‌ಲೈಟಿಂಗ್‌ನ ಪ್ರಭಾವವನ್ನು ಪರಿಗಣಿಸಿ, FOSTIIMA ಬ್ಯುಸಿನೆಸ್ ಸ್ಕೂಲ್‌ನ PGDM ವಿದ್ಯಾರ್ಥಿ ಸಮೂಹ ಮೂರು ಕೈಗಾರಿಕೆಗಳನ್ನು 540 ಐಟಿ ಕಂಪನಿಗಳು, 325 ಹಣಕಾಸು ಸೇವೆಗಳು, 85 ಶಿಕ್ಷಣ ಉದ್ಯಮಗಳನ್ನು ಪ್ರತಿನಿಧಿಸುವ ಕಂಪನಿಗಳ 950 ಉದ್ಯೋಗಿಗಳನ್ನು ಭಾರತದಲ್ಲಿ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯಲ್ಲಿ 73% ಉದ್ಯೋಗಿಗಳು ಮೂನ್‌ಲೈಟಿಂಗ್‌ನಲ್ಲಿದ್ದಾರೆ ಮತ್ತು 61% ಜನರು ಇದನ್ನು ಅನೈತಿಕ ಕ್ರಮ ಎಂದಿದ್ದಾರೆ ಎಂದು ತಿಳಿದು ಬಂದಿದೆ.


    ಸಮೀಕ್ಷೆಯ ಫಲಿತಾಂಶಗಳು


    ಈ ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದವರಲ್ಲಿ 61% ಜನರು ಮೂನ್‌ಲೈಟ್ ಅನ್ನು ಅನೈತಿಕವೆಂದು ಹೇಳಿದರೂ ಕೂಡ, 73% ಪ್ರತಿಸ್ಪಂದಕರು ಮೂನ್‌ಲೈಟಿಂಗ್‌ ಪ್ರವೃತ್ತಿಯನ್ನು ಅನುಸರಿಸುತ್ತಿರುವುದು ಕಂಡು ಬಂದಿದೆ. ಐಟಿ ಕಂಪನಿಗಳ ಜೊತೆ ಹಣಕಾಸಿನ ಸೇವೆಗಳನ್ನು ಒದಗಿಸುವ ಉದ್ಯೋಗಿಗಳು ಇತರ ಕೈಗಾರಿಕೆಗಳಿಗೆ ಹೋಲಿಸಿದರೆ ಎರಡನೇ ಕೆಲಸದಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆಯಿದೆ. ಸಾಂಕ್ರಾಮಿಕ ರೋಗದ ಮೊದಲು ಹಣಕಾಸು ಸೇವಾ ಪೂರೈಕೆದಾರರು ಇತರ ಕಂಪನಿಗಳೊಂದಿಗೆ ಅರೆಕಾಲಿಕ ಅಥವಾ ಫ್ರೀಲ್ಯಾನ್ಸಿಂಗ್ ಮಾಡುತ್ತಿದ್ದಾರೆ ಎಂದು ಸಮೀಕ್ಷೆ ತೋರಿಸುತ್ತದೆ.


    ಐಟಿ ಮತ್ತು ಶಿಕ್ಷಣ ಕ್ಷೇತ್ರದ ಉದ್ಯೋಗಿಗಳು ತಮ್ಮ ಫ್ರೀಲ್ಯಾನ್ಸಿಂಗ್ ಕೆಲಸವನ್ನು ಕಡಿಮೆಗೊಳಿಸಿದ್ದರೂ, ಕೋವಿಡ್ ನಂತರ ಎರೆಡೆರೆಡು ಉದ್ಯೋಗವನ್ನು ಕೈಗೊಳ್ಳುವುದು ಹೆಚ್ಚಾಗಿದೆ ಎಂದು ಸಮೀಕ್ಷೆ ತಿಳಿಸಿದೆ. ಮತ್ತೊಂದು ಮುಖ್ಯ ಅಂಶವೆಂದರೆ ಸುಮಾರು 30% ರಷ್ಟು ಐಟಿ ಉದ್ಯೋಗಿಗಳು ಉದ್ಯೋಗ ಅನಿಶ್ಚತೆಯಿಂದ ದ್ವಿತೀಯ ಉದ್ಯೋಗಗಳನ್ನು ತೆಗೆದುಕೊಂಡಿದ್ದಾರೆ ಎಂದು ಅಧ್ಯಯನದಲ್ಲಿ ಸಾಬೀತಾಗಿದೆ.


    ಇದನ್ನೂ ಓದಿ: Google ಸಂಸ್ಥೆಯಲ್ಲಿ ಕೆಲಸ ಸಿಗಬೇಕು ಎಂದರೆ ಈ 20 ಪ್ರಶ್ನೆಗಳಿಗೆ ತಯಾರಾಗಿ ಸಾಕು


    ಇನ್ನೂ ಶಿಕ್ಷಣತಜ್ಞರು ಶಾಲೆಗಳಲ್ಲಿ ತಮ್ಮ ಪ್ರಾಥಮಿಕ ಉದ್ಯೋಗದ ಜೊತೆಗೆ ಟೆಕ್ ಕಂಪನಿಗಳೊಂದಿಗೆ ಕೆಲಸ ಮಾಡುತ್ತಾರೆ ಎಂದು ಅಧ್ಯಯನ ತಿಳಿಸಿದೆ. ವೈದ್ಯಕೀಯ ವೃತ್ತಿಪರರು ತಮ್ಮ ಆಸ್ಪತ್ರೆಗಳ ಜೊತೆಗೆ 2-3 ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಹಣಕಾಸು ಸೇವಾ ವೃತ್ತಿಪರರು ಫ್ರೀಲ್ಯಾನ್ಸರ್‌ ಆಗಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಸಮೀಕ್ಷೆ ತಿಳಿಸಿದೆ.


    ವರ್ಕ್​​ ಫ್ರಮ್​ ಹೋಮ್​ನಿಂದಲೇ ಈ ರೀತಿ ಆಗುತ್ತಿದೆಯಾ? 


    ಕೋವಿಡ್‌ ಸಮಯದಲ್ಲಿ ಮೂನ್‌ಲೈಟಿಂಗ್‌ ಪ್ರವೃತ್ತಿ ಹೆಚ್ಚಾಗಲು ಪ್ರಮುಖ ಕಾರಣ ವರ್ಕ್‌ ಫ್ರಮ್‌ ಹೋಮ್‌ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಉದ್ಯೋಗಿಗಳ ಈ ನಡೆ ಕಂಪನಿ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಉತ್ಪಾದಕತೆಗೆ ಪೆಟ್ಟು ನೀಡಲಿದೆ ಎಂದು ಕಂಪನಿಗಳು ಹೇಳುತ್ತಿವೆ. ಹೀಗಾಗಿ ಈ ಕ್ರಮವನ್ನು ಅನುಸರಿಸುವ ಉದ್ಯೋಗಿಗಳ ಮೇಲೆ ಕಂಪನಿಯ ಹೆಚ್‌ಆರ್‌ ವಿಭಾಗವು ವಿಶೇಷವಾದ ಕ್ರಮ ತೆಗೆದುಕೊಳ್ಳಬೇಕಿದೆ.
    ಸಮೀಕ್ಷೆಯ ಆಧಾರದ ಮೇಲೆ ನೋಡುವುದಾದರೆ, ಕಂಪನಿಗಳು ಇಷ್ಟೆಲ್ಲಾ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡರೂ ಸಹ ಭಾರತದಲ್ಲಿ 73% ಉದ್ಯೋಗಿಗಳು ಮೂನ್‌ಲೈಟಿಂಗ್‌ನಲ್ಲಿ ತೊಡಗಿರುವುದು ನಿಜಕ್ಕೂ ಆಘಾತಕಾರಿ ವಿಚಾರವೇ ಸರಿ.

    Published by:Kavya V
    First published: