• Home
 • »
 • News
 • »
 • career
 • »
 • Ronnie Teja: ಬ್ರಾಂಜಿಯೊ ವಾಚ್‌ ಸಂಸ್ಥಾಪಕನ ಗೆಲುವಿನ ಕಥೆ: ಸೋಲುಗಳನ್ನು ಸವಾಲಾಗಿ ತೆಗೆದುಕೊಂಡು ಯಶಸ್ವಿ ಉದ್ಯಮಿಯಾದ ರೋನಿ ತೇಜಾ

Ronnie Teja: ಬ್ರಾಂಜಿಯೊ ವಾಚ್‌ ಸಂಸ್ಥಾಪಕನ ಗೆಲುವಿನ ಕಥೆ: ಸೋಲುಗಳನ್ನು ಸವಾಲಾಗಿ ತೆಗೆದುಕೊಂಡು ಯಶಸ್ವಿ ಉದ್ಯಮಿಯಾದ ರೋನಿ ತೇಜಾ

ರೋನಿ ತೇಜಾ

ರೋನಿ ತೇಜಾ

ಲೋಕೋಪಕಾರಿ ಕೆಲಸಗಳಲ್ಲಿ ತೇಜಾ ತೊಡಗಿಸಿಕೊಂಡಿದ್ದಾರೆ. 15 ವರ್ಷಗಳ ಅನುಭವದೊಂದಿಗೆ ಯಶಸ್ವಿ ವ್ಯಾಪಾರವನ್ನು ರಚಿಸುವ ಮತ್ತು ನಡೆಸುವ ಉದ್ಯಮಶೀಲತೆಗೆ ಸಂಬಂಧಿಸಿದಂತೆ ರೋನಿ ತೇಜಾ ಅವರು ಹಲವು ಆಕಾಂಕ್ಷಿಗಳಿಗೆ ಸಲಹೆ ನೀಡುವ ಮೂಲಕ ನೆರವಾಗುತ್ತಿದ್ದಾರೆ.

 • News18 Kannada
 • 3-MIN READ
 • Last Updated :
 • Karnataka, India
 • Share this:

ವಾಚ್‌ ಬಗ್ಗೆ ಕ್ರೇಜ್‌ ಇರುವವರು ಬ್ರಾಂಜಿಯೊ ಬ್ರ್ಯಾಂಡೆಡ್‌ ವಾಚ್‌ ಬಗ್ಗೆ ಕೇಳಿರುತ್ತಾರೆ. ಫ್ಯಾಶನ್‌ (Fashion) ಲೋಕದಲ್ಲಿ ಈ ಬ್ರಾಂಜಿಯೊ ಬ್ರ್ಯಾಂಡ್‌ (Brangio Brand) ಸಾಕಷ್ಟು ಹೆಸರು ಮಾಡಿರುವಂತಹ ಕಂಪನಿ (Company). ಹಲವಾರು ಏಳು-ಬೀಳು, ಸಾಲು ಸಾಲು ಸೋಲುಗಳನ್ನು ಕಂಡು ಮತ್ತೆ ಫೀನಿಕ್ಸ್‌ನಂತೆ ಎದ್ದು ಛಲ ಬಿಡದೇ ಕಂಪನಿ ಕಟ್ಟಿ ಸಾಧನೆಯ ಶಿಖರದಲ್ಲಿದ್ದಾರೆ ಬ್ರಾಂಜಿಯೊ ಬ್ರ್ಯಾಂಡೆಡ್‌ ವಾಚ್‌ ಸಂಸ್ಥಾಪಕ ಮತ್ತು ಸಿಇಒ ರೋನಿ ತೇಜಾ.


ಭಾರತದಲ್ಲಿ ಶಿಕ್ಷಣ ಮುಗಿಸಿದ ರೋನಿ ತೇಜಾ
ರೋನಿ ತೇಜಾ, ನಾವು ಇಂದು ಹೇಳಹೊರಟಿರುವ ಸಾಧನೆಯ ವ್ಯಕ್ತಿ ಇವರೇ ನೋಡಿ. ಫೆಬ್ರವರಿ 17, 1985 ರಂದು ಭಾರತದ ಜಲಂಧರ್‌ನಲ್ಲಿ ಜನಿಸಿದ ಇವರು ಭಾರತದ ಎರಡು ಪ್ರತಿಷ್ಠಿತ ಬೋರ್ಡಿಂಗ್ ಶಾಲೆಗಳಲ್ಲಿ ಶಿಕ್ಷಣ ಪಡೆದರು.ನಂತರ ತೇಜ, ಮುಂಬೈನ ಕ್ಸೇವಿಯರ್ಸ್ ಕಾಲೇಜಿನಲ್ಲಿ ಮಾರ್ಕೆಟಿಂಗ್ ಮತ್ತು ಮೈಕ್ರೋ-ಫೈನಾನ್ಸ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು ಮತ್ತು 22 ನೇ ವಯಸ್ಸಿನಲ್ಲಿ ಲಂಡನ್‌ಗೆ ಕುಟುಂಬ ಸಮೇತ ವಲಸೆ ಹೋದರು.


ರೋನಿ ತೇಜಾ ಹಲವಾರು ವಿಫಲ ಪ್ರಯತ್ನಗಳ ನಂತರ ಜಾಗತಿಕ ಮಟ್ಟದಲ್ಲಿ ತಮ್ಮದೇ ಕಂಪನಿಯನ್ನು ಸ್ಥಾಪಿಸಿ ಯಶಸ್ವಿ ಉದ್ಯಮಿಯಾಗಿದ್ದಾರೆ. ಇ-ಕಾಮರ್ಸ್ ಜಗತ್ತಿನಲ್ಲಿ ಅತ್ಯಂತ ವ್ಯಾಪಕವಾಗಿ ಮೆಚ್ಚುಗೆ ಪಡೆದ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ.


ಗುಣಮಟ್ಟ ಮತ್ತು ಸ್ಟೈಲ್‌ ಸ್ಟೇಟ್‌ಮೆಂಟ್‌ನೊಂದಿಗೆ ಕಂಪನಿ ನಡೆಸುತ್ತಿರುವ ತೇಜಾ
ತೇಜಾ ಅವರು ಮೆಚ್ಚುಗೆ ಪಡೆದ ಬ್ರಾಂಜಿಯೊ ವಾಚ್‌ಗಳ ಬ್ರಾಂಡ್‌ನ ಸಂಸ್ಥಾಪಕ ಮತ್ತು CEO ಆಗಿದ್ದಾರೆ. ಗುಣಮಟ್ಟ ಮತ್ತು ಸ್ಟೈಲ್‌ ಸ್ಟೇಟ್‌ಮೆಂಟ್‌ನೊಂದಿಗೆ ಬರುತ್ತಿರುವ ಈ ವಾಚ್‌ಗಳು ಸಾಕಷ್ಟು ಜನಪ್ರಿಯವಾಗಿವೆ. ಎಲ್ಲಾ ರೀತಿಯ ಬಟ್ಟೆಗಳಿಗೆ ಸೂಟ್‌ ಆಗುವ ವಾಚ್‌ಗಳನ್ನು ಕಂಪನಿ ವಿನ್ಯಾಸಗೊಳಿಸಿದೆ. ವಾಚ್‌ನ ಬೆಲ್ಟ್‌ ಅನ್ನು ಸಹ ನೀವು ಇಲ್ಲಿ ಬದಲಾಯಿಸಿಕೊಳ್ಳಬಹುದು.


ರೋನಿ ತೇಜಾ ಗ್ರಾಹಕರ ನೀರೀಕ್ಷೆ, ಬಯಕೆಗಳನ್ನು ಅರ್ಥ ಮಾಡಿಕೊಂಡು ತಮ್ಮ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿದ್ದಾರೆ ಎನ್ನಬಹುದು. ಕಂಪನಿಯನ್ನು ಅಚ್ಚುಕಟ್ಟಾಗಿ ಮುನ್ನೆಡೆಸುತ್ತಿರುವ ತೇಜಾ ಉದ್ಯೋಗಿ ಸ್ನೇಹಿ ನಡೆ ಸಹ ಹೊಂದಿದ್ದಾರೆ.


ಲಂಡನ್‌ನಲ್ಲಿ ಬಿಡುವಿಲ್ಲದೇ ಕೆಲಸ ಮಾಡುತ್ತಿದ್ದ ತೇಜಾ
ಭಾರತದಲ್ಲಿ ಶಿಕ್ಷಣ ಮುಗಿಸಿ ಲಂಡನ್‌ಗೆ ತೆರಳಿದ ನಂತರ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಕಲ್ಯಾಣ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಅಧ್ಯಯನ ಮಾಡಿದರು. ಲಂಡನ್‌ನಲ್ಲಿರುವಾಗ ಒಂದು ಬಾಡಿಗೆ ಮನೆಯಲ್ಲಿ ತೇಜಾ ವಾಸಿಸುತ್ತಿದ್ದರಂತೆ. ಲಂಡನ್‌ನಲ್ಲಿ ಜೀವನ ನಿಭಾಯಿಸಲು ತೇಜಾ ಸಾಕಷ್ಟು ಬಿಡುವಿಲ್ಲದ ಕೆಲಸಗಳನ್ನು ಮಾಡುತ್ತಿದ್ದರು.


ಇದನ್ನೂ ಓದಿ: Mobile Ban: ಈ ಶಾಲೆಯಲ್ಲಿ ಮಕ್ಕಳ ಮೊಬೈಲ್ ಬಳಕೆಗೆ ಬಿತ್ತು ಬ್ರೇಕ್, ಓದಿನಲ್ಲಿ ಈಗ ವಿದ್ಯಾರ್ಥಿಗಳು ಫಾಸ್ಟ್!


ಬೆಳಿಗ್ಗೆ 5 ಗಂಟೆಗೆ ಎದ್ದು ಬೆರಿಹಣ್ಣುಗಳನ್ನು ಆರಿಸಲು ಹೋಗುತ್ತಿದ್ದರಂತೆ, ನಂತರ ಮಧ್ಯಾಹ್ನ ರೇಡಿಯೋ ಜಾಹೀರಾತುಗಳನ್ನು ಮನೆಮನೆಗೆ ಮಾರಾಟ ಮಾಡುತ್ತಿದ್ದರು, ಹೀಗೆ ವಾರದ ಏಳೂ ದಿನನೂ ಅವರು ಕೆಲಸದಲ್ಲಿ ಬಿಡುವಿಲ್ಲದೇ ಶ್ರಮಿಸುತ್ತಿದ್ದರು. ಕಷ್ಟದ ಜೀವನವನ್ನೇ ಸ್ಪೂರ್ತಿಯಾಗಿ ತೆಗೆದುಕೊಂಡ ತೇಜಾ ಅವರಿಗೆ ಏನನ್ನಾದರೂ ಸಾಧಿಸುವ ಪ್ರೇರಣೆ ಇಲ್ಲಿಂದಲೇ ಸಿಕ್ಕಿತ್ತೆಂದರೂ ತಪ್ಪಾಗಲ್ಲ.


ಡಿಜಿಟಲ್ ಏಜೆನ್ಸಿ ವ್ಯವಹಾರದಲ್ಲಿ ವಿಫಲ ವಾಚ್‌ ಉದ್ಯಮದಲ್ಲಿ ಸಕ್ಸಸ್
ತೇಜಾ ನಡೆದು ಬಂದ ದಾರಿಯನ್ನು ಎಂದೂ ಮರೆತವರಲ್ಲ. ಹೀಗಾಗಿಯೇ ಇವರ ಸಾಧನೆಯ ಹಾದಿ ಇನ್ನೂ ಮುಂದುವರೆಯುತ್ತಿದೆ ಎನ್ನಬಹುದು. ತೇಜಾ ಮೊದಲು ಡಿಜಿಟಲ್ ಏಜೆನ್ಸಿ ವ್ಯವಹಾರವನ್ನು ಪ್ರಾರಂಭಿಸಿದರು. ಆದರೆ ನೀರೀಕ್ಷೆ ಮಟ್ಟದಲ್ಲಿ ಗುರಿ ತಲುಪದ ವ್ಯವಹಾರ ನೆಲಕಚ್ಚಿತು. ನಂತರದ ಕೆಲವು ಉದ್ಯಮಗಳು ಸಹ ಅವರ ಕೈಹಿಡಿಯಲಿಲ್ಲ. ನಂತರ ಬ್ರಾಂಜಿಯೊ ಬ್ರ್ಯಾಂಡ್‌ ತೇಜಾ ಅವರಿಗೆ ಗೆಲುವಿನ ವರದಾನವಾಯ್ತು.


ಸದ್ಯ, ಯಶಸ್ವಿ ಉದ್ಯಮಿಯಾಗಿರುವ ಇವರು, ಜಾಗತಿಕವಾಗಿ ವ್ಯವಹಾರ ನಡೆಸುತ್ತಿದ್ದಾರೆ. ಮೂಲತಃ ಭಾರತದವರಾಗಿದ್ದಾಗ, ಅವರು ಈಗ ವ್ಯಾಂಕೋವರ್, ಮೆಲ್ಬೋರ್ನ್ ಮತ್ತು ಬ್ಯಾಂಕಾಕ್ ನಡುವೆ ವ್ಯವಹಾರ ನಡೆಸುತ್ತಾರೆ.


ಲೋಕೋಪಕಾರಿ ಕೆಲಸಗಳಲ್ಲಿಯೂ ತೇ‌ಜಾ ಸಕ್ರಿಯ


ವ್ಯಾಪಾರದಲ್ಲಿ ಕಲಿಕೆಯು ನಿರಂತರ ಪ್ರಕ್ರಿಯೆಯಾಗಿದೆ ಎಂಬ ಬದ್ಧತೆಯೊಂದಿಗೆ ಇರುವ ಇವರು ಮಾರುಕಟ್ಟೆಯ ತಂತ್ರಗಳನ್ನು, ಸವಾಲುಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡು ಉದ್ಯಮವನ್ನು ನಡೆಸುತ್ತಿದ್ದಾರೆ. ಜೊತೆಗೆ ಸಮಗ್ರತೆ ಮತ್ತು ಕಠಿಣ ಪರಿಶ್ರಮವು ಯಾವುದೇ ಯಶಸ್ವಿ ವ್ಯಾಪಾರ ಕಥೆಗೆ ಮೆಟ್ಟಿಲು ಎಂದು ತೇಜಾ ನಂಬುತ್ತಾರೆ. ಉದ್ಯೋಗಿಗಳೊಂದಿಗೆ ತಂಡವಾಗಿ ಕೆಲಸ ಮಾಡುವುದರ ಮೇಲೆ ವಿಶ್ವಾಸ ಹೊಂದಿದ್ದಾರೆ. ಕಂಪನಿ ಮೂಲಕ ಬಡವರಿಗೆ ಸಹಾಯ ಕೂಡ ಮಾಡುತ್ತಾರೆ ತೇಜ. Branzio ನಲ್ಲಿ ಮಾರಾಟವಾಗುವ ಪ್ರತಿಯೊಂದು ವಾಚ್‌ಗಾಗಿ, ಬ್ರ್ಯಾಂಡ್ $5 ಅನ್ನು ತಳಮಟ್ಟದ ಸಂಸ್ಥೆಗಳಿಗೆ ದೇಣಿಗೆ ನೀಡುತ್ತದೆ.


ಇದು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಬಡ ಕುಟುಂಬಗಳು ಮತ್ತು ವ್ಯಕ್ತಿಗಳನ್ನು ಬೆಂಬಲಿಸಲು ಸಹಾಯ ಮಾಡುತ್ತದೆ. ಈ ಮೂಲಕ ಲೋಕೋಪಕಾರಿ ಕೆಲಸಗಳಲ್ಲಿ ತೇಜಾ ತೊಡಗಿಸಿಕೊಂಡಿದ್ದಾರೆ. 15 ವರ್ಷಗಳ ಅನುಭವದೊಂದಿಗೆ ಯಶಸ್ವಿ ವ್ಯಾಪಾರವನ್ನು ರಚಿಸುವ ಮತ್ತು ನಡೆಸುವ ಉದ್ಯಮಶೀಲತೆಗೆ ಸಂಬಂಧಿಸಿದಂತೆ ರೋನಿ ತೇಜಾ ಅವರು ಹಲವು ಆಕಾಂಕ್ಷಿಗಳಿಗೆ ಸಲಹೆ ನೀಡುವ ಮೂಲಕ ನೆರವಾಗುತ್ತಿದ್ದಾರೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು