• ಹೋಂ
  • »
  • ನ್ಯೂಸ್
  • »
  • ವೃತ್ತಿ
  • »
  • Career Tips: ಮಧ್ಯವಯಸ್ಸಿನಲ್ಲಿ ಕೆಲಸ ಜೇಂಜ್ ಮಾಡಿದ್ರೆ ಸಮಸ್ಯೆ ಆಗುತ್ತಾ? ತಜ್ಞರ ಸಲಹೆ ಹೀಗಿದೆ

Career Tips: ಮಧ್ಯವಯಸ್ಸಿನಲ್ಲಿ ಕೆಲಸ ಜೇಂಜ್ ಮಾಡಿದ್ರೆ ಸಮಸ್ಯೆ ಆಗುತ್ತಾ? ತಜ್ಞರ ಸಲಹೆ ಹೀಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಿಮ್ಮ ಗುರಿ ಹಾಗೂ ಏನನ್ನಾದರೂ ಸಾಧಿಸಬೇಕೆಂಬ ಛಲ ನಿಮ್ಮ ವಯಸ್ಸಿನ ಮೇಲೆ ನಿರ್ಧಾರಿತವಾಗಿರಬಾರದು ಹಾಗಾಗಿ ಏನಾದರೂ ಸಾಧಿಸಬೇಕೆಂಬುದು ನಿಮ್ಮ ಮನಸ್ಸಿನಲ್ಲಿ ಒಡಮೂಡಿದಾಗ ಆ ದಿಸೆಯಲ್ಲಿ ಕಾರ್ಯನಿರ್ವಹಿಸಿ ಎಂದೇ ಪರಿಣಿತರು ಸಲಹೆ ನೀಡುತ್ತಾರೆ.

  • Trending Desk
  • 2-MIN READ
  • Last Updated :
  • Share this:

ವೃತ್ತಿಜೀವನದಲ್ಲಿ (Career) ಮುನ್ನಡೆ ಸಾಧಿಸಬೇಕು ಎಂದಾದಲ್ಲಿ ಉದ್ಯೋಗ ವೃತ್ತಿ ಬದಲಾವಣೆ ಮುಖ್ಯವಾಗಿರುತ್ತದೆ. ಒಂದೇ ರೀತಿಯ ಉದ್ಯೋಗವನ್ನೇ 5 ಕ್ಕಿಂತ ಹೆಚ್ಚು ವರ್ಷಗಳ ಕಾಲ ಮಾಡುವುದು ವೃತ್ತಿಜೀವನವನ್ನು ನಿಂತಲ್ಲೇ ನಿಲ್ಲುವಂತೆ ಮಾಡುತ್ತದೆ. ಹಾಗಾಗಿ ಉದ್ಯೋಗ ಪರಿಣಿತರು ಹೇಳುವಂತೆ ಕನಿಷ್ಠ ಎರಡು ವರ್ಷಕ್ಕೊಮ್ಮೆಯಾದರೂ ಉದ್ಯೋಗ ಬದಲಾವಣೆಗಳನ್ನು ಮಾಡುತ್ತಿರಬೇಕು ಎಂದಾಗಿದೆ. ಉದ್ಯೋಗ (Business) ಬದಲಾವಣೆಗೆ ವಯಸ್ಸಿನ ಹಂಗಿರುವುದಿಲ್ಲ. ನಡುವಯಸ್ಸಿನವರು ಕೂಡ ತಮ್ಮ ವೃತ್ತಿಬೆಳವಣಿಗೆಗೆ ಸೂಕ್ತವಾದ ರೀತಿಯಲ್ಲಿ ಉದ್ಯೋಗ ಬದಲಾವಣೆಯನ್ನು ಮಾಡಬಹುದಾಗಿದೆ. ನಿಮ್ಮ ಗುರಿ ಹಾಗೂ ಏನನ್ನಾದರೂ ಸಾಧಿಸಬೇಕೆಂಬ ಛಲ ನಿಮ್ಮ ವಯಸ್ಸಿನ ಮೇಲೆ ನಿರ್ಧಾರಿತವಾಗಿರಬಾರದು ಹಾಗಾಗಿ ಏನಾದರೂ ಸಾಧಿಸಬೇಕೆಂಬುದು ನಿಮ್ಮ ಮನಸ್ಸಿನಲ್ಲಿ ಮೂಡಿದಾಗ ಆ ದಿಸೆಯಲ್ಲಿ ಕಾರ್ಯನಿರ್ವಹಿಸಿ ಎಂದೇ ಪರಿಣಿತರು ಸಲಹೆ ನೀಡುತ್ತಾರೆ.


ಮಧ್ಯವಯಸ್ಕರು ವೃತ್ತಿ ಬದಲಾಯಿಸಬಹುದು


ನಡುವಯಸ್ಸಿನವರು ಮಧ್ಯವಯಸ್ಕರು ವೃತ್ತಿ ಬದಲಾವಣೆಯಂತಹ ಸಂಕಲ್ಪ ತೊಟ್ಟಾಗ ಹೆಚ್ಚಾಗಿ ಅವರತ್ತ ಸಹಾನುಭೂತಿ ಹಾಗೂ ಕರುಣೆಯಿಂದ ನೋಡುವವರೇ ಹೆಚ್ಚು. ಮಧ್ಯವಯಸ್ಸಿನ ಸಮಸ್ಯೆ ಅವರನ್ನು ಬಾಧಿಸುತ್ತಿದೆ ಎಂದೇ ಲೆಕ್ಕಾಚಾರ ಮಾಡುತ್ತಾರೆ. ನಡುವಯಸ್ಸಿನ ಸಮಸ್ಯೆ ಎಂದರೆ ಜನರು ತಮಗೆ ವಯಸ್ಸಾದಂತೆ ತಮ್ಮಲ್ಲಿಯೇ ನಿರಾಸಕ್ತಿ ಬೆಳೆಸಿಕೊಳ್ಳುವ ಪ್ರವೃತ್ತಿಯಾಗಿದೆ.


ನನಗೆ ವಯಸ್ಸಾಯಿತು ಈ ಮೊದಲಿನಂತೆ ನನ್ನಿಂದ ಆಗದು ಎಂಬ ನಿರಾಶಾಭಾವ, ನನ್ನಿಂದ ಏನಾದರೂ ತಪ್ಪಾದರೇ ಎಂಬ ಅಂಜಿಕೆ ಇವೆಲ್ಲವೂ ನಡುವಯಸ್ಸಿನವರನ್ನು ಕಾಡುವ ಕೆಲವೊಂದು ಸಮಸ್ಯೆಗಳಾಗಿವೆ.


ವೃತ್ತಿಬದಲಾವಣೆಗೆ ವಯಸ್ಸಿನ ಅಗತ್ಯವಿಲ್ಲ ಎಂಬುದು ಪರಿಣಿತರ ಮಾತಾಗಿದೆ. ಆ ಸಮಯದಲ್ಲಿ ಕೊಂಚ ಭಯ ತಲೆದೋರುವುದು ಸಹಜವಾಗಿದೆ. ಆದರೆ ಈ ಭಯ ನಿಮ್ಮ ಜೀವನವನ್ನೇ ಬದಲಾಯಿಸುವ ತಾಕತ್ತು ಹಾಗೂ ಸಾಮರ್ಥ್ಯವನ್ನು ಹೊಂದಿರುತ್ತದೆ.


ವೃತ್ತಿ ಬದಲಾವಣೆಯ ಕುರಿತು ಕೆಲವೊಂದು ಅಪನಂಬಿಕೆಗಳಿದ್ದು ಅದನ್ನು ತೊಡೆದು ಹಾಕಬೇಕೆಂದು ನಡುವಯಸ್ಸಿನವರಿಗೆ ಈ ಲೇಖನದ ಮೂಲಕ ಸಲಹೆ ನೀಡಲಾಗಿದೆ. ಹಾಗಿದ್ದರೆ ಆ ಅಪನಂಬಿಕೆಗಳೇನು ಎಂಬುದನ್ನು ತಿಳಿದುಕೊಳ್ಳೋಣ


ವೃತ್ತಿಬದಲಾವಣೆ ಕೇವಲ ಯುವಕರಿಗೆ ಮಾತ್ರ


ವಯಸ್ಸು ಬರೇ ಸಂಖ್ಯೆ ಎಂಬ ಮಾತು ಇಲ್ಲಿಗೆ ಹೆಚ್ಚು ಸೂಕ್ತವಾಗಿರುತ್ತದೆ. ವೃತ್ತಿ ಜೀವನಕ್ಕೆ ವಯಸ್ಸಿನ ಅಡೆತಡೆ ಇರಬಾರದು ಎಂಬುದು ತಜ್ಞರ ಮಾತಾಗಿದೆ.


ಈ ವಯಸ್ಸಿನಲ್ಲಿ ಹೀಗೆ ಮಾಡಬೇಕು ಇಂತಹ ವಯಸ್ಸಿನಲ್ಲಿ ವಿವಾಹ, ಉದ್ಯೋಗ, ಶಿಕ್ಷಣ ಹೀಗೆ ವಯಸ್ಸಿನಗನುಗುಣವಾಗಿ ಪ್ರತಿಯೊಂದನ್ನು ಮೊದಲೇ ನಿರ್ಧರಿಸಲಾಗಿರುತ್ತದೆ.


ಇದನ್ನೂ ಓದಿ: ಆರೋಗ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳು ಖಾಲಿ- ನಾಳೆಯೊಳಗೆ ಅರ್ಜಿ ಹಾಕಿ


ಹಾಗಾಗಿಯೇ ನಿರ್ದಿಷ್ಟ ವಯಸ್ಸು ಕಳೆದೊಡನೆ ಏನಾದರೂ ನಿರ್ಧಾರ ತೆಗೆದುಕೊಳ್ಳುವಾಗ ಒಂದು ರೀತಿಯ ಭಯ ಆತಂಕ ಕಾಡುತ್ತದೆ. ವೃತ್ತಿ ಬದಲಾವಣೆಯ ಸಮಯದಲ್ಲಿ ಈ ರೀತಿಯ ಭಯ ಬೇಡ ಎಂದು ತಜ್ಞರು ಸಲಹೆ ನೀಡುತ್ತಾರೆ.


ವೃತ್ತಿ ಬದಲಾವಣೆ ಎಂದರೆ ಮೊದಲಿನಿಂದಲೇ ಆರಂಭಿಸಬೇಕು ಎಂಬ ನಂಬಿಕೆ


ವೃತ್ತಿ ಬದಲಾವಣೆಯ ಬಗ್ಗೆ ಜನರು ಯೋಚಿಸುವಾಗ ಆರಂಭದಿಂದಲೇ ಎಲ್ಲವನ್ನೂ ಶುರುಮಾಡಬೇಕು ಎಂಬ ಭಾವನೆ ಮನದಲ್ಲಿ ಮೂಡುತ್ತದೆ. ಆದರೆ ಇದು ಯವಾಗಲೂ ನಿಜವಲ್ಲ ಎಂಬುದು ಪರಿಣಿತರ ಸಲಹೆಯಾಗಿದೆ.


40 ರಲ್ಲಿ ವೃತ್ತಿ ಬದಲಾವಣೆ ಎಂದರೆ ನೀವು ಸಂಪೂರ್ಣವಾಗಿ ಮೊದಲಿನಿಂದಲೂ ಎಲ್ಲವನ್ನೂ ಆರಂಭಿಸಬೇಕು ಎಂಬ ನಿಯಮವಿಲ್ಲ. ನಿಮ್ಮ ರೆಸ್ಯೂಮ್‌ನಲ್ಲಿ ಕೊಂಚ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿದರೆ ಸಾಕು ಜೊತೆಗೆ ನಿಮ್ಮ ವೃತ್ತಿಯಲ್ಲಿ ಪಡೆದಿರುವ ಅನುಭವಗಳೇ ಯಾವುದೇ ಉದ್ಯೋಗಕ್ಕೂ ಮಾರ್ಗದರ್ಶಕ ಎಂದೆನಿಸಿದೆ.


ಆರ್ಥಿಕ ಮುಗ್ಗಟ್ಟು ಕನಸುಗಳನ್ನು ಭಗ್ನಗೊಳಿಸುತ್ತವೆ


ಮಧ್ಯವಯಸ್ಸಿನಲ್ಲಿ ಜನರು ವೃತ್ತಿಬದಲಾವಣೆಗೆ ಅಂಜುವುದು ಏಕೆಂದರೆ ಆರ್ಥಿಕ ಹೊಡೆತದಿಂದ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ವೃತ್ತಿಬದಲಾವಣೆ ನಾವು ಅಂದುಕೊಂಡಂತಹ ವೇತನವನ್ನು ದೊರಕಿಸಿಕೊಡಬಲ್ಲುದೇ ಎಂಬ ಹಿಂಜರಿಕೆ ಅವರನ್ನು ಕಾಡುತ್ತಿರುತ್ತದೆ.




ಆದರೆ ಇದೆಲ್ಲಾ ನಿಮ್ಮ ಯೋಚನೆ ಮಾತ್ರ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ನೀವು ಅಂದುಕೊಂಡಂತಹ ಸಂಬಳವನ್ನು ಪಡೆಯುವ ಉದ್ಯೋಗವನ್ನೇ ನೀವು ಪಡೆಯುತ್ತೀರಿ ಹಾಗಾಗಿ ಅದಕ್ಕಾಗಿ ಪ್ರಯತ್ನಿಸಿ ಎಂದು ಸಲಹೆ ನೀಡುತ್ತಾರೆ


ಪ್ರತಿಯೊಂದು ಯೋಜನೆಯನ್ನು ಚೆನ್ನಾಗಿ ಯೋಚಿಸಿ ಮಾಡಬೇಕು


ನಿಮ್ಮ ವೃತ್ತಿಬದಲಾವಣೆಯ ಸಮಯದಲ್ಲಿ ಪ್ರತಿಯೊಂದು ನಿರ್ಧಾರಗಳನ್ನು ಚೆನ್ನಾಗಿ ಯೋಚಿಸಿ ತೆಗೆದುಕೊಳ್ಳಬೇಕು ಎಂಬ ನಿಯಮವಿಲ್ಲ ಎಂಬುದು ವೃತ್ತಿ ತಜ್ಞರ ಅಭಿಪ್ರಾಯವಾಗಿದೆ.


ನಿಮ್ಮ ಉದ್ದೇಶ ಈಡೇರಿಸಲು ಯೋಜನೆಯ ಸಹಾಯ ಬೇಕಾಗಿಲ್ಲ. ಆತ್ಮವಿಶ್ವಾಸ ಹಾಗೂ ದೃಢ ನಿರ್ಧಾರವೊಂದಿದ್ದರೆ ಸಾಕು ಎಂಬುದು ತಜ್ಞರ ಸಲಹೆಯಾಗಿದೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು