• Home
  • »
  • News
  • »
  • career
  • »
  • Salary Delay Problem: ಕಂಪನಿ ಸಂಬಳ ನೀಡುವಲ್ಲಿ ತಡ ಮಾಡುತ್ತಿದ್ದರೆ ಉದ್ಯೋಗಿ ಏನು ಮಾಡಬಹುದು?

Salary Delay Problem: ಕಂಪನಿ ಸಂಬಳ ನೀಡುವಲ್ಲಿ ತಡ ಮಾಡುತ್ತಿದ್ದರೆ ಉದ್ಯೋಗಿ ಏನು ಮಾಡಬಹುದು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಎಷ್ಟೋ ಸಂಸ್ಥೆಗಳು ವೇತನ ನೀಡುವಲ್ಲಿ ವಿಳಂಬ ಮಾಡುತ್ತವೆ. ತಿಂಗಳಲ್ಲಿ ಹೇಳಿದ ದಿನಕ್ಕೆ ನೌಕರರಿಗೆ ಸಂಬಳ ನೀಡುವುದಿಲ್ಲ. ವೇತನವನ್ನು ತಡವಾಗಿ ನೀಡುವುದು ನೌಕರರ ಹಕ್ಕುಗಳ ಉಲ್ಲಂಘನೆಯಾಗುತ್ತೆ.

  • Share this:

ಉದ್ಯೋಗಿ (Employee) ಮತ್ತು ಉದ್ಯೋಗದಾತರ (Employer) ನಡುವಿನ ಮೂಲ ಉದ್ದೇಶವೇ ಕೆಲಸ ಮಾಡಿಸಿಕೊಂಡು ಸಂಬಳ (Salary) ನೀಡುವುದು. ಸಂಸ್ಥೆಯು ಇಂತಿಷ್ಟು ಸಮಯಕ್ಕೆ, ನೀಡಿದ ಕೆಲಸವನ್ನು ಮಾಡಲು ಉದ್ಯೋಗಿಯನ್ನು ನೇಮಿಸಿಕೊಳ್ಳುತ್ತೆ. ಬಹುತೇಕ ಸಂಸ್ಥೆಗಳು ಮಾಸಿಕ ವೇತನದ ವ್ಯವಸ್ಥೆಯನ್ನು ಅನುಸರಿಸುತ್ತವೆ. ತಿಂಗಳಲ್ಲಿ ನಿರ್ದಿಷ್ಟ ದಿನಗಳು ಕೆಲಸ ಮಾಡಿದ ಉದ್ಯೋಗಿಗೆ ಸಂಸ್ಥೆ ನೇಮಕಾತಿ ಸಮಯದಲ್ಲಿ ನಿಗದಿಪಡಿಸಿದ ವೇತನವನ್ನು, ಮೊದಲೇ ಹೇಳಿದ ದಿನಾಂಕಕ್ಕೆ ಕೊಡಬೇಕು. ಆದರೆ ಎಷ್ಟೋ ಸಂಸ್ಥೆಗಳು ವೇತನ ನೀಡುವಲ್ಲಿ ವಿಳಂಬ ಮಾಡುತ್ತವೆ. ತಿಂಗಳಲ್ಲಿ ಹೇಳಿದ ದಿನಕ್ಕೆ ನೌಕರರಿಗೆ ಸಂಬಳ ನೀಡುವುದಿಲ್ಲ. ವೇತನವನ್ನು ತಡವಾಗಿ ನೀಡುವುದು ನೌಕರರ ಹಕ್ಕುಗಳ ಉಲ್ಲಂಘನೆಯಾಗುತ್ತೆ. ಯಾವುದೋ ಒಂದು ತಿಂಗಳು ಸೂಕ್ತ ಕಾರಣಗಳಿಂದ ಸಂಬಳ ತಡವಾದರೆ ಸಮಸ್ಯೆಯಿಲ್ಲ. ಆದರೆ ಪ್ರತಿ ತಿಂಗಳ ವೇತನವನ್ನು ತಡವಾಗಿ ನೀಡುತ್ತಿದ್ದರೆ ಉದ್ಯೋಗಿಯೂ ಏನು ಮಾಡಬಹುದು ಎಂದು ಇಲ್ಲಿ ವಿವರಿಸಲಾಗಿದೆ.


ವೇತನ ನೀಡಲು ಸಮಯ ನಿಗದಿಪಡಿಸುವುದು ಕಡ್ಡಾಯ  


ಉದ್ಯೋಗಿಗೆ ತಡವಾಗಿ ವೇತನ ನೀಡಿದರೆ ಉದ್ಯೋಗದಾತನು ಸಮಂಜಸವಾದ ಬಡ್ಡಿಯನ್ನು ಪಾವತಿಸಬೇಕು ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಸೆಕ್ಷನ್ 3 ರ ಅಡಿಯಲ್ಲಿ ವೇತನ ಪಾವತಿಗೆ ಜವಾಬ್ದಾರರಾಗಿರುವ ವ್ಯಕ್ತಿಯು ವೇತನವನ್ನು ಪಾವತಿಸಬೇಕಾದ ಅವಧಿಗಳನ್ನು ನಿಗದಿಪಡಿಸಬೇಕು. ಯಾವುದೇ ವೇತನ ಅವಧಿಯು ಒಂದು ತಿಂಗಳನ್ನು ಮೀರಬಾರದು.


How entry level engineer salaries improved over the past five years Package Details for Non IT Firms stg asp


1 ಸಾವಿರ ರೂಪಾಯಿಗಿಂತ ಕಡಿಮೆ ವೇತನವನ್ನು ಹೊಂದಿರುವ ಉದ್ಯೋಗಿಗೆ ಸಂಸ್ಥೆ 1 ವಾರದದ ಮೊದಲು ಪಾವತಿಸಬೇಕು. 1 ಸಾವಿರ ರೂಪಾಯಿಗಿಂತ ಹೆಚ್ಚಿನ ವೇತನ ಹೊಂದಿದ್ದರೆ 10ನೇ ದಿನ ಸಂಬಳವನ್ನು ನೀಡಬೇಕು. ಉದ್ಯೋಗದಾತನು ಉದ್ಯೋಗಿಯನ್ನು ವಜಾಗೊಳಿಸಿದರೆ, ಅವನು ಗಳಿಸಿದ ವೇತನವನ್ನು ಅವನ ಉದ್ಯೋಗವನ್ನು ಕೊನೆಗೊಳಿಸಿದ ದಿನದಿಂದ ಎರಡನೇ ಕೆಲಸದ ದಿನದ ಮುಕ್ತಾಯದ ಮೊದಲು ಪಾವತಿಸಲಾಗುತ್ತದೆ.


ವೇತನ ತಡವಾಗುತ್ತಿದ್ದರೆ ಉದ್ಯೋಗಿ ಏನು ಮಾಡಬಹುದು?


1) ಲೇಬರ್ ಕಮಿಷನರ್ ನೆರವು ಪಡೆಯಬಹುದು


ಉದ್ಯೋಗದಾತರು ನಿಮ್ಮ ಸಂಬಳವನ್ನು ಪಾವತಿಸದಿದ್ದರೆ, ನೀವು ಕಾರ್ಮಿಕ ಆಯುಕ್ತರನ್ನು ಸಂಪರ್ಕಿಸಬಹುದು. ಈ ವಿಷಯವನ್ನು ಬಗೆಹರಿಸಲು ಅವರು ನಿಮಗೆ ಸಹಾಯ ಮಾಡುತ್ತಾರೆ. ಕಂಪನಿಯಿಂದ ನಿಮಗೆ ಯಾವುದೇ ಪರಿಹಾರ ಸಿಗದಿದ್ದರೆ, ಕಾರ್ಮಿಕ ಆಯುಕ್ತರು ಈ ವಿಷಯವನ್ನು ನ್ಯಾಯಾಲಯಕ್ಕೆ ಹಸ್ತಾಂತರಿಸುತ್ತಾರೆ. ಆ ಮೂಲಕ ನಿಮ್ಮ ಉದ್ಯೋಗದಾತರ ವಿರುದ್ಧ ಪ್ರಕರಣವನ್ನು ಮುಂದುವರಿಸಬಹುದು.


how to ask for salary increase here are useful tips
ಸಾಂದರ್ಭಿಕ ಚಿತ್ರ


2) ಕೈಗಾರಿಕಾ ವಿವಾದ ಕಾಯಿದೆ ಕೂಡ ಸಹಾಯ ಬರುತ್ತೆ


ಉದ್ಯೋಗಿಯು ಉದ್ಯೋಗದಾತರಿಂದ ಬಾಕಿಯಿರುವ ಹಣವನ್ನು 1947 ರ ಕೈಗಾರಿಕಾ ವಿವಾದ ಕಾಯಿದೆಯ ಸೆಕ್ಷನ್ 33(ಸಿ) ಅಡಿಯಲ್ಲಿ ದಾವೆ ಹೂಡಬಹುದು. ಉದ್ಯೋಗದಾತರಿಂದ ಸಂಬಳವು ಬಾಕಿ ಇರುವಾಗ, ಉದ್ಯೋಗಿ ಸ್ವತಃ ಅಥವಾ ಅವನ ಪರವಾಗಿ ಲಿಖಿತವಾಗಿ ಅಧಿಕಾರ ಪಡೆದ ಯಾವುದೇ ವ್ಯಕ್ತಿ ಹಣವನ್ನು ಮರುಪಡೆಯಬಹುದು.


ನೌಕರನ ಮರಣದ ಸಂದರ್ಭದಲ್ಲಿ, ಅಧಿಕೃತ ವ್ಯಕ್ತಿ ಅಥವಾ ವಾರಸುದಾರರು ಬಾಕಿ ಹಣವನ್ನು ವಸೂಲಿ ಮಾಡಲು ಕಾರ್ಮಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುತ್ತಾರೆ. ಸಂಬಳ ಬಾಕಿ ಇದೆ ಎಂದು ತಿಳಿದ ನಂತರ ನ್ಯಾಯಾಲಯವು ಪ್ರಮಾಣಪತ್ರವನ್ನು ನೀಡುತ್ತದೆ. ಕಲೆಕ್ಟರ್ ಅದನ್ನು ಮರುಪಡೆಯಲು ಮುಂದುವರಿಯಬೇಕು. ಬಾಕಿಯಿರುವ ಹಣದ ಮೊತ್ತ ಅಥವಾ ಅಂತಹ ಪ್ರಯೋಜನವನ್ನು ಲೆಕ್ಕ ಹಾಕಬೇಕಾದ ಮೊತ್ತದ ಬಗ್ಗೆ ಯಾವುದೇ ಪ್ರಶ್ನೆಯು ಉದ್ಭವಿಸಿದರೆ, ಈ ಕಾಯಿದೆಯ ಅಡಿಯಲ್ಲಿ ನಿಯಮಗಳ ಪ್ರಕಾರ ಅದನ್ನು ಲೆಕ್ಕಹಾಕಲಾಗುತ್ತದೆ.


Salary saving hacks you must follow mrq
5.ಕೆಲವರು ಯಾವಾಗ ಬೇಕಾದರೂ ಶಾಪಿಂಗ್ ಹೋಗುತ್ತಾರೆ. ಪ್ರತಿ ತಿಂಗಳು ಅಥವಾ ತಿಂಗಳಿಗೆ ಎರಡು ಬಾರಿ ಹೊಸ ಬಟ್ಟೆಗಳನ್ನು ಖರೀದಿಸುತ್ತಾರೆ. ಆದರೆ ನಿಮ್ಮ ಅಗತ್ಯಗಳೇನು ಎಂದು ನೀವು ತಿಳಿದುಕೊಳ್ಳಬೇಕು. (ಸಾಂದರ್ಭಿಕ ಚಿತ್ರ)


ಎಷ್ಟು ಸಮಯದಲ್ಲಿ ಉದ್ಯೋಗಿಗೆ ನ್ಯಾಯ ಸಿಗುತ್ತದೆ?


ಕಾರ್ಮಿಕ ನ್ಯಾಯಾಲಯವು ಮೂರು ತಿಂಗಳ ಅವಧಿಯೊಳಗೆ ಪ್ರಕರಣಗಳನ್ನು ನಿರ್ಧರಿಸಬೇಕು. ಕಾರ್ಮಿಕ ನ್ಯಾಯಾಲಯದ ಅಧ್ಯಕ್ಷರು ಮತ್ತಷ್ಟು ಸಮಯದ ಅಗತ್ಯವಿದೆ ಎಂದು ಪರಿಗಣಿಸಿದರೆ, ಅವರು ಅವಧಿಯನ್ನು ವಿಸ್ತರಿಸಬಹುದು.

Published by:Kavya V
First published: